Tuesday, 18 April 2017

ಇತ್ತೀಚಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿದ್ದೀರಾ? ಕಾರಣ ಏನಿರಬಹುದು?

ಇತ್ತೀಚಿಗೆ ದೈಹಿಕವಾಗಿ  ಮತ್ತು ಮಾನಸಿಕವಾಗಿ ಕುಗ್ಗಿದ್ದೀರಾ?. ಡಿಪ್ರೆಶನ್, ಸಣ್ಣ ಸಣ್ಣದಕ್ಕೆಲ್ಲ ಸಿಟ್ಟು-ಸೆಡವು-ಅಸಮಾಧಾನ-stress ಮುಂತಾದ ಮಾನಸಿಕ ತೊಂದರೆಗಳು ನಿಮ್ಮನ್ನ ಕಾಡ್ತಾಯಿದಾವಾ?  ನೆನಪಿನಶಕ್ತಿ ಮೊದಲಿಗಿಂತ ಕಮ್ಮಿ ಆಗಿದೆ ಅನ್ಸುತ್ತಾ?, ನಿಮ್ಮ ನಡವಳಿಕೆಯಲ್ಲಿಯೂ  ಏನೋ ಬದಲಾವಣೆಗಳಾಗಿವೆ ಅಂತ ಅನ್ನಿಸ್ತಿದ್ಯಾ? ಆಗಾಗ ಕಣ್ಣು ಮಂಜುಗಟ್ಟಿದಂತೆ ಆಗುತ್ತಿದ್ದಿಯಾ, ದೇಹದಲ್ಲಿ ನರಗಳು ಹಿಡಿದುಕೊಂಡಂತೆ,  ಅಲ್ಲಲ್ಲಿ ಮುಳ್ಮುಳ್ನಂತೆ /  ಚುಚ್ಚಿದಂತೆ ಅನುಭವ ಆಗುತ್ತಿದಿಯ?, ಮಾಂಸ ಖಂಡಗಳಲ್ಲಿ ಶಕ್ತಿ ಇಲ್ಲದಂತಾಗಿ, ನಡೆಯಲು, ಮೆಟ್ಟಿಲುಗಳನ್ನ ಹತ್ತಿಳಿಯಲು ಸುಸ್ತಾಗುತಿದಿಯಾ?, ಮಲಬಧ್ಧತೆ, ಭೇದಿ , ಗ್ಯಾಸ್ಟ್ರಿಕ್ ಕಾಡುತ್ತಿದ್ದರೆ, ನಾಲಿಗೆ ಮೆತ್ತಗಿದೆ ಅಂತಾ ಅನ್ನಿಸುತ್ತಾ ಇದ್ರೆ, ನಿಮ್ಮಚರ್ಮ  ರಕ್ತ ಹೀನತೆಯಿಂದ  ಬಿಳಿಚಿಕೊಂದಿದ್ರೆ, ನಿಮ್ಮ ಉಸಿರಾಟ ಕಮ್ಮಿ ಆಗಿದೆ (short breaths)  ಅಂತನಿಸಿದಿಯಾ, ಆಗಾಗ ಎದೆ ಹಿಡಿದುಕೊಂಡಂತೆ ಆಗುತ್ತಾ ಇದ್ದೀಯ? ದೇಹದಲ್ಲಿ ಸುಸ್ತು ,ತಲೆನೋವು ಪ್ರತಿದಿನ ಬರುತ್ತಿದ್ಯಾ?? ತಲೆಯಲ್ಲಿ ಕೂದಲುಗಳು ಕಮ್ಮಿ ಆದಂತೆ ಕಾಣುತ್ತಿವೆಯಾ??

ಈ ಎಲ್ಲ (ಅತ್ವ ಇವುಗಳಲ್ಲೂ ಹಲವು) ಸಮಸ್ಯೆಗಳು ನಿಮ್ಮನ್ನ ಕಾಡುತ್ತಿದ್ದರೆ ನಿಮಗೆ ಖ೦ಡಿತವಾಗಿ ವಿಟಮಿನ್ದ B12 ಕೊರತೆ ಇದೆ ಎಂದೇ ಅರ್ಥ. !!!!



ದೇಹದಲ್ಲಿ ನರಮಂಡಲ ಮತ್ತು ಕೆಂಪು ರಕ್ತ ಕಣಗಳು ಆರೋಗ್ಯಕರವಾಗಿರಲು ಈ ವಿಟಮಿನ್ B12 ತುಂಬಾ ಅತ್ಯವಶ್ಯಕ.  ಈ ವಿಟಮಿನ್ B12 ದೇಹದಲ್ಲಿ ಅನೇಕ ಕೆಲಸಗಳು ಸರಾಗವಾಗಿ ಆಗಲು ಸಹಾಯ ಮಾಡುತ್ತದೆ. ಇದರ ಕೊರತೆ ದೇಹದಲ್ಲಿ ಉಂಟಾದರೆ ದೇಹದಲ್ಲಿನ ಡಿಎನ್ಎ ಮೇಲೆ ಮತ್ತು RBC ಮೇಲೆ ಕೆಟ್ಟ ಪರಿಣಾಮಗಳಾಗುತ್ತವೆ. ರಕ್ತ ಹೀನತೆ ಉಂಟಾಗುತ್ತದೆ. ಹೊಟ್ಟೆ ಗ್ಯಾಸ್ಟ್ರಿಕ್ ನಿಂದ ಬಳಲುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಮ್ಮಿಯಾಗುತ್ತದೆ. ದೇಹಕ್ಕೆ ಸಣ್ಣ ಪುಟ್ಟ ಜ್ವರಗಳು ಬಂದಾಗ ಹುಶಾರಾಗಲು ಜಾಸ್ತಿ ಸಮಯ ತೆಗೆದುಕೊಳ್ಳುತ್ತದೆ.



ಈ ವಿಟಮಿನ್ನಿನ ಕೊರತೆ ನಿಮ್ಮ ರಕ್ತ ಪರೀಕ್ಷೆಯಲ್ಲಿ ಕಂಡುಬಂದರೆ ಡಾಕ್ಟರ್ ಗಳು ಹೇಳುವ ಹಾಗೆ ಇಂಜಕ್ಷನ್, ಮತ್ತು ಮಾತ್ರೆಗಳನ್ನ ತೆಗೆದುಕೊಂಡರೆ ಈ ಕೊರತೆಯನ್ನು ತಪ್ಪಿಸಬಹುದು ಮತ್ತು ಅದರಿಂದ ದೇಹಕ್ಕೆ ಆಗುವ ತೊಂದರೆಯನ್ನು ತಪ್ಪಿಸಿಕೊಳ್ಳಬಹುದು.



ಡಾಕ್ಟರಗಳು ಹೇಳೋ ಪ್ರಕಾರ ಸಸ್ಯಾಹಾರಿಗಳಲ್ಲಿ ಈ ವಿಟಮಿನ್ B12 ಕೊರತೆ ಹೆಚ್ಚಾಗಿರುತ್ತೆ. ಸಸ್ಯಾಹಾರಗಳಿಂದ ಸಿಗದೆ ಇರುವ ಏಕೈಕ ವಿಟಮಿನ್ ಇದಾಗಿದೆ. ಹಾಲು, ಮೊಸರು, ಬೆಣ್ಣೆ, ಚೀಸ್ಗ ಳಲ್ಲಿ ಈ ವಿಟಮಿನ್ B12 ಸ್ವಲ್ಪ ಪ್ರಮಾಣದಲ್ಲಿ ಸಿಗುತ್ತದೆ. ಯಾವುದೇ ಹಣ್ಣು ತರಕಾರಿಗಳಲ್ಲಿ ಈ B12 ಇರುವುದಿಲ್ಲ ಹಾಗಾಗಿ ಸಸ್ಯಹಾರಿಗಳಲ್ಲಿ ಈ ವಿಟಮಿನ್ ಕೊರತೆ ಅತಿ ಹೆಚ್ಚು. ಮಾಂಸಹಾರದಲ್ಲಿ ಇದು ಅತಿ ಹೆಚ್ಚಾಗಿ ಇರುತ್ತದೆ.  ಮಾಂಸಹಾರಿಗಳಲ್ಲಿ ಈ ವಿಟಮಿನ್ B12 ಕೊರತೆ  ತುಂಬಾ ಕಮ್ಮಿ. ಇಲ್ಲ ವೆಂದೇ ಹೇಳುವರು.



ದೇಹದಲ್ಲಿ ಈ ವಿಟಮಿನ್ B12 ಕೊರತೆ ಉಂಟಾಗಲು ಅನೇಕ ಕಾರಣಗಳಿವೆ. ಕೆಲವೊಂದು ಆಪರೇಷನ್ ಗಳನ್ನ ಮಾಡಿಸಿಕೊಂಡಾಗ, TB, ಕ್ಯಾನ್ಸರ್, ನಂಥ ಕಾಯಿಲೆಗಳು ಬಂದವರಲ್ಲಿ, ಮತ್ತು ದೀರ್ಘ ಕಾಲ ಟ್ರೀಟ್ಮೆಂಟ್ ಹೊಂದುವ ಕಾಯಿಲೆಗಳು ಅಟ್ಯಾಕ್ ಅದ ದೇಹಗಳಲ್ಲಿ ಈ ವಿಟಮಿನ್ ಕೊರತೆಯುಂಟಾಗುತ್ತದೆ.

ವಿಟಮಿನ್ B12 ದೇಹಕ್ಕೆ ಅತಿ ಹೆಚ್ಚು ಅವಶ್ಯಕವಾದ ವಿಟಮಿನ್ ಮತ್ತು ಅತಿ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ದೇಹಕ್ಕೆ ಬೇಕು. ಈಗಿನಿಂದಲೇ ಎಚ್ಚೆತ್ತುಕೊಂಡು ಸಮತೋಲನ ಆಹಾರ ತಿಂದು ಆರೋಗ್ಯವಾಗಿರೋಣ ಎಂಬುದು ನನ್ನ ಅಂಬೋಣ.


No comments:

Post a Comment