ಹೀಗೆ ಫೇಸ್ ಬುಕ್ ಸ್ಕ್ರಾಲ್ ಮಾಡ್ತಾ ಇರೋವಾಗ ಒಂದು ನ್ಯೂಸ್ ಓದಿದೆ. ಬೆಂಗಳೂರು ಮೂಲದ 24 ವರ್ಷದ ಅರ್ಜುನ್ ಭಾರದ್ವಾಜ್ ಎಂಬ ಇಂಜಿನಿಯರ್ ಸ್ಟೂಡೆಂಟ್ ಮುಂಬೈಯ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್ ರೂಂನಿಂದ ಮೇಲಿನಿಂದ ಕೆಳಕ್ಕೆ ಹಾರಿ ಅತ್ಮಹತ್ಯೆ ಮಾಡಿಕೊಂಡಿರೋದು. ಆತನ ಆತ್ಮಹತ್ಯೆಗೆ ಕಾರಣ ಏನು ಎಂದು ಕೂಡ ಫೇಸ್ಬುಕ್ ನಲ್ಲಿ ಲೈವ್ ಚಾಟ್ ಮಾಡಿ, ಎಲ್ಲರಿಗು ಬೈ ಹೇಳಿ, ನಂತರ ಕೆಳಗೆ ಹಾರಿ ಆತ್ಮ ಹತ್ಯೆ ಮಾಡಿಕೊಂಡಿರುವುದು. ಅವನ ಆತ್ಮಹತ್ಯೆಗೆ ಕಾರಣ, ಅವನಿಗಿದ್ದ ಡಿಪ್ರೆಶನ್. ಈ ನ್ಯೂಸ್ ಓದಿದ ಮೇಲೆ ಈ ಆತ್ಮಹತ್ಯೆ ಯಾಕೆ ಮಾಡ್ಕೊತಾರೆ? ಡಿಪ್ರೆಶನ್ ಯಾಕೆ ಬರುತ್ತೆ ಅನ್ನೋ ಪ್ರಶ್ನೆಗಳು ಇವತ್ತು ನನ್ನ ತಲೆಲ್ಲಿ ಗಿರ್ಕಿ ಹೊಡಿತಾ ಇವೆ. ನನ್ನ ತಲೇಲಿ ಏನೆಲ್ಲಾ ವಿಷಯಗಳು ಬಂದವೋ ಅವನ್ನ ಇಲ್ಲಿ ಬರಿತಾಯಿದಿನಿ..
ಇತ್ತೀಚಿನ ದಿನಗಳಲ್ಲಿ ತುಂಬಾನೇ ಯಂಗ್ಸ್ಟರ್ಸ್ ಅತ್ಮಹತ್ಯೆ ಮಾಡಿಕೊಳ್ಳೋದು ಕಾಮನ್ ಆಗಿಹೋಗಿದೆ. sslc ಮತ್ತು puc ರಿಸಲ್ಟ ಅನೌನ್ಸ್ಆದ ದಿನಗಳಲ್ಲಿ ಆತ್ಮಹತ್ಯೆಯ ಪ್ರಕರಣಗಳು ಇನ್ನೂ ಹೆಚ್ಚು. ಬರೀ ಓದಿನ ವಿಷಯದಲ್ಲಿ ಮಾತ್ರವಲ್ಲ ನೌಕರಿ , ಕೌಟುಂಬಿಕ , ಸಾಮಾಜಿಕ, ಆರೋಗ್ಯಕ್ಕೆ ಸಂಬಂಧಿಸಿದಂತೆ ಎಸ್ಟೋ ವಿಷಯಗಳಿಗೆ ನಮ್ಮಎಲ್ಲರ ಮನಸ್ಸುಗಳು ಡಿಪ್ರೆಶನ್ ಗೆ ಹೋಗುತ್ತವೆ.
ಡಿಪ್ರೆಶನ್ ನಿಂದ ಆತ್ಮಹತ್ಯೆ ಮಾಡಿಕೊಳ್ಳುವರ ಪಟ್ಟಿಯಲ್ಲಿ ಪ್ರಪಂಚದಲ್ಲಿyee ನಮ್ಮ ಭಾರತದ ಹೆಸರು ಮುಂಚೂಣಿಯಲ್ಲಿ ಇರುವುದು ವಿಷಾದನೀಯ. ಈ ಡಿಪ್ರೆಶನ್ ಗೆ ಕಾರಣ ಏನು ಅಂತ ಯೋಚಿಸಿದಾಗ ಹಲವಾರು ವಿಷಯಗಳು ಕಣ್ಮುಂದೆ ಬಂದು ನಿಲ್ಲುತ್ತವೆ. ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಪ್ರತಿ ವಿಷಯದಲ್ಲೂ ಪ್ರಬಲವಾಗಿ ಪೈಪೋಟಿ ಮಾಡಲೇ ಬೇಕು. ಮಕ್ಕಳಿಗೆ ಶಿಕ್ಷಣದಲ್ಲಿ ತಾವು ಎಲ್ಲರಿಗಿಂತ ಹೆಚ್ಚು ಮಾರ್ಕ್ಸ್ ತೆಗಿಬೇಕು ಅನ್ನೋ ಒತ್ತಡ. ತಂದೆ-ತಾಯಿಯರಿಗೆ ತಮ್ಮ ಮಗನ ಶಾಲಾ ಕಾಲೇಜುಗಳ ಬಿಲ್ ಕಟ್ಟುವ ಒತ್ತಡ. ನೌಕರಿ ಸಿಕ್ಕ ಮೇಲೆ ಒಳ್ಳೆ ಸಂಬಳ ಬರುತ್ತಿಲ್ಲ ಎಂಬ ಒತ್ತಡ, ಆಫೀಸ್ ನಲ್ಲಿ ತನಗೆ ಒಳ್ಳೆಯ ಸ್ಥಾನ ಸಿಕ್ಕುತ್ತಿಲ್ಲ ಎಂಬ ಒತ್ತಡ, ಇವುಗಳ ಜೊತೆ ಕೌಟುಂಬಿಕ ಸಮಸ್ಯೆಗಳ ಸಾಗರದಲ್ಲಿ ಈಜುತ್ತಿರುವ ಎಲ್ಲರೂ ಒಂದಲ್ಲ ಒಂದು ರೀತಿಯ ಅವರವರದೇ ಆದ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿರುತ್ತಾರೆ. ಈ ಸಮಸ್ಯೆಗಳನ್ನ ಹೇಗೆ ನಿಭಾಯಿಸುತ್ತೀವಿ ಅದೇ ಜೀವನದ ಲೆಖ್ಖಾಚಾರ.
ಕೆಲವರು ಸಮಸ್ಯೆಗಳನ್ನ ಸ್ಫೂರ್ತಿ ಯಾಗಿ ತೆಗೆದುಕೊಂಡು ಬಗೆಹರಿಸಿಕೊಳ್ಳುತ್ತಾರೆ. ಸಮಸ್ಯೆ ಮನುಷ್ಯನಿಗಲ್ದೆ ಮರಕ್ಕ ಬರುತ್ತೆ ಅಂತ ಯಾವುದೇ ಸಮಸ್ಯೇನು ಕೂಲ್ ಆಗಿ ತೊಗೊಳೋ ಅಂಥವರು ಕೆಲವರಾದರೆ. ಇನ್ನು ಕೆಲವರು ಇಡೀ ಮೌಂಟ್ ಎವರೆಸ್ಟ್ ತಮ್ಮ ತಲೆ ಮೇಲೆ ಹೊತ್ತು ನಿಂತಿದಿವೇನೋ ಅನ್ನೋ ಮನಸ್ಥಿತಿಯಲ್ಲಿರುತ್ತಾರೆ. ಹೀಗೆ ಸಮಸ್ಯೆಯ ಸುಳಿಯಲ್ಲಿ ಮುಳುಗಿ ಡಿಪ್ರೆಶನ್ ಹಂತ ತಲುಪುತ್ತಾರೆ. ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳುತ್ತಾರೆ ಮತ್ತು ಈ ಆತ್ಮಹತ್ಯೆಗೆ ಅನ್ನೋ ಅಪರಾಧವನ್ನ ತಮಗೆ ತಾವೇ ಮಾಡಿಕೊಳ್ಳುತ್ತಾರೆ.
ಕೆಲವರು ಸಮಸ್ಯೆಗಳನ್ನ ಸ್ಫೂರ್ತಿ ಯಾಗಿ ತೆಗೆದುಕೊಂಡು ಬಗೆಹರಿಸಿಕೊಳ್ಳುತ್ತಾರೆ. ಸಮಸ್ಯೆ ಮನುಷ್ಯನಿಗಲ್ದೆ ಮರಕ್ಕ ಬರುತ್ತೆ ಅಂತ ಯಾವುದೇ ಸಮಸ್ಯೇನು ಕೂಲ್ ಆಗಿ ತೊಗೊಳೋ ಅಂಥವರು ಕೆಲವರಾದರೆ. ಇನ್ನು ಕೆಲವರು ಇಡೀ ಮೌಂಟ್ ಎವರೆಸ್ಟ್ ತಮ್ಮ ತಲೆ ಮೇಲೆ ಹೊತ್ತು ನಿಂತಿದಿವೇನೋ ಅನ್ನೋ ಮನಸ್ಥಿತಿಯಲ್ಲಿರುತ್ತಾರೆ. ಹೀಗೆ ಸಮಸ್ಯೆಯ ಸುಳಿಯಲ್ಲಿ ಮುಳುಗಿ ಡಿಪ್ರೆಶನ್ ಹಂತ ತಲುಪುತ್ತಾರೆ. ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳುತ್ತಾರೆ ಮತ್ತು ಈ ಆತ್ಮಹತ್ಯೆಗೆ ಅನ್ನೋ ಅಪರಾಧವನ್ನ ತಮಗೆ ತಾವೇ ಮಾಡಿಕೊಳ್ಳುತ್ತಾರೆ.
ಡಿಪ್ರೆಶನ್ ಆದಾಗ ನಾವು ಮಾಡಬೇಕಾದ್ದು ಇಸ್ಟೇ.....
ನಮ್ಮ ಮನಸ್ಸು ಡಿಪ್ರೆಶನ್ ನಲ್ಲಿ ಮುಳುಗಿದೆ ಎಂದೆನಿಸಿದ ಸಮಯದಲ್ಲಿ ಮನೆಯ ಹಿರಿಯರೊಡನೆ ಕೂತು ತಮ್ಮ ಡಿಪ್ರೆಶನ್ ಬಗ್ಗೆ ಚರ್ಚಿಸಬೇಕು. ಇಲ್ಲವೇ ಮಾನಸಿಕ ತಜ್ಞರ , ಡಾಕ್ಟರ ಹತ್ರ ಹೋಗಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಸರಿಯಾದ ಮೆಡಿಸಿನ್ ತೊಗೊಂಡ್ರೆ ಎಲ್ಲ ಸರಿಹೋಗುತ್ತೆ. ನಮ್ಮ ಜನರಲ್ಲಿ ಇನ್ನೊಂದು ಅಳುಕು ಇದೆ. ಮಾನಸಿಕ ತಜ್ಞರನ್ನ ಭೇಟಿ ಮಾಡಿ ಅಲ್ಲಿ ಟ್ರೀಟ್ಮೆಂಟ್ ತೊಗೊಂಡ್ರೆ ನನ್ನ ಸುತ್ತಮುತ್ತಲಿನ ಸಮಾಜ ಎಲ್ಲಿ ತನ್ನನ್ನ ಹುಚ್ಚ ಅಂತ ಅನ್ನುತ್ತೋ ? ಅಂತ. ವಿದೇಶಗಳಲ್ಲಿ ಮಾನಸಿಕ ಡಾಕ್ಟರ ಗಳಿಗೆ ತುಂಬಾ ಬೇಡಿಕೆ. ಅಲ್ಲಿ ಸಣ್ಣ ಪುಟ್ಟ ತಲೆನೋವಿಗೆಲ್ಲ ಮತ್ತೆ ಚಿಕ್ಕ-ಪುಟ್ಟ ಬೇಜಾರಾದರು ಮಾನಸಿಕ ತಜ್ಞರನ್ನ ಭೇಟಿ ಮಾಡೋದು ಸಹಜವಾಗಿಹೋಗಿದೆ. ಇದು ನಮ್ಮಲ್ಲೂ ಬರಬೇಕು. ಆಗ ಈ ಆತ್ಮಹತ್ಯೆಯಂಥ ಸಮಸ್ಯೆ ಸಮಾಜದಲ್ಲಿ ಕಡಿಮೆಯಾಗುತ್ತದೆ.
ಸಮಸ್ಯೆ ಯಾರಿಗಿರಲ್ಲ ಹೇಳಿ ಪ್ರತಿಯೊಬ್ಬರಿಗೂ ಅವರವರದೇ ಆದ ಸಮಸ್ಯೆಗಳು ಇರುತ್ವೆ. ಹುಟ್ಟು-ಸಾವು, ಹಗಲು-ರಾತ್ರಿ, ಕಪ್ಪು-ಬಿಳುಪು, ಸುಖ-ದುಃಖ, ನೋವು-ನಲಿವು ಎಲ್ಲವನ್ನ ಭೂಮಿ ಮೇಲೆ ಹುಟ್ಟಿದ ಮೇಲೆ ಎಲ್ಲ ಅನುಭವಿಸಲೇ ಬೇಕು. ಆನೆಗೆ ಆನೆ ಭಾರ ಆದ್ರೆ , ಇರುವೆಗೆ ಇರುವೆ ಭಾರ. ನಮ್ಮ ಕಷ್ಟನೆ ದೊಡ್ಡದು ಅಂತ ತಲೆ ಮೇಲೆ ಕೈ ಹೊತ್ತು ಮೂಲೆಗೆ ಕೂರಬಾರದು. ಹಾಗೇ ಯಾವ ಅನಾಹುತಾನೂ ಮಾಡ್ಕೊಬಾರದು. ನಿರಂತರ ಹೋರಾಟವೇ ಜೀವನ.
ಈಗ ನನಗೆ ಪುರಂದರ ವಿಠಲರ ಒಂದು ಕೀರ್ತನೆ ನೆನಪಾಗುತ್ತಿದೆ ಅದೇನೆಂದರೆ ,,
ಈಸಬೇಕು ಇದ್ದು ಜಯಿಸಬೇಕು
ಹೇಸಿಗೆ ಸಂಸಾರದಲ್ಲಿ ಅಸೆ ಲೇಶ ಇಡದ್ಹಾಂಗೆ
ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು
ಸ್ವಾಮಿ ರಾಮನೆನುತ ಪಾಡಿ ಕಾಮಿತ ಕೈಗೊಂಬರೆಲ್ಲ
ಗೇರು ಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿ
ಮೀರಿ ಆಸೆ ಮಾಡದಂತೆ ಧೀರ ಕೃಷ್ಣ ನ ಭಕುತರೆಲ್ಲ
ಮಾಂಸದಾಸೆಗೆ ಮತ್ಸ್ಯ ಸಿಲುಕಿ ಹಿಂಸೆ ಪಟ್ಟ ಪರಿಯಂತೆ
ಮೋಸ ಹೋಗದ್ಹಾಂಗೆ ಜಗದೀಶ ಪುರಂದರ ವಿಠಲನ ನೆನೆದು.
ಈಗ ನನಗೆ ಪುರಂದರ ವಿಠಲರ ಒಂದು ಕೀರ್ತನೆ ನೆನಪಾಗುತ್ತಿದೆ ಅದೇನೆಂದರೆ ,,
ಈಸಬೇಕು ಇದ್ದು ಜಯಿಸಬೇಕು
ಹೇಸಿಗೆ ಸಂಸಾರದಲ್ಲಿ ಅಸೆ ಲೇಶ ಇಡದ್ಹಾಂಗೆ
ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು
ಸ್ವಾಮಿ ರಾಮನೆನುತ ಪಾಡಿ ಕಾಮಿತ ಕೈಗೊಂಬರೆಲ್ಲ
ಗೇರು ಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿ
ಮೀರಿ ಆಸೆ ಮಾಡದಂತೆ ಧೀರ ಕೃಷ್ಣ ನ ಭಕುತರೆಲ್ಲ
ಮಾಂಸದಾಸೆಗೆ ಮತ್ಸ್ಯ ಸಿಲುಕಿ ಹಿಂಸೆ ಪಟ್ಟ ಪರಿಯಂತೆ
ಮೋಸ ಹೋಗದ್ಹಾಂಗೆ ಜಗದೀಶ ಪುರಂದರ ವಿಠಲನ ನೆನೆದು.
Nice blog..
ReplyDeletethank you pooja :)
ReplyDelete