ಚಂದ್ರ ಗ್ರಹಣ ನಮ್ಮ ಸೌರಮಂಡಲದಲ್ಲಿ ನಡೆಯುವ ಕೌತಕಗಳಲ್ಲಿ ಒಂದು. ಈ ಘಟನೆಯ ಹಿಂದಿನ ವಿಜ್ಞಾನ ಇಂದಿನವರಿಗೆ ಸರಿಯಾಗಿಯೇ ತಿಳಿದಿದೆ. ಆಧುನಿಕರು ಈ ಘಟನೆಯನ್ನ ಅತ್ಯಂತ ಕುತೂಹಲದಿಂದ ನೋಡಿ ಆನಂದಿಸಲು ತಯಾರಾಗುತ್ತಾರೆ. ಆದರೆ ನಮ್ಮ ಪೂರ್ವಿಕರು ಈ ಘಟನೆಯನ್ನ ಇಷ್ಟೇ ಕುತೂಹಲ ಆಸಕ್ತಿ ಸಡಗರದಿಂದ ಬರಮಾಡಿಕೊಳ್ಳುತ್ತಿದ್ದರೆ? ಅಂತ ಹಿಂದಿರಿಗೆ ನೋಡಿದರೆ ಉತ್ತರ ಬೇರೆಯೇ ಇರುವುದು ತಿಳಿದು ಬರುತ್ತದೆ.
ಈ ಗ್ರಹಣಗಳು ಮನುಷ್ಯನ ಗಮನಕ್ಕೆ ಬಂದಿದ್ದು ಇತ್ತೀಚೆನದ್ದೇನಲ್ಲ. ಮನುಷ್ಯನಿಗೆ ಈ ಗ್ರಹಣಗಳ ತಿಳುವಳಿಕೆ ಅನಾದಿ ಕಾಲದಿಂದಲೂ ಇದೆ. ಜಗತ್ತಿನ ವಿವಿಧ ಸಂಸ್ಕೃತಿಗಳು ಈ ಗ್ರಹಣಗಳನ್ನ ಯಾವ ಯಾವ ರೀತಿ ನೋಡುತ್ತಾ, ಅರ್ಥ ಮಾಡಿಕೊಳ್ಳುತ್ತ ಬಂದಿವೆ, ಗ್ರಹಣಗಳ ಮೇಲೆ ಯಾವ ಯಾವ ರೀತಿಯ ಕಥೆಗಳನ್ನ ಕಟ್ಟಿದ್ದಾರೆ ಅನ್ನುವುದನ್ನ ತಿಳಿಯಲು ಈ ಲೇಖನ ಬರೀತಿದಿನಿ. ಗೂಗಲ್ಲಿನ ಗಲ್ಲಿಗಳಲ್ಲಿ ನಾ ಕಂಡ ಕೆಲವು ಸಂಸ್ಕೃತಿಗಳ ಚಂದ್ರ ಗ್ರಹಣದ ಅರಿವು ಈ ಕೆಳಗಿನಂತಿವೆ.
ದಕ್ಷಿಣ ಅಮೆರಿಕಾದ ತೋಬ ಜನಾಂಗದ ನಂಬಿಕೆ ಪ್ರಕಾರ ಸತ್ತಿರುವ ಜನರ ಆತ್ಮಗಳು ಚಿರತೆ ರೂಪ ತಾಳಿ ಚಂದ್ರನ ಮೇಲೆ ದಾಳಿ ಮಾಡುತ್ತವೆ. ಹಾಗಾಗಿ ಚಂದ್ರ ಕೆಂಪಗೆ (ರಕ್ತದ ಬಣ್ಣ) ಕಾಣುತ್ತಾನೆ ಎಂದು ನಂಬಿದ್ದರು.ನಂತರ ಈ ಚಿರತೆಗಳು ಭೂಮಿಯ ಮೇಲೂ ದಾಳಿ ಮಾಡಿ ಜನರನ್ನು ತಿನ್ನುತವೆ ಎಂದು ನಂಬಿ ಅವನ್ನು ಹೆದರಿಸಿ ಓಡಿಸಲು ನಾಯಿಗನ್ನು ಬೋಗುಳಿಸಿ ಮತ್ತು ಇತರ ವ್ಸಸ್ತುಗಳಿಂದ ಸದ್ದು ಮಾಡುವ ಆಚರಣೆ ಜಾರಿಗೆ ತಂದಿದ್ದರು.
ಮೆಸಪಟೋಮಿಯನ್ ಸಂಸ್ಕೃತಿಯಲ್ಲಿ ಗ್ರಹಣ
ಉತ್ತರ ಅಮೆರಿಕಾದ ಹೂಪ ಸಂಸ್ಕೃತಿಯಲ್ಲಿ ಗ್ರಹಣ
ದಕ್ಷಿಣ ಕೆಲಿಪೋರ್ನಿಯದ ಲುಸಿಯನೋ ಬುಡಕಟ್ಟಿನ ಸಂಸ್ಕೃತಿಯಲ್ಲಿ
ಆಫ್ರಿಕದ ಬತಮ್ಮಲಿಬ ಸಂಸ್ಕೃತಿಯಲ್ಲಿ ಗ್ರಹಣ
ಭಾರತದ ಪೌರಾಣಿಕ ಸಂಸ್ಕೃತಿ
ಮೆಸಪಟೋಮಿಯನ್ - ಅದರಲ್ಲೂ ಬೆಬಿಲೋನಿಯನ್ನರು- ಚಂದ್ರನನ್ನು ಏಳು ಜನ 7 ಜನ ರಾಕ್ಷಸರು ಆಕ್ರಮಣ ಮಾಡುತ್ತಾರೆ ಎಂದು ನಂಬಿದ್ದರು. ಇದು ತಮ್ಮ ರಾಜನ ಸಾವಿನ ಶಕುನವನ್ನ ನುಡಿಯುತ್ತೆ ಎಂದು ನಂಬಿ, ಗ್ರಹಣದ ಸಮಯದಲ್ಲಿ ಒಬ್ಬ ನಕಲಿ ರಾಜನನ್ನು ಸೃಷ್ಟಿ ಮಾಡಿ ಆತನಿಗೆ ಸಕಲ ರಾಜ ಮರ್ಯಾದೆ ನೀಡುವ ಆಚರಣೆ ಮಾಡುತ್ತಿದ್ದರು. ಗ್ರಹಣದಂದು ನಿಜವಾದ ರಾಜ ಜನ ಸಾಮನ್ಯನಂತೆ ಬದುಕಿ ಗ್ರಹಣ ಮುಗಿದ ಮೇಲೆ ಮತ್ತೆ ರಾಜ್ಯಾಡಳಿತ ವಹಿಸಿಕೊಳ್ಳುತ್ತಿದ್ದ.
ಚಂದ್ರನಿಗೆ 20 ಜನ ಹೆಂಡತಿಯರು ಇದ್ದು ಅವನ ರಾಜ್ಯದಲ್ಲಿ ಹಲವಾರು ಸಿಂಹಗಳು ಮತ್ತು ಹಾವುಗಳು ಮುಂತಾದ ಸಾಕು ಪ್ರಾಣಿಗಳನ್ನ ಸಾಕಿರುತ್ತಾನೆ ಎಂದು ನಂಬಿದ್ದರು. ಅವುಗಳಿಗೆ ಆಹಾರ ಸಿಗದ ಸಮಯದಲ್ಲಿ ಚಂದ್ರನನ್ನು ತಿನ್ನಲು ಮುಂದಾಗುವ ಸಮಯವೇ ಚಂದ್ರ ಗ್ರಹಣದ ಸಮಯ ಎಂದು ನಂಬಿದ್ದರು. ನಂತರ ಗಾಯಗೊಂಡ ಚಂದ್ರನನ್ನು ಆತನ ಹೆಂಡತಿಯರು ಪ್ರಾಣಿಗಳಿಂದ ಚಂದ್ರನನ್ನು ರಕ್ಷಿಸಿ ಸೋರಿದ ರಕ್ತವನ್ನು ಮತ್ತು ಗಾಯವನ್ನು ಗುಣಪಡಿಸುತ್ತಾರೆ ಮತ್ತು ಈ ಸಮಯ ಗ್ರಹಣ ಬಿಡುವ ಎಂದು ನಂಬಿದ್ದರು.
ಇನ್ನೊಂದು ಕಥೆಯಲ್ಲಿ ಚಂದ್ರನಿಗೆ ಗ್ರಹಣದಂದು ಖಾಯಿಲೆ ಬಿದ್ದಿರುತ್ತಾನೆ. ಅವನು ಗುಣವಾಗಲು ದೇವರ ಪ್ರಾರ್ಥನೆ ಮತ್ತು ಮಂತ್ರಗಳನ್ನ ಹೇಳಿ ಉಪಚರಿಸುವುದು ಜನರ ಕರ್ತವ್ಯ ಎಂದು ನಂಬಿದ್ದರು.
ಸೂರ್ಯ ಮತ್ತು ಚಂದ್ರ ಪರಸ್ಪರ ಹೊಡೆದಾಡುವ ಸಮಯವೇ ಈ ಗ್ರಹಣದ ದಿನ ಎಂದು ಇಂದಿಗೂ ನಂಬುತ್ತಾರೆ ಈ ಕತೆಯ ಹಿನ್ನೆಲೆಯಲ್ಲಿ ಈ ಗ್ರಹಣದ ದಿನವನ್ನ ತಮ್ಮ ತಮ್ಮ ನಡುವಿನ ಹಳಯ ವೈಷಮ್ಯ, ಜಗಳವನ್ನು ನಿಲ್ಲಿಸಿ ಒಂದಾಗುವ ದಿನ ಎಂದು ಆಚರಿಸುತ್ತಾರೆ.
ಭಾರತೀಯ ಪುರಾಣಗಳು ರಾಹು ಅನ್ನುವ ಒಂದು ವಿಷ ಸರ್ಪ ಅತ್ವ ದುಷ್ಟ ರಾಕ್ಷಸ ಚಂದ್ರನನ್ನು ನುಂಗುತ್ತಾನೆ ಎಂದು ಹೇಳುತ್ತವೆ. ಹಾಗಾಗಿ ಜನ ಇದು ಕೆಟ್ಟ ಶಕುನವೆಂದು ನಂಬಿ ವಿವಿಧ ಆಚರಣೆ ಮಾಡುತ್ತಾರೆ.