ನಾನು ಹೀಗೇ ಬೇಜಾರಾಗಿ ಸ್ವಲ್ಪ ರಿಲಾಕ್ಸ್ ಆಗೋಣಾ ಅಂತ ನನ್ನ ಮೊಬೈಲ್ನಲ್ಲಿರೋ ಹಾಡುಗಳನ್ನ ಪ್ಲೇ ಮಾಡಿದೆ ಎಲ್ಲಾವೂ ಸುಮಧುರ ಗೀತೆಗಳೆ. ಕಡಿಮೆ ಅಂದ್ರೂ ಒಂದು ಗಂಟೆಗಿಂತ ಜಾಸ್ತಿ ಹೊತ್ತು ಆ ಹಾಡುಗಳನ್ನೇ ಕೇಳ್ತಾ ಇದ್ದೆ. ಈ ಹಾಡುಗಳನ್ನೆಲ್ಲಾ ಕೇಳ್ತಾ ಯಿದ್ರೆ ಮನಸ್ಸಿಗೆ ಏನೂ ರಿಲ್ಯಕ್ಷ್ ಆದಂಗೆ ಆಗುತ್ತೆ. ಕೆಲವೊಮ್ಮೆ ನನ್ನ ತಲೆನೋವಿಗೆ ಹಾಡುಗಳನ್ನ ಕೇಳುವುದೇ ಮೆಡಿಸನ್. ಹಾಗೆ ಮೊಬೈಲ್ ತೊಗೊಂಡ್ ಹಾಡುಗಳನ್ನ ಸ್ಕ್ರಾಲ್ ಮಾಡ್ತಾ ಹೋದೆ ಯಾವ್ದಾದ್ರೂ ಹಳೆ ಹಾಡು ತೆಗೆದು ಹಾಕಿ ಹೊಸ ಹಾಡುಗಳನ್ನು ಸೇರಿಸೋಣ ಅಂತ. ಅಲ್ಲೇ ನಂಗೆ ಆಗಿದ್ದು ಆಶ್ಚರ್ಯ. ಇದುವರೆಗೂ ನಾನು ಕೇಳಿದ ಹಾಡುಗಳೆಲ್ಲಾ ದುಃಖ ತುಂಬಿದ ಹಾಡುಗಳು. ಅದರೂ ಮನಸ್ಸು ಈ ಹಾಡುಗಳನ್ನ ಇಷ್ಟ ಪಡುತ್ತೇ ಯಾಕೆ? ನನಗೆ ತೋಚಿದ್ದನ್ನ ನಾನಿಲ್ಲಿ ಬರೀತಿದೀನಿ.
ನಾನು ಸಂಗೀತ ಕೇಳುವುದು ಮನಸ್ಸಿನ ರಿಲ್ಯಾಕ್ಸ್ ಗಾಗಿ ಆದ್ರೆ ಇಷ್ಟ ಆಗಿದ್ದು ಮಾತ್ರ ಈ ಬೇಜಾರು, ನಿರಾಸೆ, ಅಳು ಬರಿಸುವ ಹಾಡುಗಳು. ಯಾಕೆ ಈ ಹಾಡುಗಳೇ ನಂಗೆ ಇಷ್ಟ ಆದವು ಅಂತ ನನ್ನ ನಾ ಕೇಳಿಕೊಂಡಾಗ ನನ್ನ ಮನಸ್ಸಿಗೆ ತೋಚಿದ್ದು. ಈ ದುಃಖದ ಹಾಡುಗಳು ನಮ್ಮ ಮನಸ್ಸಿನ ಹಳೆಯ ಅನುಭವಗಳಿಂದ ನಮಗಾದ ನೋವು, ನಿರಾಸೆ, ತಿರಸ್ಕಾರ, ಒಂಟಿತನ, ಅವಮಾನ, ದುಃಖ, ಪ್ರೀತಿ, ಪ್ರೇಮ, ಆಲಸ್ಯ ಇನ್ನು ಅನೇಕ ಬಗೆಯ ಅಂಶಗಳನ್ನು ನಾವು ಜೀವನದಲ್ಲಿ ಒಮ್ಮೆಯಾದ್ರೂ ಅನುಭವಿಸಿರುತೇವೆ. ಅವು ಹಾಡಿನ ರೂಪದಲ್ಲಿ ಕೇಳಿದಾಗ ನಮಗೆ ಏನೂ ಒಂದು ರೀತಿಯ ಸಮಾಧಾನ ಹೇಳುವಂತೆ ಅನ್ನಿಸಿರುತ್ತವೆ. ಉದಾಹರಣೆಗೆ ತಾಯಿ-ತಂದೆಯ ವಾತ್ಸಲ್ಯ, ಅಣ್ಣ-ತಂಗಿಯರ ಬಾಂಧವ್ಯ, ಅಜ್ಜ-ಅಜ್ಜಿಯರ ಮುಗ್ಧ ಪ್ರೀತಿ, ಸ್ನೇಹಿತರ ಜೊತೆಗಿನ ಆಟ-ಪಾಠ-ಹೊಡೆದಾಟ, ಪ್ರೇಮಿಗಳ ಅಗಲಿಕೆ, ಹುಟ್ಟಿದಊರು, ನಾವು ಬಿಟ್ಟ ಶಾಲೆ, ಈ ಎಲ್ಲಾ ಅನುಭವಗಳನ್ನ ಕೊಡುವ ಆ ಹಾಡುಗಳು ಪದಗಳ ಜೊತೆ ಜೊತೆಗೇ ನಮ್ಮನ್ನ ಆ ಹಾಡಿನಲ್ಲಿ ಲೀನವಾಗುವಂತೆ ಮಾಡುತ್ತವೆ.
ಈ ದುಃಖದ ಹಾಡುಗಳು ನಮಗೆ ಇಷ್ಟವಾಗಲು ಕಾರಣ ಅವುಗಳಲ್ಲಿರುವ ಸುಮಧುರ ರಾಗ ಮತ್ತು ತಿಳಿಯಾದ ಸಂಗೀತ ಸಂಯೋಜನೆಯೂ ಒಂದು ಕಾರಣವಾಗಿರಬಹುದು ಅಲ್ಲವೇ? ಅಂತಲೂ ಅನಿಸಿತು. ಇವುಗಳನ್ನೆಲ್ಲ ಸರಿಯಾಗಿ ತಿಳಿಯಲು ಮಾನಸಿಕ ತಜ್ಞರು ಬೇಕು ಅನ್ನಿಸ್ತು, ಯಾಕಂದ್ರೆ ನಮ್ಮ ಮನಸಿನ ಅಂತರಾಳ ತಿಳಿಯಲು. ಸೈಂಟಿಸ್ಟ್ಗಳು ಬೇಕು ಅಂತ ಅನ್ನಿಸ್ತು, ಯಾಕಂದ್ರೆ ಈ ದುಃಖದ ಹಾಡುಗಳನ್ನು ಕೇಳಿದಾಗ ನಮ್ಮ ಮೆದುಳಿನಲ್ಲಾಗುವ ಕೆಮಿಕಲ್ ರಿಯಾಕ್ಷನ್ ತಿಳಿದುಕೊಳ್ಳಲು. ಇಂಜಿನೀಯರ್ ಗಳು ಬೇಕೆನ್ನುಸ್ತು ಯಾಕಂದ್ರೆ ಕೆಮಿಕಲ್ ರಿಯಾಕ್ಷನ್ ತಿಳಿದುಕೊಳ್ಳಲು ಬೇಕಾದ ಟೆಕ್ನೋಲಜಿ ಕಂಡುಹಿಡಿಯಲು. ಇವೆಲ್ಲ ಏನೇನೂ ಯೋಚನೆಗಳು ಮನಸ್ಸಲ್ಲಿ ಮೂಡಿಬಂದ್ವು. ಕೊನೆಗೆ ಇಸ್ಟೆಲ್ಲಾ ಯೋಚನೆ ಮಾಡಿ ತಲೆ ಬಿಸಿ ಮಾಡಿಕೊಳ್ಳುವ ಬದಲು ಇನ್ನೊಂದಿಸ್ಟು ಹಾಡು ಕೇಳೋಣ ಅಂತ ಮತ್ತೆ ಮೊಬೈಲ್ ಆನ್ ಮಾಡ್ದೆ ಮತ್ತದೇ ಹಾಡುಗಳು ಇಷ್ಟವಾದವು.
No comments:
Post a Comment