Wednesday, 19 October 2016

ಬದುಕಿನ ಚಕ್ರದ ಸಾಧನೆ ಅಂದ್ರೆ ಏನು? what is the success of life?

ಹೌದಲ್ವ!! ಸಾಧನೆ ಅಂದ್ರೆ ಏನು? ಅನ್ನೋ ನಮ್ಮ ಪ್ರಶ್ನೆಗೆ ನಾವು ಕೊಡೂ ಉತ್ತರ - ಯಾರೂ ಮಾಡಲಾಗದ ಕೆಲಸವನ್ನ ತಾನು ಮಾಡಿ ಎಲ್ಲರಿಂದ ಹೊಗಳಿಕೆ ಗಳಿಸುವು. ರಾಷ್ಟ್ರ, ರಾಜ್ಯ, ದೇಶಮಟ್ಟದ, ಅತರ ರಾಷ್ಟ್ರೀಯ ಮಟ್ಟದ ಪ್ರಶಸ್ತಿ, ಪುರಸ್ಕಾರಗಳನ್ನ ಗಳಿಸುವು. ತಾನು ಹುಟ್ಟಿ ಬೆಳೆದ ಊರಿಗೆ, ಜಿಲ್ಲೆಗೆ , ರಾಜ್ಯಕ್ಕೆ,  ದೇಶಕ್ಕೆ ಒಳ್ಳೆಯ ಹೆಸರು ತಂದುಕೊಡುವುದು. ಜನ ಮನ್ನಣೆ ಗಳಿಸುವುದು. ಈ ಸಾಧನೆಗಳಿಗೆ ವಿಶೇಷ ಆಸಕ್ತಿ ಮತ್ತು ಬುಧ್ಧಿವಂತಿಕೆ ಇದ್ದವರು ಮಾತ್ರ ಇವುಗಳನ್ನು ಸಾಧಿಸಲು ಸಾದ್ಯ. ಇನ್ನು ಕೆಲವರು  ಚಿಕ್ಕವರಿದ್ದಾಗ ಡಾಕ್ಟರರನ್ನ, ಇಂಜಿನಿಯರ್, ಲಾಯರ್ ನನ್ನೊ, ನೋಡಿ ತಾನು ಆ ರೀತಿ ಉದ್ಯೋಗ ಪಡೆದು ಜೀವನದಲ್ಲಿ ಸಾರ್ಥಕತೆ ಪಡೆಯುವುದು.  ಇನ್ನು ಹೇಳುತ್ತಾ ಹೋದರೆ ಸಾಧನೆ ಅನ್ನೋ ಪದಕ್ಕೆ ದೊಡ್ಡ ಪುಸ್ತಕ ಬರೆಯುವಸ್ಟು ವಿಷಯಗಳು ಸಿಗುತ್ತವೆ.



ಆದರೆ ಸಾಮಾನ್ಯ ಮನುಷ್ಯನಿಗೆ ಸಾಧನೆ ಅಂದ್ರೆ ಏನು? ಸಾಮಾನ್ಯವಾಗಿ ಚಿಕ್ಕ ಪುಟ್ಟ ಕೆಲಸ ಅಥವಾ ಜವಾಬ್ದಾರಿಗಳನ್ನು ಮಾಡಿ ಅದೇ ನಮ್ಮ ಜೀವನದ  ಸಾಧನೆ ಅಂತ  ನಾವೆಲ್ಲರೂ ಖುಷಿಯಿಂದ ಹೇಳಿಕೊಳ್ಳುತ್ತಿರುತ್ತೇವೆ. ಇತ್ತೀಚೆಗಸ್ಟ ಈ ಸಾಧನೆ ಅನ್ನೋ ವಿಷಯವಾಗಿ ನಾ ಓದಿದ  what's up ಸಂದೇಶವೊಂದು  ನನಗೆ ತುಂಬಾ ಇಷ್ಟವಾಯಿತು. ಇಂಗ್ಲಿಷ್ನಲ್ಲಿದ್ದ ಕಾರಣ ಅದನ್ನು  ನಾನು ಕನ್ನಡದಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ. ಆ ಪ್ರಯತ್ನದಲ್ಲಿ ನನಗೆ ಸರಿಯೆನಿಸಿದ ಪದಗಳನ್ನು ಸೇರಿಸಿದ್ದೇನೆ. ಅದೇನಂದ್ರೆ,



ಸಾಧನೆ ಅಂದ್ರೆ ಏನು?

ನಮ್ಮ 4 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ತನ್ನ ಬಟ್ಟೆ ಮತ್ತು ಹಾಸಿಗೆ ಒದ್ದೆ ಮಾಡದೇ ಇರುವುದು.

ನಮ್ಮ 8 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ನಮ್ಮ ಮನೆಗೆ ಬರುವ ದಾರಿಯನ್ನು ನೆನಪಿಟ್ಟುಕೊಂಡು ಮನೆಗೆ ಬರುವುದು.

ನಮ್ಮ 12 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಗೆಳೆಯರನ್ನ ಸಂಪಾದಿಸಿಕೊಳ್ಳೋದು.

ನಮ್ಮ 18 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಡ್ರೈವಿಂಗ್ ಲೈಸನ್ಸ್ ಪಡೆಯೋದು.

ನಮ್ಮ 23 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಸ್ನಾತಕೋತ್ತರ ಪದವಿ ಪಡೆಯೋದು.

ನಮ್ಮ 25 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ದುಡಿಮೆ ಶುರು ಮಾಡುವುದು.

ನಮ್ಮ 30 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಮದುವೆಯಾಗಿ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳುವದು.

ನಮ್ಮ 35 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಹಣ ಸಂಪಾದಿಸುವುದು.

ನಮ್ಮ 45 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಜವಾಬ್ದಾರಿ ವ್ಯಕ್ತಿಯಾಗಿ ಮನೆತನ ನಿಭಾಯಿಸುವದು.

ನಮ್ಮ 50 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಮಕ್ಕಳಿಗೆ ಒಳ್ಳೆಯ ವಿದ್ಯಾಬ್ಯಾಸ ಮಾಡಿಸುವುದು.

ನಮ್ಮ 55 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ತಮ್ಮ ಕರ್ತವ್ಯಗಳನ್ನ ನಿಭಾಯಿಸಲು ಸಮರ್ಥರಾಗಿರುವುದು.

ನಮ್ಮ 60 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಡ್ರೈವಿಂಗ್ ಲೈಸೆನ್ಸ್ ಹೊಂದಲು ಯೋಗ್ಯರಾಗಿರುವುದು.

ನಮ್ಮ 65 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಯಾವುದೇ ಖಾಯಿಲೆಗಲಿಲ್ಲದೆಇರುವುದು.

ನಮ್ಮ 70 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ತನಗೆ ಮತ್ತು ಸುತ್ತಲಿನವರಿಗೆ  ಬೇಜಾರೆನಿಸದೆ ಬದುಕುವುದು.

ನಮ್ಮ 75 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಹಳೆ ಸ್ನೇಹಿತರನ್ನು ಮತ್ತೆ ಸೇರುವುದು.

ನಮ್ಮ 80 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಮನೆ ದಾರಿ ಮರೆಯದಿರುವುದು.

ನಮ್ಮ 85 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ತನ್ನ ಬಟ್ಟೆ ಮತ್ತು ಹಾಸಿಗೆ ಒದ್ದೆ ಮಾಡಿಕೊಳ್ಳದಿರುವುದು.

ಈ ಮೆಸೇಜ್ ನಲ್ಲಿ ಬದುಕಿನ ಚಕ್ರದ ಅರಿವು ಇದೆ ಅಂತ ನಂಗೆ ಅನ್ನಿಸ್ತು. ಭೂಮಿ ಮೇಲಿನ ಪ್ರತಿ ಮನುಶ್ಯನ ಜೀವನದ ಸಾಧನೆಯ ಖುಷಿ ಇವುಗಳಲ್ಲಿದೆ. ಈ ಮೇಲಿನ ಎಲ್ಲ ವಿಚಾರಗಳು ನಮ್ಮೆಲ್ಲರ ಮನಸ್ಸಿನಲ್ಲಿ ಬಂದು ಹೋಗುತ್ತಿರುತ್ತವೆ. ನಾವು ಈ ವಯಸ್ಸಿನಲ್ಲಿ ಹೀಗೇ ಇರಬೇಕು ಅನ್ನೋ ಲೆಕ್ಕಹಾಕಿ ಯೋಚಿಸುತ್ತಿರುವಾಗ ಈ ಅಂಶಗಳು ನಮ್ಮ ಬದುಕಿನಲ್ಲಿ ಹೀಗೆ ನಡೀಬೇಕು ಅಂತ ಅಂದುಕೊಂಡಿದ್ದು ಇದೆ.

No comments:

Post a Comment