ಡಾಕ್ಟರ್ ಫಿಶ್ ಏನಪ್ಪಾ ಇದು ಮೀನುಗಳು ಯಾವಾಗ ಡಾಕ್ಟರ್ ಸರ್ಟಿಫಿಕೇಟ್ ತೊಗೊಂದ್ವು ಅಂತ ಅನ್ನಿಸ್ತಿದ್ಯಾ? ಮೊದಲು ನಂಗು ಕೂಡ ಹಾಗೆ ಅನ್ನಿಸ್ತು. ಹೋದ ಶನಿವಾರ ಮೈಸೂರ್ಗೆ ಹೋದಾಗ, ಅಲ್ಲಿ ಕ್ಲೇ ಮ್ಯೂಸಿಯಂ ಹತ್ರ ಒಂದು ಫಿಶ್ ಟ್ಯಾಂಕ್ ನಲ್ಲಿ ಚಿಕ್ಕ ಮೀನುಗಳು ಇದ್ವು ಕೆಲವರು ಅದರೊಳಗೆ ಕಾಲು ಇಳಿಸಿಕೊಂಡು ಕೂತಿದ್ರು. ಡಾಕ್ಟರ್ ಫಿಶ್ ಸ್ಪಾ. ಪರ್ ೧೦೦ ಫಾರ್ ೧೦ ಮಿನಿಟ್ಸ್ ಅಂತ ಬರೆದಿತ್ತು. ನೋಡೋಣ ಒಂದು ಟ್ರೈ ನಾನು ಮಾಡೋಣ ಅಂತ ೧೦೦ ರೂಪಾಯಿ ಕೊಟ್ಟು ನಾನು ಆ ಡಾಕ್ಟರ್ ಫಿಶ್ ಟ್ಯಾಂಕ್ ಒಳಗೆ ಕಾಲಿಟ್ಟು ಕುಳಿತೆ. ನಾನು ಕಾಲ್ನ ನೀರಿಗೆ ಇಳಿಸಿದ್ದೀ ತಡ ಆ ಟ್ಯಾಂಕ್ ನಲ್ಲಿದ್ದ ಫಿಶ್ ಗಳೆಲ್ಲ ನನ್ನ ಕಾಲಿಗೆ ಮುತ್ತಾಕೊಂಡುಬಿಟ್ಟವು. ತಕ್ಷಣ ಭಯ ಆಯ್ತು, ನಂತ್ರ ಅವು ನನ್ನ ಪಾದಗಳಿಗೆ ಕಚಗುಳಿ ಕೊಡ್ತಾಯಿದ್ವು. ನಂತ್ರ ಭಯ ಹೋಗಿ ಮೀನುಗಳ ಕಚಗುಳಿ ತಡ್ಕೊಳ್ಳೊಗಾಗ್ದೇ ನಗು ಬರ್ತಿತ್ತು.
ಹಾಗೆ ಮೀನುಗಳ ಮಾಲೀಕಳನ್ನ ಕೇಳಿದೆ ಏನಿದರ ವಿಶೇಷ? ಎಲ್ಲಿಂದ ನೀವು ಇದನ್ನ ತೊಗೊಂಡ್ ಬರ್ತೀರಾ ಅಂತ. ಅದಕ್ಕೆ ಆಕೆ ಕೊಟ್ಟ ಉತ್ತರ ಇವುಗಳ ಹೆಸರು ಡಾಕ್ಟರ್ ಫಿಶ್ ಅಥವಾ ಸರ್ಜನ್ ಫಿಶ್ ಅಂತ. ಈ ಮೀನುಗಳು ನಮ್ಮ ದೇಹದ ಡೆಡ್ ಸ್ಕಿನ್, ಇನ್ಫೆಕ್ಷನ್, ಕೊಳೆಯ ಭಾಗವನ್ನ ತಿಂದು ಸ್ಕಿನ್ ನನ್ನ ಕ್ಲೀನ್ ಮಾಡುತ್ತವೆ. ಹಾಗೆ ನರಗಳ ರಕ್ತ ಪರಿಚಲನೆಗೆ ಹೆಲ್ಪ್ ಮಾಡುತ್ತವೆ. ವಿದೇಶಗಳಲ್ಲಿ ಸ್ಕಿನ್ ಪ್ರಾಬ್ಲೆಮ್ಸ್ ಗೆ ಈ ಫಿಶ್ ನ ಉಪಯೋಗಿಸುತ್ತಾರೆ. ನಮ್ಮ ಆಯುರ್ವೇದದಲ್ಲಿ ಗಿಜಣೆ ಗಳನ್ನು ಬಳಸುವುದಿಲ್ವ ಹಾಗೆ ಇದು ಒಂದು ರೀತಿಯ ಟ್ರೀಟ್ಮೆಂಟ್ ಅಂತ ಹೇಳಿದ್ಲು. ಇತ್ತೀಚಿನ ದಿನಗಳಲ್ಲಿ ಸ್ಪಾ ಗಳಲ್ಲಿ ಈ ಫಿಶ್ ಗಳ ಹೆಚ್ಚು ಬೇಡಿಕೆ ಇದೆ ಅಂತ ಹೇಳಿದ್ಲು.
ವಾಪಸ್ ಬೆಮನೆಗೆ ಬಂದ್ರೂ ಆ ಡಾಕ್ಟರ್ ಫಿಶ್ ವಿಷಯ ನನ್ನ ತಲೇಲಿ ಗಿರಾಕಿ ಹೊಡಿತಾಯಿತ್ತು. ನೋಡೋಣ ಅಂತ ಕುತೂಹಲಕ್ಕೆ ಗೂಗಲ್ ಸರ್ಚ್ ಮಾಡಿದಾಗ ನಂಗೆ ಸಿಕ್ಕ ಡಾಕ್ಟರ್ ಫಿಶ್ ನ ಕೆಲವು ಮಾಹಿತಿಗಳನ್ನ ಇಲ್ಲಿ ಬರೀತಾಯಿದೀನಿ.
ಈ ಡಾಕ್ಟರ್ ಫಿಶ್ ನ ನಿಜವಾದ ಹೆಸರುಗಳು ಗರ್ರ ರುಫಾ , ನಿಬ್ಬಲ್ ಫಿಶ್ ,ಕಂಗಾಲ್ ಫಿಶ್ , ಬೋನೇಫಿಶ್ ಈ ಮೀನು ಸಿಪ್ರಿನಿಡ್ ಅನ್ನೋ ತಳಿಯ ಮೀನುಗಳ ಗುಂಪಿನಲ್ಲಿ ಬರುತ್ತವೆ. ಇದು ಸಾಮಾನ್ಯವಾಗಿ ಸಿಹಿನೀರಿನ ಕೊಳಗಳು , ಸರೋವರ, ಹೊಂಡ, ನದಿಗಳಲ್ಲಿ ಕಂಡುಬರುತ್ತವೆ. ನೀರಿನಲ್ಲಿನ ಪಾಚಿ, ಮತ್ತು ಸಣ್ಣ ಪುಟ್ಟ ಗಿಡಗಳು, ನೀರಿನಲ್ಲಿರುವ ಪ್ರಾಣಿಗಳ ಮೇಲಿನ ಡೆಡ್ ಸ್ಕಿನ್ ಇವು ಇವುಗಳ ಊಟ. ಈ ಡಾಕ್ಟರ್ ಮೀನುಗಳು ಚರ್ಮದಲ್ಲಿನ ಡೆಡ್ ಸ್ಕಿನ್, ಕ್ರಿಮಿ, ಕೊಳೆ ತಿನ್ನುವುದರಿಂದ ಈ ಫಿಷ ನನ್ನ ಆಹಾರವಾಗಿ ತಿನ್ನಲು ಯೋಗ್ಯವಲ್ಲ ಎನ್ನುವರು.
ಇವು ಸಾಮಾನ್ಯವಾಗಿ ಕಂಡುಬರುವುದು, ಟರ್ಕಿ, ಸಿರಿಯಾ,ಓಮನ್, ಇರಾಕ್, ಇರಾನ್,ದೇಶಗಳಲ್ಲಿ ಹೆಚ್ಚು ಪ್ರಮಾಣಗಳಲ್ಲಿ ಕಂಡುಬರುತ್ತವೆ. ಟರ್ಕಿ ದೇಶದಲ್ಲಿ ಸರ್ಕಾರವೇ ಕಾನೂನು ಬಧ್ದಹವಾಗಿ ರಫ್ತು ಮಾಡುವ ಉದ್ದೇಶದಿಂದ ರಕ್ಷಣೆ ಮಾಡುತ್ತದೆ.
೨೦ ನೇ ಶತಮಾನದಿಂದ ಈ ಮೀನುಗಳನ್ನು ಕೆಲವೇ ದೇಶಗಳಲ್ಲಿ ಸೋರಿಯಾಸಿಸ್ ನಂತಹ ಚರ್ಮ ರೋಗಕ್ಕೆ ಟ್ರೀಟ್ಮೆಂಟ್ ರೀತಿ ಬಳಸುತ್ತಿದ್ದರು. ಇತ್ತೀಚಿಗೆ ಸ್ಪಾ ಗಳಲ್ಲಿ ಪೆಡಿಕ್ಯೂರ್ ಮತ್ತು ಬಾಡಿ ಮಸಾಜ್ ಮಾಡಲು ಈ ಡಾಕ್ಟರ್ ಫಿಶ್ ಗಳ ಮೊರೆ ಹೋಗುತ್ತಿದ್ದಾರೆ. ಇತ್ತೀಚಿಗೆ ಚೀನಾ, ಜಪಾನ್, ಇಂಡಿಯಾ ಮುಂತಾದ ದೇಶಗಳಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿದೆ.
No comments:
Post a Comment