ಈಗಾಗ್ಲೇ ಕಾಪಿ ಬಗ್ಗೆ
ಬರ್ದೇ. ಅದು ಇಲ್ಲಿದೆ. http://sunitacm.blogspot.in/2015/11/blog-post.html .. ಇದೇ ಹುರುಪಲ್ಲಿ ಟೀ ಬಗ್ಗೆನೂ ಬರಿಯೋಣ
ಅನ್ಸಿದ್ದಕ್ಕೆ ಈ ಬ್ಲಾಗು!
ಪ್ರಪಂಚದ ಅನೇಕ ಭಾಗಗಳಲ್ಲಿ ಟೀ ಎನ್ನುವುದು ಸಾವಿರಾರು
ವರ್ಷಗಳಿಂದಲು ದಿನನಿತ್ಯದ ಪಾನೀಯವಾಗಿದೆ. ಇದು ಮೂಲಭೂತವಾಗಿ ಚೈನಾದ್ದು ಎಂದು ಹೇಳಲಾಗುತ್ತದೆ. ಅವರು
ಸುಮಾರು 4೦೦೦ ವರ್ಷರಳ ಹಿಂದೆಯೇ ಟೀ ಕುಡಿಯುವುದನ್ನು ಕಲಿತಿದ್ದರು. ಅದಾದ ಹಲವಾರು ಶತಮಾನಗಳ
ನಂತರ ಯುರೋಪ್ಗೆ ಕಡಲ ವ್ಯಾಪಾರಿಗಳ ಮೂಲಕ
ತಲುಪಿತು. ನಂತರ ಜಗತ್ ಪ್ರಸಿದ್ದಿ ಹೊಂದಿತು. ನಾರ್ತ್ ಅಮೇರಿಕಾ ಮತ್ತು ಯೌರೋಪ್ ನ ದೇಶಗಳಲ್ಲಿ
೧೮ ನೆ ಶತಮಾನದ ಪ್ರಿಯವಾದ ದೈನಂದಿನ ಪಾನೀಯವಾಗಿ ಪ್ರಸಿದ್ಧವಾಯಿತು. ಆ ಸಮಯದಲ್ಲಿ ಟೀ ಮಾರುವ
ಏಕೈಕ ದೇಶ ಚೈನಾ ಆಗಿತ್ತು. ಇತ್ತೀಚೆಗಂತು ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಟೀ-ಪಾರ್ಟಿ ಎಂಬ ಅನೇಕ
ಸಮಾರಂಭಗಳು ನಡೆಯುತ್ತವೆ. ಹೀಗೆ ಟೀ, ಪ್ರತಿಷ್ಟೆಯ, ಗೌರವಯುತ ಸಮಾರಂಭಗಳಲ್ಲಿ ಸ್ತಾನ ಪಡೆಯಿತು. ಉದಾಹರಣೆಗೆ--- tea was also figured in
america’s bid for independence form british rule-the boston tea party.
ಟೀ ಭಾರತ ಕ್ಕೆ ಬಂದಿದ್ದು,,,,,,,
ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಸಮಯದಲ್ಲಿ, ಅವರು
ಅಸ್ಸಾಂ ನಲ್ಲಿ ಟೀ ಎಲೆಗಳನ್ನು ಗುರುತಿಸುತ್ತಾರೆ. ಜೊತೆಗೆ ಅಸ್ಸಾಂ ಎಲೆಗಳು ತುಂಬಾ ವಿಶೇಷವಾದ
ರುಚಿಯನ್ನು ಹೊಂದಿದ್ದವು. ಅವರು ನಂತರ ಅದನ್ನು ಅದೇ ರೀತಿಯ ಹವಾಗುಣವಿರುವ ಅನೇಕ ರಾಜ್ಯಗಳಲ್ಲಿ
ಬೆಳೆಯಲು ಉತ್ತೇಜನ ನೀಡಿದರು. ನಂತರ ಶ್ರೀಲಂಕ ವರೆಗೂ ಹೋಯಿತು. ಬರು ಬರುತ್ತಾ ಟೀ ಒಂದು ವಾಣಿಜ್ಯ
ಬೆಳೆಯಾಗಿ ಗುರುತಿಸಿಕೊಂಡಿತು.
ಟೀ ಯನ್ನು ವಂಡರ್ಫುಲ್ ಡ್ರಿಂಕ್ ಎಂತಲೂ ಕರೆಯುತ್ತಾರೆ!!!!!!!!!!!
1989ರಲ್ಲಿ ಜಪಾನಿನ ನ್ಯುಟ್ರಶಿಯನ್ ಸ್ಟಡಿ ಪ್ರಕಾರ, ಲೋಯರ್ ಸ್ಟಮಕ್ ಕ್ಯಾನ್ಸರ್ ಕಾಯಿಲೆಯು ಟೀ ಕುಡಿಯುವ
ಜನಾಂಗದವರಿಗಿಂತ ಟೀ ಕುಡಿಯದವರಲ್ಲಿ ಹೆಚ್ಹಾಗಿ ಕಂಡುಬಂದಿತ್ತು ಎಂದು ವರದಿಯಾಗಿತ್ತು. ಟೀ
ಆರೋಗ್ಯಕರ ಗುಣಗಳೆಂದರೆ ನಮ್ಮ ದೇಹದಲ್ಲಿ ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ. ಬ್ಯಾಡ್ ಕೊಲೆಸ್ತ್ರೋಲ್ ಲೆವೆಲ್ ಕಮ್ಮಿ ಮಾಡುತ್ತದೆ. ಲೋಯರ್ ಸ್ಟಮಕ್
ಕ್ಯಾನ್ಸರ್ ಬರದಂತೆ ಕಾಯುತ್ತದೆ. ಇದು ನ್ಯಾಚುರಲ್ ಫ್ಲೋರೈಡ ಹೊಂದಿರುವುದರಿಂದ ಹಲ್ಲು ಮತ್ತು ಮೂಳೆಗಳನ್ನು
ಆರೋಗ್ಯದಿಂದಿರಿಸುತ್ತದೆ.
ಟೀ ಸೊಪ್ಪು ತಯಾರಿಸುವ ರೀತಿ,,,,
ಟೀ ಪ್ಲಾಂಟೇಶನ್ ಗಳಿಂದ ಟೀ ಎಲೆ, ಚಿಗುರನ್ನು
ಕೀಳಲಾಗುತ್ತದೆ. ಅವುಗಳನ್ನು ನಿಗದಿತ ತಾಪಮಾನದಲ್ಲಿ ಒಣಗಿಸಿ ಪುಡಿಮಾಡಿ ಪ್ಯಾಕ್ ಮಾಡಿ ನಮಗೆ
ಕಳಿಸುತ್ತಾರೆ. ಟೀ ಯನ್ನು 2 ರೀತಿಯಲ್ಲಿ ಬಳಸಲಾಗುತ್ತದೆ. 1 ಬ್ಲಾಕ್ ಟೀ, 2 ಗ್ರೀನ್ ಟೀ.
ಟೀ ಕುಡಿಯುವ ವಿಧಾನಗಳು,,,,
ಟೀ ಕುಡಿಯುವ ರೀತಿಯಲ್ಲಿಯೂ ಅನೇಕ ಬದಲಾವಣೆಗಳನ್ನು
ಗುರುತಿಸಬಹುದು. ಚೈನಾದವರು ಬಿಸಿನೀರಿನೊಡನೆ ಟೀ ಸೊಪ್ಪು, ಜೊತೆಗೆ ಕೆಲವು ಮೂಲಿಕೆಗಳನ್ನೂ ಸೇರಿಸಿ ಕುಡಿಯಲಾರಂಭಿಸಿದರು. ಆಯಾ
ದೇಶದ ಹವಾಗುಣಕ್ಕೆ ಸಂಸ್ಕೃತಿಗೆ ತಕ್ಕಂತೆ ಟೀ ಮಾಡುವ ವಿಧಾನಗಳೂ ಬದಲಾದವು. ಉದಾಹರಣೆಗೆ ಏಲಕ್ಕಿ,
ಲವಂಗ, ಚೆಕ್ಕೆ, ಜೀರಿಗೆ, ಕೊತ್ತಂಬರಿ, ಮೆಣಸು ರೀತಿಯ ಮಸಾಲೆಗಳನ್ನು ಸೇರಿಸಿ ಟೀ ಬಳಸಲಾರಂಭಿಸಿದರು, ಅದೇ
ರೀತಿಯಲ್ಲಿ ಕೆಲವು ಗಿದಮೂಲಿಕೆಗಳಾದ ಶುಂಟಿ, ತುಳಸಿ, ನಿಂಬೆ ಸೇರಿಸಿಯು ಟೀ ಕುಡಿಯುತ್ತಾರೆ.
ಭಾರತದಲ್ಲಿ ನಾವು ಟೀ ಎಲೆಯ ಜೊತೆಗೆ ಹಾಲು ಸಕ್ಕರೆ ಮಿಕ್ಸ್ ಮಾಡಿ ಕುಡಿಯುವುದೇ ಹೆಚ್ಹು
ಜನಪ್ರಿಯ.
ಇವೆಲ್ಲ ಒಂದು ಬಗೆಯ ಟೀಗಳಾದರೆ, ಪಶ್ಚಿಮ ಸೂಡನ್ನಿನ ಸಹಾರ ಮರುಭೂಮಿಯ ಜನಾಂಗದವರು sesame ಎಣ್ಣೆಯನ್ನು ಹಾಲು ಮಿಶ್ರಿತ ಟೀಗೆ ಬೆರೆಸಿ ಬೆಳಗಿನ ಪಾನೀಯವಾಗಿ ಸೇವಿಸುತ್ತಾರೆ. ಇಂಗ್ಲೆಂಡ್ ನಲ್ಲಿ ಟೀಯು ಅರೋಗ್ಯಾದಾಯಕ ಮತ್ತು ಗೌರವದಾಯಕ ಸ್ಥಾನ ಪಡೆದಿದೆ. ಯುರೋಪ್, ಅರಬ್, ಪ್ಯಾರಿಸ್, ರಸಿಯಾ ದೇಶಗಳಲ್ಲಿ ಅರೋಗ್ಯ ಕೊಡುವ ಅಮೃತದಂತಾಗಿದೆ. ಇಂದಿನ ದಿನಗಳಲ್ಲಿ ಗ್ರೀನ್ ಟೀ ಜೊತೆಗೆ ಜೇನುತುಪ್ಪ ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯುವುದರಿಂದ ದೇಹದ ಮೆಟಾಬೋಲಿಸಮ್ ನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ ಮತ್ತು ದೇಹದ ತೂಕವನ್ನು ಕಮ್ಮಿ ಮಾಡುತ್ತದೆ, ರಕ್ತದಲ್ಲಿರುವ ಬ್ಯಾಡ್ ಕೊಲೆಸ್ತ್ರೋಲ್ ಕಡಿಮೆ ಮಾಡುತ್ತದೆ ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ ಎಂದು ಡಯಟಿಶಿಯನ್ನರು ಹೇಳುತ್ತಾರೆ.
ಒಬ್ಬ ಡಚ್ ಫಿಸಿಶಿಯನ್, Cornelius blankaart , ದಿನದಲ್ಲಿ ನಾವು 8 ರಿಂದ 10 ಕಪ್ ಕಾಫಿ ಕುಡಿದರೆ ಅದು ತುಂಬಾ ಆರೋಗ್ಯದಾಯಕ ಅದಕ್ಕಿಂತ
ಜಾಸ್ತಿ ಕುಡಿದರೀ ಅದು ಹಾನಿಕಾರಕ ಎಂದು ಹೇಳಿದ್ದಾರೆ. ಯಾವುದೇ ಅಗಲಿ ಅತಿಯಾದರೆ ಅಮೃತವೂ
ವಿಷವಾಗುತ್ತದೆ. ಟೀ ಕುಡಿಯುವುದು ಚಟವಾಗಿ ಅತಿಯಾದರೆ ಮೂಳೆಸವೆತ, ನಿದ್ರಾಹೀನತೆ ಉಂಟಾಗುತ್ತದೆ. ನಾವು
ನಮ್ಮ ಎಷ್ಟು ಬೇಕೋ ಅಸ್ಟು ಮಿತವಾಗಿ ಬಳಸಿ ಆರೋಗ್ಯದಿಂದ ಬದುಕು ನಡೆಸೋಣ.