Sunday, 14 January 2018

ಸಂಕ್ರಾಂತಿ ಹಬ್ಬ- ಸೂರ್ಯನ ಚಲನೆಯ ಖಗೋಳ ಪಾಠ

ಸಂಕ್ರಾಂತಿ ಹಬ್ಬ ಎಂದರೆ ಅದೊಂದು ಸಡಗರದ ಆಚರಣೆ. ಕುಟುಂಬದವರು, ನೆರೆಹೊರೆಯವರು  ಮತ್ತು ನೆಂಟರುಗಳೆಲ್ಲಾ  ಸೇರಿ ಎಳ್ಳು ಬೀರಿ ಸಡಗರ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುವರು. ಇದೊಂದು ರೈತರ ಹಬ್ಬ. ಸುಗ್ಗಿ ಹಬ್ಬ. ವಿಶೇಷವಾಗಿ ಈ ಹಬ್ಬ ಕರ್ನಾಟಕ, ಕೇರಳ, ತಮಿಳು ನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ  ರಾಜ್ಯಗಳಲ್ಲಿ ತುಂಬಾ ವಿಶೇಷವಾಗಿ ಆಚರಿಸುವರು.
ಈ ದಿನ ಸೂರ್ಯನು ಧನುರ್ ರಾಶಿಯಿಂದ ಮಕರ ರಾಶಿಗೆ ಹೋಗುವ ದಿನವನ್ನು ಮಕರ ಸಂಕ್ರಮಣ ಎಂದು ಕರೆಯುವರು. ಈ ದಿನದಂದು ಅನೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಪ್ರಮುಖವಾಗಿ ಸೂರ್ಯನ ಪೂಜೆ. ಈ ದಿನದಂದು ಭಾರತದಲ್ಲಿನ ಅನೇಕ ದೇವಸ್ಥಾನಗಳಲ್ಲಿ ಸೂರ್ಯನ ಕಿರಣಗಳು ಗರ್ಭ ಗುಡಿಯನ್ನು ತಲುಪುತ್ತವೆ. ಅಂತಹ ಗುಡಿಗಳಲ್ಲಿ ಈ ದಿನ ವಿಶೇಷ ಪೂಜಾ ವಿಧಿ ವಿಧಾನಗಳು ನಡೆಯುತ್ತವೆ.  

ಶಾಲೆಯ ನೆನಪೊಂದು ;- ಎಲ್ಲರಿಗು ನೆನಪಿರಬಹುದು. ನಾವು ಶಾಲೆಯಲ್ಲಿ ಓದುತ್ತಿರುವಾಗ ಪರೀಕ್ಷೆಗಳಲ್ಲಿ ಭೂಮಿಯ ಚಿತ್ರ ಕೊಟ್ಟು ಅಲ್ಲಿ ಮಕರ ಸಂಕ್ರಾಂತಿ ವೃತ್ತ ರೇಖೆ ಮತ್ತು ಕರ್ಕಾಟಕ ಸಂಕ್ರಾಂತಿ ವೃತ್ತ ರೇಖೆ ರಚಿಸಿ. ಎಂಬ ಪ್ರಶ್ನೆ.  ಈ ದಿನ ಆ ಪ್ರಶ್ನೆ ನಂಗೆ ನೆನಪಾಯ್ತು. ಆಗ  ನಮ್ಮ ಮೇಷ್ಟುಗಳು ಹೇಳಿದ್ದ ಸ್ವಲ್ಪ ಪಾಠ ನೆನಪಾಯ್ತು. ಅದರ ಜೊತೆ ಸ್ವಲ್ಪ ಗೂಗಲ್ ನನ್ನ ತಡಕಾಡಿದಾಗ ನನಗೆ ಅರ್ಥವಾದದ್ದನ್ನು ಬರೆತಿದಿನಿ ಅದು ಈ ಕೆಳಗಿನಂತಿದೆ. 
ನಿಜ ಹೇಳಬೇಕಂದ್ರೆ ವರ್ಷದ ಕೇವಲ ಎರೆಡು ದಿನಗಳಲ್ಲಿ ಮಾತ್ರ ಸೂರ್ಯನ ಬೆಳಕು 12 ಗಂಟೆ ಹಗಲು ಮತ್ತು 12  ಗಂಟೆ ಇರುಳು ಸಮವಾಗಿ ಭೂಮಿಯ ಮೇಲೆ ಬೀಳುವುದು. ಇನ್ನು ಉಳಿದ ದಿನಗಳಲ್ಲಿ ಹಗಲು ಮತ್ತು ರಾತ್ರಿಗಳು ಸಮನಾಗಿರುವುದಿಲ್ಲ. 

ಸೂರ್ಯನು ದಕ್ಷಿಣದ ದಿಕ್ಕಿನ ಕಡೆಯ ಚಲನೆಯನ್ನು ಪೂರ್ಣಗೊಳಿಸಿ ಉತ್ತರಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಈ ದಿನವನ್ನು ಉತ್ತರಾಯಣ ಪುಣ್ಯಕಾಲ ಎಂದು ಕರೆಯುವರು. ಜ್ಯೋತಿಷ್ಯದ ಪ್ರಕಾರ ಧನುರ್ ರಾಶಿಯಿಂದ ಮಕರ ರಾಶಿಗೆ ಸೂರ್ಯನು ದಿಕ್ಕನ್ನು ಬದಲಾಯಿಸುತ್ತಾನೆ. ಆದ್ದರಿಂದ ಇದನ್ನು ಮಕರ ಸಂಕ್ರಾಂತಿ ದಿನವನ್ನಾಗಿ ಕರೆಯುವರು. ಈ ಮಕರ ಸಂಕ್ರಮಣ ದಿನದಿಂದ ಮುಂದೆ ಆರು ತಿಂಗಳುಗಳ ಕಾಲ ಸೂರ್ಯ ಉತ್ತರ ದಿಕ್ಕಿನ ಕಡೆ ಚಲಿಸುತ್ತ ಉತ್ತರದ ತುತ್ತ ತುದಿಯನ್ನು ತಲುಪಿ ಮತ್ತೆ ದಕ್ಷಿಣದ ಕಡೆಗೆ ತನ್ನ ಚಲನೆಯನ್ನು ಮುಂದುವರೆಸುತ್ತಾನೆ. ಇದನ್ನು ದಕ್ಷಿಣಾಯಣ ಪುಣ್ಯಕಾಲ. ಈ ದಿನವನ್ನು ಕರ್ಕಾಟಕ ಸಂಕ್ರಾಂತಿ ದಿನ ಎಂದು ಗುರುತಿಸಿದ್ದಾರೆ.




ಪೌರಾಣಿಕ ಹಿನ್ನೆಲೆಯಲ್ಲಿ ಸಂಕ್ರಾತಿಯ ವಿಶೇಷತೆಗಳು:-
ಮಹಾಭಾರತದಲ್ಲಿ ಭೀಷ್ಮಚಾರ್ಯರು ತಮ್ಮ ಇಚ್ಚಾಮರಣಕ್ಕಾಗಿ ಈ ಉತ್ತರಾಯಣ ಪುಣ್ಯಕಾಲವನ್ನು ಕಾಯ್ದಿದ್ದರಂತೆ.



                          ಭಾರತದ ವಿವಿಧ ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬದ ಆಚರಣೆಯ ರೀತಿ 


ಕರ್ನಾಟಕ :- ಕರ್ನಾಟಕದಲ್ಲಿ ಇದು ಸುಗ್ಗಿಯ ಹಬ್ಬವಾಗೇ ಪ್ರಸಿದ್ಧಿ. ಮಹಿಳೆಯರು , ಮಕ್ಕಳು ಮನೆ ಮುಂದೆ ರಂಗೋಲಿಗಳನ್ನು ಬಿಡಿಸಿ ಬಗೆ ಬಗೆಯ ಬಣ್ಣಗಳಿಂದ ಹೂವುಗಳಿಂದ  ಅಲಂಕರಿಸುತ್ತಾರೆ. ಬಾಗಿಲುಗಳಿಗೆ ತಳಿರು ತೋರಣಗಳನ್ನು ಕಟ್ಟುತ್ತಾರೆ. ದನಕರುಗಳಿಗೆ ಮೈ ತೊಳೆದು ಕೊಂಬುಗಳಿಗೆ ಬಣ್ಣ ಹಚ್ಚಿ , ಸಿಂಗರಿಸಿ ಮೆರವಣಿಗೆ ಮಾಡುವುದು. ಅವುಗಳಿಗೆ ಕೆಟ್ಟ ದೃಷ್ಟಿ ತಾಗಬಾರದೆಂದು ಕಿಚ್ಚು ಹಾಯಿಸುವುದು. ಉತ್ತರ ಕರ್ನಾಟಕದಲ್ಲಿ ಗಾಳಿಪಟ ಹಾರಿಸುವ ಆಟವನ್ನು ಆಡುತ್ತಾರೆ.  ಮನೆಮನೆಗೂ ಎಳ್ಳು-ಬೆಲ್ಲ, ಕಬ್ಬು, ಬಾಳೆಹಣ್ಣು ಹಂಚುವ ರೂಢಿ ಈ ಹಬ್ಬ ದಲ್ಲಿ ಇದೆ. ಹಾಗೆ ಹಂಚುತ್ತಾ ,,,,"ಎಳ್ಳುಬೆಲ್ಲ ತಿಂದು ಒಳ್ಳೆ ಮಾತಾಡು " ಎಂದು ಒಬ್ಬರಿಗೊಬ್ಬರು  ಹೇಳುವ ವಾಡಿಕೆ ಇದೆ. 

ತಮಿಳು ನಾಡು:-ತಮಿಳುನಾಡಿನಲ್ಲಿ ಈ ಹಬ್ಬವನ್ನು ಪೊಂಗಲ್ ಹಬ್ಬ ಎಂದು ನಾಲ್ಕು ದಿನಗಳ ಕಾಲ ಆಚರಿಸುತ್ತಾರೆ. 
ದಿನ 1 :- ಭೋಗಿ ಎಂದು ಹೊಸ ಬಟ್ಟೆಗಳನ್ನು ಹಾಕಿಕೊಂಡು ಗುಡಿಗಳಿಗೆ ಹೋಗುವುದು.
ದಿನ 2 :- ಹಾಲು ಬೆಲ್ಲವನ್ನು ಪಾತ್ರೆಯಲ್ಲಿ ಹಾಕಿ ಕುದಿಸಿ ಉಕ್ಕಿಸುವುದು. ಮತ್ತು ಆದರಿಂದ ಸಿಹಿ ಮಾಡುವುದು.
ದಿನ 3 :-ಮಾಟ್ಟು ಪೊಂಗಲ್ ಈ ದಿನ ಗೋ ಪೂಜೆ ಮಾಡುವರು. ಹಾಗು ಜಲ್ಲಿಕಟ್ಟು ಎಂಬ ಗೂಳಿಯನ್ನು ಪಾಲಾಗಿಸುವ ಆಟ ನಡೆಸುತ್ತಾರೆ. 

ಕೇರಳ :- ಕೇರಳದಲ್ಲಿ ಎಲ್ಲರಿಗು ತಿಳಿದಿರುವಂತೆ ಶಬರಿಮಲೆಗೆ ಹೋಗಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಮಕರ ಜ್ಯೋತಿ ನೋಡುವ ಸಂಪ್ರದಾಯವಿದೆ. ಈ ಜ್ಯೋತಿಯ ಬೆಳಕನ್ನು ನೋಡಲು  ಲಕ್ಷಗಟ್ಟಲೆ ಜನ ಶಬರಿಮಲೆಗೆ ಹೋಗುತ್ತಾರೆ. ಇದನ್ನು"{ ಮಕರ ವಿಳಕ್ಕು " ಎನ್ನುವರು.
ಇದು ದಕ್ಷಿಣ ಭಾರತದಲ್ಲಿನ ಹಬ್ಬವಾದರೂ ಉತ್ತರದ ಮಹಾರಾಷ್ಟ್ರ , ಗುಜರಾತ್, ಪಂಜಾಬ್, ಹರಿಯಾಣ  ರಾಜ್ಯಗಳಲ್ಲಿಯೂ ಈ ಹಬ್ಬವನ್ನು ಆಚರಿಸುವರು 






No comments:

Post a Comment