ಮೈಸೂರು ಪ್ರಾಣಿಸಂಗ್ರಹಾಲಯದಲ್ಲಿರುವ ಈ ಮರದ ಕಲ್ಲು ದೂರದಿಂದ ನೋಡಲು ಮರದ ತುಂಡೇ ಅದರ ಹತ್ತಿರ ಹೋದಂತೆ ಅದು ಕಲ್ಲು ಎಂದು ಗೊತ್ತಾಗುವುದು. ಈ ಕಲ್ಲಿನಲ್ಲಿ ನಾವು ಮರದ ಕಾಂಡದ ಸೂಕ್ಷ್ಮ ರಚನೆಗಳನ್ನು ಕಾಣಬಹುದಾಗಿದೆ. ಮೈಸೂರ ಪ್ರಾಣಿ ಸಂಗ್ರಹಾಲಯಕ್ಕೆ ಹೋದಾಗ ಮರೆಯದೆ ಇದನ್ನು ನೋಡಿಬನ್ನಿ.
ಇಲ್ಲಿ ಪ್ರದರ್ಶಿಸಲಾಗಿರುವ ವೃಕ್ಷಕಾಂಡವು ಸುಮಾರು 15 ಕೋಟಿ ವರ್ಷಗಳಿಗಿಂತ ಪುರಾತನವಾದುದ್ದು. ಈ ಪಳಿಯೊಳಿಕೆಯ ವೃಕ್ಷಕಾಂಡವು ಆಂಧ್ರಪ್ರದೇಶದ ಆದಿಲಾಬಾದ್ ಜಿಲ್ಲೆಯ ಯಮನಪಲ್ಲಿ ಗ್ರಾಮದ ಬಳಿ ಜುರಾಸಿಕ್ ಯುಗದ ಕೋಟ ಶಿಲಾ ಸ್ತರಗಳಿಂದ ತಂದಿಡಲಾಗಿದೆ. ಶಿಲೆಯಾಗಿ ಪರಿವರ್ತನೆಯಾಗಿರುವ ಈ ಕಾಂಡದಲ್ಲಿ ವೃಕ್ಷದ ಸೂಕ್ಷ್ಮ ರಚನೆ ಕೂಡ ಪೂರ್ಣವಾಗಿ ಉಳಿದುಕೊಂಡಿದೆ. ಶಿಲೆಗಳ ಪರಸ್ಪರ ಪ್ರಾಚೀನತೆ ಹಾಗೂ ಭೂ ಚರಿತ್ರೆಯ ಕಾಲ ಚಕ್ರದಲ್ಲಿ ಸಸ್ಯವರ್ಗದ ವಿಕಾಸ, ವಾಯುಗುಣಗಳ ಬದಲಾವಣೆ ಮುಂತಾದುವುಗಳನ್ನು ನಿರ್ಧರಿಸಲು ಈ ವ್ರುಕ್ಷಾಕಾಂಡದ ಪಲಿಯೋಳಿಕೆಗಳ ಅಧ್ಯಯನದಿಂದ ಸಾಧ್ಯವಾಗುತ್ತದೆ.
--->ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣ
ಕರ್ನಾಟಕ (ದಕ್ಷಿಣ)ಬೆಂಗಳೂರು .
ನನ್ನ ಮೊಬೈಲ್ ಕ್ಯಾಮರಾದಲ್ಲಿ ಕ್ಲಿಕ್ಕಿಸಿಕೊಂಡ ಪಳಿಯೊಳಿಕೆ ವೃಕ್ಷಕಾಂಡದ ಚಿತ್ರಗಳು .
No comments:
Post a Comment