Wednesday, 16 December 2015

ಬೈಕ್ ಟ್ಯಾಕ್ಸಿ ಏನಿದು???? ,,,,,,,,

ಬೈಕ್ ಟ್ಯಾಕ್ಸಿ ಏನಿದು???? ,,,,,,,

ಟ್ರಾಫಿಕ್... ಟ್ರಾಫಿಕ್.... ಟ್ರಾಫಿಕ್ ,,, ಕರ್ನಾಟಕದಲ್ಲಿ ಯಾವ ಗವರ್ನಮೆಂಟ್ ಬಂದ್ರು ಅಸ್ಟೇ,,,ಬಿದ್ರೂ ಅಸ್ಟೆ,,, ,,ಗೌರ್ನಮೆಂಟ್ಗಳು  ಎಸ್ಟೆ ರೋಡ್ ಅಗಲ ಮಾಡಿಸಲಿ ,ಫ್ಲ್ಯೋವೆರ್ ಮಾಡಿಸಲಿ,ಮೆಟ್ರೋ ಟ್ರೈನ್ ಬಿಡಲಿ ರೆಡ್ ಬೋರ್ಡ್ ಬಸ್ ಬಿಡಲಿ, ಪುಷ್ಪಕ್ ಬಸ್ಸ ಬಿಡಲಿ ,,,ಅದಕ್ಕೆ ತಕ್ಕಂತೆ ನಮ್ಮ ಬೆಂಗಳೂರಿನ ಜನ ಸಂಖ್ಯೆ ,ಅವ್ರ ವಾನಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಇರುತ್ತದೆ.ಟ್ರಾಫಿಕ್ ಸಮಸ್ಯೆ ಬೆನ್ನಿಗೆ ಬಿದ್ದ ಬೇತಾಳವೇ ಸರಿ.ನಮ್ಮ ಸಚಿವರಾದ ಪರಮೇಶ್ವರ್ ರವರು  ಪ್ಲಾನ್ ಮಾಡಿದಾರಂತೆ ಡೆಲ್ಲಿಯಾ ರೀತಿ ಬೆಸ ಸಂಖ್ಯೆ, ಸರಿ ಸಂಖ್ಯಾ  ವಾಹನ ಸಂಚಾರ ರೂಲ್ಸ್ ತರಬೇಕಂತ ,,,ಇದು ಬೆಂಗಳೂರಿನ  ಜನವರ ಹತ್ತಿರ ನಡೆಯೋ ಮಾತೆ,,,,ಅವ್ರು ಬೆಸ ಸಂಖ್ಯೆದು ಒಂದು ,ಸರಿ ಸಂಖ್ಯೆದು ಒಂದು ಅಂತ,ಒಂದು ಮನೆಗೆ  ಎರಡು ಗಾಡಿಗಳನ್ನು  ಇಟ್ಟುಕೊಂಡುಬಿಡುತ್ತಾರೆ ಅಸ್ಟೆ.

ಬ್ಯಾಂಗಲೋರ್ ನಲ್ಲಿ ಎಸ್ಟೆ ಒಳ್ಳೆಯ ಕೆಲಸವಿರಲಿ ,ಎಸ್ಟೆ ಸಂಬಳ ಬರುತ್ತಿರಲಿ ಅವರು ಟ್ರಾಫಿಕ್ ಜಾಮ್ ಅನ್ನೂ ನರಕ ಅನುಭವಿಸಿರುತ್ತಾರೆ.ಮಳೆ ಜೋರಾಗಿ ಬಂದರಂತೂ,,,ರವ ರವ ನರಕ .ನರಕ ಎಲ್ಲಿ ಅಂದರೆ  ಬೆಂಗಳೂರಿನ ರೋಡ್ ಗಳಲ್ಲೇ ಎನ್ನುವುದು ಬೆಂಗಳೂರಿಗರ ಅಭಿಪ್ರಾಯ.ಆಫೀಸ್ ನಲ್ಲಿ ಕೆಲಸ ಮಾಡಿ ಸುಸ್ತಾಗುತ್ತೋ ಇಲ್ವೋ ನನ್ಗೊಂತು ಗೊತ್ತಿಲ್ಲ, ಅದ್ರ್ರೆ ಟ್ರಾಫಿಕ್ ನಲ್ಲಿ ಮಾತ್ರ ತಲೆ ನೋವು, ಮೈ ಕೈ ನೋವು, ನಿದ್ದೆ ,ಸುಸ್ತು ,ಕಿರಿಕಿರಿ ಎಲ್ಲ ಆಗುತ್ತದೆ. ಪಾಪ ಅವ್ರ ಮುಖ ನೋಡಿಯೇ ಅಯ್ಯೋ ಪಾಪ ಅನ್ನಿಸುತ್ತಿರುತ್ತದೆ.ಆಫೀಸ್ ಗಳಲ್ಲಿ ಕ್ಯಾಬ್, ಬಸ್, ಫೆಸಿಲಿಟಿ ಇರುವವರಿಗೆ ಸೀಟ್ ಸಿಕ್ಕು ಕುಳಿತುಕೊಂಡು ಬರಬಹುದು .ಆದರೆ ಆ ಅನುಕೂಲ ಇಲ್ಲದ ಜನರ ಪಾಡು!!!!!!!! ? ಇಂಥ ಸಮಯದಲ್ಲಿ ಆಟೋ ನಲ್ಲಿ ಹೋಗೋಣ ಎನಿಸಿದರೆ ,,,ಆಟೋ ಡ್ರೈವರ್ ಗಳು ಇದೆಒಳ್ಳೇ ಸಮಯ ಅಂತ ಬಾಯಿಗೆ ಬಂದ ರೇಟ್ ಹೇಳ್ತಾರೆ.ಇಲ್ಲಾoದ್ರೆ ಮೀಟರ್ ಮೇಲೆ ಅಸ್ಟು ಕೊಡಿ, ಇಷ್ಟು ಕೊಡಿ ಅಂತ ಡಿಮ್ಯಾಂಡ್ ಮಾಡೋಕೆ ಶುರು ಮಾಡ್ತಾರೆ.


ಅಯ್ಯೋ ,,,,ಕಾದು,ಕಾದು,,,ಸಾಕಾತು,,,,ಇನ್ನೂ ಎಸ್ಟೋತ್ತು ಕಾಯೋದು,,? ಈ ರೋಡ್ ನಲ್ಲಿ ಯಾವ ಆಟೋನೂ  ಬರ್ತಯಿಲ್ಲ.ಟ್ಯಾಕ್ಸಿ ನು ಸಿಗ್ತಿಲ್ಲ,,,,,ಅಂತ ನಮ್ಮ ಗೊಣಗಾಟಗಳು, ಚಿಂತೆಗಳು ಕಡಿಮೆಯಾಗಲಿವೆ.ಇದಕ್ಕೊಂದು ಪರಿಹಾರ ಬೆಂಗಳೂರಿಗೆ ಬಂದಿದೆ. ಇದು ಎಷ್ಟು ಜನರಿಗೆ ಗೊತ್ತೋ, ಗೊತ್ತಿಲ್ಲವೋ ನನಗೆ ಗೊತ್ತಿಲ್ಲ. ಆದ್ರೆ ನನಗೆ ಸಿಕ್ಕಿದ ಕೆಲವೊಂದು ಮಾಹಿತಿಗಳನ್ನ ನಾನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ .

ಇಸ್ಟೆಲ್ಲಾ ನಾನು ಯಾಕೆ ಹೇಳ್ತಿದೀನಿ ಅಂದ್ರೆ,,,,,, ನಿಮಗಿದು ಗೊತ್ತ ?ಬೈಕ್ ಟ್ಯಾಕ್ಸಿ ಬೆಂಗಳೂರಿಗೆ ಬಂದು 2 ತಿಂಗಳಾಯಿತು. ಕಳೆದ ಒಂದು ತಿಂಗಳಿಂದ ಇದರ ಗಾಳಿ  ಜಾಸ್ತಿಯಾಗುತ್ತಿದೆ.   ನೀವು ನಿಮ್ಮ ಮನೆಗೆ ಬೇಗ ತಲುಪಬೇಕೆ? ನೀವು ಹೇಳಿದ ಸಮಯಕ್ಕೆ ಸರಿಯಾಗಿ ಬೈಕ್ ನಿಮ್ಮ  ಮುಂದೆ ಬಂದು ನಿಲ್ಲುತ್ತದೆ. ನೀವು ಹೇಳಿದ ಜಾಗಕ್ಕೆ ನೀವು ಹೇಳಿದ ಸಮಯಕ್ಕೆ ಸರಿಯಾಗಿ ನಿಮ್ಮನ್ನು ತಲುಪಿಸುತ್ತದೆ.!!!!!! ಏನು ಆಶ್ಚರ್ಯ ವಾಯಿತೇ? ಇದಕ್ಕೆ  RTO  ಮತ್ತು ಸಂಚಾರಿ ಪೋಲಿಸ್ರಿಂದ  ಗ್ರೀನ್ ಸಿಗ್ನಲ್ ಕೂಡ  ಸಿಕ್ಕಿದೆ.

ಸಧ್ಯಕ್ಕೆ ಗಂಡಸರಿಗೆ ಮಾತ್ರ ಈ ಸೌಲಭ್ಯ  ಸಿಕ್ಕಿದೆ. ಮುಂದೆ ಮಹಿಳೆಯರಿಗೂ ಈ ಸೌಲಭ್ಯ ಸಿಗುವ ಸೂಚನೆಗಳು ಕಂಡುಬರುತ್ತಿವೆ. ಈಗ ಸಧ್ಯಕ್ಕೆ ಕೆಲವು ಏರಿಯಾಗಳಲ್ಲಿ ಮಾತ್ರ ಲಭ್ಯವಿದೆ. ಹೈ ಟ್ರಾಫಿಕ್ ಏರಿಯಗಳಾದ  BTM ಲೇಯೌಟ್, ಕೋರಮಂಗಲ, ಮಾರತ್ತಹಳ್ಳಿ, ವೈಟ್ ಫೀಲ್ಡ್ ಗಳಲ್ಲಿ ಮಾಡುತ್ತಿದ್ದಾರೆ.   ಮುಂದೆ ನಗರದ ಎಲ್ಲ ಬಡಾವಣೆಗಳಲ್ಲು ಈ ಸೌಲಭ್ಯ ಸಿಗುವ ಸಾದ್ಯತೆಗಳಿವೆ. ಸಧ್ಯಕ್ಕೆ ಇದರ ಸೇವೆ ಬೆಳಿಗ್ಗೆ 8:೦೦ ರಿಂದ ರಾತ್ರಿ 10:೦೦ ರವರೆಗೆ ಸಿಗಲಿದೆ.

ಬೈಕ್ ಟ್ಯಾಕ್ಸಿ ಬಗ್ಗೆ  ನನಗನಿಸಿದ ಮೈನಸ್ ಪಾಯಿಂಟ್ಸ್:--
ಕಾರ್ ಬಸ್ ಗಳಿಗೆ ಹೋಲಿಸಿ ನೋಡಿದಾಗ ಬೈಕ್ ಅಸ್ಟು ಸೇಫ್ಟಿ ಅಂತ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕಾರ್, ಬಸ್, ಆಟೋ ಗಳಲ್ಲಿ ಸೇಫ್ಟಿ ಜಾಸ್ತಿ. ಅಲ್ಲದೆ ಮಕ್ಕಳ ಚಾಸ್ಟೆ ಜಾಸ್ತಿ ಮತ್ತು ಸ್ಕೂಲ್ ಮುಗಿದ ನಂತರ ನಿದ್ದೆ  ಜಾಸ್ತಿ ಇಂಥ ಸಮಯಗಳಲ್ಲಿ ಮತ್ತು  ವಯಸ್ಸಾದವರಿಗೆ, ರೋಗಿಗಳಿಗೆ, ಆರಾಮಾಗಿ  ಕುಳಿತುಕೊಳ್ಳಲು  ಆಗುವುದಿಲ್ಲ. ಕೆಲವೊಂದು ಡ್ರೆಸ್ ಗಳನ್ನು ಹಾಕಿಕೊಂಡು ಬೈಕ್ ಮೇಲೆ ಹೆಣ್ಣುಮಕ್ಕಳು ಕುಳಿತು ಕೊಳ್ಳಲು ಕಷ್ಟ ಎನಿಸಬಹುದು. ಉದಾಹರಣೆಗೆ ಸೀರೆ. ಬೈಕ್ ಡ್ರೈವ್ ಮಾಡುವ ವ್ಯಕ್ತಿ ಹುಡುಗಿಯಾದರೆ ಓಕೆ , ಹುಡುಗನಾದರೆ? ಹುಡುಗಿ ಅಪರಿಚಿತನ  ಬೈಕ್ ಟ್ಯಾಕ್ಸಿ  ಹತ್ತಿ ಹೋದರೆ?,  ಅದನ್ನ ಅರಗಿಸಿಕೊಳ್ಳುವಸ್ಟು ವಿಶಾಲ ಮನೋಭಾವ ನಮ್ಮಲ್ಲಿನ್ನೂ ಇಲ್ಲ ಎನ್ನುವುದು. ಮದ್ಯಪಾನ ಮಾಡುವವರಿಗೆ ಇದು ಎಂದು ಒಳ್ಳೆಯದಲ್ಲ.

ಬೈಕ್ ಟ್ಯಾಕ್ಸಿ ಬಗೆಗೆ  ನನಗನಿಸಿದ  ಪ್ಲಸ್  ಪಾಯಿಂಟ್ಸ್ :-
ಪ್ರತಿ 5 ಕಿ.ಮೀ. ಗೆ 20 ರೂ. ನಂತರ 7 ರೂ. ಕಿ.ಮೀ.ಇರುತ್ತದೆ  ಫಾಸ್ಟ್ ಆಗಿ ಚೀಪ್ ಆಗಿ ತಲುಪಬಹುದು. ಇಲ್ಲಿ ಮಾಮೂಲಿ ಬೈಕ್ ಗಳಿವೆ, ಎಕ್ಸ್ಟ್ರಾ ಒಂದು ಹೆಲ್ಮೆಟ್ ಹೋಲ್ಡರ್ ಇರುತ್ತದೆ. ಜಾಕೆಟ್ ಹಾಕೋಕೆ  ಒಂದು ಬ್ಯಾಗ್,  ಫಸ್ಟ್ ಏಡ್ ಕಿಟ್ ಇರುತ್ತೆ. ಬೈಕ್ ಹೊರಡುವ ಮುಂಚೆ ಇಂಡಿಕೇಟರ್, ಬ್ರೇಕ್ ಗಳು ಹೇಗಿವೆ? ಅಂತ ಪೂರ್ತಿ ಬೈಕ್  ಪರೀಕ್ಷೆ  ಮಾಡಿ ರೋಡ್ ಮೇಲೆ  ಬಿಡಲಾಗುತ್ತದೆ. ಬೈಕ್ ಟ್ಯಾಕ್ಸಿ ಡ್ರೈವರ್ಸ ಗಳನ್ನು, ಟ್ರೈನ್ಡ್ಅಪ್ಮಾಡಿರುತ್ತಾರೆ, ಕಸ್ಟಮರ್ಸ್ ಗೆ ಕಂಫರ್ಟ್ ಆಗುವಂತೆ ತರಬೇತಿ ಕೊಟ್ಟಿರುತ್ತಾರೆ. ಅಲ್ಲದೆ ಬೈಕ್ ಲೈಸನ್ಸ್, ಡ್ರೈವರ್ ನ   DL, ಕಸ್ಟಮರ್ ಜೊತೆ ಹೇಗೆ ನಡೆದುಕೊಳ್ಳಬೇಕು , ಕಸ್ಟಮರ್ ಗೆ ಸೇಫ್ಟಿ ಫೀಲ್ ಕೊಡಬೇಕು. ಓವರ್ ಟೇಕ್ ಮಾಡಬಾರದು, ೪೦ ಕಿ.ಮೀ./ ಸ್ಪೀಡ್ ನಲ್ಲೆ  ಬೈಕ್ ಓಡಿಸಬೇಕು. ಈ ರೀತಿ  ಟ್ರೇನಿಂಗ  ಕೊಟ್ಟಿರುತ್ತಾರೆ. ಮುಂದಿನ ದಿನಗಳಲ್ಲಿ   ಜನ ಒಪ್ಪಿಕೊಳ್ಳುವ ಸಾದ್ಯತೆ ಇದೆ.
  • ಹೇಯ್ ಟ್ಯಾಕ್ಸಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು. 2 ರೀತಿಯಲ್ಲಿವೆ   1.ಪಿಕ್ ಮಿ ನೌ,  2. ಪಿಕ್ ಮೈ ಪಾರ್ಸೆಲ್ ಥರ ಆಯ್ಕೆಗಳಿವೆ, ಬುಕ್  ಮಾಡಿದ ತಕ್ಷಣ ನಿಮಗೆ ರೈಡರ್ಸ್ದನಿಂದ  ಕಾಲ್ ಬರುತ್ತೆ. ನೀವು ಎಲ್ಲಿದಿರಂತ ಹೇಳಿದರೆ ತಕ್ಷಣ ಬರುತ್ತಾರೆ.
  • ಮೊಬೈಲ್ ನಲ್ಲಿ ಹೇಯ್ ಟ್ಯಾಕ್ಸಿ ಅಪ್ಲಿಕೇಶನ್ - HeyTaxi India - Rider - ಡೌನ್ಲೋಡ್ ಮಾಡಿಕೊಂಡು, ಅವರಿಗೆ ನಿಮ್ಮ ಮಾಹಿತಿ ಕೊಟ್ಟರೆ ಕ್ಷಣದಲ್ಲೇ ನಿಮ್ಮ ಮುಂದೆ ಬೈಕ್ ಟ್ಯಾಕ್ಸಿ ಬಂದು ನಿಲ್ಲುತ್ತದೆ.
  • ಪಿಕ್ ಮೈ ಪಾರ್ಸೆಲ್  ನಲ್ಲಿ -- ಆಫೀಸ್ ಫೈಲ್, ಲಂಚ್ ಬಾಕ್ಸ್, ಮರೆತು ಆಫೀಸ್ ಗೆ ಹೋದರೆ , ಎನಾದರೂ ಗಿಫ್ಟ್ ಕಲಳಿಸಬೇಕಂದ್ರೆ, ಸರ್ಪ್ರೈಸ್ ಗಿಫ್ಟ್ ಕಳಿಸಬೇಕಂದ್ರೆ ಇದು ಉಪಯೋಗಕ್ಕೆ ಬರುತ್ತದೆ.

Tuesday, 15 December 2015

ಫೆಂಗ್ ಶುಯಿ ಲಾಂಚನಗಳಲ್ಲಿ ಪ್ರಾಣಿ - ಪಕ್ಷಿಗಳು

ನಾನು ನನ್ನ ಹಿಂದಿನ ಬರವಣಿಗೆಯಲ್ಲಿ ಫೆಂಗ್ ಶುಯಿ ಎಂದರೇನು ?ಮತ್ತು, ಫೆಂಗ್ ಶುಯಿಯಲ್ಲಿ ದೇವರಂತೆ ಪೂಜ್ಯ ಭಾವನೆಯಿಂದ ನೋಡುವ ಆರಾಧಿಸುವ ಫುಕ್ ,ಲುಕ್, ಸಾಯು, ನಗುವ ಬುದ್ಧ ಮತ್ತು ಕೆಲವು ಸಂಕೇತಗಳ  ಬಗ್ಗೆ ಬರೆದಿದ್ದೆ.ಹಾಗೆ ಮಿಂಬಲೆಯಲ್ಲಿ ಫೆಂಗ್ ಶುಯಿ ಬಗ್ಗೆ ದೊಡ್ಡ ಗ್ರಂಥ ಬರೆಯುವಸ್ಟು ವಿಚಾರಗಳಿವೆ.ಆದರೆ ನನಗೆ ಸದ್ಯಕ್ಕೆ ಕುತೂಹಲ ಹುಟ್ಟಿಸಿದ ವಿಷಯವೆಂದರೆ ಪರಿಸರದಲ್ಲಿನ ಅನೇಕ ಪ್ರಾಣಿ ,ಪಕ್ಷಿಗಳನ್ನು ವಾಸ್ತುವಿನ ಅಂಶಗಳಾಗಿ ಪರಿಗಣನೆಗೆ ತೆಗೆದುಕೊಂಡಿರುವುದು.

ಫೆಂಗ್ ಶುಯಿ ಪ್ರಾಚೀನ  ಚೀನಾ ಇತಿಹಾಸದ ಕೊಡುಗೆ.ಮುಖ್ಯವಾಗಿ ಪ್ರತಿ ದಿನ ಸೂರ್ಯ ಹುಟ್ಟಿ ಮುಳುಗುವವರೆಗೂ ನಮ್ಮೆಲ್ಲರ   ಊಟ,ಸ್ನಾನ,ನಿದ್ದೆ,ವಿಶ್ರಾಂತಿ,ಭೋಗ,ಕೂಟ,,ಶೌಚ,ವೃತ್ತಿ,ಹವ್ಯಾಸ,ಪ್ರಯಾಣ,ಅಳು,ನಗು,ಹೊಸಬರ ಪರಿಚಯ,ಜಗಳ ಮುಂತಾದವು ಎಲ್ಲಾ ಇದ್ದೇ  ಇರುತ್ತವೆ.ಸ್ವಾಭಾವಿಕವಾಗಿ ಒಬ್ಬ ವ್ಯಕ್ತಿ ದಿನಂದಿನ ದಿನಗಳಲ್ಲಿ ಈ ಎಲ್ಲ ಕೆಲಸಗಳು ಶಿಸ್ತಿನಿಂದ  ನಡೆದು ನೆಮ್ಮದಿಯಿಂದಿರಲು ಇಚ್ಚಿಸುತ್ತಾನೆ.ಇದಕ್ಕೆ ಸರಿಯಾಗಿ ಸರಿಯಾದ ವ್ಯವಸ್ತಿತವಾದ ಶಿಸ್ತಿನಿಂದ ,ಆಯಾ ಕಾಲಕ್ಕೆ ಆಯಾ ಕೆಲಸಗಳು ಜರುಗಲೇಬೇಕು ಎಂಬ ನಿಯಮವನ್ನು , ಕಾರ್ಯರೂಪಕ್ಕೆ ತಂದು  ನೆಮ್ಮದಿ ಜೀವನ ರುಪಿಸಿಕೊಳ್ಳುತ್ತಾನೆ.ಇದೇ ಆಧಾರದ ಮೇಲೆ ಫೆಂಗ್ ಶುಯಿಯು ಕೆಲವು ಸಂಕೇತಗಳನ್ನು ರೂಪಿಸಿದೆ.ಅದೇ ಪ್ರಕಾರ ವಸ್ತುಗಳನ್ನು ತಯಾರಿಸಲಾಗುತ್ತದೆ.ಅಂಥಹ ವಸ್ತುಗಳನ್ನೇ ತಂದು ಮನೆಯಲ್ಲಿರಿಸಬೇಕು. ಏನು ಅಂದ್ರೆ  ಶುಯಿ ಶಾಸ್ತ್ರ ನಿರ್ದೇಶಿಸಿದ ದಿಕ್ಕು ಮತ್ತು ಸ್ಥಾನಗಳಲ್ಲಿ ಮಾತ್ರ ಇರಿಸಬೇಕು.ವಿಶೇಷತೆ ಇರುವುದು ಇಲ್ಲೇ ,ಆ ಸಂಕೇತ ಅಥವಾ ಪ್ರತಿಮೆಗಳು ಪ್ರಾಣಿ ಮತ್ತು ಪಕ್ಷಿಗಳ ರುಪದಲ್ಲಿರುತ್ತವೆ. ಅವು ಶೋಕೇಸ್ ವಸ್ತುಗಳಲ್ಲ .ಹಾಗೆ ಅವುಗಳನ್ನು ಹೂವು ಪತ್ರೆ ವಿಭೂತಿ ಕುಂಕುಮ ಬಳಿದು ಪೂಜೆ ಮಾಡುವಂತೆಯೂ ಇಲ್ಲ.ಮನಸ್ಸಿನಲ್ಲಿಯೇ ಅವುಗಳ ಇರುವಿಕೆಯನ್ನು ಆರಾಧಿಸಬೇಕು.

ಈ ವಿಚಾರ ನಮಗೆ ತಿಲಿದುಬರುವುದು ಪ್ರಾಚೀನ ಚೀನೀಯರು ಪ್ರಕೃತಿ ಪ್ರಿಯರು ಮತ್ತು ಪ್ರಾಣಿ ಪಕ್ಷಿಗಳ ಬಗ್ಗೆ ಅವುಗಳ ಇರುವಿಕೆಯ ಮತ್ತು ಅವುಗಳ ಗುಣ,ಲಕ್ಷಣ,ಚಲನ,ವಲನ ಗಳ ಆಧಾರದ ಮೇಲೆ ಅವು ಮಾನವನ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿ ,ಆಳವಾಗಿ ಆಲೋಚಿಸಿ ಆ ಪ್ರಾಣಿ ಪಕ್ಷಿಗಳು ಅಥವಾ ಪ್ರತಿಮೆಗಳು ಮಾನವನ ಜೀವನಕ್ಕೆ ಹೇಗೆ ಪ್ರಭಾವ ಬೀರುತ್ತವೆ ಎಂಬುದರ ಆಧಾರದ ಮೇಲೆ ಒಳ್ಳೆಯದು ಮತ್ತು ಕೆಟ್ಟದು ಎಂದು ನಿರ್ಧಾರಕ್ಕೆ ಬಂದಿದ್ದಾರೆ ಎಂದು  ತಿಳಿಯುತ್ತದೆ.ಹಗೆ ಮಿಂಬಲೆಯಲ್ಲಿ ಫೆಂಗ್ ಶುಯಿ ವಾಸ್ತುವಿನಲ್ಲಿ  ನನಗೆ ಸಿಕ್ಕ ಕೆಲವೊಂದು ಪ್ರಾಣಿ ,ಪಕ್ಷಿಗಳ  ನಿಜರೂಪದ ಮತ್ತು ಪ್ರತಿಮೆಗಳ ಪ್ರಭಾವ ಹೇಗೆ ಇದೆ ಎಂಬುದನ್ನು ಈ ಕೆಳಗೆ ತಿಳಿಸಿದ್ದೇನೆ.


1 ). ಆನೆಗಳು ---ಆನೆಯು ಫಲವತ್ತತೆ, ವಂಶಾಭಿವೃಧಿ,ಅದ್ರುಸ್ಟದ ಸಂಕೇತ .ಮಕ್ಕಳಿಲ್ಲದವರು ಹಾಗು ಮಗು ಬೇಕೆನ್ನುವ ದಂಪತಿಗಳು ತಮ್ಮ ಮಲಗುವ ಹಾಸಿಗೆಯ ಮಗ್ಗುಲಿಗೆ ಒಂದು ಜೊತೆ ಆನೆ ವಿಗ್ರಹ ಗಳನ್ನು ಇರಿಸಿಕೊಳ್ಳಬೇಕು.ಮನೆಯ ಮುಖ್ಯ ಬಾಗಿಲಿನ ಒಳಗೆ ಇಲ್ಲವೆ ಹೊರಗೆ ಒಂದು ಜೊತೆ ಆನೆಗಳನ್ನಿರಿಸುವುದು ,ಜೊತೆಗೆ ಆನೆಗಳಹಿಂದೆ ಬೆಲೆಬಾಳುವ ವಸ್ತುಗಳನ್ನಿರಿಸಿದ ಅಲಂಕೃತ ಬುಟ್ಟಿಯನ್ನಿರಿಸಿದರೆ ಶುಭ, ಸಂಪತ್ತು ಮತ್ತು ಐಶ್ವರ್ಯ ಜೊತೆಯಲ್ಲಿ ಅದೃಸ್ಟ ಬರುವುದು ಎಂದು ನಂಬಲಾಗುತ್ತದೆ.

2).ಮೀನುಗಳು ----ಮೀನುಗಳು ಸಂಪತ್ತು ವೃಧಿಗೆ ,ಶುಭ ಶಕುನಕ್ಕೆ ಸಂಕೇತವಾಗಿವೆ.ಫೆಂಗ್ ಶುಯಿ ಮನೆಯಲ್ಲಿ  ಅಕ್ವೇರಿಯುಂ ಇಟ್ಟುಕೊಳ್ಳಲು ಹೇಳುತ್ತದೆ. ಮೀನುಗಳನ್ನು  ಒಂದು ಗಾಜಿನ ಪಾತ್ರೆಯಲ್ಲಿಡಬಹುದು.ಅವುಗಳಲ್ಲಿ 8 ಕೆಂಪು ಅಥವಾ ಹೊಂಬಣ್ಣದ ಮೀನುಗಳು ಹಾಗೂ ಒಂದು ಕಪ್ಪು ಬಣ್ಣದ ಮೀನು ಇರಬೇಕು.ಯಾವುದಾದರೊಂದು ಗೋಲ್ಡ್ ಫಿಷ್ ಸತ್ತರೆ ಆಜಾಗದಲ್ಲಿ ಇನ್ನೊoದು ಅದೇ ಬಣ್ಣದ ಮೀನನ್ನು ತಂದು ಅಕ್ವೀರಿಯುಂ ಸೇರಿಸಬೇಕು.ಗೋಲ್ಡ್ ಫಿಶ್ ಸತ್ತರೆ ಅದು ತನ್ನೊಂದಿಗೆ ಮನೆಯ ದುರದ್ರುಸ್ತವನ್ನು ತನ್ನೊದಿಗೆ ಒಯ್ದು ಬಿಡುತ್ತದೆ.ಹೃದಯ ತೊಂದರೆ ಯಿರುವವರು ಈ ಮೀನುಗಳ ಆಟ ನೋಡುತ್ತಾ ಕಾಲ ಕಳೆದರೆ ರೋಗ ಬಾಧೆ ಕಡಿಮೆಯಗುವದು ಎಂದು ಹೇಳಲಾಗುತ್ತದೆ.
ಅಕ್ವೇರಿಯಂ ಇಡಲು ನಡುಮನೆ ಒಳ್ಳೆಯ ಜಾಗ ,ಪೂರ್ವ ,ಉತ್ತರ,ಆಗ್ನೀಯ ದಿಕ್ಕುಗಳಲ್ಲಿರಿಸಬಹುದು.ನೆನಪಿರಲಿ ನೀರು ಯಾವಾಗಲು ಶುಚಿಯಗಿರುವಂತೆ ನೋಡಿಕೊಳ್ಳಬೇಕು.

ಎರೆಡು ಮೀನುಗಳ ಸಂಕೇತ -----
ಇದು ಗಂಡ ಹೆಂಡತಿಯರ ಪ್ರೀತಿಯ ಸಂಕೇತ ಕುಟುಂಬದಲ್ಲಿ ಸಾಮರಸ್ಯ ಹಿತ ಹಾಗು ಒಗ್ಗಟ್ಟನ್ನು ಇದು ಸೂಚಿಸುತ್ತದೆ.ಇದು ಶುಭಕಾರಿ ಚಿ (ಚೈತನ್ಯ ) ಯನ್ನು ಹೆಚ್ಚಿಸುತ್ತದೆ.ಇದು ರಕ್ಷಣಾ ಸಂಕೇತವೂ ಹೌದು.ಇದು ಇದ್ದ ಕಡೆ ವಿವಾಹ ವಿಚೇದನವು ಸಂಭವಿಸುವುದಿಲ್ಲ.ಚೀನೀಯರು ಅದ್ರುಸ್ತ ಹೆಚ್ಚಿಸಿಕೊಳ್ಳಲು ,ಸಿರಿ  ಸಂಪತ್ತು ಹೆಚ್ಚಾಗಿಸಲು ಬಗೆ ಬಗೆಯ ಮೀನುಗಳನ್ನು ಸಾಕುತ್ತಾರೆ.

ಡ್ರ್ಯಾಗನ್ ಫಿಶ್ -----

ಇದನ್ನು ರಕ್ಕಸ ಮೀನು ,(ಆರೋವಾನ) ,ಫೆಂಗ್ ಶುಯಿ ಮೀನು ಎಂದು ಕರೆಯುತ್ತಾರೆ.ಜೀವಂತ ಡ್ರ್ಯಾಗನ್ ಫಿಶ್ ನ್ನು ಅಕ್ವೀರಿಯುಂ ನಲ್ಲಿ ತಂದಿಟ್ಟುಕೊಳ್ಳಬೇಕು.ಈ ಮೀನು ಚಟುವಟಿಕೆಯಿಂದ ಆಡುತ್ತಿರಬೇಕು ಮೀನಿನ ಚರ್ಮ,ಹುರುಪೆಗಳು ನಸುಗೆಂಪು,ಇಲ್ಲವೇ ಹೊನ್ನಿನ ,ಬೆಳ್ಳಿಯ ಬಣ್ಣದಿಂದ  ಹೊಳೆಯುತ್ತಿರಬೇಕು.ಈ ಮೀನು ಮಂಕಾದರೆ ಪರಿಣಾಮಕಾರಿಯಲ್ಲ.ಈ ರಕ್ಕಸ ಮೀನು ಲಭ್ಯವಿಲ್ಲದಿದ್ದಲ್ಲಿ ಅದರ ಮಾದರಿಯ ಚಿತ್ರ ಇಲ್ಲವೇ ವಿಗ್ರಹವನ್ನಿರಿಸಬಹುದು.ಮನೆಗಳ ಅಥವಾ ಕಛೇರಿಗಳ ಉತ್ತರ,ಪೂರ್ವ,ಅಥವಾ ಆಗ್ನೀಯ ಭಾಗಗಳಲ್ಲಿ ಈ ಡ್ರ್ಯಾಗನ್ ಫಿಶ್  ಇರಿಸಬಹುದು.

ಕುದುರೆ -----------

ಇದು ಘನತೆ ,ಗಾಭೀರ್ಯ,ಉದಾತ್ತತೆಯ ಸಂಕೇತ .ಯಾಂಗ್ ನ ಸ್ವರೂಪ .ಕಪ್ಪ ಕಾಣಿಕೆಗಳನ್ನು ಹೊತ್ತು ಬರುವ ಬಿಳಿ ಕುದುರೆ ತುಂಬಾ ಶ್ರೇಸ್ಟವಾದುದು,ಶುಭಾಕರವಾದುದು.ಒಬ್ಬ ವ್ಯಕ್ತಿಯ ಮಾರ್ಗದರ್ಶನದಲ್ಲಿ ಅದು ನಡೆದುಕೊಂಡು ಹೋಗುವನ್ತಿರಬೇಕು.ಸವಾರರಿರಬಾರದು,ಕುದುರೆ ಬಣ್ಣ ಬಿಳಿಯದೇ ಇರಬೇಕು.ಕುದುರೆ ಪ್ರತಿಮೆ ಅಥಾ ಪೋಸ್ಟರ್ ನ್ನು ಮನೆ ಅಥವಾ ಕಚೇರಿಯ ದಕ್ಷಿಣ ಭಾಗದಲ್ಲಿರಿಸಬಹುದು.

ಮುಂಗುಸಿ----------
ಮುಂಗುಸಿ ಸಿರಿ,ಸಂಪಾದನೆಯ ಹಾಗು ದುರದ್ರುಸ್ತವನ್ನು ಹೊರಹಾಕಿ,ಅದ್ರುಸ್ತ ಹೆಚ್ಚಿಸುವದು.ಚಿನ್ನದ ಗಟ್ಟಿಗಳಮೇಲೆ ಕುಳಿತಿರುವ ಹಾಗೆ,ಮತ್ತು ಇದು ತನ್ನ ಬಾಯಿಂದ ಒಡವೆ ,ರತ್ನ ಶಿಲೆಗಳನ್ನು ತರುವ ರೀತಿ ವಿಗ್ರಹಗಲಿರುತ್ತವ್ವೆ.ಈ ಪ್ರತಿಮೆಯು ಮನೆಯಲ್ಲಿ ಆಭರಣಗಳು ,ಐಶ್ವರ್ಯ ವನ್ನು ಹೆಚ್ಚಿಸಲು ಬೇಕಾದ ಚೈತನ್ಯ ನೀಡಲು ವಾಸದ ಕೋಣೆಯಲ್ಲೂ ಇದನ್ನು ಪ್ರದರ್ಶಿಸಬಹುದು.

ಫುನಾಯಿಗಳು----ಫೆಂಗ್ ಶುಯಿ ಫುನಾಯಿಗಳು ಸಿಂಹಗಳಂತೆ ಕಾಣುತ್ತವೆ.ಮನೆಯೊಳಗೇ ದುರುದ್ದೇಶದಿಂದ ಬರುವ ಜನಾರನ್ನು ತಡೆಯಲು ,ಕೆಟ್ಟದ್ದನ್ನು ತೊಡೆದುಹಾಕಲು,ಮನೆಯನ್ನು ಋಣಾತ್ಮಕ ಶಕ್ತಿಗಳಿಂದ ಕಾಪಾಡಲು,ಈ ಪ್ರತಿಮೆಗಳನ್ನು ಮನೆಯ ಹೆಬ್ಬಾಗಿಲ ಹೊರಗಡೆ ಇಡುವುದು ಸೂಕ್ತ.ಎತ್ತರದ ಜಾಗದಲ್ಲಿ ಫುನಾಯಿಗಳ ಜೋಡಿ ಇರಿಸಬೇಕು.

ಮೂರು ಕಾಲು ಕಪ್ಪೆ----
ಮೂರೂ ಕಾಲು ಕಪ್ಪೆ ತುಂಬಾ ಅದ್ರುಸ್ತ ದಾಯಕ ,ಅದು ತನ್ನ ಬಾಯಲ್ಲಿ ಒಂದು ಅಥವಾ ಮೂರು ನಾಣ್ಯಗಳನ್ನು ಇಟ್ಟುಕೊಂಡಿರುತ್ತದೆ.ಇದನ್ನು ಮುಖ್ಯ ದ್ವಾರದ ಬಳಿ ಕಪ್ಪೆಯು ಮನೆಯೊಳಗೇ ನೋಡುತ್ತಿರುವಂತೆ ಇರಿಸಬೇಕು.ಈ ಕಪ್ಪೆಯನ್ನು ಆದಸ್ತು ಶುಚಿಯಗಿದಬೇಕು .ಇದರ ಮೇಲೆ ಧೂಳು ಇರದಂತೆ ಮೆತ್ತನೆಯ ಬಟ್ಟೆಯಿಂದ ಒರೆಸುತ್ತಿರಬೇಕು.

ಲೋಹದ ಆಮೆ-----ಇದು ದೀರ್ಘಯುಶ್ಯದ ,ದೀರ್ಘ ಅವಕಾಶಗಳ,ದೀರ್ಘ ಮುನ್ನಡೆಯ ಸಂಕೇತ.ಇದು ನಾವು ಜೀವನದಲ್ಲಿ ಮುಂದೆ ಬರಲು ಹೆಚ್ಚೆಚ್ಚು ಅವಕಾಶಗಳನ್ನು ಕಲ್ಪಿಸುತ್ತದೆ.ಲೋಹದಿಂದ ತಯಾರಿಸಿರುವ ಆಮೆಯ ಪ್ರತಿಮೆಯನ್ನು ನೀರು ತುಂಬಿದ ಪಾತ್ರೆ ಯಲ್ಲಿರಿಸಿ ಮನೆಯ ಉತ್ತರ ಭಾಗದಲ್ಲಿರಿಸಿ.

ಡ್ರ್ಯಾಗನ್ ಆಮೆ (ರಕ್ಕಸ ಆಮೆ)------ಇದು ಆಮೆ ಮತ್ತು ಡ್ರಾಗನ್ ನ ಸಂಯೋಗವಾಗಿದೆ.ಇದು ಆಮೆಯ ಶರೀರ,ಡ್ರ್ಯಾಗನ್ ತಲೆಯನ್ನು ಹೊಂದಿರುತ್ತದೆ.ಇದು ನಾಣ್ಯಗಳ ಗಟ್ಟಿಗಳ ಹಾಸಿಗೆಯ ಮೇಲೆ ಕುಳಿತಿದ್ದರೆ ಸಿರಿ ಸಂರುಧ್ಧಿ ಯನ್ನು ಸೂಚಿಸುತ್ತದೆ.ಬಾಯಲ್ಲಿರುವ ನಾಣ್ಯ ಹಣದ ಹರಿವು ಹೆಚ್ಚುವುದನ್ನು ಸೂಚಿಸುತ್ತದೆ.ಮೇಲೆ ಕೂತಿರುವ ಮರಿ ಆಮೆಯು ವಂಶಜರ ಅದ್ರುಸ್ತದ ಸಂಕೇತ .ಈ ಪ್ರತಿಮೆಯನ್ನು ಮನೆ ಅಥವಾ ಕಛೇರಿಗಳ ಪೂರ್ವ ಅಥವಾ ಉತ್ತರ ಭಾಗದಲ್ಲಿದಬೇಕು .

ಹಸು ಮತ್ತು ಗೋವು-----


ಫೆಂಗ್ ಶುಯಿ ಯಲ್ಲಿ ಹಸು ಮತ್ತು ಗೋವುಗಳ ಪ್ರತಿಮೆಯು ಅದ್ರುಸ್ಟದಾಯಕ.ಆಗ್ನೇಯ ದಿಕ್ಕಿನಲ್ಲಿ  ಈ  ಚಿತ್ರ ,ಪ್ರತಿಮೆ ಇದಬಹುದು.ನಾಣ್ಯಗಳು ಮತ್ತು ಚಿನ್ನದ ಗಟ್ಟಿಗಳ ಮೇಲೆ ಕುಳಿತಿರುವ ಹಸುವಿನ ಪ್ರತಿಮೆಯನ್ನು  ಮನೆ ಅಥವಾ ಕಛೇರಿ ಎಲ್ಲಿಯಾದರೂ ಇಡಿ, ಇದು ಒಳ್ಳೆಯ ಅದ್ರುಸ್ತ ವನ್ನು ಕೊಡುತ್ತದೆ .

ಜೋಡಿ ಸಿಂಹಗಳು-------

ಫೆಂಗ್ ಶುಯಿ ಪ್ರಕಾರ ಸಿಂಹಗಳು ಮನೆ ,ಮತ್ತಿತರ ಸ್ಥಳಗಳನ್ನು ರಕ್ಷಿಸುವ ,ಕೆಟ್ಟ ಶಕ್ತಿಗಳಿಂದ ನಮ್ಮನ್ನು ಕಾಪಾಡುವ ,ರಕ್ಷಿಸುವ ಕೆಲಸ ಮಾಡುತ್ತವೆ.ಇವುಗಳನ್ನು ಮನೆಯಲ್ಲಿಯೂ ಅಲ್ಲದೆ ದೇವಾಲಯಗಳು,ಅರಮನೆಗಳಲ್ಲಿಯು ಇಡುತ್ತಾರೆ.ಬಾಗಿಲಿನ ಎರೆಡೂ ಪಕ್ಕಗಳಲ್ಲಿ ಜೋಡಿ ಸಿಂಹಗಳನ್ನಿರಿಸಬಹುದು .ಸಾಮಾನ್ಯವಾಗಿ ಸಿಂಹಗಳ ಮುಂದಿನ ಪಾದಗಳು ನೆಲದ ಮೇಲಿರುವಂತೆ ತೋರಿಸಲಾಗುತ್ತದೆ.ಪಿಂಗಾಣಿಯಿಂದ ಮಾಡಿದ ವಿಗ್ರಹಗಳನ್ನು ಮನೆಯ ಮುಂದೆಯೂ ಇರಿಸಿಕೊಳಬಹುದು.

ಕೆಲೂನ್-------

ಈ ವಿಗ್ರಹ ನೋಡಲು ಸಿಂಹದ ತಲೆಯನ್ನು ಹೊಂದಿರುತ್ತದೆ,ಕೊಂಬುಗಳಿರುತ್ತವೆ,ಸೊಂಟದ ಭಾಗ ಜಿಂಕೆಯ ಶರೀರ  ಹೋಲುತ್ತದೆ.ಮೇಕೆ ಕಾಲುಗಳಿರುತ್ತವೆ ,ಇದನ್ನು ಕಿಮಿರ ಎಂದು ಕರೆಯುವರು.ಇದರ ಬೆನ್ನಿನ ಮೇಲೆ 3 ನಾಣ್ಯಗಳನ್ನಿರಿಸಿರುತ್ತಾರೆ.ಮುಖ್ಯ ದ್ವಾರದ ಎಡ ಭಾಗದಲ್ಲಿ ಇದನ್ನು ಇರಿಸಲಾಗುತ್ತದೆ.ಕೆಟ್ಟ ಶಕ್ತಿಗಳು ಮನೆ ಪ್ರವೀಶಿಸದಂತೆ ತಡೆಯುತ್ತದೆ.ಕೆಲೂನ್ ನ ಮೂಲ ರೂಪದ ರೀತಿ ಇನ್ನೊಂದು ರೂಪವಿದೆ.ಈ ಎರೆಡು ವಿಗ್ರಹಗಳನ್ನು ಜೋತೆಗಿರಿಸಿ ಪೂಜಿಸುವುದು ಪುಣ್ಯ ಬರುವದು ಎಂದು ನಂಬಲಾಗುತ್ತದೆ.ಈ ಎರಡನೆಯ ತದ್ರೂಪಿ ಕೆಲೂನ್ ವಾಸ್ತು ದೋಷ ಪರಿಹರಿಸುತ್ತದೆ.

ಚಿಲಿನ್--------- 

ಇದು ಡ್ರ್ಯಾಗನ್ ತಲೆಯನ್ನು ,ಕುದುರೆ ಶರೀರವನ್ನು ಹೊಂದಿದೆ.ಇದು ಹಳದಿ ನದಿಯಿಂದ ಎದ್ದುಬಂದದ್ದು ,ಬೆನ್ನಿನ ಮೇಲೆ ನಿಗೂಢ ಮಚ್ಚೆ ಹೊಂದಿರುತ್ತದೆ ಎಂದು ಹೇಳಲಾಗುತ್ತದೆ..ಇದು ಸಮೃದ್ಧಿ ,ಯಶಸ್ಸು,ದೀರ್ಘಾಯಸ್ಸು,ಮಾದರಿಮಕ್ಕಳು ಇವುಗಳ ಸಂಕೇತವೇ ಚಿಲಿನ್.ಮನೆಯ ಹೆಬ್ಬಾಗಿಲಿನ ಸಮೀಪ ಇದನ್ನಿರಿಸಬಹುದು.ಇದು ವೃತ್ತಿಯಲ್ಲಿ ಬಡ್ತಿ,ಸೇನೆಯಲ್ಲಿರುವವರಿಗೆ ಶುಭದಾಯಕ.  ಈ ಪ್ರತಿಮೆಯನ್ನು ಹಿತ್ತಳೆಯಿಂದ  ಮಾಡಿರಬೇಕು.ಜೋಡಿಯಾಗಿ ಈ ಪ್ರತಿಮೆ ಇರಿಸಬೇಕು.

ಡ್ರ್ಯಾಗನ್------
ಇದು ಕಲ್ಪನೆಯ ಪ್ರಾಣಿ  ,ಯಾಂಗ್ ಶಕ್ತಿಯ ಸಂಕೇತ .ಮನೆ ಅಥವಾ ಕಚೇರಿಯಲ್ಲಿ ಪೂರ್ವ ಭಾಗದಲ್ಲಿರಿಸಬಹುದು.ಮನೆಯಲ್ಲಿ ಚೈತನ್ಯ ತುಂಬಲು ಈ ಪ್ರತಿಮೆ ಸಹಕಾರಿಯಾಗಿದೆ.ಪೂರ್ವದ ವಸ್ತು ಮರ ಮರದ ಡ್ರ್ಯಾಗನ್ ತುಂಬಾ ಒಳ್ಳೆಯದು.ಪಿಂಗಾಣಿ ,ಹರಲಿನಲ್ಲಿಯು ಇಡಬಹುದು.ಲೋಹದ ಡ್ರ್ಯಾಗನ್ ಅಪಾಯಕಾರಿ.

ಫೀನಿಕ್ಸ್-ಮತ್ತು ಡ್ರ್ಯಾಗನ್------

ಫೀನಿಕ್ಸ್-ಒಂದು ಕಾಲ್ಪನಿಕ ಪಕ್ಷಿ.ಬಯಕೆ ಈಡೇರಿಸುವ ಅದ್ರುಸ್ತದ ಸಂಕೇತ.ಇದು ಅವಕಾಶಗಳನ್ನು,ಕೀರ್ತಿಯನ್ನು ,ಹಾಗು ಮಾನ್ಯತೆಯನ್ನು ತರುವುದು.ಮನೆ ಇಲ್ಲವೇ ಕಚೇರಿಯಲ್ಲಿ ದಕ್ಷಿಣ ಮೂಲೆಯಲ್ಲಿ ಫೀನಿಕ್ಸ್ ಪ್ರತಿಮೆ ಅಥವಾ ಡ್ರ್ಯಾಗನ್ ಚಿತ್ರ ಇಡಬಹುದು. ಫೀನಿಕ್ಸ್-ಮತ್ತು ಡ್ರ್ಯಾಗನ್ ಒಟ್ಟಿಗೆ ಇದ್ದರೆ  ತುಂಬಾ ಸಮರ್ಥಶಾಲಿ  ಎಂದು ಫೆಂಗ್ ಶುಯಿ ಹೇಳುತ್ತದೆ .ಇದು ಯಶಸ್ವಿ ವಿವಾಹ ,ಸಮೃಧಿ,ಮತ್ತು ಬಹು ಸಂತಾನ,ವಿವಾಹಿಕ ಬಂಧನ ಗಟ್ಟಿಯಾಗುತ್ತದೆ,ಧನ ,ಧಾನ್ಯ ,ಅದ್ರುಸ್ತ ಹೆಚ್ಚುತ್ತದೆ.ಡ್ರ್ಯಾಗನ್ –ಪುರುಷ(ಯಾಂಗ್) ಹಾಗು ಫಲವತ್ತತೆಯ ಸಂಕೇತವಾದರೆ ,ಫೀನಿಕ್ಸ್ ಸ್ತ್ರೀ(ಯಿನ್) ಸೌಂದರ್ಯದ ಸಂಕೇತ.ಡ್ರ್ಯಾಗನ್ ಕುಟುಂಬದ ಯಜಮಾನ.
ಈ ಜೋಡಿಯಾ ಸಂಕೇತವನ್ನು ಕುಟುಂಬದ ಮುಖ್ಯಸ್ತನಿಗೆ ಅದ್ರುಸ್ಟಹೆಚ್ಚಿಸುವ ಸಲುವಾಗಿ ಮನೆಯ ವಾಯುವ್ಯ(NW)ಭಾಗದಲ್ಲಿರಿಸಬೇಕು.ಮನೆ ಒಡತಿಯ ಅದ್ರುಸ್ತ ಹೆಚ್ಚಿಸಲು ಮನೆಯ ನೈಋತ್ಯ (SW)ಭಾಗದಲ್ಲಿರಿಸಬೇಕು.ಅದೇ ಪೂರ್ವ ಭಾಗದಲ್ಲಿರಿಸಿದರೆ ಮನೆಯ ಎಲ್ಲ ಕುಟುಂಬದ ಸದಸ್ಯರು ಆರೋಗ್ಯದಿಂದಿರುತ್ತಾರೆ.ದಕ್ಷಿಣ ದಲ್ಲಿರಿಸಿದರೆ ಅವಕಾಶಗಳು ಮತ್ತು ಮಾನ್ಯತೆಗಳು ,ಗೌರವಾದರಗಳು ಒದಗಿ ಬರುತ್ತವೆ.

ಜೋಡಿ ಕೊಕ್ಕರೆಗಳು------

ಕೊಕ್ಕರೆ ದೀರ್ಘಯುಷ್ಯ ,ಅಮರತ್ವದ ಸಂಕೇತ,ಮನೆಯಲ್ಲಿ ಶಾಂತಿಯುತ ವಾತಾವರಣ ತಂದುಕೊಡುವ ವಸ್ತುವಾಗಿ ನೋಡಲಾಗುತ್ತದೆ. ಫೆಂಗ್ ಶುಯಿ  ಕೊಕ್ಕರೆಗಳ ಬಣ್ಣ ಕಪ್ಪು,ಬಿಳಿ,ಹಳದಿ,ಮತ್ತು ನೀಲಿ  ಇರುತ್ತವೆ.ಕಪ್ಪು ಕೊಕ್ಕರೆಯು ದೀರ್ಘಾಯುವಿನ ಸಂಕೇತ ಎಂದು ಗುರುತಿಸಿಕೊಂಡಿದೆ.

ಹಾರುವ ಕೊಕ್ಕರೆ --------

ಈ ಪ್ರತಿಮೆಯು ರೆಕ್ಕೆ ಬೀಸಿ ಹಾರಿಹೋಗುವಂತೆ ಇರುತ್ತದೆ.ಆಕಾಶವನ್ನು ದಿಟ್ಟಿಸಿ ನೋಡುತ್ತಿರುತ್ತದೆ.ಇದು ಬುಧಿವನ್ತಿಕೆಯ ಸಂಕೇತವು ಹೌದು. ಬಿಳಿಬಣ್ಣದ  ಒಂಟಿ ಕೊಕ್ಕರೆಯನ್ನಿರಿಸಿದರೆ ಅದು ಕುಟುಂಬ ಸದಸ್ಯರ ನಡುವೆ ಹಿತ  ಕಾಪಾಡುವದು,ಜೋಡಿ ಬಿಳಿ ಕೊಕ್ಕರೆಗಳನ್ನಿರಿಸಿದರೆ ಮನೆ ಯಜಮಾನ ಯಜಮಾನಿಯ ನಡುವೆ ಒಗ್ಗಟ್ಟು ಇದ್ದು ಕುಟುಂಬ ಸಲೀಸಾಗಿ ಸಾಗುತ್ತದೆ.ಈ ಕೊಕ್ಕರೆ ಪ್ರತಿಮೆಗಳನ್ನು ಅಡುಗೆ ಮನೆ ಅಥವಾ ಶೌಚ ಗಳಲ್ಲಿರಿಸಬಾರದು.

ಲವ್ ಬರ್ಡ್ಸ್-(ಮ್ಯಾಂಡರಿನ್ )-------
ಇವು ಪ್ರೀತಿ ಪ್ರಣಯಗಳ ಸಂಕೇತ.ನವ ವಿವಾಹಿತ ಜೋಡಿಗಳಲ್ಲಿ ಪ್ರೀತಿ ಹೆಚ್ಚಿಸಲು ನೈರುತ್ಯ ದಿಕ್ಕಿನಲ್ಲಿ ಲವ್ ಬರ್ಡ್ಸ್ ಪಂಜರಗಳನ್ನಿರಿಸುತ್ತಾರೆ.ಇವು  ಬೆಸ ಸಂಖೆಯಲ್ಲಿರಬಾರದು , ಸರಿ ಸಂಖ್ಯೆ ಗಳಲ್ಲಿರಬೇಕು .ಒಂದು ಗಂಡು ಮತ್ತೊಂದು ಹೆಣ್ಣು ಜೋಡಿಗಳಲ್ಲಿ ಇರುವಂತೆ ನೋಡಿಕೊಳ್ಳಬೇಕು.ಈ ಮ್ಯಾಂಡರಿನ್  ಜೋಡಿಗಳಲ್ಲದೆ ಪ್ರಣಯ ಪಕ್ಷಿಗಳ ಪೋಸ್ಟರ್ ಗಳನ್ನು ಕೂಡ ಹಾಕಬಹುದಾಗಿದೆ.ಅವಿವಾಹಿತರಿಗೆ ಇದರ ಪ್ರಭಾವದಿಂದ ಮದುವೆ ಯೋಗ ಬರುವದು.Saturday, 12 December 2015

ಫೆಂಗ್ ಶುಯಿ ಬಗ್ಗೆ ಒಂದಿಷ್ಟು!

ಗಣೇಶ ಕುಂಜ್, ಕುಂಜ್ ಸಾಯಿ....  ಇವೆಲ್ಲಾ ಹಿಂದೆ ನಾನು ನೋಡಿದ ಮನೆ ಹೆಸರುಗಳು. ಆಗೆಲ್ಲ ಈ ಹೆಸರುಗಳು ವಿಚಿತ್ರವೆನಿಸಿದ್ದವು. ಇವು ಕನ್ನಡವೋ ಸಂಸ್ಕೃತವೋ ಅತ್ವ ಚೀನಿ ಹೆಸರೋ ಅಂತ ಗೊತ್ತಾಗ್ತಾ ಇರ್ಲಿಲ್ಲ.  ಅಲ್ಲೊಮ್ಮೆ ಆ ಮನೆಯವರೊಬ್ಬರು ಆಚೆ ನಾಯಿ ಆಡಿಸುತ್ತಿದ್ದರು. ಅವರನ್ನು ನಿಮ್ಮ ಮನೆಗೆ ಯಾಕೆ ಈ ರೀತಿ ಹೆಸರು ಇಟ್ಟಿದ್ದೀರಿ? ಅಂತ ಹೇಗೆ ಕೇಳಲಿ. ಅವ್ರು ನಿಮಿಗ್ಯಾಕೆ ಅಂತ ಕೋಪ ಮಾಡಿಕೊಂಡ್ರೆ? ಆದ್ರೂ ಮನಸ್ಸು ಮಾಡಿ ಕೇಳಿಯೇ ಬಿಟ್ಟಿದ್ದೆ.. ನಿಮ್ಮ ಮನೆಗೆ ಗಣೇಶ ಕುಂಜ್ ಅಂತ ಯಾಕೆ ಹೆಸ್ರು ಇಟ್ಟಿದ್ದೀರಾ ಅಂತ!. ಅವರ ಉತ್ತರ ಹೀಗಿತ್ತು. ಅವರಮನೆಯ ಹಣಕಾಸು ಪರಿಸ್ಥಿತಿ ಚೆನ್ನಾಗಿರಲಿಲ್ಲ ಅವರ ಆಫೀಸಿನಲ್ಲಿ ಅವರ ಗೆಳತಿಯ ಸಲಹೆ ಮೇರೆಗೆ ಫೆಂಗ್ ಶುಯಿ ಅನುಸರಿಸಿದರಂತೆ ಆವಾಗಿನಿಂದ ಅವರ ಪರಿಸ್ಥಿತಿ ಸುಧಾರಿಸಿತಂತೆ. ಆ ವಾಸ್ತುವಿನ ಪ್ರಕಾರ ಮನೆಯ ಹೆಸರು ಬದಲಾಯಿಸಿದರಂತೆ!

ಫೆಂಗ್ಶುಯಿ ಅಂದ್ರೆ ಏನು ಅಂತ ಆಗ ನಂಗೆ ಗೊತ್ತಿರ್ಲಿಲ್ಲ.  ಇದರ ಬಗ್ಗೆ ಸ್ವಲ್ಪ ಮಿಂಬಲೆಯನ್ನ ತಡಕಾಡಿದಾಗ ನನಗೆ ಕಂಡ ಕೆಲ ವಿಷಯಗಳನ್ನ ಇಲ್ಲಿ ಬರೀತಾ ಇದ್ದೀನಿ! 

ಚೀನಾವು ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನ ದೇಶಗಳಲ್ಲಿ ಒಂದು. ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಕೃಷಿ ಪ್ರಧಾನ ದೇಶ. ಚೀನಾದಲ್ಲಿ ಬೌಧ್ಧ ಮತವನ್ನು ಅನುಸರಿಸುವವರೇ ಹೆಚ್ಚು. ಕನ್ ಫ್ಯೂಶಿಯಸ್ ಧರ್ಮ ಅನುಸರಿಸುವವರೂ ಇದ್ದಾರೆ. ಸಾವಿರಾರು ವರ್ಷಗಳ ಇತಿಹಾಸವುಳ್ಳ ಚೀನಾ ಪ್ರಾಚೀನ ನಾಗರೀಕತೆಯ ದೇಶವೂ ಹೌದು. ಚೀನೀಯರು ಆಹಾರ ಸೇವಿಸುವ ವಿಧಾನವೇ ವಿಶೇಷ .ತಾವು ತಿನ್ನುವ ಊಟ ನೋಡಲು ಆಕರ್ಷಕವಾಗಿರಬೇಕು, ಶುಚಿಯಾಗಿ, ಸುಹಾಸನಾಭರಿತವಾಗಿರಬೇಕೆಂದು, ಔಷಧೀಯ ಗುಣಗಳನ್ನು ಹೊಂದಿರಬೇಕು ಹಾಗು ದೇಹದ ಸಮತೋಲನವನ್ನು ಕಾಪಾಡುವಂಥದ್ದಾಗಿರಬೇಕು ಎಂದು ಬಯಸುತ್ತಾರೆ. ಇದಕ್ಕೇ ಇರಬೇಕು ಚೀನೀ ತಾತ,ಅಜ್ಜಿ ವಯಸ್ಸಿನವರು ಹುಡುಗ ಹುಡುಗಿಯರಂತೆ ಕಾಣುವುದು!. ಚೀನಿಯರು ತಮ್ಮ ದೇಶದಲ್ಲೇ ಇರಲಿ, ಹೊರ ದೇಶಗಳಲ್ಲೇ ಇರಲಿ ತಮ್ಮದೇ ಆದ ಆಹಾರ ಪದ್ದತಿಯನ್ನು ಅನುಸರಿಸುತ್ತಾರೆ. ಹಾಗೇ ವಾಸ್ತು ವಿಚಾರದಲ್ಲಿಯೂ ತಮ್ಮದೇ ಆದ ಫೆಂಗ್ ಶುಯಿಯನ್ನು ಆಚರಣೆಯಲ್ಲಿಟ್ಟಿದ್ದಾರೆ. ಚೀನಿಯರ ಯಾವುದೇ ನ್ಯೂಸ್ ಪೇಪರ್ನಲ್ಲಿ ಪ್ರತಿದಿನ ಫೆಂಗ್ ಶುಯಿ ಗೆ ಸಂಭಂದಿಸಿದ ಒಂದಲ್ಲಾ ಒಂದು ಸುದ್ದಿ ಇದ್ದೇ ಇರುತ್ತದೆ. ನಾವುಗಳು ಹೇಗೆ ಮನೆಗಳಲ್ಲಿ ಸಂಪತ್ತು ನೆಮ್ಮದಿ ನೆಲೆಸಲು ಅದೃಷ್ಟಶಾಲಿಗಳಾಗಿ ಬದುಕಲು ವಾಸ್ತು ಶಾಸ್ತ್ರವನ್ನು ನಂಬುತ್ತೇವೆಯೋ ಹಾಗೆ ಚೀನೀಯರು ಫೆಂಗ್ ಶುಯಿ ಯನ್ನು ನಂಬಿದರೆ  ಮತ್ತು ಪಾಲಿಸಿದರೆ ಶುಭ ಫಲ ಕೊಡುತ್ತದೆ ಎಂದು ನ೦ಬುತ್ತಾರೆ.

ಚೀನಾದ ಪುರಾತನ ಶಾಸ್ತ್ರ  ಗ್ರಂಥಗಳ ಆಧಾರಿತವಾದರೂ ವಾಂಗ್ ಚಿ ಮತ್ತಿತರ ಶ್ಹುಂಗ್ ವಂಶದ ವಿದ್ವಾಂಸರಿಂದ (ಕ್ರಿ.ಶ.1126-1278)ರಿಂದ ರೂಪುಗೊಂಡಿರುವಂಥದ್ದು ಎಂದೂ ಹೇಳಲಾಗುತ್ತದೆ.
ಪರಿಸರದೊಂದಿಗೆ ಭಾವನಾತ್ಮಕ ಸಂಬಂಧವನ್ನು ಫೆಂಗ್ ಶುಯಿ  ವ್ಯವಸ್ಥೆ ಆಧರಿಸಿದೆ. ಪ್ರಕೃತಿ ಇಲ್ಲಿ ಉಸಿರಾಡುವ ಸಜೀವಿ ಎಂದು ನಂಬಲಾಗುತ್ತದೆ. ಜಗತ್ತಿನ ಪ್ರತೀ ಅಂಶವೂ ಆತ್ಮ ಸಂಬಂಧಿತವಾದ ಜೀವನವನ್ನು ನಡೆಸುತ್ತದೆ ಎಂದು ನಂಬಲಾಗುತ್ತದೆ.  ಫೆಂಗ್ ಶುಯಿ ವಿದ್ವಾಂಸರ ಪ್ರಕಾರ ಮೂಲದಲ್ಲಿ ಒಂದು ಅಮೂರ್ತ ತತ್ವವಿದ್ದು ಅದೇ ಎಲ್ಲದರ ಇರುವಿಕೆಗೆ ಕಾರಣ ಮತ್ತು ಮೂಲವಾಗಿದೆ.  ಈ ತತ್ವವು ಶುರುವಿನ ಮೊದಲು ಉಸಿರು (ಜೀವವು) ಯಾಂಗ್ (ಪುರುಷ ತತ್ವ)ನ್ನು ನಿಶ್ಚಲ ಅಂದರೆ ವಿಶ್ರಾಂತ ಸ್ಥಿತಿಗೆ ಬಂದಾಗ ಸ್ತ್ರೀ ತತ್ವ (ಯಿನ್ )ನನ್ನು ,ಪಡೆಯಿತು.ಈ ಎರಡು ತತ್ವ ಗಳಿಗೆ ಜೀವ ತುಂಬಿದ ಚೈತನ್ಯ( ಚಿ ) ಅಥವಾ ನಿಸರ್ಗದ ಉಸಿರು ಸಂಚರಿಸಿದಾಗ ಪ್ರಥಮ ಪುರುಷ ಮತ್ತು ಸ್ತ್ರೀ ಗಳನ್ನು ಹುಟ್ಟು ಹಾಕಿತು. ನಂತರ ಇಡೀ ವಿಶ್ವ ಮತ್ತು ಅದರೊಳಗಿನ ಎಲ್ಲವು ಜನಿಸಿದವು .ಇವುಗಳನ್ನು (ಲಿ)ಎಂದು ಕರೆಯಲಾಗುವ ನಿಶ್ಚಿತ ಮತ್ತು ಬದಲಾವಣೆ ಹೊಂದುವ ನಿಯಮಗಳಿಗನುಸಾರವಾಗಿ ಉಂಟಾದವು ಎಂದು ಹೇಳಲಾಗುತ್ತದೆ.

ಫೆಂಗ್ ಶುಯಿ ಎಲ್ಲಾ ನಿಯಮಗಳು ನಿಖರ ಗಣಿತ ತತ್ವಗಳಿಗೆ ಅನುಗುನವಾಗಿ ನಡೆಯುತ್ತವೆ ಎಂಬುದನ್ನು ಪ್ರಾಚೀನ ವಿದ್ವಾಂಸರು ಗಮನಿಸಿದ್ದರು. ಈ ಗಣಿತ ತತ್ವಗಳನ್ನು (ಸೋ)ಎಂದು ಕರೆದರೂ. ಇಲ್ಲಿ ಸಂಖ್ಯಾ ಶಾಸ್ತ್ರವೂ ಇದೆ.ಸಾಮಾನ್ಯವಾಗಿ ಇವು (ಯಂಗ್ )ಎನ್ನುವ ನಿಸರ್ಗದ ಪ್ರಕ್ರಿಯೆ ಹಾಗೂ ಭೌತಿಕ ಜಗತ್ತಿನ ಬಾಹ್ಯ ರೂಪಗಳಲ್ಲಿ ಗೂಢವಾಗಿರುವಂತೆ ತೋರುತ್ತವೆ.ಚಿ  ,ಲಿ,ಸೋ,ಯಂಗ್,ಈ 4 ವಿಭಾಗಗಳೇ ಫೆಂಗ್ ಶುಯಿ ತಾತ್ವಿಕ ವ್ಯವಸ್ತೆಯನ್ನು ರೂಪಿಸಿವೆ .

ಚೆನೀ ತತ್ವ ಶಾಸ್ತ್ರಜ್ಞ ಲವೂತ್ಸೆ ಎಂಬುವವನು (ಯಿನ್ ಮತ್ತು ಯಾಂಗ್) ಎಂಬ ತತ್ವಗಳು ಒಳ್ಳೆಯದು &ಕೆಟ್ಟದು ,ಕತ್ತಲೆ,ಬೆಳಕು ಸಾಮರ್ಥ್ಯ, ದೌರ್ಬಲ್ಯ, ಸ್ತ್ರೀ, ಪುರುಷ ಎಂಬ ದ್ವಂದ್ವ ಬಲಗಳ ಪ್ರಭಾವಕ್ಕೊಳಗಾಗಿ ಮನುಷ್ಯ ಪಾಲಿಸಿಕೊಂಡುಬಂದಿರುವ ಸದಾಚಾರಗಳೇ ಫಲಿತಾಂಶ ನಿರ್ಧರಿಸುತ್ತವೆ ಎಂದಿದ್ದಾನೆ.ಇದಕ್ಕೆ ನಮ್ಮಲ್ಲಿನ ಮಾಡಿದ್ದುಣ್ಣಾ ಮಾರಾಯ ಎಂಬ ಮಾತು  ತುಂಬಾ ಹತ್ತಿರವಿದೆ ಎಂದು ನನಗನ್ನಿಸುತ್


ಯಿನ್ ಯಾಂಗ್ ಬಿಲ್ಲೆ  

ಫೆಂಗ್ ಶುಯಿ ಶಬ್ಧದ ಅರ್ಥ ಗಾಳಿ,ನೀರು .ನಾವುಗಳು ಭೂಮಿಯ ಮೇಲೆ ಕುಟುಂಬದಲ್ಲಿ ಬದುಕು ಸಾಮರಸ್ಯದಿಂದ ಹೇಗೆ ಬದುಕಬೇಕೆಂದು ತಿಳಿಸುವ ನಿಯಮ ಅಥವಾ ಕಲೆಯೇ ಈ ಫೆಂಗ್ ಶುಯಿ.

ನಾವುಗಳು ಭಾರತ ದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಪೂಜಿಸುವಂತೆ ಚೀನಿಯರು ಫುಕ್, ಲುಕ್, ಸಾಯುರನ್ನು ಆರಾಧಿಸುತ್ತಾರೆ.ಆದರೆ ಪೂಜೆ ಪುನಸ್ಕಾರಗಲಿಲ್ಲ.ಸಾಮಾನ್ಯವಾಗಿ ಎಲ್ಲ ಚೀನಿ ಮನೆಗಳಲ್ಲೂ ಈ ಮೂವರ ವಿಗ್ರಹಗಳಿರುತ್ತವೆ. ಅವುಗಳ ಸಾನಿಧ್ಯ ಸಾಂಕೇತಿಕವಸ್ಟೆ ಇದರಿಂದ ಸುಖ,ಸಮೃಧಿ ಮತ್ತು ಭಾಗ್ಯ  ಬರುತ್ತದೆ ಎಂದು ನಂಬುತ್ತಾರೆ.
ಲುಕ್ ಪುಕ್ ಸಾಯು
ಲುಕ್ ಪುಕ್ ಸಾಯು
ಫುಕ್---ಸಮೃದ್ಧಿ ದಯಪಾಲಿಸುವ ದೇವರು.ಇತರ ಎರಡು ವಿಗ್ರಹ ಗಳಿಗಿಂತ ಸ್ವಲ್ಪ ಎತ್ತರ ನಿಲುವು ಎದ್ದು ಕಾಣುತ್ತದೆ.ಈ ವಿಗ್ರಹವನ್ನು ಮಧ್ಯೆ ಇರಿಸಲಾಗುತ್ತದೆ.
ಲುಕ್ ---ಪ್ರಭಾವ ಮತ್ತು ಸಿರಿವಂತಿಕೆಯ ದೈವ ,
ಸಾಯು ---ದೀರ್ಘಾಯುಶ್ಯದ ದೈವ.ಲುಕ್ ಗೆ ಪ್ರಥಮ ಸ್ಥಾನ ,ಸಾಯು ವನ್ನು ಕೊನೆಯಲ್ಲಿ ಇರಿಸಬಹುದು.ಸಾಯುವಿನ ತಲೆ ಗುಂಡಾಗಿರುತ್ತದೆ.ಈ ವಿಗ್ರಹ ಇರಿಸುವ ಜಾಗದ ಹಿಂದೆ ಮುಂದೆ ಶೌಚಾಲಯ,ಕಿಟಕಿ, ಅಡುಗೆಮನೆ ಇರಬಾರದು.ಸಾಯು ಒಬ್ಬ ವಯಸ್ಸಾದ ಮನುಷ್ಯ.ಕೈಯಲ್ಲೊಂದು ದಂಡ ಹಿಡಿದಿರುತ್ತಾನೆ.ಆ ದಂಡಕ್ಕೆ ಒಂದು ಮಾಯಾವಿ ಸೋರೆಕಾಯಿಯನ್ನು ಕಟ್ಟಿರಲಾಗುತ್ತದೆ.ಸಾಯುವನ್ನು ಆರಾಧಿಸುವುದಿಲ್ಲ ಕೇವಲ ಪ್ರದರ್ಶನಕ್ಕೆ ಮಾತ್ರ.ಈ ಮೂರೂ ವಿಗ್ರಹಗಳನ್ನು  ಒಟ್ಟಾಗಿ ಇರಿಸಿದಾಗ ಶುಭ ಫಲಿತಾಂಶಗಳು ಸಿಗುತ್ತವೆ.

ಹೊಲು---
ಹೊಲು
ಇದು ಒಳ್ಳೆಯ ಅದ್ರುಸ್ಟ ದೀರ್ಘಯುಶ್ಯದ ವಿಗ್ರಹ .ಹೊಲು ಇದು ಸೋರೆಕಾಯಿಯ ಆಕಾರ ಹೊಂದಿರುತ್ತದೆ.ಸ್ವರ್ಗ ನರಕಗಳ ಒಗ್ಗೂಡುವಿಕೆಯ ಸಂಕೇತ ಎಂದು ಹೇಳಬಹುದು.ಮೇಲಿನ ಅರ್ಧ ಭಾಗ ಸ್ವರ್ಗ ಕೆಳ ಅರ್ಧ ಭೂಮಿ .ಒಣಗಿದ ಸೋರೆಕಾಯಿಯನ್ನು ಮನೆ ಒಳಗೋ ಅಥವಾ ಹೊರಗೋ ಪ್ರದರ್ಶನಕ್ಕೆ ಇಟ್ಟರೆ ಮನೆ ಸೌಖ್ಯದಿ೦ದಿರುತ್ತದೆ .ಹೊಲುವಿನ ಮಾದರಿಯನ್ನು ಹಿತ್ತಾಳೆ ಯಲ್ಲಿಯೂ ಮಾಡಿಸಿ ಬಳಸಬಹುದು.ಅನಾರೋಗ್ಯದಿಂದಿರುವವರ ಹಾಸಿಗೆಯ ಪಕ್ಕದಲ್ಲಿ ಹೊಲು ಇಟ್ಟರೆ ಬೇಗ ಗುಣಮುಖರಾಗುತ್ತಾರೆ ಎಂಬ ನಂಬಿಕೆಯಿದೆ.

ಕುವಾನ್ ಕುಂಗ್ ---
ಕುವಾನ್ ಕುಂಗ್
ಹೋರಾಟ,ಶ್ರೀಮತಿಕೆಯ ದೇವರು.ಈ ವಿಗ್ರಹ ಅತ್ಯಂತ ಸಮರ್ಥ ಶಕ್ತಿಗಳನ್ನು ಮನೆ ರಕ್ಷಿಸುವ ಸಲುವಾಗಿ ಬರಮಾಡಿಕೊಳ್ಳಲು ಇಡಲಾಗುತ್ತದೆ.ಕುವಾನ್ ಕುಂಗ್ ನಿoತಿರುವ,ಕುಳಿತಿರುವ,ಕುದುರೆ ಏರಿ ಕುಳಿತಿರುವ, ಜೊತೆಯಲ್ಲಿ ಈತನ ಕೈಯಲ್ಲಿ ಎರೆಡು ಮುಖ್ಯ ಆಯುಧಗಲಿರುತ್ತವೆ ದಂಡ ,ಖಡ್ಗ ಇವು ಸರಿಯಾದ ಸ್ಥಾನಗಳಲ್ಲಿರುವ ವಿಗ್ರಹ ಕೊಂಡುಕೊಳ್ಳಬೇಕು.ಮನೆ ಯಜಮಾನನನ್ನು ರಕ್ಷಣೆ ಮಾಡುವದು,ಅವನಿಗೆ ಸಿರಿ ಸಂಪತ್ತು ದೊರೆಯುವಂತೆ ಮಾಡುತ್ತಾನೆ.ಕುವನ್ ಕುಂಗ್ ವಿಗ್ರಹವನ್ನು (NW)ವಾಯುವ್ಯ ಮೂಲೆಯಲ್ಲಿ ಮುಂಬಾಗಿಲಿಗೆ ಅಭಿಮುಖವಾಗಿ, ವಿಗ್ರಹ ಬಾಗಿಲು ಕಾಯುವಂತೆ, ಸ್ವಲ್ಪ ಎತ್ತರವಾಗಿ ಕಾಣುವಂತೆ ಇರಿಸಬೇಕು.ಕಛೇರಿಗಳಲ್ಲಿ ಕುಳಿತುಕೊಳ್ಳುವ ಕುರ್ಚಿಯ ಹಿಂದುಗಡೆ ಇರಿಸಬೇಕು.

ತ್ಸಾಯಿ ಶೆನ್ ಯೆಹ್---
ತ್ಸಾಯಿ ಶೆನ್ ಯೆಹ್
ಚೀನೀಯರು ಈ ದೇವರನ್ನು ಸಿರಿ ಸಂಪದದ ಸಂಕೇತ ಈ ದೇವರು ಎಂದು ನಂಬುತ್ತಾರೆ.ಹುಲಿಯೊಂದರಮೇಲೆ ತ್ಸಾಯಿ ಕುಳಿತಿರುವಂತೆ ಈ ವಿಗ್ರಹ ಗೋಚರಿಸುತ್ತದೆ.ವಾಸದ ಕೋಣೆಯು ಈ ವಿಗ್ರಹವನ್ನಿರಿಸಲು ಪ್ರಾಶಸ್ತ್ಯ ಜಾಗ.ಈ ವಿಗ್ರಹ ಮನೆಯ ಮುಖ್ಯ ಬಾಗಿಲನ್ನು ನೇರವಾಗಿ ಇಲ್ಲವೇ ಕರ್ಣಾರೀತ ನೋಡುವಂತೆ ಇರಿಸಬೇಕು.ಈ ವಿಗ್ರಹ ನೋಡಲು ಭಯ ಹುಟ್ಟಿಸುವoತಿದ್ದರು ಇದು ಕೆಟ್ಟದ್ದನ್ನು ಹೊರಹಾಕಿ ಬಡತನ ತೊಲಗಿಸುತ್ತದೆ.ಸಿರಿ ಒದಗಿ ಬರುತ್ತದೆ. ಕಾಲಕಾಲಕ್ಕೆ ಶಾಂತಿ –ವಿಶ್ರಾಂತಿ ಮನೋಭಾವವನ್ನು ಉಂಟುಮಾಡುತ್ತದೆ .ಈ ವಿಗ್ರಹವನ್ನು ಮಲಗುವ ಕೋಣೆಯಲ್ಲಿಟ್ಟರೆ ಅಶುಭ .

ನಗುವ ಬುದ್ಧ ----–


ನಗುವ ಬುದ್ದ
ಸಂಪತ್ತಿನ ದೇವರು.ಈ ಪ್ರತಿಮೆಯು ಸಂಪತ್ತಿನ ದೇವರು ಎಂದು ಪರಿಗಣಿಸಲಾಗುತ್ತದೆ ಇದು ಮನೆಗೆ  ಸಂರುದ್ಧಿ ಯಶಸ್ಸು, ಆರ್ಥಿಕ ಲಾಭ ಗಳನ್ನು ತಂದುಕೊಡುತ್ತದೆ.ಈ ವಿಗ್ರಹವನ್ನು ಎಲ್ಲಿ ಹೇಗೆ ಇರಿಸಬೇಕೆoಬುದು ಮುಖ್ಯ.ನೆಲಮಟ್ಟದಿಂದ ಎರೆಡುವರೆ ಅಡಿ ಎತ್ತರದಲ್ಲಿ ಮನೆಯ ಮುಖ್ಯ ದ್ವಾರವನ್ನು ನೋಡುವಂತೆ ಇರಿಸಬೇಕು.ಮನೆಯನ್ನು ಪ್ರವೇಶಿಸುವ ಒಳ್ಳೆಯ ಶಕ್ತಿಯನ್ನು ಬುದ್ಧನ ಪ್ರತಿಮೆ ನಗುನಗುತ್ತ ಸ್ವಾಗತಿಸುತ್ತದೆ.ಈ ಶಕ್ತಿ ಕ್ರಿಯಾತ್ಮಕ ಬೆಳವಣಿಗೆಗೆಗೆ ಕಾರಣ ವಾಗುತ್ತದೆ.ನಗುವ ಬುದ್ಧ ನನ್ನು ಮಲಗುವ ಕೋಣೆ ಅಥವಾ ಊಟದ ಕೋಣೆಯಲ್ಲಿ ಇಡಬೇಡಿ.ಈ ದೇವರನ್ನು ಆರಾಧಿಸುವುದಿಲ್ಲ.ಅದರ ಸಾನಿದ್ಯವೇ ಶುಭಕಾರಕ.ನಗುವಬುದ್ಧನ ಅನೇಕಾನೇಕ ಪ್ರತಿಮೆಗಳನ್ನು ನಾವು ಕಾಣುತ್ತೇವೆ ನಿಂತಿರು ಕುಂತಿರುವ,ಹಿಂದೆ ಹಣದ ಚೀಲ ವಿರುವ ಬುದ್ಧ ರೂಪ ಎಲ್ಲದಕ್ಕಿಂತ ಉತ್ತಮ ಎಂದು ನಂಬಲಾಗುತ್ತದೆ.ಇದನ್ನು ಕಾರ್ಡ್ಗಳ ರೂಪದಲ್ಲಿಯೂ, ಪರ್ಸ್, ಜೇಬುಗಳಲ್ಲಿಯೂ ಇಟ್ಟುಬಹುದು.ಇನ್ನೊoದು ಬಗೆಯ ಕಾರ್ಡ್ ಎಂದರೆ ಕುವಾನ್ ಯಿನ್ ಬುದ್ಧ ಇದು ಸುರಕ್ಷೆ ಮತ್ತು ರಕ್ಷಣೆಯ ಸಂಕೇತ.

ಈ ದೇವರುಗಳಲ್ಲದೆ ಸುಖ,ಶಾಂತಿ,ಸಮೃಧಿ ಮತ್ತು ದೀರ್ಘಯುಷ್ಯವನ್ನು ಇಮ್ಮಡಿಗೊಳಿಸಬಲ್ಲ 3 ಚಿನ್ಹೆಗಳನ್ನು ಚೀನೀಯರು ಬಳಕೆಯಲ್ಲಿಟ್ಟುಕೊಂಡಿದ್ದಾರೆ.

1).ಇಮ್ಮಡಿ ಸುಖ ತರುವ ಸಂಕೇತ.---
ವೈವಾಹಿಕ ಜೀವನದಲ್ಲಿ ಸುಖ ಸಂತೋಷ ಉಂಟಾಗಲು,ಸಮರ್ಥವಾಗಿ ಕುಟುಂಬ ನಿಭಾಯಿಸಲು ಮಲಗುವ ಕೋಣೆಯ ನೈಋತ್ಯ ಭಾಗದಲ್ಲಿ ತೂಗುಹಾಕಲಾಗುತ್ತದೆ.ಈ ಸಂಕೇತ ಗಾಢ ರಕ್ತ ಕೆಂಪುಬಣ್ಣದಲ್ಲಿ ಚಿತ್ರಿತವಾಗಿರುತ್ತದೆ.ಈ ಕೆಂಪು ಬಣ್ಣ ಜೀವನದಲ್ಲಿ ಪ್ರೀತಿ ,ಪ್ರೇಮ ಪ್ರಣಯಗಳನ್ನು ಇಮ್ಮಡಿಗೊಳಿಸುತ್ತದೆ ಎಂಬ ನಂಬಿಕೆಯಿದೆ.ಚೀನಾದ ಪೀಟ್ಹೋಪಕರಣಗಳ ಮೇಲೆ ಈ ಸಂಕೇತವನ್ನು ಕೆತ್ತಿರಲಾಗುತ್ತದೆ.ಈ ಸಂಕೇತ ಕೊನೆಯಿರದ ಪ್ರೀತಿಯಾ ಸಂಕೇತ.ವಿವಾಹಿತ ದಂಪತಿಗಳು ತಮ್ಮ ಹಾಸಿಗೆಯ ಅಡಿಯಲ್ಲೂ ಈ ಸಂಕೆತವನ್ನಿರಿಸಬಹುದು.

2 )  ದೀರ್ಘಾಯುಶ್ಯದ ಸಂಕೇತ------

ಇದು ಒಂದು ಶುಭ ಹಾಗೂ ಫಲದಾಯಕ ಸಂಕೇತ.ಇದು ಒಳ್ಳೆಯ ಆರೋಗ್ಯ ಮತ್ತು ಕುಟುಂಬದಲ್ಲಿ ಹಿತ ಸೌಖ್ಯವನ್ನು ತಂದುಕೊಡುವಂಥದ್ದು ಜೊತೆಗೆ ದೀರ್ಘಯುಷ್ಯವನ್ನು ಕೊಡುವದು ಎಂದು ನಂಬಲಾಗುತ್ತದೆ.

3)  ಪ್ರೇಮದ ಗಂಟು ---
ಇದೊಂದು ಆದಿಯೂ ಅಂತ್ಯವೂ ಇಲ್ಲದ ನಿಗೂಢ ಪ್ರೇಮದ ಗಂಟು.ಈ ಗಂಟು ಜನನ ಮರಣಗಳಿಗೆ ಹೇಗೆ ಅದಿ ,ಅಂತ್ಯ ವಿಲ್ಲವೋ ಹಾಗೇ ಪ್ರೀತಿ, ಪ್ರೇಮಕ್ಕೂ ಆದಿ ಅಂತ್ಯವಿಲ್ಲ ಎಂದು ತಿಳಿಸುತ್ತದೆ.ಬೌದ್ಧ ಸಿದ್ಧಾoತವೂ ಈ ಅನಂತ ಚಕ್ರವನ್ನು ಒಪ್ಪಿದೆ.ಈ ಪ್ರೇಮದ ಚಿನ್ಹೆಯು ಕುಟುಂಬ ಸದಸ್ಯರ ನಡುವೆ ಒಗ್ಗಟ್ಟು,ಜಗಳವಿಲ್ಲದ ವಾತ್ಸಲ್ಯಕ್ಕೆ ಪ್ರತೀಕ ಈ ಸಂಕೇತ ಎಂದು ಪರಿಗಣಿಸುತ್ತಾರೆ.ಈ ಗಂಟಿನ ಬಣ್ಣ ಕೆಂಪು.ಮಲಗುವ ಕೋಣೆಯ ನೈಋತ್ಯ ಮೂಲೆಯಲ್ಲಿಟ್ಟರೆ  ದಂಪತಿಗಳ ಸಂಬಂದ ಉತ್ತಮಗೊಳ್ಳುತ್ತದೆ.ಕಛೇರಿಗಳಲ್ಲಿಯು ಮುಖ್ಯಸ್ಥ ಮತ್ತು ಸಿಬ್ಬಂದಿಗಳ ನಡುವೆ ಸಾಮರಸ್ಯ ಹೆಚ್ಚುತ್ತದೆ.