Showing posts with label ಪುರಾಣ. Show all posts
Showing posts with label ಪುರಾಣ. Show all posts

Wednesday, 31 January 2018

ಪ್ರಪಂಚದ ವಿವಿಧ ಸಂಸ್ಕೃತಿಗಳಲ್ಲಿ ಚಂದ್ರಗ್ರಹಣ

ಚಂದ್ರ ಗ್ರಹಣ ನಮ್ಮ ಸೌರಮಂಡಲದಲ್ಲಿ  ನಡೆಯುವ ಕೌತಕಗಳಲ್ಲಿ ಒಂದು. ಈ ಘಟನೆಯ ಹಿಂದಿನ ವಿಜ್ಞಾನ ಇಂದಿನವರಿಗೆ ಸರಿಯಾಗಿಯೇ ತಿಳಿದಿದೆ. ಆಧುನಿಕರು ಈ ಘಟನೆಯನ್ನ ಅತ್ಯಂತ ಕುತೂಹಲದಿಂದ ನೋಡಿ ಆನಂದಿಸಲು ತಯಾರಾಗುತ್ತಾರೆ. ಆದರೆ ನಮ್ಮ ಪೂರ್ವಿಕರು ಈ ಘಟನೆಯನ್ನ ಇಷ್ಟೇ ಕುತೂಹಲ ಆಸಕ್ತಿ ಸಡಗರದಿಂದ ಬರಮಾಡಿಕೊಳ್ಳುತ್ತಿದ್ದರೆ?  ಅಂತ ಹಿಂದಿರಿಗೆ ನೋಡಿದರೆ ಉತ್ತರ ಬೇರೆಯೇ ಇರುವುದು ತಿಳಿದು ಬರುತ್ತದೆ.



ಈ ಗ್ರಹಣಗಳು ಮನುಷ್ಯನ ಗಮನಕ್ಕೆ ಬಂದಿದ್ದು ಇತ್ತೀಚೆನದ್ದೇನಲ್ಲ. ಮನುಷ್ಯನಿಗೆ ಈ ಗ್ರಹಣಗಳ ತಿಳುವಳಿಕೆ ಅನಾದಿ ಕಾಲದಿಂದಲೂ ಇದೆ.   ಜಗತ್ತಿನ ವಿವಿಧ ಸಂಸ್ಕೃತಿಗಳು ಈ ಗ್ರಹಣಗಳನ್ನ ಯಾವ ಯಾವ ರೀತಿ ನೋಡುತ್ತಾ, ಅರ್ಥ ಮಾಡಿಕೊಳ್ಳುತ್ತ ಬಂದಿವೆ,  ಗ್ರಹಣಗಳ ಮೇಲೆ ಯಾವ ಯಾವ ರೀತಿಯ ಕಥೆಗಳನ್ನ ಕಟ್ಟಿದ್ದಾರೆ ಅನ್ನುವುದನ್ನ ತಿಳಿಯಲು ಈ ಲೇಖನ ಬರೀತಿದಿನಿ. ಗೂಗಲ್ಲಿನ ಗಲ್ಲಿಗಳಲ್ಲಿ ನಾ ಕಂಡ ಕೆಲವು ಸಂಸ್ಕೃತಿಗಳ ಚಂದ್ರ ಗ್ರಹಣದ ಅರಿವು ಈ ಕೆಳಗಿನಂತಿವೆ.


ಇಂಕಾ ಸಂಸ್ಕೃತಿಯಲ್ಲಿ ಚಂದ್ರ ಗ್ರಹಣ: 

ದಕ್ಷಿಣ ಅಮೆರಿಕಾದ ತೋಬ ಜನಾಂಗದ ನಂಬಿಕೆ ಪ್ರಕಾರ ಸತ್ತಿರುವ ಜನರ ಆತ್ಮಗಳು ಚಿರತೆ ರೂಪ ತಾಳಿ ಚಂದ್ರನ ಮೇಲೆ ದಾಳಿ ಮಾಡುತ್ತವೆ. ಹಾಗಾಗಿ ಚಂದ್ರ ಕೆಂಪಗೆ (ರಕ್ತದ ಬಣ್ಣ) ಕಾಣುತ್ತಾನೆ ಎಂದು ನಂಬಿದ್ದರು.ನಂತರ ಈ ಚಿರತೆಗಳು ಭೂಮಿಯ ಮೇಲೂ ದಾಳಿ ಮಾಡಿ ಜನರನ್ನು ತಿನ್ನುತವೆ ಎಂದು ನಂಬಿ ಅವನ್ನು ಹೆದರಿಸಿ ಓಡಿಸಲು ನಾಯಿಗನ್ನು ಬೋಗುಳಿಸಿ ಮತ್ತು ಇತರ ವ್ಸಸ್ತುಗಳಿಂದ ಸದ್ದು ಮಾಡುವ ಆಚರಣೆ ಜಾರಿಗೆ ತಂದಿದ್ದರು.




ಮೆಸಪಟೋಮಿಯನ್ ಸಂಸ್ಕೃತಿಯಲ್ಲಿ ಗ್ರಹಣ 
ಮೆಸಪಟೋಮಿಯನ್ - ಅದರಲ್ಲೂ ಬೆಬಿಲೋನಿಯನ್ನರು-   ಚಂದ್ರನನ್ನು ಏಳು ಜನ 7 ಜನ ರಾಕ್ಷಸರು ಆಕ್ರಮಣ ಮಾಡುತ್ತಾರೆ ಎಂದು ನಂಬಿದ್ದರು. ಇದು ತಮ್ಮ ರಾಜನ ಸಾವಿನ ಶಕುನವನ್ನ ನುಡಿಯುತ್ತೆ ಎಂದು ನಂಬಿ, ಗ್ರಹಣದ  ಸಮಯದಲ್ಲಿ ಒಬ್ಬ ನಕಲಿ ರಾಜನನ್ನು ಸೃಷ್ಟಿ ಮಾಡಿ ಆತನಿಗೆ ಸಕಲ ರಾಜ ಮರ್ಯಾದೆ ನೀಡುವ ಆಚರಣೆ ಮಾಡುತ್ತಿದ್ದರು. ಗ್ರಹಣದಂದು ನಿಜವಾದ ರಾಜ ಜನ ಸಾಮನ್ಯನಂತೆ ಬದುಕಿ ಗ್ರಹಣ ಮುಗಿದ ಮೇಲೆ ಮತ್ತೆ ರಾಜ್ಯಾಡಳಿತ ವಹಿಸಿಕೊಳ್ಳುತ್ತಿದ್ದ.   


ಉತ್ತರ ಅಮೆರಿಕಾದ ಹೂಪ ಸಂಸ್ಕೃತಿಯಲ್ಲಿ ಗ್ರಹಣ 
ಚಂದ್ರನಿಗೆ 20 ಜನ ಹೆಂಡತಿಯರು ಇದ್ದು ಅವನ ರಾಜ್ಯದಲ್ಲಿ ಹಲವಾರು ಸಿಂಹಗಳು ಮತ್ತು ಹಾವುಗಳು  ಮುಂತಾದ  ಸಾಕು ಪ್ರಾಣಿಗಳನ್ನ ಸಾಕಿರುತ್ತಾನೆ ಎಂದು ನಂಬಿದ್ದರು.  ಅವುಗಳಿಗೆ ಆಹಾರ ಸಿಗದ ಸಮಯದಲ್ಲಿ ಚಂದ್ರನನ್ನು ತಿನ್ನಲು  ಮುಂದಾಗುವ ಸಮಯವೇ ಚಂದ್ರ ಗ್ರಹಣದ ಸಮಯ ಎಂದು ನಂಬಿದ್ದರು. ನಂತರ ಗಾಯಗೊಂಡ ಚಂದ್ರನನ್ನು ಆತನ ಹೆಂಡತಿಯರು ಪ್ರಾಣಿಗಳಿಂದ ಚಂದ್ರನನ್ನು ರಕ್ಷಿಸಿ ಸೋರಿದ ರಕ್ತವನ್ನು ಮತ್ತು ಗಾಯವನ್ನು ಗುಣಪಡಿಸುತ್ತಾರೆ ಮತ್ತು ಈ ಸಮಯ ಗ್ರಹಣ ಬಿಡುವ ಎಂದು ನಂಬಿದ್ದರು.

ದಕ್ಷಿಣ ಕೆಲಿಪೋರ್ನಿಯದ  ಲುಸಿಯನೋ ಬುಡಕಟ್ಟಿನ ಸಂಸ್ಕೃತಿಯಲ್ಲಿ
ಇನ್ನೊಂದು ಕಥೆಯಲ್ಲಿ ಚಂದ್ರನಿಗೆ ಗ್ರಹಣದಂದು ಖಾಯಿಲೆ ಬಿದ್ದಿರುತ್ತಾನೆ. ಅವನು ಗುಣವಾಗಲು ದೇವರ ಪ್ರಾರ್ಥನೆ ಮತ್ತು ಮಂತ್ರಗಳನ್ನ ಹೇಳಿ ಉಪಚರಿಸುವುದು ಜನರ ಕರ್ತವ್ಯ ಎಂದು ನಂಬಿದ್ದರು. 


ಆಫ್ರಿಕದ ಬತಮ್ಮಲಿಬ ಸಂಸ್ಕೃತಿಯಲ್ಲಿ ಗ್ರಹಣ  

ಸೂರ್ಯ ಮತ್ತು ಚಂದ್ರ ಪರಸ್ಪರ ಹೊಡೆದಾಡುವ ಸಮಯವೇ ಈ ಗ್ರಹಣದ ದಿನ ಎಂದು ಇಂದಿಗೂ ನಂಬುತ್ತಾರೆ ಈ ಕತೆಯ ಹಿನ್ನೆಲೆಯಲ್ಲಿ  ಈ ಗ್ರಹಣದ ದಿನವನ್ನ ತಮ್ಮ ತಮ್ಮ ನಡುವಿನ ಹಳಯ ವೈಷಮ್ಯ, ಜಗಳವನ್ನು ನಿಲ್ಲಿಸಿ ಒಂದಾಗುವ ದಿನ ಎಂದು ಆಚರಿಸುತ್ತಾರೆ. 




ಭಾರತದ ಪೌರಾಣಿಕ ಸಂಸ್ಕೃತಿ
ಭಾರತೀಯ ಪುರಾಣಗಳು ರಾಹು ಅನ್ನುವ ಒಂದು ವಿಷ ಸರ್ಪ ಅತ್ವ  ದುಷ್ಟ ರಾಕ್ಷಸ ಚಂದ್ರನನ್ನು ನುಂಗುತ್ತಾನೆ ಎಂದು ಹೇಳುತ್ತವೆ. ಹಾಗಾಗಿ ಜನ ಇದು ಕೆಟ್ಟ ಶಕುನವೆಂದು ನಂಬಿ ವಿವಿಧ ಆಚರಣೆ ಮಾಡುತ್ತಾರೆ. 


    

Friday, 21 April 2017

ಪಂಚಾಂಗ - ಜ್ಯೋತಿಷ ಶಾಸ್ತ್ರ, ಪುರಾಣ - ಪುಣ್ಯ ಕಥೆಗಳಲ್ಲಿ ಅಕ್ಷಯ ತೃತೀಯ


ಆಡುಮಾತಿನಲ್ಲಿ "ಅಕ್ಷತದಿಗೆ" ಎಂದು ಕರೆಸಿಕೊಳ್ಳುವ 'ಅಕ್ಷಯತೃತೀಯ'ದ ದಿನ ಪುರಾತನ ಕಾಲದಿಂದಲೂ ವಿಶೇಷತೆಯನ್ನು ಪಡೆಯುತ್ತಾ ಬಂದಿದೆ. ಈ ದಿನ ಜನರು ಆಸ್ತಿ, ಚಿನ್ನಬೆಳ್ಳಿ ಕೊಳ್ಳಲು, ಒಳ್ಳೆಕೆಲಸ ಪ್ರಾರಂಭ ಮಾಡಲು ಒಳ್ಳೆಯ ದಿನ ಎಂದು ಹೇಳುವರು. ಈ ಅಕ್ಷಯ ತೃತೀಯ ದಿನ ಚಿನ್ನ, ಬೆಳ್ಳಿ, ವಜ್ರ, ರತ್ನಾಭರಣ, ಭೂಮಿ ಇವುಗಳ ಖರೀದಿ, ಆಸ್ತಿಯಲ್ಲಿ ಹೂಡಿಕೆಗೆ ಪ್ರಶಸ್ತವೆನಿಸಿದೆ ಮತ್ತು ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಈ ದಿನ  ಕುಬೇರ, ವಿಷ್ಣು, ಲಕ್ಷ್ಮಿ ಇವರುಗಳ ಪೂಜೆ ಮಾಡಲಾಗುತ್ತದೆ. ಈ ದಿನ ವಿಷ್ಣು ಮತ್ತು ಲಕ್ಷ್ಮಿ ಯನ್ನು ಪೂಜಿಸಿದರೆ ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆಯಿದೆ. ಈ ದಿನದಂದು ಬೆಳ್ಳಿ ಬಂಗಾರದ ಅಂಗಡಿಗಳಲ್ಲಿ ವ್ಯಾಪಾರ ತುಂಬಾ ಜೋರಾಗಿ ನಡೆಯುತ್ತದೆ. ಅಕ್ಷಯ ತೃತೀಯದಂದು ಶುಭಕಾರ್ಯಗಳನ್ನು ಮಾಡಿದರೆ ಹಾಗೂ ದಾನ ಮಾಡಿದರೆ ಹೆಚ್ಚಿನ ಪ್ರತಿಫಲ ಉಂಟಾಗುವುದೆಂಬ ಪ್ರತೀತಿಯಿದೆ. ನಮ್ಮ ಹೆಣ್ಣುಮಕ್ಕಳು ಒಡವೆಯನ್ನು ಖರೀದಿಸಲು ತುಂಬಾ ಇಷ್ಟ ಪಡುತ್ತಾರೆ. ಏಕೆಂದರೆ ಅದು ಕೂಡ ಅಪತ್ಕಾಲಕ್ಕೆ ನೆರವಾಗುವ ಆಸ್ತಿಯಲ್ಲವೇ. ಹಾಗೇ ಹೆಣ್ಣಿನ ಸೌದರ್ಯದ ಮತ್ತು ಹೆಮ್ಮೆಯ ಪ್ರತೀಕ ಈ ಒಡವೆ. ಅಲ್ಲದೇ ಈ ನಂಬಿಕೆ ತಲಾಂತರಗಳಿಂದ ಇಷ್ಟು ಗಟ್ಟಿಯಾಗಿ ಜನರು ನಂಬಿಕೊಂಡು ಬಂದಿದ್ದಾರೆಂದರೆ ಏನು ಅರ್ಥ?  ಆ ದಿನದ ಮಹಿಮೆಯಿಂದ  ನಂಬಿದವರ ಜೀವನದಲ್ಲಿ ಒಳ್ಳೆಯದು ಆಗಿದೆ ಎಂದೇ ಅರ್ಥ. ಅಲ್ಲವೇ? ನಮ್ಮ ಭಾರತೀಯ ಪಂಚಾಗ ಸುಮ್ಮನೆ ಬಂದಿಲ್ಲ ಅದು ಒಂದು ವಿಜ್ಞಾನ. ಎನ್ನುವುದಕ್ಕೆ ಇದು ಕೂಡ ಒಂದು ಸಾಕ್ಷಿ.





ವೈಶಾಖ ಮಾಸದ - ಶುಕ್ಲ ಪಕ್ಷದ - ಮೂರನೇ ದಿನವೇ 'ಅಕ್ಷಯ ತೃತೀಯ'. ಹಿಂದುಗಳ ಪವಿತ್ರ ದಿನಗಳಲ್ಲಿ ಅತ್ಯಂತ ಪವಿತ್ರವಾದ ನಾಲ್ಕು "ಪೂರ್ಣಮುಹೂರ್ತ" ಗಳಲ್ಲಿ  (ಯುಗಾದಿ, ಅಕ್ಷಯ ತೃತೀಯ, ವಿಜಯ ದಶಮಿ ಮತ್ತು ಬಲಿಪಾಡ್ಯಮಿ ಹಬ್ಬದ ದಿನಗಳು) ಇದು ಒಂದು. ಈ ದಿನಗಳಲ್ಲಿ  ಒಳ್ಳೆಯ ಕೆಲಸ ಮಾಡಲು  ಪಂಚಾಂಗ ನೋಡುವ ಅವಶ್ಯಕತೆ ಇರುವುದಿಲ್ಲ ಎಂದು ನಮ್ಮ ಹಿರಿಯರು ಹೇಳಿದ ನೆನಪು. ಈ ದಿವಸ ಸಾಮಾನ್ಯವಾಗಿ ಯಾವುದೇ ಒಳ್ಳೆ  ಕೆಲಸವನ್ನು ಮಾಡಿದರೆ, ಅಕ್ಷಯವಾಗಿ ಪರಿಣಮಿಸುವುದು. ಈ ದಿವಸ ಜೀವನದ ಹೊಸ ಉದ್ಯೋಗಗಳನ್ನು ಪ್ರಾರಂಭಿಸುವುದು ಶುಭಕರ. ಈ ತೃತೀಯ ತಿಥಿಯ ಜೊತೆ ರೋಹಿಣಿ ನಕ್ಷತ್ರವಿದ್ದರೆ, ಮಹಾ ಪುಣ್ಯಕರವೆಂದು ಪುರಾಣದಲ್ಲಿದೆ.

ಪಂಚಾಂಗದಲ್ಲಿ ಅಕ್ಷಯ ತೃತೀಯ 
ಅಕ್ಷಯ ತೃತೀಯದಂದು  ಸೂರ್ಯ ಮತ್ತು ಚಂದ್ರರು ಏಕಕಾಲದಲ್ಲಿ ತಮ್ಮ ತಮ್ಮ ಶಕ್ತಿಯುತಸ್ಥಾನ - ಉಚ್ಚರಾಶಿಯಲ್ಲಿ (ಸೂರ್ಯ - ಮೇಷರಾಶಿಯಲ್ಲಿ ಮತ್ತು ಚಂದ್ರ - ವೃಶಭಾರಾಶಿಯಲ್ಲಿ) ಇರುವದರಿಂದ ಎಲ್ಲಾ ಶುಭ ಕಾರ್ಯಗಳಿಗೆ ಅತ್ಯಂತ ಪ್ರಶಸ್ತವಾಗಿರುತ್ತದೆ. ಸೂರ್ಯನು  ಆತ್ಮ ಮತ್ತು ದೇಹ ಪ್ರತಿಬಿಂಬಿಸಿದರೆ, ಚಂದ್ರನು  ಮನಸ್ಸುಮತ್ತು ಬುಧ್ಧಿ ಮೇಲೆ ಪ್ರಭಾವ ಬೀರುತ್ತಾನೆ. ಈ ರೀತಿಯಾಗಿ  ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಪಡೆಯುವ ದಿನ ಎಂದು ಹೇಳುವರು.

ಅಕ್ಷಯ ತೃತೀಯ ಹಬ್ಬದ ದಿನವನ್ನ ಹೇಗೆ ಲೆಕ್ಕ ಹಾಕುತ್ತಾರೆ.
ಈ ಹಬ್ಬವನ್ನ ಚಂದ್ರ ಮತ್ತು ಸೂರ್ಯ ಇಬ್ಬರೂ ತಮ್ಮ ತಮ್ಮ ಉಚ್ಚ ರಾಶಿಯಲ್ಲಿ ಇರುವ ದಿನದಂದು ಆಚರಿಸುತ್ತಾರೆ. ಸೂರ್ಯನು ತನ್ನ ಉನ್ನತ ಸ್ತಾನವಾದ ಮೇಶರಾಶಿಯಲ್ಲಿ - ಅಂದರೆ ಸೌರಮಾನ ಲೆಕ್ಕದ ಮೇಷ ಮಾಸದಲ್ಲಿ - ಪೂರ್ತಿ 30 ದಿನಗಳು ಇರುತ್ತಾನೆ. ಸೂರ್ಯ ತಿಂಗಳಿಗೊಮ್ಮೆ ರಾಶಿ ಬದಲಾಯಿಸಿದರೆ, ಚಂದ್ರ ದಿನಕ್ಕೊಮ್ಮೆ ನಕ್ಷತ್ರ ಬದಲಾಯಿಸುತ್ತಾನೆ (ಅಂದಾಜು ಎರಡೂವರೆ ದಿನಕ್ಕೊಂದು ರಾಶಿ). ಹಾಗಾಗಿ ಈ ಮೇಷ ಮಾಸದ ಯಾವ ದಿನದಂದು ಚಂದ್ರ ತನ್ನ ಉಚ್ಚ ಸ್ತಾನದಲ್ಲಿ ಇರುತ್ತಾನೋ ಅಂದೇ ಈ ಅಕ್ಷಯ ತೃತೀಯ. ಚಾಂದ್ರಮಾನ ಲೆಕ್ಕದ ಮೂಲಕ ನೋಡಿದರೆ ಈ ದಿನ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನ ಆಗಿರುತ್ತದೆ. 




ಪುರಾಣ ಪುಣ್ಯ ಕಥೆಗಳಲ್ಲಿ ಅಕ್ಷಯ ತೃತೀಯದ ವಿಶೇಷತೆ:
  • ಈ ದಿನ ಹಲವು  ಮಹತ್ಕಾರ್ಯಗಳು ಶುರುವಾದ ದಿನ 
    • ಕೃತಯುಗ (ಸತ್ಯ ಯುಗ) ಶುರುವಾದ ದಿನ ಎಂದು ಹೇಳಲಾಗುತ್ತದೆ.
    • ವೇದವ್ಯಾಸರು ಗಣಪತಿ ಆಶೀರ್ವಾದ ಪಡೆದು  ಮಹಾಭಾರತ ಬರೆಯಲು ಪ್ರಾರಂಭಿಸಿದ ದಿನ.
    • ಗಂಗಾ ಮಾತೆ ಕೈಲಾಸದಿಂದ ಭೂಮಿಗೆ ಇಳಿದ ದಿನ ಎಂದು ಹೇಳಲಾಗುತ್ತದೆ.
  • ಈ ದಿನ ಹಲವು ಮಹಾತ್ಮರು ಹುಟ್ಟಿದ ದಿನ 
    • ಜಗಜ್ಯೋತಿ ಬಸವಣ್ಣ ಹುಟ್ಟಿದ ದಿನ.
    • ಬಲರಾಮ ಜಯಂತಿ ಅನ್ನೂ ಇಂದು ಆಚರಿಸಲಾಗುತ್ತದೆ. 
    • ವಿಷ್ಣು ಪರಶುರಾಮನಾಗಿ ಅವತಾರವೆತ್ತಿದ ದಿನ.  
  • ಇನ್ನೂ ಹಲವು ಮಹತ್ ಘಟನೆಗಳು ಈ ದಿನ ನಡೆದಿವೆ ಎಂದು ಪುರಾಣಗಳು ಹೇಳುತ್ತವೆ 
    •  ಚಾಮುಂಡೇಶ್ವರಿ ರಾಕ್ಷಸರನ್ನು ಸಂಹರಿಸಿದದಿನ.
    • ಪಾಂಡವರು ವನವಾಸದಲ್ಲಿದ್ದಾಗ ಕೃಷ್ಣನ ಆದೇಶದಂತೆ ಸೂರ್ಯನನ್ನು ಪ್ರಾರ್ಥಿಸಿ, ದ್ರೌಪದಿ ಅಕ್ಷಯ ಪಾತ್ರೆಯನ್ನು ಪಡೆದಿದ್ದು ಈ ಅಕ್ಷಯ ತೃತೀಯದ ದಿನವೇ.
    • ಪಾಂಡವರು ತಮ್ಮ ವನವಾಸ, ಅಜ್ಞಾತವಾಸದ ನಂತರ ಶಸ್ತ್ರಾಸ್ತ್ರಗಳನ್ನು ಪುನಃ ಪಡೆದ ದಿನ.
    • ಈ ದಿನ ವಿಷ್ಣು ಮತ್ತು ಲಕ್ಷ್ಮಿ ಗಂಗಾಸ್ನಾನ ಮಾಡಿ, ಗಂಗೆಯನ್ನು ಪುಜಿಸಿದ್ದರೆಂದು. ಅಂದಿನಿಂದ ಗಂಗಾ ಸ್ನಾನ ಮಾಡಿದರೆ ಸಕಲ ದೋಷ ಪರಿಹಾರವಾಗುತ್ತದೆ ಎಂಬ ರೂಢಿ ಬಂದಿತು ಎಂದು ಹೇಳಲಾಗುತ್ತದೆ.
    • ಕೃಷ್ಣನು  ಕುಚೇಲನನ್ನು ಸತ್ಕರಿಸಿದ ಪುಣ್ಯ ದಿನ.
ಈ ಎಲ್ಲ ವಿಶೇಷತೆಗಳು ನಡೆದದ್ದು ಈ ಅಕ್ಷಯ ತೃತೀಯ ದಿನದಂದೇ ಎಂದು ಪುರಾಣಗಳ ಕಥೆಗಳು ಹೇಳುತ್ತವೆ. ಈ ದಿನ ಅಕ್ಷಯ ತೃತೀಯ ಆಚರಿಸಿದವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಆಶಿಸೋಣ. ಎಲ್ಲರ ಸಂಪತ್ತು ಅಕ್ಷಯವಾಗಲಿ. ಎಲ್ಲರಿಗೂ ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು.





ಜ್ಯೋತಿಷ ಶಾಸ್ತ್ರದ ಮೂಲಕ ಅಕ್ಷಯ ತೃತೀಯ:  

ಅಕ್ಷಯ ತೃತೀಯ  ಯಾವ ನಕ್ಷತ್ರದಲ್ಲಿ ಬಂದರೆ ಹೆಚ್ಚು ಶ್ರೇಷ್ಠ ?
ಈ ಹಬ್ಬ 'ತೃತೀಯ ತಿಥಿ' (ತದಿಗೆಯ ದಿನ) ಯಲ್ಲಿ ಮತ್ತು 'ವೃಷಭ ರಾಶಿ'ಯ ದಿನ ಆಚರಣೆ ಮಾಡುತ್ತಾರೆ ಅಂತ ತಿಳೀತು. ಆದರೆ ಈ ವೃಷಭ ರಾಶಿ ಮತ್ತು ತೃತೀಯ ತಿಥಿ ಎರಡೂ ಜೊತೆಯಲ್ಲಿ ಬರುವಾಗ ಅಂದು ಮೂರು ನಕ್ಷತ್ರಗಳಲ್ಲಿ (ಕೃತಿಕಾ, ರೋಹಿಣಿ, ಮೃಗಶಿರ) ಯಾವುದಾದರೊಂದು ಬರುವ ಸಾಧ್ಯತೆ ಇದೆ.  ಅಕ್ಷಯ ತೃತೀಯ, ಶುಕ್ಲ ಪಕ್ಷದ 'ಮೂರನೇ' ದಿನ / 'ತೃತೀಯ ತಿಥಿ' ಯಲ್ಲಿ ಬರುತ್ತೆ ಅಂತ ಹೆಸರೇ ಹೇಳುತ್ತೆ.

ಟಿಪ್ಪಣಿ 1 :  7 ಗ್ರಹಗಳು 360 ಡಿಗ್ರಿ ವೃತ್ತದ ಯಾವ ಯಾವ ಡಿಗ್ರಿ ಯಲ್ಲಿ ಉಚ್ಚರಾಗಿರುತ್ತಾರೆ
  • ಸೂರ್ಯ : ಮೇಷದ 19ನೇ ಡಿಗ್ರಿ (ಅಂದರೆ 18°00' - 18°59')(ಪೂರ್ಣ ವೃತ್ತದ 19ನೆ ಡಿಗ್ರಿ);
  • ಚಂದ್ರ   : ವೃಶಭದ 3ನೇ ಡಿಗ್ರಿ; (ಪೂರ್ಣ ವೃತ್ತದ 33ನೆ ಡಿಗ್ರಿ);
  • ಗುರು    : ಕಟಕ ರಾಶಿಯ 15ನೆ ಡಿಗ್ರಿ; (ಪೂರ್ಣ ವೃತ್ತದ 105ನೆ ಡಿಗ್ರಿ);
  • ಬುಧ    : ಕನ್ಯಾ ರಾಶಿಯ 15ನೆ ಡಿಗ್ರಿ; (ಪೂರ್ಣ ವೃತ್ತದ 165ನೆ ಡಿಗ್ರಿ);
  • ಶನಿ     : ತುಲಾ ರಾಶಿಯ 21ನೆ ಡಿಗ್ರಿ; (ಪೂರ್ಣ ವೃತ್ತದ 201ನೆ ಡಿಗ್ರಿ);
  • ಮಂಗಳ : ಮಕರ ರಾಶಿಯ 28ನೆ ಡಿಗ್ರಿ; (ಪೂರ್ಣ ವೃತ್ತದ 298ನೆ ಡಿಗ್ರಿ);
  • ಶುಕ್ರ    : ಕುಂಭ ರಾಶಿಯ 27ನೆ ಡಿಗ್ರಿ; (ಪೂರ್ಣ ವೃತ್ತದ 327ನೆ ಡಿಗ್ರಿ);

ಟಿಪ್ಪಣಿ 2: ಡಿಗ್ರಿ ಲೆಕ್ಕಾಚಾರ 
  1. ಒಂದು ಪೂರ್ಣ ವೃತ್ತ = 360 ಡಿಗ್ರಿ. 
  2. ಈ 360 ಡಿಗ್ರಿ ವೃತ್ತವನ್ನ 12 (ರಾಶಿಗಳು) ಭಾಗಗಳಾಗಿ ಮಾಡಿದಾಗ ಒಂದೊಂದು ರಾಶಿಗೆ 30 ಡಿಗ್ರಿ ಆಗುತ್ತೆ.
  3. ಈ 360 ಡಿಗ್ರಿ ವೃತ್ತವನ್ನ 27 ನಕ್ಷತ್ರಗಳಿಗೆ ಹಂಚಿದರೆ ಒಂದೊಂದು ನಕ್ಷತ್ರಕ್ಕೆ 13° 20' ಬರುತ್ತೆ. 
  4. 27 ನಕ್ಷತ್ರಗಳನ್ನ 12 ರಾಶಿಗಳಿಗೆ ಹಂಚಿದರೆ ಒಂದೊಂದು ರಾಶಿಗೆ ಎರಡೂವರೆ ನಕ್ಷತ್ರಗಳು ಬರುತ್ತವೆ.
  5. ಒಂದು ನಕ್ಷತ್ರದಲ್ಲಿ ನಾಲ್ಕು ಪಾದಗಳಿರುತ್ತವೆ ಹಾಗಾಗಿ ಒಂದೊಂದು ಪಾದ 3° 20' ಜಾಗವನ್ನಾಕ್ರಮಿಸುತ್ತೆ.
  6. ಒಂದು ರಾಶಿಗೆ ಎರಡೂವರೆ ನಕ್ಷತ್ರಗಳಾದ್ದರಿಂದ ಮತ್ತು ಒಂದು ನಕ್ಷತ್ರಕ್ಕೆ 4 ಪಾದಗಳಾದ್ದರಿಂದ ಒಂದು ರಾಶಿಗೆ 10 ಪಾದಗಳು. ಇದು 13° 20' ಆಗುತ್ತೆ .    
ಉದಾಹರಣೆ:   
ಮೇಷರಾಶಿಯಲ್ಲಿ ನ 10 ಪಾದ (ಎರಡೂವರೆ ನಕ್ಷತ್ರ) ಗಳು = 4 ಅಶ್ವಿನಿ  + 4 ಭರಣಿ + 2 ಕೃತ್ತಿಕಾ = 4*3° 20' + 4*3° 20'+ 2*3° 20' = 30ಡಿಗ್ರಿ

ಮೇಲಿನ ಉದಾಹರಣೆಯಲ್ಲಿ ಹೇಳಿದಂತೆ, ಮೇಷ ರಾಶಿಯಲ್ಲಿ ಅಶ್ವಿನಿ ನಕ್ಷತ್ರ, ಭರಣಿ ನಕ್ಷತ್ರ ಮತ್ತು ಕೃತಿಕಾದ ಮೊದಲ ಎರಡು ಪಾದಗಳು ಬರುತ್ತವೆ. ವೃಶಭ ರಾಶಿಯಲ್ಲಿ ಕೃತಿಕಾ ನಕ್ಷತ್ರ ದ ಮೂರು ಮತ್ತು ನಾಲ್ಕನೇ ಪಾದಗಳು ಮತ್ತು ರೋಹಿಣಿ, ಮೃಗಶಿರ ನಕ್ಷತ್ರಗಳು ಬರುತ್ತವೆ. ನಾವು ಮಾತಿನಲ್ಲಿ ಸೂರ್ಯ ಮೇಷರಾಶಿಯಲ್ಲಿ ಉಚ್ಚನಾಗಿರುತ್ತಾನೆ ಅಂತ ಹೇಳಿದರೂ,  ಇನ್ನೂ ಆಳಕ್ಕಿಳಿದು ನೋಡಿದರೆ ಈ ಸೂರ್ಯ ಮೇಷ ರಾಶಿಯ ಭರಣಿ  ನಕ್ಷತ್ರ (13° 20' ರಿಂದ 26° 40') ದಲ್ಲಿ  ಮಾತ್ರ ನಿಜವಾಗಿ ಉಚ್ಚ (19 ಡಿಗ್ರಿ - ಭರಣಿ ೩ನೆ ಪಾದ)  ನಾಗಿರುತ್ತಾನೆ ಅಂತ ತಿಳಿಯುತ್ತೆ.

ಸರಳೀಕರಿಸಿ ನಾವು ಚಂದ್ರನು ವೃಶಭರಾಶಿಯಲ್ಲಿ ಉಚ್ಚನಾಗಿರುತ್ತಾನೆ ಅಂತ ಹೇಳಿದರೂ, ಸರಿಯಾಗಿ ಲೆಕ್ಕ ಹಾಕಿದರೆ ಈ ಚಂದ್ರ ವೃಷಭ ರಾಶಿಯ ಕೃತಿಕಾ ನಕ್ಷತ್ರದ 3ನೇ ಪಾದದಲ್ಲಿ ತನ್ನ ನಿಜ ಉಚ್ಚ ಸ್ತಾನದಲ್ಲಿರುತ್ತಾನೆ. ಹಾಗಾಗಿ ನಮ್ಮ ಕೆಲ ಪುರಾಣಗಳಲ್ಲೂ ಕೃತಿಕ ನಕ್ಷತ್ರದಲ್ಲಿ ಬಂದ ಅಕ್ಷಯ ತೃತೀಯ ಹಬ್ಬ ಅತಿ ವಿಶೇಷ ಎನ್ನುತ್ತಾರೆ.

ಇನ್ನೊಂದು ಪುರಾಣ ಕತೆಯ ಮೂಲಕ ಯೋಚನೆ ಮಾಡೋದಾದರೆ, ಚಂದ್ರನಿಗೆ 27 ಜನ  ( ಇವೇ 27 ನಕ್ಷತ್ರಗಳು) ಹೆಂಡತಿಯರು ಅನ್ನುತ್ತಾರೆ. ಚಂದ್ರ ತನ್ನ ಪ್ರತಿ ಹೆಂಡತಿಯ ಜೊತೆ ಒಂದೊಂದು ದಿನ ಇರುತ್ತಾನೆ ಎನ್ನುವ ಕತೆ ಇದು. ಈ 27 ಹೆಂಡತಿಯರಲ್ಲಿ ರೋಹಿಣಿ ಚಂದ್ರನಿಗೆ ಪ್ರಿಯವಾದ ಹೆಂಡತಿ ಅಂತೆ. ಹಾಗಾಗಿ ಕೆಲ ಕತೆಗಳು ರೋಹಿಣಿ ನಕ್ಷತ್ರದ ದಿನ ಬಂದ (ಅಂದರೆ ಚಂದ್ರ ರೋಹಿಣಿ ನಕ್ಷತ್ರದಲ್ಲಿದ್ದಾಗ)  ಅಕ್ಷಯ ತೃತೀಯ ಶ್ರೇಷ್ಠ ಅನ್ನುವ ನಂಬಿಕೆ ಹೊಂದಿದ್ದಾರೆ. ಸೋಮವಾರ ಚಂದ್ರನ ವಾರವಾದ್ದರಿಂದ, ಈ ತದಿಗೆಯಂದು ರೋಹಿಣಿ ನಕ್ಷತ್ರವಿದ್ದು ಸೋಮವಾರವಾಗಿದ್ದರೆ ಇನ್ನೂ ಹೆಚ್ಚು ಶ್ರೇಷ್ಠ ಅನ್ನುವ ನಂಬಿಕೆ ಇದೆ.                

(ಚಿತ್ರಗಳು;ಗೂಗಲ್ಲಿನಿಂದ)