ಕೆಂಪು ಇಲ್ಲವೇ ಕಿತ್ತಳೆ ಬಣ್ಣದ ತೊಟ್ಟು ಮತ್ತು ಬಿಳಿ ದಳಗಳಿರುವ ಈ ಸುಂದರವಾದ ಹೂವು ನೋಡಲು ತುಂಬಾ ಸುಂದರ. ಈ ಮರದ ಹೂವು ನಾವು ಕೀಳುವ ಅವಶ್ಯಕತೆಯೇ ಇರೋಲ್ಲ. ಮರದ ಕೆಳಗೆ ನಿಂತು ಮರವನ್ನು ಸ್ವಲ್ಪ ಅಲುಗಾದಿಸಿದರೆ ಸಾಕು ನಮ್ಮ ಮೇಲೆ ಹೂವಿನ ಮಳೆ ಬರುತ್ತದೆ. ನಮ್ಮ ಸುತ್ತ ಮುತ್ತ ಒಂದು ಪಾರಿಜಾತ ಮರ ಇದ್ದರೆ ಸಾಕು. ಪಾರಿಜಾತದ ವಾಸನೆಯಿಂದ ಸುತ್ತಮುತ್ತಲಿನ ವಾತಾವರಣ ಹಿತವಾಗಿರುತ್ತದೆ. ಸಾಮಾನ್ಯವಾಗಿ ಎಲ್ಲ ಗಿಡಮರಗಳ ಮೊಗ್ಗುಗಳು ಹೂವಾಗಿ ಅರಳಲು ಸೂರ್ಯನ ಬರುವಿಕೆಯನ್ನು ಕಾಯುತ್ತಿರುತ್ತವೆ. ಆದ್ರೆ ಈ ಪಾರಿಜಾತ ಹೂ ಮಾತ್ರ ಹಾಗಲ್ಲ. ಪಾರಿಜಾತ ಮೊಗ್ಗು ಹೂವಾಗಿ ಅರಳಲು ಸೂರ್ಯ ಮುಳುಗುವುದನ್ನೇ ಕಾಯುತ್ತಿರುತ್ತದೆ. ರಾತ್ರಿಯೇ ಅರಳಿ ಸೂರ್ಯ ಬರುವ ಸಮಯದಲ್ಲಿ ಬಾಡಿ ಉದುರಿಹೋಗುತ್ತದೆ.
ಇಂಗ್ಲಿಷ್ ನಲ್ಲಿ ಇದನ್ನು ನೈಟ್ ಜಾಸ್ಮಿನ್, ಕೋರಲ್ ಜಾಸ್ಮಿನ್ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಪ್ಹೆಫಾಲಿಕ, ಹರಿಸಿಂಗಾರ ಎಂದು ಕರೆಯುತ್ತಾರೆ.
ಸಮುದ್ರದ ಮಥನದ ಕಾಲದಲ್ಲಿ ಮೊದಲು ಹುಟ್ಟಿಬಂದ 5 ವೃಕ್ಷ ಗಳಲ್ಲಿ ಇದೂ ಒಂದು. ಆ ವೃಕ್ಷಗಳು ಯಾವೆಂದರೆ ಮಂದಾರ, ಸಂತಾನ, ಕಲ್ಪವೃಕ್ಷ, ಹರಿಚಂದನ, ಪಾರಿಜಾತ. ಈ ಪಾರಿಜಾತವು ತಿಳುವಳಿಕೆ ಮತ್ತು ಜ್ಞಾನದ ಸಂಕೇತ ಎಂದು ನಂಬಲಾಗುತ್ತದೆ.
ಈ ಪಾರಿಜಾತ ಮರದ ಬಗ್ಗೆ ಹಲವಾರು ಕಥೆಗಳು--
ಸೂರ್ಯನ ಮೇಲಿನ ಪ್ರೀತಿ, ವಿರಹ, ದುಃಖ, ಕೋಪ ವನ್ನು ಪಾರಿಜಾತ ಈ ಪ್ರಪಂಚಕ್ಕೆ ಈ ರೀತಿ ತೋರ್ಪದಿಸಿದ್ದಾಳೆ ಎಂದು ಹೇಳಲಾಗುತ್ತದೆ. ಆದ್ಧರಿಂದ ಇದನ್ನು ಕವಿಗಳು ದುಃಖತಪ್ತ ಮರ tree of sadness ಎಂದು ಕರೆದಿದ್ದಾರೆ.
ಕಥೆ-2. ದೇವಾಸುರರ ಸಮುದ್ರ ಮಥನದ ಕಾಲದಲ್ಲಿ ಹುಟ್ಟಿಬಂದ ಪಾರಿಜಾತ ಮರವನ್ನು ನಾರದರು ಕೃಷ್ಣನ ಕೈಯಲ್ಲಿ ಕೊಡುತ್ತಾರೆ. ಕೃಷ್ಣನು ಅದನ್ನು ಸತ್ಯಭಾಮೆಯ ತೋಟದಲ್ಲಿ ನೆಡುತ್ತಾನೆ. ಅದರ ಹೂವು ರುಕ್ಮಿಣಿಯ ಮನೆಯ ಅಂಗಳದಲ್ಲಿ ಬೀಳುವಂತೆ ನೆಟ್ಟಿರುತ್ತಾನೆ. ನಾರದರು ಒಮ್ಮೆ ರುಕ್ಮಿಣಿಯ ಮನೆಗೆ ಹೋದಾಗ ಆ ಹೂವನ್ನು ನೋಡಿ ಇದನ್ನು ನಾನು ನಿನ್ನ ಪ್ರೀತಿಪಾತ್ರರ ಮನೆಯಲ್ಲಿ ನೆಡಬೇಕು ಎಂದು ಹೇಳಿದ್ದೆ. ಎಂದು ಹೇಳಿ ರುಕ್ಮಿಣಿ ಮತ್ತು ಸತ್ಯಭಾಮೆಯ ನಡುವೆ ಜಗಳ ತಂದಿರಿಸುವ ಪ್ರಸಂಗ ತುಂಬಾ ಸ್ವಾರಸ್ಯಕರವಾಗಿದೆ.
ಸಸ್ಯ ಶಾಸ್ತ್ರಜ್ಞರ ಪ್ರಕಾರ -ಇದು ಹೂವಲ್ಲ ಎಂಬ ವಾದವನ್ನು ಮಂಡಿಸುತ್ತಾರೆ. ಇದು nyctanthes arbor-tristis ಎಂಬ ಸಸ್ಯಗಳ ಗುಂಪಿಗೆ ಸೇರುತ್ತದೆ ಎಂದು ಹೇಳುತ್ತಾರೆ. ಈ ಮರ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಜಾಂಡೀಸ್, ಮಲಬಧ್ಧತೆಯ ತೊಂದರೆಗಳಿಗೆ ಈ ಮರದ ಎಳೆಗಳ ರಸವನ್ನು ಔಷಧಿಗಳಿಗೆ ಉಪಯೋಗಿಸುತ್ತಾರೆ. ತಲೆಹೊಟ್ಟು, ಮೂಲವ್ಯಾಧಿ, ಚರ್ಮರೋಗ, ಮತ್ತು ಹಲವು ರೀತಿಯ ಜ್ವರಗಳಿಗೆ ಮತ್ತು ಯಕೃತ್ ನ ರೋಗಕ್ಕೆ, ಜೀರ್ಣಾಂಗಗಳ ತೊಂದರೆಗಳಿಗೆ , ಕರುಳಿನ ಹುಳುಗಳ ನಿವಾರಣೆಗೆ ಪಾರಿಜಾತ ಮರದ ಹೂವು ಮತ್ತು ಎಲೆಗಳಿಂದ, ಬೀಜಗಳಿಂದ ಆಯುರ್ವೇದದಲ್ಲಿ ಔಷಧ ತಯಾರಿಸುತ್ತಾರೆ.
ವೇದಗಳ ಕಾಲದಲ್ಲಿ ಬಟ್ಟೆಗೆ ಹಾಕುವ ಬಣ್ಣವನ್ನು ಈ ಹೂವಿನಿಂದ ತಯಾರಿಸುತ್ತಿದ್ದರು ಎಂದು ಹೇಳಲಾಗುತ್ತದೆ.
ಈ ಪಾರಿಜಾತ ಹೂವು ಹಲವಾರು ಕವಿಗಳಿಗೆ ಕವಿತೆಗೆ ಸ್ಪೂರ್ತಿಯಾಗಿದೆ. ತನ್ನಲ್ಲಿ ಔಷಧೀಯ ಗುಣಗಳನ್ನು ಹೊಂದಿದೆ. ಕೃಷ್ಣನಿಗೆ ಪ್ರಿಯವಾದ ಹೂವು ಇದು. ಮಕ್ಕಳಿಗೂ ಪ್ರೀತಿ. ಈ ಪಾರಿಜಾತ ಹೂವಿನ ಮರ ಕಂಡರೆ ಸಾಕು ಕೆಳಗೆ ಬಿದ್ದಿರೋ ಹೂವುಗಳ ಹಿಡಿದು ಆಟ ಶುರು ಮಾಡಿಬಿಡುತ್ತಾರೆ. ಪಾರಿಜಾತದ ಹೂವುಗಳನ್ನು ಹಿಸುಕಿದಾಗ ಕೈ ಕಿತ್ತಳೆ ಬಣ್ಣ ಬರುತ್ತೆ ಆಗಂತೂ ಮಕ್ಕಳು ಇನ್ನು ಖುಷಿ ಪಡುತ್ತಾರೆ.
ಈ ಪಾರಿಜಾತ ಹೂವು ಹಲವಾರು ಕವಿಗಳಿಗೆ ಕವಿತೆಗೆ ಸ್ಪೂರ್ತಿಯಾಗಿದೆ. ತನ್ನಲ್ಲಿ ಔಷಧೀಯ ಗುಣಗಳನ್ನು ಹೊಂದಿದೆ. ಕೃಷ್ಣನಿಗೆ ಪ್ರಿಯವಾದ ಹೂವು ಇದು. ಮಕ್ಕಳಿಗೂ ಪ್ರೀತಿ. ಈ ಪಾರಿಜಾತ ಹೂವಿನ ಮರ ಕಂಡರೆ ಸಾಕು ಕೆಳಗೆ ಬಿದ್ದಿರೋ ಹೂವುಗಳ ಹಿಡಿದು ಆಟ ಶುರು ಮಾಡಿಬಿಡುತ್ತಾರೆ. ಪಾರಿಜಾತದ ಹೂವುಗಳನ್ನು ಹಿಸುಕಿದಾಗ ಕೈ ಕಿತ್ತಳೆ ಬಣ್ಣ ಬರುತ್ತೆ ಆಗಂತೂ ಮಕ್ಕಳು ಇನ್ನು ಖುಷಿ ಪಡುತ್ತಾರೆ.