ನಮಗೆ ಮರ ಎಂದರೆ ತಕ್ಷಣ ನೆನಪಿಗೆ ಬರುವುದು ನಾನಾ ರೀತಿಯ ಹಣ್ಣು, ಕಾಯಿ , ಹೂವು ಗಳನ್ನು ಕೊಡುವ, ನೆರಳು ಕೊಡುವ, ಕಟ್ಟಿಗೆ ಮತ್ತು ಪೀತೋಪಕರನಗಳನ್ನಾಗಿ ಬಳಸುವ ಮರ ಅಂತ ಹೀಗೆ ಅನೇಕ ರೀತಿಯಲ್ಲಿ ಮರಗಳು ನಮ್ಮ ನೆನಪಿಗೆ ಬರುತ್ತವೆ. ಆದರೆ ಈ ಎಲ್ಲ ಮರಗಳು ಮಾನವನ ಬದುಕಿನಲ್ಲಿ ಅಪಾರ ಮಹತ್ವ ಹೊಂದಿವೆ. ಭೂಮಿಯ ಮೇಲೆ ಜೀವಸಂಕುಲಕ್ಕೆ ಬೇಕಾದ ಆಮ್ಲಜನಕವನ್ನು ಇವು ಉತ್ಪಾದಿಸುವ ನಿಸರ್ಗಿಕ ಕಾರ್ಖಾನೆಗಳು ಎಂದರೆ ತಪ್ಪಾಗಲಾರದು. ಆದರೆ ಈ ಬಾವೋಬಾಬ್ ( baobab tree) ಮರದ ಜೀವನ ಮಾತ್ರ ಎಲ್ಲ ಮರಗಳಿಗಿಂತ ಸ್ವಲ್ಪ ಭಿನ್ನ. ವಿಚಿತ್ರ ಎನಿಸಿದರು ಇದು ಸತ್ಯ. ಆ ಸತ್ಯ ಏನೆಂದರೆ ಈ ಮರ ತನ್ನ ದಪ್ಪವಾದ ಬುಡದಲ್ಲಿ ನೀರನ್ನು ಶೇಖರಿಸಿಟ್ಟಕೊಳ್ಳುತ್ತದೆ. ಹಾಗೇ ಅದೇ ಕಾರಣಕ್ಕಾಗಿ ಆನೆಗಳ ದಾಳಿಗೆ ತುತ್ತಾಗುತ್ತದೆ.
ಈ ಬಾವೋಬಾಬ್ ಮರವು ಗಾತ್ರದಲ್ಲಿ ಅತ್ಯಂತ ದೊಡ್ಡ ಮರ. ಇದು ಅತಿ ಹೆಚ್ಚಾಗಿ ಕಂಡುಬರುವುದು ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ. ಅದರಲ್ಲೂ ಆಫ್ರಿಕಾದ ದ್ವೀಪಗಳಲ್ಲಿ ಇದರ ಮೂಲ ಎಂದು ಹೇಳಲಾಗುತ್ತದೆ. ಅಲ್ಲಿನ ಜನರು ಅದನ್ನು ಬಾವೋಬಾಬ್ ಟ್ರೀ ಅಂತ ಕರೆಯುತ್ತಾರೆ. ವಿಜ್ಞಾನಿಗಳು ಈ ಮರವನ್ನು adansonia ಎಂದು ಹೆಸರಿಟ್ಟಿದ್ದಾರೆ. ಈ ಮರವನ್ನು ತಲೆಕೆಳಗಾದ ಮರ (upside down tree) ಎಂತಲೂ ಕರೆಯುತ್ತಾರೆ. ಮೊದಲ ನೋಟಕ್ಕೆ ಈ ಮರ ತಲೆಕೆಳಗಾಗಿರುವಂತೆ ಭಾಸವಾಗುತ್ತದೆ. ಕಾರಣ ಆ ಮರದ ರೆಂಬೆ - ಕೊಂಬೆಗಳಲ್ಲಿ ಕೂದಲಿನ ರೀತಿಯಲ್ಲಿ ಬೇರುಗಳು ಮೇಲ್ಮುಖವಾಗಿ ನಿಂತಿರುತ್ತವೆ. ಈ ಮರ ವಿಶೇಷತೆ ಏನೆಂದರೆ ಇದರ ಈ ಮರದ ಬುಡವು ದೊಡ್ಡ ಗಾತ್ರದಲ್ಲಿದ್ದು ಅಲ್ಲಿ ನೀರನ್ನು ಶೇಖರಿಸಿಟ್ಟುಕೊಂಡಿರುತ್ತದೆ. ಈ ಬಾವೋಬಾಬ್ (baobab tree) ಯು ತನ್ನ ಬುಡದಲ್ಲಿ 26,000 ಗ್ಯಾಲನ್ಸ್ ಅಂದರೆ 100,000 ಲೀಟರ್ ನಸ್ಟು ನೀರನ್ನು ಶೇಕರಿಸಿಟ್ಟುಕೊಂಡಿರುತ್ತದೆ. ಇದು ಕಲ್ಲಂಗಡಿ ಹಣ್ಣಿನ ಕೆಂಪಾದ ಭಾಗದಲ್ಲಿ ಹೇಗೆ ನೀರು ಇರುತ್ತೋ ಹಾಗೆ. ಇದು ಆ ಮರದ ಪ್ರಾಕೃತಿಕ ಲಕ್ಷಣ ಮತ್ತು ಅದು ಆ ಮರಕ್ಕೆ ಪ್ರಕೃತಿಯ ಕೊಡುಗೆ ಅಂತಾನು ಅನ್ನಬಹುದು.
ಈ ಮರದ ಪ್ರಕೃತಿಕ ಕೊಡುಗೆಯೇ ಈ ಮರದ ಅಳಿವಿಗೆ ಕಾರಣವಾಗಿದೆ ಅಂದರೆ ತಪ್ಪಾಗಲಾರದು. ಈ ಮರವು ಆನೆಗಳ ದಾಳಿಗೆ ತುತ್ತಾಗುತ್ತದೆ. ಆನೆಗಳಿಗೆಲ್ಲಾದರೂ ಈ ಮರ ಕಣ್ಣಿಗೆ ಬಿದ್ದರೆ, ನಮಗೆ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಕಣ್ಣಮುಂದೆ ತಂದಿಟ್ಟ ಅನುಭವ ಹೇಗಿರುತ್ತೋ ಹಾಗೆ ಇರುತ್ತೆ. ಈ ಆನೆಗಳು ಈ ಮರದ ಕಾಂಡದ ಭಾಗವನ್ನು ತಿನ್ನುವ ಆಸೆಯಿಂದ ಈ ಮರವನ್ನು ಸಂಪೂರ್ಣವಾಗಿ ನಾಶಮಾಡುತ್ತವೆ.
ಈ ರೀತಿ ದಾಳಿಗೆ ಒಳಗಾದ ನೆಲಕಚ್ಚಿದ ಬಾವೋಬಾಬ್ ಮರವು ಮತ್ತೆ ಬೇರೂರಿ, ಚಿಗುರೊಡೆದು ಮರುಹುಟ್ಟು ಪಡೆಯುತ್ತದೆ. ತನ್ನ ಜೀವಿತಾವಧಿಯಲ್ಲಿ 5 ರಿಂದ 6 ಬಾರಿ ಮರು ಹುಟ್ಟು ಪಡೆಯುವ ಸಾಮರ್ಥ್ಯ ಈ baobab tree ಇದೆ. ಇದು ಈ ಮರದ ಇನ್ನೊಂದು ವಿಶೇಷ.
ಈ ರೀತಿ ದಾಳಿಗೆ ಒಳಗಾದ ನೆಲಕಚ್ಚಿದ ಬಾವೋಬಾಬ್ ಮರವು ಮತ್ತೆ ಬೇರೂರಿ, ಚಿಗುರೊಡೆದು ಮರುಹುಟ್ಟು ಪಡೆಯುತ್ತದೆ. ತನ್ನ ಜೀವಿತಾವಧಿಯಲ್ಲಿ 5 ರಿಂದ 6 ಬಾರಿ ಮರು ಹುಟ್ಟು ಪಡೆಯುವ ಸಾಮರ್ಥ್ಯ ಈ baobab tree ಇದೆ. ಇದು ಈ ಮರದ ಇನ್ನೊಂದು ವಿಶೇಷ.