ಮೊನ್ನೆ ಅಂದರೆ 14 ನವೆಂಬರ್, 2016, ಸೋಮವಾರದಂದು ನಾವು ನೋಡಿದ ಹುಣ್ಣಿಮೆಯ ಚಂದಿರ 70 ವರ್ಷಗಳಲ್ಲಿ ಎಂದೂ ಕಾಣದಂತಹ
ದೊಡ್ಡ ಹುಣ್ಣಿಮೆ ಚಂದ್ರ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸಾಮಾನ್ಯವಾಗಿ ಹುಣ್ಣಿಮೆ ಚಂದ್ರ
ನಮ್ಮೆಲ್ಲರಿಗೆ ದುಂಡಗೆ, ದಪ್ಪಗೆ ರಾತ್ರಿಯಲ್ಲಿ ಬೆಳಕು ಕೊಡುವ ಚಂದ್ರನನ್ನು ನೋಡಿರುವುದು ಸರ್ವೇ ಸಾಮಾನ್ಯ. ಆದರೆ ಈ ಬಾರಿ ಕಂಡಿರುವ ಹುಣ್ಣಿಮೆ ಚಂದ್ರ ಭೂಮಿಗೆ ಅತ್ಯಂತ
ಹತ್ತಿರದಲ್ಲಿದ್ದ ಮತ್ತು ದೊಡ್ಡ ಗಾತ್ರದಿಂದ ಹೆಚ್ಚು ಪ್ರಕಾಶಮಾನವಾಗಿ ಕಂಡ ಎಂದು ನಾಸಾ
ವಿಜ್ಞಾನಿಗಳು ಹೇಳಿದ್ದಾರೆ.
ಸಾಮಾನ್ಯವಾಗಿ
ಹುಣ್ಣಿಮೆಯ ದಿನ ಕಾಣುವ ಪೂರ್ಣಚಂದ್ರನ ಬೆಳಕಿಗಿಂತ 30% ಹೆಚ್ಚು ಬೆಳಕಿನ ಮತ್ತು ಇದುವರೆಗೂ
ಕಂಡಿರುವ ಹುಣ್ಣಿಮೆ ಚಂದ್ರನ ಗಾತ್ರಕ್ಕಿಂತ 14% ದೊಡ್ಡ ಆಕಾರದಲ್ಲಿ ಸೋಮವಾರ ರಾತ್ರಿ ಚಂದ್ರ ವಿಶೇಷವಾಗಿ ಕಂಡಿದ್ದಾನೆ. ಇದನ್ನು ಶತಮಾನದ ವಿಶೇಷ ಹುಣ್ಣಿಮೆ ಎಂದು ಕರೆಯಲಾಗಿದೆ.
NASA Goddard Space Flight Center ನ Noah Petro ಅವರು, ಸಾಮಾನ್ಯವಾಗಿ ಚಂದ್ರ ಭೂಮಿಗೆ 236,790 ಮೈಲಿ
ದೂರದಲ್ಲಿದ್ದಾನೆ. ಆದರೆ ಸೋಮವಾರದಂದು 221,525
ಮೈಲಿ ಗಳಷ್ಟು ಹತ್ತಿರದಲ್ಲಿ ಬಂದಿದ್ದ.. ಸಾಮಾನ್ಯವಾಗಿ ಇರುವ ಅಂತರಕ್ಕಿಂತ 15,265 ಮೈಲಿಗಳಷ್ಟು
ಕಡಿಮೆ ಹತ್ತಿರದಲ್ಲಿ ಭೂಮಿಯನ್ನು ಹಾದು ಹೋಗಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ.
No comments:
Post a Comment