Monday, 3 October 2016

ಗೂಳಿಗೆ ಕೆಂಪು ಬಣ್ಣ ಕಂಡ್ರೆ ಯಾಕೆ ಆಗೋಲ್ಲ?

ಇವಾಗ ದಸರಾ ರಜೆ. ಮಕ್ಕಳ ಶಾಲೆಗೆ ರಜೆ ಇರೋ ಕಾರಣ ಮನೇಲಿ ತುಂಬಾ ಗಲಾಟೆ ಜಾಸ್ತಿ ಆಗಿದೆ. ಇವರ ಗಲಾಟೆಲಿ ಮನಸ್ಸು ಪಿಚ್ಚ್ ಅಂತಾ ಇತ್ತು, ರಾತ್ರಿ ಊಟ ಆದಮೇಲೆ ಸ್ವಲ್ಪ ಮಕ್ಕಳನ್ನ ಆಚೆ ನಡೆದಾಡಿಸಿಕೊಂಡು ಬರೋಣ ಅಂತ ಎಲ್ಲ ರಾತ್ರಿ ವಾಕಿಂಗ್ ಹೊರಟ್ವಿ, ದಾರಿಲಿ ಮಕ್ಕಳ ಪ್ರಶ್ನಾವಳಿ ಶುರು ಆಯಿತು. ಮಕ್ಕಳೆಂದರೆ ಹಾಗೆ ಅಲ್ವೇ?. ತಮ್ಮ ಸುತ್ತಮುತ್ತ ಏನೇ ನಡೆದರೂ ಅದನ್ನ ತಿಳಿದುಕೊಳ್ಳೂವರೆಗೂ ಅಥವಾ ಅವರ ಮನಸ್ಸಿಗೆ ಸಮಾಧಾನ ಅಗೂವರೆಗೂ ನಾವು ಉತ್ತರ ಕೊಡುತ್ತಲೇ ಇರಬೇಕು. ಇವತ್ತು ಉತ್ತರ ಕೊಡದಿದ್ದರೂ ಮತ್ತೊಂದು ದಿನ ಆ ಪ್ರಶ್ನೆ ನಮ್ಮನ್ನ ಕೇಳೆಕೇಳ್ತಾರೆ.



ಸ್ವಲ್ಪ ದಿನದಿಂದಿನ ಕತೆ ಇದು.  ನಾವು ಊರಿಗೆ ಹೋದಾಗ ಒಂದು ಹಸು ದಾರೀಲಿ ಬರ್ತಾಯಿತ್ತು. ಆಗ ಅವರ ಅಜ್ಜಿ- ತಾತ, ಪ್ರಣವನಿಗೆ ಹೇಳಿದ್ರು, ಆ ಗೂಳಿ ಸರಿಯಿಲ್ಲ. ಕೆಂಪು ಬಟ್ಟೆ ಹಾಕ್ಕೊಂಡಿದಿಯ ಬಾರೋ ಈ ಕಡೆ. ಕೆಂಪು ಬಟ್ಟೆ ಕಂಡ್ರೆ ಅದು ಗುದ್ದೋಕೆ  ಬರುತ್ತೆ ಅಂತ.  ಅವತ್ತು ಅವನಲ್ಲಿ ಹುಟ್ಟಿದ "ಯಾಕೆ ಗೂಳಿಗಳಿಗೆ ಕೆಂಪು ಬಟ್ಟೆ ಕಂಡ್ರೆ ಆಗಲ್ಲ?" ಅನ್ನೋ ಪ್ರಶ್ನೆಯನ್ನ ಮತ್ತೆ ಮತ್ತೆ ಕೇಳ್ತಾನೆ ಇರ್ತಾನೆ. ಇದಕ್ಕೆ ಉತ್ತರ ನಮಗಾರಿಗೂ ಗೊತ್ತಿರ್ಲಿಲ್ಲ. ಬೇರೆಯವರನ್ನ ಕೇಳಿ ತಿಳ್ಕೊಳ್ಳೋ ತಾಳ್ಮೆನೂ ಇರದ ನಾವು ಏನೋ ಒಂದು ಕಾರಣ ಹೇಳಿ ತಪ್ಪಿಸ್ಕೋತ ಇದ್ವಿ.

ಮೊನ್ನೆ ವಾಕಿಂಗ್ ಹೊತ್ತಲ್ಲೂ ಮತ್ತೆ ಈ ಪ್ರಶ್ನೆನ ಕೇಳದ. ಅದಕ್ಕೆ ಅವನ ಅಪ್ಪನಿಗೆ ಈ  ಪ್ರಶ್ನೆ  ಕೇಳಿದರೆ ಉತ್ತರ ಸಿಗುತ್ತೆ ಅಂದೆ. ಆದ್ರೆ ಅವರಿಂದ ಸಿಕ್ಕ ಉತ್ತರ ಗೂಗಲ್ನಲ್ಲಿ  ಹುಡುಕಿ ಹೇಳು. ಈ ಸರಿನಾದ್ರೂ ಸರಿ ಉತ್ರ ಕೊಡ್ಬೇಕು ಅಂತ ನಿರ್ಧಾರ ಮಾಡಿ ಗೂಗಲ್ ಮಾಡಿದ್ಮೇಲೆ ನನಗೆ ಸಿಕ್ಕ ವಿವರ ಇಲ್ಲಿ ಬರೀತಾ ಇದ್ದೀನಿ.

ಗೂಳಿಗೂ ಮತ್ತು ಕೆಂಪು ಬಣ್ಣಕ್ಕೂ ಯಾಕೆ ಆಗಿಬರೋಲ್ಲ ಅನ್ನೋ ನನ್ನ ಮಗನ ಪ್ರಶ್ನೆಗೆ ಸಿಕ್ಕ ಇನ್ಫಾರ್ಮೇಷನ್ ಗಳು ಹೀಗಿದ್ವು.

ನಿಜವಾಗ್ಲೂ ಗೂಳಿಗೆ ಕೆಂಪು ಬಣ್ಣ ಕಂಡ್ರೆ ಆಗೋಲ್ವ? ಯಾಕೆ ಹೀಗೆ? ಬರೀ ಗೂಳಿಗೆ ಮಾತ್ರನಾ  ಅಥವಾ ಇತರೆ ಪ್ರಾಣಿಗಳಿಗೂ ಹೀಗೆ ಬೇರೆ ಬೇರೆ ಬಣ್ಣಗಳ ಬಗ್ಗೆ ಅಸಮಧಾನ ಆಗುತ್ತಾ?!

ಹೌದು, ಪ್ರಕೃತಿಯಲ್ಲಿ ಎಲ್ಲ ಪ್ರಾಣಿಗಳಿಗೂ ಒಂದೊಂದು ಕೊಡುಗೆ ಮತ್ತು ಕೊರತೆಗಳು ಇವೆ.  ಉದಾಹರಣೆಗೆ ನಾವು ಬೆಳಕಿನ ಪ್ರಭಾವ ಇಲ್ಲದೆ ಕತ್ತಲಲ್ಲಿ ಯಾವ ವಸ್ತುವನ್ನು ನೋಡಲಾಗುವುದಿಲ್ಲ. ಆದರೆ ಬೆಕ್ಕು, ಹುಲಿಯಂಥ ಪ್ರಾಣಿಗಳು ಕತ್ತಲಲ್ಲೂ ತನ್ನ ಬೇಟೆ ಹುಡುಕುವಸ್ಟ್ ಉತ್ತಮ ಕಣ್ಣುಗಳನ್ನು ಹೊಂದಿವೆ.

ಕೆಲವರ ಪ್ರಕಾರ ಗೂಳಿಯ ಕಣ್ಣಿಗೆ ಕೆಂಪುಬಣ್ಣದ ಕುರುಡುತನವಿದೆ (colorblind to red) ಎಂದು ಹೇಳುತ್ತಾರೆ. ಗೂಳಿಗೆ ತಮ್ಮ ಮುಂದಿರುವ ವಸ್ತುಗಳ ನಡುವೆ ಎಲ್ಲ ಬಣ್ಣದ ವಸ್ತುಗಳು ಕಂಡು ಈ ಕೆಂಪು ಬಣ್ಣದ ವಸ್ತು ಕಾಣದಿದ್ದಾಗ, ಅದು ಕಣ್ಣು ಮುಚ್ಚಿದ ಹಾಗು ಕೋರೈಸುವ ರೀತಿ ಅನುಭವ ಆಗಿ ಭಯಕ್ಕೋ ಅಥವಾ ಕೋಪಕ್ಕೋ ಆ ರೀತಿ ಕೆಂಪು ಬಣ್ಣ ದ ಮೇಲೆ ದಾಳಿ ಮಾಡುತ್ತವೆ ಎನ್ನಲಾಗುತ್ತದೆ.

ಸಾಮಾನ್ಯವಾಗಿ ಎಲ್ಲರ ನಂಬಿಕೆ ಏನು ಅಂದ್ರೆ ಗೂಳಿಗೆ ಕೆಂಪು ಬಣ್ಣ ಕಂಡ್ರೆ ಆಗೋಲ್ಲ ಅಂತ. ಇದಕ್ಕೆ 2007 ರಲ್ಲಿ, discovery channels ನ myth busters ತಂಡ ಗೂಳಿ ಮತ್ತು 3 ಬಣ್ಣಗಳ ಜೊತೆ ಒಂದು ಪ್ರಯೋಗ ನಡೆಸುತ್ತಾರೆ.

ಮೊದಲನೆಯದಾಗಿ, ಗೂಳಿಯ ಮುಂದೆ ಕೆಂಪು, ನೀಲಿ, ಮತ್ತು ಬಿಳಿಯ 3 ಬಣ್ಣದ ಬಾವುಟಗಳನ್ನ ಗೂಳಿಯ ಮುಂದೆ ತಂದಿಡುತ್ತಾರೆ. ಗೂಳಿಯು ಯಾವುದೇ ಬಣ್ಣದ ಭೇದವಿಲ್ಲದೆ ಆ ಬಾವುಟಗಳ ಮೇಲೇ ನುಗ್ಗುತ್ತದೆ.
ಎರೆಡನೆಯದಾಗಿ, ಮತ್ತೆ ಈ ಮೂರೂ ಬಣ್ಣದ (ಕೆಂಪು, ನೀಲಿ, ಬಿಳಿ ) ಬಟ್ಟೆ ತೊಟ್ಟಿರುವ ನಕಲಿ ವಸ್ತುಗಳನ್ನು ಗೂಳಿಯ ಮುಂದೆ ತರುತ್ತಾರೆ. ಆಗಲು ಗೂಳಿಯು ಯಾವುದೇ ಬಣ್ಣದ ಭೇದವಿಲ್ಲದೆ ಆ ವಸ್ತುಗಳನ್ನು ಮೇಲೆ ಹಾಯುತ್ತದೆ.

ಮೂರನೆಯದಾಗಿ, ಅವೇ ಮೂರೂ ಬಣ್ಣದ (ಕೆಂಪು, ನೀಲಿ, ಬಿಳಿ) ಬಟ್ಟೆಗಳನ್ನು ತೊಟ್ಟ ಮನುಶ್ಯರ ನ್ನು ಗೂಳಿಯ ಮುಂದೆ ನಿಲ್ಲಿಸುತ್ತಾರೆ. ಆದರೆ ಅದು ಕೆಂಪು ಬಣ್ಣದ ವ್ಯಕ್ತಿಯನ್ನು ಬಿಟ್ಟು, ಮೊದಲು ನೀಲಿ ಮತ್ತು ಬಿಳಿ ಬಣ್ಣದ ವ್ಯಕ್ತಿಗಳ ಮೇಲೆ ಮೊದಲು ಹಾಯ್ದು ನಂತರ ಕೆಂಪು ಬಣ್ಣದ ವ್ಯಕ್ತಿಯ ಮೇಲೆ ಹಾಯುತ್ತದೆ.

ಈ ಪ್ರಯೋಗದ ಮೇಲೆ ಅವರ ಹೇಳಿಕೆ- ಗೂಳಿಗೆ ಅಥವಾ ಕೆಲವು  ಪ್ರಾಣಿಗಳಿಗೆ ಕೆಂಪು ಸೇರಿಸಿ ಕೆಲವು ಬಣ್ಣಗಳ ಕುರುಡುತನ ಇರುತ್ತದೆ. ಆ ಬಣ್ಣದ ವಸ್ತು ಅಥವಾ ವ್ಯಕ್ತಿ ಆ ಪ್ರಾಣಿಗಳ ಮುಂದೆ  ಬಂದಾಗ ಕಣ್ಣು ಮುಚ್ಚಿದ , ಹಾಗೂ ಬೇರೆ ಬಣ್ಣಗಳ ವಸ್ತುಗಳ ಜೊತೆ ಆ ಬಣ್ಣವು ಕಾಣದಿದ್ದಾಗ ಅದು ಗೊಂದಲಕ್ಕೀಡಾಗಿ ಕೊಪಗೊಂಡು,  ಆ ಕಾಣದ ಬಣ್ಣದ ವಸ್ತುವಿನ ಮೇಲೆ ಹಾಯ್ದು ಕೋಪ ತೋರಿಸಿಕೊಳ್ಳುತ್ತವೆ. ಎಂದು ಹೇಳಲಾಗುತ್ತದೆ.


No comments:

Post a Comment