
ಇಂಗ್ಲಿಷ್ ನಲ್ಲಿ ಇದನ್ನು ನೈಟ್ ಜಾಸ್ಮಿನ್, ಕೋರಲ್ ಜಾಸ್ಮಿನ್ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಪ್ಹೆಫಾಲಿಕ, ಹರಿಸಿಂಗಾರ ಎಂದು ಕರೆಯುತ್ತಾರೆ.
ಸಮುದ್ರದ ಮಥನದ ಕಾಲದಲ್ಲಿ ಮೊದಲು ಹುಟ್ಟಿಬಂದ 5 ವೃಕ್ಷ ಗಳಲ್ಲಿ ಇದೂ ಒಂದು. ಆ ವೃಕ್ಷಗಳು ಯಾವೆಂದರೆ ಮಂದಾರ, ಸಂತಾನ, ಕಲ್ಪವೃಕ್ಷ, ಹರಿಚಂದನ, ಪಾರಿಜಾತ. ಈ ಪಾರಿಜಾತವು ತಿಳುವಳಿಕೆ ಮತ್ತು ಜ್ಞಾನದ ಸಂಕೇತ ಎಂದು ನಂಬಲಾಗುತ್ತದೆ.
ಈ ಪಾರಿಜಾತ ಮರದ ಬಗ್ಗೆ ಹಲವಾರು ಕಥೆಗಳು--
ಸೂರ್ಯನ ಮೇಲಿನ ಪ್ರೀತಿ, ವಿರಹ, ದುಃಖ, ಕೋಪ ವನ್ನು ಪಾರಿಜಾತ ಈ ಪ್ರಪಂಚಕ್ಕೆ ಈ ರೀತಿ ತೋರ್ಪದಿಸಿದ್ದಾಳೆ ಎಂದು ಹೇಳಲಾಗುತ್ತದೆ. ಆದ್ಧರಿಂದ ಇದನ್ನು ಕವಿಗಳು ದುಃಖತಪ್ತ ಮರ tree of sadness ಎಂದು ಕರೆದಿದ್ದಾರೆ.
ಕಥೆ-2. ದೇವಾಸುರರ ಸಮುದ್ರ ಮಥನದ ಕಾಲದಲ್ಲಿ ಹುಟ್ಟಿಬಂದ ಪಾರಿಜಾತ ಮರವನ್ನು ನಾರದರು ಕೃಷ್ಣನ ಕೈಯಲ್ಲಿ ಕೊಡುತ್ತಾರೆ. ಕೃಷ್ಣನು ಅದನ್ನು ಸತ್ಯಭಾಮೆಯ ತೋಟದಲ್ಲಿ ನೆಡುತ್ತಾನೆ. ಅದರ ಹೂವು ರುಕ್ಮಿಣಿಯ ಮನೆಯ ಅಂಗಳದಲ್ಲಿ ಬೀಳುವಂತೆ ನೆಟ್ಟಿರುತ್ತಾನೆ. ನಾರದರು ಒಮ್ಮೆ ರುಕ್ಮಿಣಿಯ ಮನೆಗೆ ಹೋದಾಗ ಆ ಹೂವನ್ನು ನೋಡಿ ಇದನ್ನು ನಾನು ನಿನ್ನ ಪ್ರೀತಿಪಾತ್ರರ ಮನೆಯಲ್ಲಿ ನೆಡಬೇಕು ಎಂದು ಹೇಳಿದ್ದೆ. ಎಂದು ಹೇಳಿ ರುಕ್ಮಿಣಿ ಮತ್ತು ಸತ್ಯಭಾಮೆಯ ನಡುವೆ ಜಗಳ ತಂದಿರಿಸುವ ಪ್ರಸಂಗ ತುಂಬಾ ಸ್ವಾರಸ್ಯಕರವಾಗಿದೆ.
ಸಸ್ಯ ಶಾಸ್ತ್ರಜ್ಞರ ಪ್ರಕಾರ -ಇದು ಹೂವಲ್ಲ ಎಂಬ ವಾದವನ್ನು ಮಂಡಿಸುತ್ತಾರೆ. ಇದು nyctanthes arbor-tristis ಎಂಬ ಸಸ್ಯಗಳ ಗುಂಪಿಗೆ ಸೇರುತ್ತದೆ ಎಂದು ಹೇಳುತ್ತಾರೆ. ಈ ಮರ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಜಾಂಡೀಸ್, ಮಲಬಧ್ಧತೆಯ ತೊಂದರೆಗಳಿಗೆ ಈ ಮರದ ಎಳೆಗಳ ರಸವನ್ನು ಔಷಧಿಗಳಿಗೆ ಉಪಯೋಗಿಸುತ್ತಾರೆ. ತಲೆಹೊಟ್ಟು, ಮೂಲವ್ಯಾಧಿ, ಚರ್ಮರೋಗ, ಮತ್ತು ಹಲವು ರೀತಿಯ ಜ್ವರಗಳಿಗೆ ಮತ್ತು ಯಕೃತ್ ನ ರೋಗಕ್ಕೆ, ಜೀರ್ಣಾಂಗಗಳ ತೊಂದರೆಗಳಿಗೆ , ಕರುಳಿನ ಹುಳುಗಳ ನಿವಾರಣೆಗೆ ಪಾರಿಜಾತ ಮರದ ಹೂವು ಮತ್ತು ಎಲೆಗಳಿಂದ, ಬೀಜಗಳಿಂದ ಆಯುರ್ವೇದದಲ್ಲಿ ಔಷಧ ತಯಾರಿಸುತ್ತಾರೆ.
ವೇದಗಳ ಕಾಲದಲ್ಲಿ ಬಟ್ಟೆಗೆ ಹಾಕುವ ಬಣ್ಣವನ್ನು ಈ ಹೂವಿನಿಂದ ತಯಾರಿಸುತ್ತಿದ್ದರು ಎಂದು ಹೇಳಲಾಗುತ್ತದೆ.
ಈ ಪಾರಿಜಾತ ಹೂವು ಹಲವಾರು ಕವಿಗಳಿಗೆ ಕವಿತೆಗೆ ಸ್ಪೂರ್ತಿಯಾಗಿದೆ. ತನ್ನಲ್ಲಿ ಔಷಧೀಯ ಗುಣಗಳನ್ನು ಹೊಂದಿದೆ. ಕೃಷ್ಣನಿಗೆ ಪ್ರಿಯವಾದ ಹೂವು ಇದು. ಮಕ್ಕಳಿಗೂ ಪ್ರೀತಿ. ಈ ಪಾರಿಜಾತ ಹೂವಿನ ಮರ ಕಂಡರೆ ಸಾಕು ಕೆಳಗೆ ಬಿದ್ದಿರೋ ಹೂವುಗಳ ಹಿಡಿದು ಆಟ ಶುರು ಮಾಡಿಬಿಡುತ್ತಾರೆ. ಪಾರಿಜಾತದ ಹೂವುಗಳನ್ನು ಹಿಸುಕಿದಾಗ ಕೈ ಕಿತ್ತಳೆ ಬಣ್ಣ ಬರುತ್ತೆ ಆಗಂತೂ ಮಕ್ಕಳು ಇನ್ನು ಖುಷಿ ಪಡುತ್ತಾರೆ.
ಈ ಪಾರಿಜಾತ ಹೂವು ಹಲವಾರು ಕವಿಗಳಿಗೆ ಕವಿತೆಗೆ ಸ್ಪೂರ್ತಿಯಾಗಿದೆ. ತನ್ನಲ್ಲಿ ಔಷಧೀಯ ಗುಣಗಳನ್ನು ಹೊಂದಿದೆ. ಕೃಷ್ಣನಿಗೆ ಪ್ರಿಯವಾದ ಹೂವು ಇದು. ಮಕ್ಕಳಿಗೂ ಪ್ರೀತಿ. ಈ ಪಾರಿಜಾತ ಹೂವಿನ ಮರ ಕಂಡರೆ ಸಾಕು ಕೆಳಗೆ ಬಿದ್ದಿರೋ ಹೂವುಗಳ ಹಿಡಿದು ಆಟ ಶುರು ಮಾಡಿಬಿಡುತ್ತಾರೆ. ಪಾರಿಜಾತದ ಹೂವುಗಳನ್ನು ಹಿಸುಕಿದಾಗ ಕೈ ಕಿತ್ತಳೆ ಬಣ್ಣ ಬರುತ್ತೆ ಆಗಂತೂ ಮಕ್ಕಳು ಇನ್ನು ಖುಷಿ ಪಡುತ್ತಾರೆ.