Tuesday 28 June 2016

ಕಳೆದು ಹೋದವೆ? ಆ ದಿನಗಳು



ಕಳೆದು ಹೋದವೆ? ಆ ದಿನಗಳು’ಜೂನ್ ತಿಂಗಳ ಮೊದಲ ದಿನ ಐರನ್ ಮಾಡಿ ನುಸಿಯುಂಡೆಯಿಟ್ಟ ಯುನಿಫಾರಂ ಮೈಮೇಲೆ ಹಾಕ್ಕೊಂಡು ಹೊಸ ತರಗತಿ ಬೆಂಚ್ ಮೇಲೆ ಹೋಗಿ ಕುಳಿತ ಆ  ದಿನಗಳು.

ಕಳೆದು ಹೋದವೆ? ಆ ದಿನಗಳು ಹೊಸ ತರಗತಿಯ ಹೊಸ ಬುಕ್, ನೋತ್ಬೂಕ್ಸ್ ಮತ್ತು ಅವಕ್ಕೆ ಬಣ್ಣ ಬಣ್ಣದ ಬೈಂಡ್ ಹಾಕ್ಕೊಂಡ ದಿನಗಳು.

ಕಳೆದು ಹೋದವೆ? ಆ ದಿನಗಳು ಪ್ರೇಯರ್ ಮುಗಿದಾಕ್ಷಣ ಸ್ಕೂಲ್ ಕಾರಿಡಾರಿನಲ್ಲಿ ನಾನು ಮುಂದೆ  ನಾನು ಮುಂದೆ ಅಂತ ತರಗತಿಯೊಳಗೆ ಓಡಿ ಹೋಗಿ  ಕುಳಿತು ಖುಷಿ  ಪಟ್ಟ ಆ ದಿನಗಳು.

ಕಳೆದು ಹೋದವೆ? ಆ ದಿನಗಳು ಸಹಪಾಠಿಗಳೊಡನೆ ಸ್ಕೂಲ್ ಫೀಲ್ಡ್, ಮರದ ಕೆಳಗೆ ,ಕಾರಿಡಾರಿನಲ್ಲಿ ,ಸ್ಚೂಲ್ ಬೆಂಚ್ ಮೇಲೆ ಊಟದ ಡಬ್ಬಿಯನ್ನು ಹಂಚಿ ತಿಂದ ದಿನಗಳು.

ಕಳೆದು ಹೋದವೆ? ಆ ದಿನಗಳು ಶನಿವಾರದ PT ಪಿರಿಯಡ್ ನಲ್ಲಿ  ಮಳೆ ಬರಲೆಂದು ಪ್ರಾರ್ಥಿಸಿದ್ದು ಮತ್ತು ವಾರದಲ್ಲಿ 2 ಅಥವಾ 3 ಭಾನುವಾರಗಲಿರಲೆಂದು ಅಂದುಕೊಂಡಿದ್ದು.

ಕಳೆದು ಹೋದವೆ? ಆ ದಿನಗಳು ಸಹಪಾಠಿಗಳಡನೆ ಜಗಳವಾಡಿ ಸ್ಕೂಲ್ ನಲ್ಲಿ ಟೀಂ ಕಟ್ಟಿದ್ದು , ಕಾಂಪಿಟೆಶನ್ ಮಾಡಿದ್ದು, ಟೂ ಬಿಟ್ಟದ್ದು ಮತ್ತೆ ತಿರುಗಿ ಅವರೊಡನೆ ಫ್ರೆಂಡ್ಶಿಪ್ ಮಾಡಿಕೊಂಡ ದಿನಗಳು.

ಕಳೆದು ಹೋದವೆ? ಆ ದಿನಗಳು ಲಂಚ್ ಬ್ರೇಕ್ನಲ್ಲಿ ಸ್ಕೂಲ್ ಸುತ್ತಮುತ್ತಲಿನ ಮನೆಗಳಿಗೆ ಹೋಗಿ tv ನೋಡಿಬಂದು ಟೀಚರ್ ಹತ್ರ ಒದೆ ತಿಂದ ದಿನಗಳು.

ಕಳೆದು ಹೋದವೆ? ಆ ದಿನಗಳು ಸಂಜೆಯ ಲಾಂಗ್ ಬೆಲ್ ಗಾಗಿ ತರಗತಿಯಾಲ್ಲಿ ಬ್ಯಾಗ್ ರೆಡಿ ಮಾಡಿಕೊಂಡು ಕಾಯಿತಿದ್ದುದು ಬೆಲ್ ಹೊಡೆದಾಕ್ಷಣ ಎಲ್ಲಾರೂ ಕಿರುಚುತ್ತಾ ಮೇನ್ ಗೇಟ್ ಕಡೆ ಓಡುತ್ತಿದ್ದ ದಿನಗಳು.

ಕಳೆದು ಹೋದವೆ? ಆ ದಿನಗಳು  ಶಾಲಾ ಹಬ್ಬಗಳಿಗಾಗಿ ಸ್ಪೋರ್ಟ್ಸ್ ಡೇ ಅನುಯಲ್ ಡೇ ಗಾಗಿ ಮಾಡುತ್ತಿದ್ದ ಒಂದು ತಿಂಗಳ ತಯಾರಿ ಮಾಡಿಕೊಂಡ ದಿನಗಳು.

ಕಳೆದು ಹೋದವೆ? ಆ ದಿನಗಳು ಸಹಪಾಠಿಗಳೋಡನೆ ಕಲಿತ,ಸಂಭ್ರಮಿಸಿದ,ಆಟವಾಡಿದ ,ಗೆದ್ದ ,ಸೋತ, ನಗಿಸಿದ ಅಳಿಸಿದ ,ಮುನಿಸಿಕೊಂಡ, ಜಗಳವಾಡಿದ, ನಾವು ಯೋಚಿಸಲು ಶುರುಮಾಡಿದ ಆ  ದಿನಗಳು.

ಕಳೆದು ಹೋದವೆ? ಆ ದಿನಗಳು ಸಾಕಷ್ಟು ಮೋಜು, ಮಸ್ತಿ ಗಳಿದ್ದ ಹಲವಾರು ಫ್ರೆಂಡ್ಸ್ ಗಳಿದ್ದ ,ಹಲವಾರು , ಅರಿವು , ತಪ್ಪು ಸರೀ ಯೋಚಿಸಲು ಶುರುಮಾಡಿದ ,ಅನುಭವಗಳನ್ನು ಕಲಿಸಿದ ದಿನಗಳು.

ಕಳೆದು ಹೋದವೆ? ಆ ದಿನಗಳು ತಿಂಗಳ ಟೆಸ್ಟ್ , ಅರ್ಧವಾರ್ಷಿಕ , ವಾರ್ಷಿಕ ಪರೀಕ್ಷೆಗಾಗಿ ಓದಿದ್ದು ,ಒದ್ದಾಡಿದ್ದು, ಭಯಪಟ್ಟುಕೊಂಡದ್ದು, ಹೊಸಪೆನ್ನು ಪ್ಲೇವುಡ್ ಜೋಡಿಸಿಕೊಂಡ ದಿನಗಳು.

ಕಳೆದು ಹೋದವೆ? ಆ ದಿನಗಳು ಪರೀಕ್ಷೆ ಮುಗಿದಾಕ್ಷಣ ಬುಕ್ಸ್ ಗಳನ್ನೆಲ್ಲ ಗಂಟುಕಟ್ಟಿ ಕಣ್ಣಿಗೆ ಕಾಣದಂತೆ ಅಟ್ಟಕ್ಕೆ ಇಟ್ಟದ್ದು ಅಲ್ಲಿದ್ದ ಚಿನ್ನಿದಾಂಡು, ಬಾಲ್, ಕವಡೆ, ಗಜ್ಜುಗ ಕೆಳಗಿಳಿಸಿಕೊಂಡ ಆ ದಿನಗಳು.

ಕಳೆದು ಹೋದವೆ? ಆ ದಿನಗಳು ಆದರೆ ನಮ್ಮ ನೆನಪಿನಲ್ಲಿ ಅಲ್ಲ ಎಂದಿಗೂ ಎಂದೆಂದಿಗೂ ಅವು ಮರೆಯಲಾಗದ ಸವಿ ನೆನಪುಗಳು , ನಮ್ಮ ನೆನಪೆಂಬ ಟೈಮ್ ಮಷೀನ್  ಯಾವಾಗಲಾದರೂ ಒಮ್ಮೊಮ್ಮೆ ಅಲ್ಲಿಗೆ ಹೋಗುತ್ತಿರುತ್ತದೆ.

ನನಗೆ ಗೊತ್ತು ನೀವೆಲ್ಲ ಒಮ್ಮೆಯಾದರು ನಿಮ್ಮ  ನೆನಪಿನ  ಟೈಮ್ ಮಷೀನ್ ನಿಂದ ಅಲ್ಲಿಗೆ ಹೋಗೇ ಹೋಗುತ್ತೀರಿ ಎಂದು ಆ ದಿನಗಳ ನೆನಪಿನ ಸರಮಾಲೆಯಲ್ಲಿ ಮಿಂದು ಬಂದಿರುವಿರಿ ಎಂದು.



No comments:

Post a Comment