Thursday 8 December 2016

ನೀರನ್ನು ಕೂಡಿಟ್ಟುಕೊಳ್ಳುವದರಿಂದ ದಾಳಿಗೆ ಒಳಗಾಗುತ್ತಿರುವ ಬಾವೋಬಾಬ್ ಮರ ( baobab)

ನಮಗೆ ಮರ ಎಂದರೆ ತಕ್ಷಣ ನೆನಪಿಗೆ ಬರುವುದು ನಾನಾ ರೀತಿಯ ಹಣ್ಣು, ಕಾಯಿ , ಹೂವು ಗಳನ್ನು ಕೊಡುವ,  ನೆರಳು ಕೊಡುವ,  ಕಟ್ಟಿಗೆ ಮತ್ತು ಪೀತೋಪಕರನಗಳನ್ನಾಗಿ ಬಳಸುವ  ಮರ ಅಂತ ಹೀಗೆ ಅನೇಕ ರೀತಿಯಲ್ಲಿ ಮರಗಳು  ನಮ್ಮ ನೆನಪಿಗೆ ಬರುತ್ತವೆ. ಆದರೆ ಈ ಎಲ್ಲ ಮರಗಳು ಮಾನವನ ಬದುಕಿನಲ್ಲಿ ಅಪಾರ ಮಹತ್ವ ಹೊಂದಿವೆ. ಭೂಮಿಯ ಮೇಲೆ ಜೀವಸಂಕುಲಕ್ಕೆ ಬೇಕಾದ ಆಮ್ಲಜನಕವನ್ನು ಇವು ಉತ್ಪಾದಿಸುವ ನಿಸರ್ಗಿಕ ಕಾರ್ಖಾನೆಗಳು ಎಂದರೆ ತಪ್ಪಾಗಲಾರದು. ಆದರೆ ಈ ಬಾವೋಬಾಬ್ ( baobab tree) ಮರದ ಜೀವನ ಮಾತ್ರ ಎಲ್ಲ ಮರಗಳಿಗಿಂತ ಸ್ವಲ್ಪ ಭಿನ್ನ. ವಿಚಿತ್ರ ಎನಿಸಿದರು ಇದು ಸತ್ಯ. ಆ ಸತ್ಯ ಏನೆಂದರೆ ಈ ಮರ ತನ್ನ ದಪ್ಪವಾದ ಬುಡದಲ್ಲಿ ನೀರನ್ನು ಶೇಖರಿಸಿಟ್ಟಕೊಳ್ಳುತ್ತದೆ. ಹಾಗೇ ಅದೇ ಕಾರಣಕ್ಕಾಗಿ ಆನೆಗಳ ದಾಳಿಗೆ ತುತ್ತಾಗುತ್ತದೆ.



ಈ ಬಾವೋಬಾಬ್ ಮರವು ಗಾತ್ರದಲ್ಲಿ ಅತ್ಯಂತ ದೊಡ್ಡ ಮರ. ಇದು ಅತಿ ಹೆಚ್ಚಾಗಿ ಕಂಡುಬರುವುದು ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ. ಅದರಲ್ಲೂ ಆಫ್ರಿಕಾದ ದ್ವೀಪಗಳಲ್ಲಿ ಇದರ ಮೂಲ ಎಂದು ಹೇಳಲಾಗುತ್ತದೆ. ಅಲ್ಲಿನ ಜನರು ಅದನ್ನು ಬಾವೋಬಾಬ್ ಟ್ರೀ ಅಂತ ಕರೆಯುತ್ತಾರೆ. ವಿಜ್ಞಾನಿಗಳು ಈ ಮರವನ್ನು adansonia ಎಂದು ಹೆಸರಿಟ್ಟಿದ್ದಾರೆ.  ಈ ಮರವನ್ನು ತಲೆಕೆಳಗಾದ ಮರ (upside down tree) ಎಂತಲೂ ಕರೆಯುತ್ತಾರೆ. ಮೊದಲ ನೋಟಕ್ಕೆ ಈ ಮರ ತಲೆಕೆಳಗಾಗಿರುವಂತೆ ಭಾಸವಾಗುತ್ತದೆ. ಕಾರಣ ಆ ಮರದ ರೆಂಬೆ - ಕೊಂಬೆಗಳಲ್ಲಿ ಕೂದಲಿನ ರೀತಿಯಲ್ಲಿ ಬೇರುಗಳು ಮೇಲ್ಮುಖವಾಗಿ ನಿಂತಿರುತ್ತವೆ.  ಈ ಮರ ವಿಶೇಷತೆ ಏನೆಂದರೆ ಇದರ ಈ ಮರದ ಬುಡವು ದೊಡ್ಡ ಗಾತ್ರದಲ್ಲಿದ್ದು ಅಲ್ಲಿ ನೀರನ್ನು ಶೇಖರಿಸಿಟ್ಟುಕೊಂಡಿರುತ್ತದೆ. ಈ  ಬಾವೋಬಾಬ್ (baobab tree) ಯು ತನ್ನ ಬುಡದಲ್ಲಿ  26,000 ಗ್ಯಾಲನ್ಸ್ ಅಂದರೆ 100,000 ಲೀಟರ್ ನಸ್ಟು ನೀರನ್ನು ಶೇಕರಿಸಿಟ್ಟುಕೊಂಡಿರುತ್ತದೆ. ಇದು ಕಲ್ಲಂಗಡಿ ಹಣ್ಣಿನ ಕೆಂಪಾದ ಭಾಗದಲ್ಲಿ ಹೇಗೆ ನೀರು ಇರುತ್ತೋ ಹಾಗೆ. ಇದು ಆ ಮರದ ಪ್ರಾಕೃತಿಕ ಲಕ್ಷಣ ಮತ್ತು ಅದು ಆ ಮರಕ್ಕೆ ಪ್ರಕೃತಿಯ ಕೊಡುಗೆ ಅಂತಾನು ಅನ್ನಬಹುದು.




ಈ ಮರದ ಪ್ರಕೃತಿಕ ಕೊಡುಗೆಯೇ ಈ ಮರದ ಅಳಿವಿಗೆ ಕಾರಣವಾಗಿದೆ ಅಂದರೆ ತಪ್ಪಾಗಲಾರದು. ಈ ಮರವು ಆನೆಗಳ ದಾಳಿಗೆ ತುತ್ತಾಗುತ್ತದೆ. ಆನೆಗಳಿಗೆಲ್ಲಾದರೂ ಈ ಮರ ಕಣ್ಣಿಗೆ ಬಿದ್ದರೆ, ನಮಗೆ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಕಣ್ಣಮುಂದೆ ತಂದಿಟ್ಟ ಅನುಭವ ಹೇಗಿರುತ್ತೋ ಹಾಗೆ ಇರುತ್ತೆ. ಈ ಆನೆಗಳು ಈ ಮರದ ಕಾಂಡದ ಭಾಗವನ್ನು ತಿನ್ನುವ ಆಸೆಯಿಂದ ಈ ಮರವನ್ನು ಸಂಪೂರ್ಣವಾಗಿ ನಾಶಮಾಡುತ್ತವೆ.



ಈ ರೀತಿ ದಾಳಿಗೆ ಒಳಗಾದ  ನೆಲಕಚ್ಚಿದ ಬಾವೋಬಾಬ್ ಮರವು ಮತ್ತೆ ಬೇರೂರಿ, ಚಿಗುರೊಡೆದು ಮರುಹುಟ್ಟು ಪಡೆಯುತ್ತದೆ. ತನ್ನ ಜೀವಿತಾವಧಿಯಲ್ಲಿ 5 ರಿಂದ 6 ಬಾರಿ ಮರು ಹುಟ್ಟು ಪಡೆಯುವ ಸಾಮರ್ಥ್ಯ ಈ baobab tree ಇದೆ. ಇದು ಈ ಮರದ ಇನ್ನೊಂದು ವಿಶೇಷ.




Wednesday 16 November 2016

ಶತಮಾನದ ದೈತ್ಯ ಚಂದ್ರ- Mega Beaver Moon- Super moon



ಮೊನ್ನೆ ಅಂದರೆ 14 ನವೆಂಬರ್, 2016, ಸೋಮವಾರದಂದು ನಾವು ನೋಡಿದ ಹುಣ್ಣಿಮೆಯ ಚಂದಿರ 70 ವರ್ಷಗಳಲ್ಲಿ ಎಂದೂ ಕಾಣದಂತಹ ದೊಡ್ಡ ಹುಣ್ಣಿಮೆ ಚಂದ್ರ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸಾಮಾನ್ಯವಾಗಿ ಹುಣ್ಣಿಮೆ ಚಂದ್ರ ನಮ್ಮೆಲ್ಲರಿಗೆ ದುಂಡಗೆ, ದಪ್ಪಗೆ ರಾತ್ರಿಯಲ್ಲಿ ಬೆಳಕು ಕೊಡುವ ಚಂದ್ರನನ್ನು ನೋಡಿರುವುದು ಸರ್ವೇ ಸಾಮಾನ್ಯ. ಆದರೆ ಈ ಬಾರಿ ಕಂಡಿರುವ ಹುಣ್ಣಿಮೆ ಚಂದ್ರ   ಭೂಮಿಗೆ  ಅತ್ಯಂತ ಹತ್ತಿರದಲ್ಲಿದ್ದ ಮತ್ತು ದೊಡ್ಡ ಗಾತ್ರದಿಂದ ಹೆಚ್ಚು ಪ್ರಕಾಶಮಾನವಾಗಿ ಕಂಡ  ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ. 





ಸಾಮಾನ್ಯವಾಗಿ ಹುಣ್ಣಿಮೆಯ ದಿನ ಕಾಣುವ ಪೂರ್ಣಚಂದ್ರನ ಬೆಳಕಿಗಿಂತ  30% ಹೆಚ್ಚು ಬೆಳಕಿನ ಮತ್ತು ಇದುವರೆಗೂ ಕಂಡಿರುವ  ಹುಣ್ಣಿಮೆ ಚಂದ್ರನ  ಗಾತ್ರಕ್ಕಿಂತ 14% ದೊಡ್ಡ ಆಕಾರದಲ್ಲಿ ಸೋಮವಾರ  ರಾತ್ರಿ ಚಂದ್ರ ವಿಶೇಷವಾಗಿ ಕಂಡಿದ್ದಾನೆ. ಇದನ್ನು ಶತಮಾನದ ವಿಶೇಷ ಹುಣ್ಣಿಮೆ ಎಂದು ಕರೆಯಲಾಗಿದೆ. 

NASA Goddard Space Flight Center Noah Petro ಅವರು, ಸಾಮಾನ್ಯವಾಗಿ ಚಂದ್ರ ಭೂಮಿಗೆ 236,790 ಮೈಲಿ ದೂರದಲ್ಲಿದ್ದಾನೆ. ಆದರೆ ಸೋಮವಾರದಂದು  221,525 ಮೈಲಿ ಗಳಷ್ಟು ಹತ್ತಿರದಲ್ಲಿ ಬಂದಿದ್ದ.. ಸಾಮಾನ್ಯವಾಗಿ ಇರುವ ಅಂತರಕ್ಕಿಂತ 15,265 ಮೈಲಿಗಳಷ್ಟು ಕಡಿಮೆ ಹತ್ತಿರದಲ್ಲಿ ಭೂಮಿಯನ್ನು ಹಾದು ಹೋಗಿದ್ದಾನೆ ಎಂದು ಹೇಳಿಕೆ  ನೀಡಿದ್ದಾರೆ.

 ಚಂದ್ರ ಭೂಮಿಯನ್ನು ತನ್ನದೇ ಆದ ಒಂದು ಪರಿಧಿಯಲ್ಲಿ ಮೊಟ್ಟೆಯಾಕಾರದಲ್ಲಿ ಸುತ್ತುತ್ತಿದ್ದಾನೆ. ಅದು ನಿಖರವಾಗಿ ಇಸ್ಟೇ ದೂರ ಎಂದು ನಿಖರವಾಗಿ ಹೇಳಲಾಗದು. ಚಂದ್ರ ತಾನು ಸುತ್ತುವ ಪಥದಲ್ಲಿ ಅನೇಕ ಬದಲಾವಣೆ ಗಳಾಗುತ್ತಿರುತ್ತವೆ. ಆಗ ಭೂಮಿಯ ಹತ್ತಿರ ಮತ್ತು ದೂರ ಹೀಗೆ ಬದಲಾವಣೆಗಳು ಕಾಣುತ್ತವೆ. ಅದಕ್ಕೆ ಒಂದು ಉತ್ತಮ ಉದಾಹರಣೆ ಸೋಮವಾರದಂದು ಉಂಟಾದ super moon ಸಾಕ್ಷಿ.

Friday 11 November 2016

ಕಾವೇರಿ ನದಿಯ ಹುಟ್ಟಿಗೂ, ಕೊಡವರ ಸೀರೆ ಉಡುವ ರೀತಿಗೂ, ಇರುವ ನಂಟನ್ನು ಹೇಳುವ ಕಥೆ.

ಕಾವೇರಿ ನಿಸರ್ಗಧಾಮದ ಕಾವೇರಿ ಪ್ರತಿಮೆ 
ಈ ಬಾರಿ ನಾವು ಕೊಡಗಿಗೆ ಪ್ರವಾಸ ಹೋಗಿದ್ವಿ. ಬಯಲು ಸೀಮೆಯಲ್ಲಿ ಹುಟ್ಟಿಬೆಳೆದ ನನಗೆ ಅಲ್ಲಿ ಹಸಿರಿನಿಂದ ಕಂಗೊಳಿಸುತ್ತಿದ್ದ ಕಾಡುಗಳು ಮತ್ತು ಕಾಡಿನಂತೆಯೇ ಇದ್ದ ಕಾಫೀ ತೋಟಗಳು, ಕಾಡುಮರಗಳಿಗೆ ಅಂಟಿಕೊಂಡೇ ಮಿಗಿಲೆತ್ತರಕ್ಕೆ ಬೆಳೆದ ಮೆಣಸಿನ ಬಳ್ಳಿಗಳು, ಕಾಡು ಜಾತಿ ಮರಗಳೊಂದಿಗೆ ಕೊತೆಜೋತೆಗೇ ಬೆಳೆದಿರುವ ಏಲಕ್ಕಿ, ಲವಂಗ, ಕಿತ್ತಳೆ ಇತ್ಯಾದಿ ಮರಗಳನ್ನ ನೋಡ್ತಾ, ಅಲ್ಲಿನ   ತೋಟಗಳಲ್ಲಿ, ಕಾಡಿನಲ್ಲಿ  ಅಡ್ಡಾಡಿ ತುಂಬಾನೇ ಖುಷಿ ಆಯ್ತು. ಮದ್ಯಾನ ಬಿಸಿಲಿದ್ದರೂ ಮಂಜುಮುಸುಕಿದ ವಾತಾವರಣ ಮಜಾ ಕೊಡುತ್ತಿತ್ತು. ಭೂಮಿ  ಮೇಲಿನ ಸ್ವರ್ಗ ಈ ಕೊಡಗು ಅನ್ನೋದು ನನ್ನ ಅನುಭವದ ಮಾತು.



ಕೊಡಗಿನ ಕಾಫೀ ತೋಟ 
ಕೊಡಗು  ಕರ್ನಾಟಕದಲ್ಲಿನ ಒಂದು  ಚಿಕ್ಕ ಜಿಲ್ಲೆ. ಕೊಡಗು ಜಿಲ್ಲೆಯ ಸುಮಾರು ಮೂರನೇ ಒಂದರಷ್ಟು ಭಾಗ ಕೊಡವ ಜನಾಂಗದವರಿದ್ದರೆ.  ಕೊಡವರು ನಮಗಿಂತ ಭಿನ್ನ ಅನ್ನೋದು ಮೊದಲ ನೋಟಕ್ಕೇ ತಿಳಿದುಬಿಡುತ್ತೆ. ಅವರ ಅಡುಗೆ-ಉಡುಗೆ-ತೊಡುಗೆ, ನಡೆ-ನುಡಿ ಎಲ್ಲವೂ ನಮಗಿಂತ ಬೇರೆ.

ಕೊಡವರು ಆಡುವ "ಕೊಡುವ ತಕ್ಕ್" ನುಡಿ ಕನ್ನಡ ತಮಿಳು ತೆಲುಗಂತೆ ದ್ರಾವಿಡ ನುಡಿ ಕೂಟಕ್ಕೆ ಸೇರಿದ್ದರೂ, ಇವರು ಮೂಲ ದ್ರಾವಿಡ ಜನರಲ್ಲ ಅನ್ನುವ ಒಂದು ವಾದ ಇದೆ. ಅಲೆಕ್ಸಾಂಡರನ ಕಾಲದಲ್ಲಿ ಅವನ ಹಲ ಸೈನಿಕರು ವಾಪಸು ಹೋಗದೆ ಇಲ್ಲೇ ಉಳಿದರು ಆ ಜನರೇ ಈ ಕೊಡವರು ಅನ್ನುವ ಒಂದು ವಾದವಿದೆ. ಇವೆಲ್ಲಕ್ಕಿಂತ ನನಗೆ ಹೆಚ್ಚು ಗಮ ಸೆಳೆದಿದ್ದು ಕೊಡವತಿ ಉಡುವ ಸೀರೆ.  

ಕೊಡವ ಹೆಣ್ಣುಮಕ್ಕಳು ನಾವು ಸೀರೆ ಉಡುವುದಕ್ಕೆ ವಿರುಧ್ಧ ದಿಕ್ಕಿನಲ್ಲಿ ಸೀರೆ ಉಡುತ್ತಾರೆ. ಅವರುಗಳು ಮನೆಯಲ್ಲಿ ಮಾತನಾಡುವ ಭಾಷೆ ಕೊಡವ. ವ್ಯವಹಾರಿಕ ಭಾಷೆ ಕನ್ನಡ ಮತ್ತು ಬರವಣಿಗೆಗೆ ಕನ್ನಡವನ್ನು ಬಳಸುತ್ತಾರೆ. ಮಧ್ಯವನ್ನು ತಾವೇ ತಯಾರಿಸುತ್ತಾರೆ. ನಾನು ಅಲ್ಲಿ ನೋಡಿದಷ್ಟು ಮದ್ಯದಂಗಡಿ ಎಲ್ಲೂ ನೋಡಿಲ್ಲ. ಎಲ್ಲೆಂದರಲ್ಲಿ ಎಲ್ಲರ ಮನೆಮುಂದೆ, ಕಿರಾಣಿ ಅಂಗಡಿಗಳಲ್ಲೂ ಮಧ್ಯ ಮಾರಾಟ. ಅಲ್ಲಿ ಹೆಣ್ಣು-ಗಂಡು ಭೇದವಿಲ್ಲದೆ ಸಮಾರಂಭಗಳಲ್ಲಿ ಮಧ್ಯ ಕುಡಿಯುತ್ತಾರೆ. ಹಬ್ಬ, ಸಮಾರಂಭಗಳಲ್ಲಿ ಹಾಡು ಕುಣಿತ. ಆಧುನಿಕ ಜೀವನ ಶೈಲಿ ಇವೆಲ್ಲವುಗಳಿಂದ  ಅವರು ನಮಗಿಂತ ಭಿನ್ನ ಎಂದು ಸಾರಿ ಹೇಳುತ್ತವೆ.



ತಲಕಾವೇರಿ ಪೂಜೆ ತುಲಾಸಂಕ್ರಮಣದ ದಿನ 
ನಾವು ತಲಕಾವೇರಿಗೆ ಹೋದ ದಿನ ತುಲಾ ಸಂಕ್ರಮಣ ಜಾತ್ರೆ ಆದ್ದರಿಂದ ಅಲ್ಲಿ ಬಂದಿದ್ದ ಎಲ್ಲ ಕೊಡವ ನೀರೆಯರು ಅವರ ಸಾಂಪ್ರದಾಯಿಕ ಶೈಲಿಯಲ್ಲಿಯೇ ಸೀರೆ ಉಟ್ಟಿದ್ದರು. ಹಾಗೇ ಕುತೂಹಲಕ್ಕೆ ನೀವು ಹೆಂಗೆ ಈ ರೀತಿ ಸೀರೆ ಉಡುತ್ತೀರ?  ಯಾಕೆ ನೀವು  ನಾವು ಸೀರೆ ಉಡುವದಕ್ಕೆ  ವಿರುದ್ಧವಾಗಿ  ಉಡುತ್ತೀರ? ಎಂದು ಅಲ್ಲಿನ ಕೊಡವರೊಬ್ಬರನ್ನು  ನಾನು  ಕೇಳಿದೆ. ಅದಕ್ಕೆ ಅವರು ಒಂದು ಪೌರಾಣಿಕ ಕಥೆಯನ್ನ ನಮಗೆ ಹೇಳಿದರು. ಕಾವೇರಿ ಹುಟ್ಟಿಗೂ ಮತ್ತು ಅಲ್ಲಿನ ಹೆಣ್ಣುಮಕ್ಕಳ ಸೀರೆ ಉಡುವ ರೀತಿಗೂ ಸಂಬಂಧ ಇರುವುದನ್ನು ಈ ಕಥೆ ವಿವರಿಸುತ್ತದೆ.

ಕೊಡವರ ಸಾಂಪ್ರದಾಯಿಕ ಬಟ್ಟೆಗಳು 

ಕನ್ನಡ ನಾಡಿನ ಜೀವನದಿ ಕಾವೇರಿ ಹುಟ್ಟಿದ ಬಗ್ಗೆ ಪುರಾಣಗಳಲ್ಲಿ ಅನೇಕ ಕಥೆಗಳಿವೆ. ಅದರಲ್ಲಿ ಇದು ಒಂದು. ಮಕ್ಕಳಿಲ್ಲದ ಕವೇರ ರಾಜ ತನಗೆ ಮಕ್ಕಳಾಗಬೇಕೆಂದು ಬ್ರಹ್ಮನನ್ನು ಕುರಿತು ತಪಸ್ಸನ್ನು ಆಚರಿಸುತ್ತಾನೆ. ಬ್ರಹ್ಮ ಅವನ ತಪಸ್ಸಿಗೆ ಮೆಚ್ಚಿ ತನ್ನ ಸಾಕುಮಗಳಾದ ಲೋಪಮುದ್ರೆಯನ್ನು ಕವೇರ ರಾಜನಿಗೆ ಮಗಳಾಗಿ ನೀಡುತ್ತಾನೆ. ಅವಳು ನಿನ್ನ ಮಗಳು ಮಾತ್ರವಲ್ಲದೆ ಲೋಕೋಧ್ಧಾರದ ಸಲುವಾಗಿ ಆಕೆಯು ಭೂಮಿಗೆ ಬರಲಿದ್ದಾಳೆ ಎಂದು ಕವೇರನಿಗೆ ಹೇಳುತ್ತಾನೆ. ಅಂದಿನಿಂದ
ಲೋಪಮುದ್ರಳು ಕವೇರರಾಜನ ಮಗಳಾಗಿ ಕಾವೇರಿ  ಎಂಬ ಹೆಸರನ್ನು ಪಡೆಯುತ್ತಾಳೆ. ಕವೇರ ರಾಜ ಆಕೆಗೆ ಕಾವೇರಿ ಎಂದು ಹೆಸರಿದುತ್ತಾನೆ.

ಕಾವೇರಿಯು ಚಿಕ್ಕ ವಯಸ್ಸಿನಿಂದಲೀ ಕ್ಷತ್ರಿಯ ಪುತ್ರಿಯಾಗಿ ಬೆಳೆಯುತ್ತಾಳೆ. ಮುಂದೆ ರಾಣಿಯಾಗಿ ರಾಜ್ಯಕ್ಕೆ ಮತ್ತು ಪ್ರಜೆಗಳಿಗೆ ಒಳ್ಳೆಯ ರಾಣಿಯಾಗಿ ಉತ್ತಮ ಆಡಳಿತ ನಡೆಸುತ್ತಿರುತ್ತಾಳೆ. ಒಮ್ಮೆ ಅಗಸ್ತ್ಯ ಮುನಿಯು ಕಾವೇರಿಯನ್ನು ನೋಡಿ ತಾನು ಆಕೆಯನ್ನು ಮದುವೆಯಾಗುವ ಬಯಕೆಯನ್ನು ರಾಜನ ಮುಂದೆ ಇಡುತ್ತಾನೆ. ಕಾವೇರಿಯು ಮೊದಲು ನಿರಾಕರಿಸಿದಳಾದಳು, ನಂತರ ತಂದೆಯ ಒತ್ತಡಕ್ಕೆ ಮಣಿದು ಅಗಸ್ತ್ಯರನ್ನ ಕೆಲವು ನಿಬಂದನೆಗಳ ಮೇರೆಗೆ ಮದುವೆಯಾಗುವುದಾಗಿ ಹೇಳಿ ಅಗಸ್ತ್ಯರನ್ನು ವರಿಸುತ್ತಾಳೆ.

ಮದುವೆಯ ನಂತರ  ಕಾವೇರಿಗೆ ಸಂಸಾರಿಕ ಜೀವನದಿಂದ ತನಗೆ ಮುಕ್ತಿ ಬೇಕು ಮತ್ತು ತಾನು ಲೋಕೋದ್ಧಾರಕ್ಕಾಗಿ  ಈ ಭೂಮಿಗೆ ಬಂದವಳು. ತಾನು ಇನ್ನು ಮುಂದೆ ಜನರ ಸೇವೆಗೆ ನನ್ನ ಜೀವನವನ್ನು ಮುಡಿಪಾಗಿಡಲು ಇಚ್ಚಿಸುತ್ತೇನೆ ಎಂದೂ ಆದ್ದರಿಂದ ತನಗೆ  ಈ ಸಂಸಾರದ ಬಂಧನದಿಂದ ಮುಕ್ತಿ ಕೊಡಿ ಎಂದು ಅಗಸ್ತ್ಯರಲ್ಲಿ  ಮನವಿ ಮಾಡಿಕೊಳ್ಳುತ್ತಾಳೆ. ತನ್ನ ಪ್ರೀತಿಯ ಹೆಂಡತಿಯ ಈ ಮಾತುಗಳನ್ನು ಕೇಳಿ ಅಗಸ್ತ್ಯರಿಗೆ ದಿಗ್ಬ್ರಮೆಯಾಗುತ್ತದೆ. ಕಾವೇರಿಯ ಮೇಲೆ ಕೋಪಗೊಂಡು ಅಗಸ್ತ್ಯರು ಕಾವೇರಿಯನ್ನು ನೀರನ್ನಾಗಿ ಮಾಡಿ ತಮ್ಮ ಕಮಂಡಲದೊಳಗೆ ಬಂಧಿಸಿಡುತ್ತಾರೆ. ಹಾಗೇ ತನ್ನ ಸಂಸಾರಿಕ ಜೀವನವನ್ನ ಸರಿಪಡಿಸಿಕೊಳ್ಳಲು ಬ್ರಹ್ಮ, ವಿಷ್ಣು, ಮಹೇಶ್ವರ ರನ್ನು ಕುರಿತು ಬ್ರಹ್ಮಗಿರಿ ಬೆಟ್ಟದ ಮೇಲೆ ತಪಸ್ಸನ್ನಾಚರಿಸಲು ಮುಂದಾಗುತ್ತಾನೆ.

ಅಗಸ್ತ್ಯರ ಈ ನಡೆ ಅಲ್ಲಿಯ ಜನರಿಗೆ ನುಂಗಲಾರದ ತುತ್ತಾಗುತ್ತದೆ. ತಮ್ಮ ನೆಚ್ಚಿನ ರಾಣಿ ಮತ್ತು ರಾಜ್ಯದ ಜನತೆಯನ್ನು ತನ್ನ ಮಕ್ಕಳಂತೆ ರಕ್ಷಿಸುತ್ತಿದ್ದ ಕಾವೇರಿಯ ಬಂಧನ ಪ್ರಜೆಗಳನ್ನು ಸಂಕಷ್ಟಕ್ಕೆ ಸಿಲುಕಿಸಿತು. ಮೊದಲೇ ಅಗಸ್ತ್ಯ ಮುನಿ ಕೋಪಕ್ಕೆ ತಾವು ಬಲಿಯಾಗುವುದು ಬೇಡ, ಅದರಿಂದ ಇನ್ನೊಂದು ಅನಾಹುತ ಆಗಲು ಬಿಡಬಾರದು  ಎಂದು ಆತನನ್ನು ಪ್ರಶ್ನಿಸಲು ಹೋಗಲಿಲ್ಲ.  ಇದನ್ನೆಲ್ಲಾ ನೋಡುತ್ತಿದ್ದ ದೇವತೆಗಳು ಹೇಗಾದರು ಮಾಡಿ ಅಗಸ್ತ ರಿಂದ ಕಾವೇರಿಯನ್ನು ಬಿಡುಗಡೆ ಗೊಳಿಸಬೇಕೆಂದು  ಗಣಪತಿಯ ಮೊರೆ ಹೋಗುತ್ತಾರೆ.

ಆಗ ಗಣಪತಿಯು ಬ್ರಹ್ಮಗಿರಿ ಬೆಟ್ಟಕ್ಕೆ ಕಾಗೆಯ ರೂಪದಲ್ಲಿ ಬಂದು ಅಗಸ್ತ್ಯ ರ ಕಮಂಡಲವನ್ನು  ಅಗಸ್ತ್ಯರು ನೋಡ ನೋಡುತ್ತಿದ್ದಂತೆ  ಎತ್ತಿಕೊಂಡು ಹೋಗಿ ಸ್ವಲ್ಪ ದೂರದಲ್ಲಿ ಬೀಳಿಸುತ್ತಾನೆ. ನೀರಿನ ರೂಪದಲ್ಲಿದ್ದ ಕಾವೇರಿ ಅಲ್ಲಿ ಚಿಮ್ಮಿ  ಹೊರ ಬರುತ್ತಾಳೆ.  ಅದನ್ನು ತಡೆಯಲು ಮತ್ತೆ ಅಗಸ್ತ್ಯರು ಪ್ರಯತ್ನ ಮಾಡುತ್ತಾರೆ. ಮತ್ತೆ ಗಣಪತಿ ಅದನ್ನು ಹೊತ್ತು ಹೋಗಿ ಸ್ವಲ್ಪದೂರ ಮಡಿಕೇರಿಯಲ್ಲಿ ಎಸೆಯುತ್ತಾನೆ. ಅಲ್ಲಿಂದ ಮುಂದೆ ಕಾವೇರಿ ನೀರಿನ ರೂಪದಲ್ಲಿದ್ದ ಕಾವೇರಿ ರಭಸವಾಗಿ ಹರಿಯುತ್ತಾಳೆ. ಹೀಗೆ ರಭಸವಾಗಿ  ಹರಿಯುತ್ತಿರುವ ಸಮಯದಲ್ಲಿ ಆಕೆಯ ಸೀರೆ ನೀರಿನ ಹೊಡೆತಕ್ಕೆ ಹಿಂದುಮುಂದಾಗುತ್ತದೆ. ಕಾವೇರಿಗೆ ಅಗಸ್ತ್ಯ ರಿಂದ ಸ್ವತಂತ್ರ ಸಿಕ್ಕು, ಕಾವೇರಿಯು ನದಿಯಾಗಿ ಹರಿದ  ನೆನಪಿನಲ್ಲಿ ಅಲ್ಲಿನ ಮಹಿಳೆಯರು ಸೀರೆಯನ್ನು ಉಲ್ಟಾ ಉಡಲು ಆರಂಭೀಸುತ್ತಾರೆ. ಅದನ್ನು  ಅವರ  ಸಂಸ್ಕೃತಿಯ ಗುರುತಾಗಿ ಉಳಿಸಿಕೊಳ್ಳುತ್ತಾರೆ. ಕೊಡಗಿನ ಜನತೆಗೆ ಇಂದಿಗೂ ಕಾವೇರಿಯೇ ಕುಲದೇವತೆ.

ಕೊಡವರು ಸೀರೆ ಉಡುವ ರೀತಿಯನ್ನ ಈ ವೀಡಿಯೋದಲ್ಲಿ ನೋಡಬಹುದು. ಹಿಂದೆ ನಿರಿಗೆ ಬರುವುದನ್ನ, ಹಿಂದಿನಿಂದ ಮುಂದಕ್ಕೆ ಬರುವ ಸೆರಗನ್ನ ಗಮನಿಸಿ.

https://youtu.be/WmGNDzKL8iY



ತಲಕಾವೇರಿಯ ತೀರ್ಥ ಉದ್ಭವ ಆಗುವ ಕುಂಡಿಗೆ ಹಿಂಭಾಗದಲ್ಲಿ ಒಂದು ಅಶ್ವತ್ಥ ಮರವಿದೆ. ಈ ಅಶ್ವತ್ಥ ವೃಕ್ಷವು (ಅರಳೀಮರ) ಹಿಂದೆ ಅಗಸ್ತ್ಯ ಮುನಿಗಳು ತಪಸ್ಸನ್ನಾಚರಿಸಿದ ಅಶ್ವಥ ವೃಕ್ಷದ ಕುಡಿ ಎಂದು ನಂಬಲಾಗಿದೆ.ಇದರ ಮೇಲಿನ ಹಂತದಲ್ಲಿ ಶ್ರೀ ಅಗಸ್ತೇಶ್ವರ ಹಾಗೂ ಗಣಪತಿ ದೇವಾಲಯಗಳಿವೆ. ಸ್ಥಳೀಯರ ಪುರಾಣಗಳಿಂದ ಅಗಸ್ತ್ಯ ಮುನಿಗಳು ಇಲ್ಲಿ ಮರಳಿನಿಂದ ಇಲ್ಲಿ ಲಿಂಗವನ್ನು ನಿರ್ಮಿಸಿ ಪೂಜಿಸಿದರೆಂದು ತಿಳಿಯಲಾಗುತ್ತದೆ.
ಅಶ್ವತ್ಥ ಮರದ ವಿವರಣೆ ಇರುವ ಬೋರ್ಡ್( centre for environment education )


ಅಶ್ವತ್ಥ ಮರ


Monday 24 October 2016

ರಾತ್ರಿರಾಣಿ ಪಾರಿಜಾತ -tree of sadness

ಕೆಂಪು ಇಲ್ಲವೇ  ಕಿತ್ತಳೆ ಬಣ್ಣದ  ತೊಟ್ಟು ಮತ್ತು ಬಿಳಿ ದಳಗಳಿರುವ ಈ ಸುಂದರವಾದ ಹೂವು ನೋಡಲು ತುಂಬಾ ಸುಂದರ. ಈ ಮರದ ಹೂವು ನಾವು ಕೀಳುವ ಅವಶ್ಯಕತೆಯೇ ಇರೋಲ್ಲ. ಮರದ ಕೆಳಗೆ ನಿಂತು ಮರವನ್ನು ಸ್ವಲ್ಪ ಅಲುಗಾದಿಸಿದರೆ ಸಾಕು ನಮ್ಮ ಮೇಲೆ ಹೂವಿನ ಮಳೆ ಬರುತ್ತದೆ. ನಮ್ಮ ಸುತ್ತ ಮುತ್ತ ಒಂದು ಪಾರಿಜಾತ ಮರ ಇದ್ದರೆ ಸಾಕು. ಪಾರಿಜಾತದ ವಾಸನೆಯಿಂದ ಸುತ್ತಮುತ್ತಲಿನ ವಾತಾವರಣ ಹಿತವಾಗಿರುತ್ತದೆ.  ಸಾಮಾನ್ಯವಾಗಿ ಎಲ್ಲ ಗಿಡಮರಗಳ ಮೊಗ್ಗುಗಳು ಹೂವಾಗಿ ಅರಳಲು ಸೂರ್ಯನ ಬರುವಿಕೆಯನ್ನು ಕಾಯುತ್ತಿರುತ್ತವೆ. ಆದ್ರೆ ಈ ಪಾರಿಜಾತ ಹೂ ಮಾತ್ರ ಹಾಗಲ್ಲ. ಪಾರಿಜಾತ ಮೊಗ್ಗು ಹೂವಾಗಿ ಅರಳಲು ಸೂರ್ಯ ಮುಳುಗುವುದನ್ನೇ ಕಾಯುತ್ತಿರುತ್ತದೆ. ರಾತ್ರಿಯೇ ಅರಳಿ ಸೂರ್ಯ ಬರುವ ಸಮಯದಲ್ಲಿ ಬಾಡಿ ಉದುರಿಹೋಗುತ್ತದೆ. 

ಇಂಗ್ಲಿಷ್ ನಲ್ಲಿ ಇದನ್ನು ನೈಟ್ ಜಾಸ್ಮಿನ್, ಕೋರಲ್ ಜಾಸ್ಮಿನ್ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಪ್ಹೆಫಾಲಿಕ, ಹರಿಸಿಂಗಾರ ಎಂದು ಕರೆಯುತ್ತಾರೆ. 

ಸಮುದ್ರದ ಮಥನದ ಕಾಲದಲ್ಲಿ ಮೊದಲು ಹುಟ್ಟಿಬಂದ 5 ವೃಕ್ಷ ಗಳಲ್ಲಿ ಇದೂ ಒಂದು. ಆ ವೃಕ್ಷಗಳು  ಯಾವೆಂದರೆ ಮಂದಾರ, ಸಂತಾನ, ಕಲ್ಪವೃಕ್ಷ,  ಹರಿಚಂದನ, ಪಾರಿಜಾತ. ಈ ಪಾರಿಜಾತವು ತಿಳುವಳಿಕೆ ಮತ್ತು ಜ್ಞಾನದ ಸಂಕೇತ ಎಂದು ನಂಬಲಾಗುತ್ತದೆ.


ಈ ಪಾರಿಜಾತ ಮರದ ಬಗ್ಗೆ ಹಲವಾರು ಕಥೆಗಳು--

ಕಥೆ-1.  ಪಾರಿಜಾತ ಎಂಬ ಹೆಸರಿನ ರಾಜಕುಮಾರಿ ಸೂರ್ಯನನ್ನು ಪ್ರೀತಿಸಿತ್ತಿದ್ದಳಂತೆ. ಸುರ್ಯ ಕೂಡ  ಆಕೆಯ ಪ್ರೀತಿಗೆ ಮರುಳಾಗಿ ಪ್ರೀತಿಸಲು ಶುರು ಮಾಡಿದನಂತೆ, ಅವರಿಬ್ಬರ ಪ್ರೀತಿ ಎಸ್ಟು ಆಳವಾಗಿತ್ತೆಂದ್ರೆ , ಈ ರಾಜಕುಮಾರಿ ತನ್ನ ಪ್ರಜೆಗಳನ್ನು ಮರೆತರೆ, ಸೂರ್ಯನು ತಾನು  ಜಗತ್ತಿಗೆ ಬೆಳಕು ಕೊಡುವ ಕೆಲಸ  ಮರೆತು ಇಬ್ಬರು ಪ್ರೀತಿಯಲ್ಲಿ ಮುಳುಗಿರುತ್ತಾರೆ, ಆಗ ದೇವತೆಗಳು ಸೂರ್ಯನ ಬಳಿ ತನ್ನ ಕರ್ತವ್ಯವನ್ನು ನಿಭಾಯಿಸಲು ಹೇಳುವಂತೆ ನಾರದನನ್ನು  ಕಳಿಸುತ್ತಾರೆ. ಆಗ ತನ್ನ ಮೋಹದಿಂದ ಜಗತ್ತಿಗೆ ಆಗುತ್ತಿರುವ ಕಷ್ಟವನ್ನು ನೋಡಿ ಸೂರ್ಯ ಪಾರಿಜಾತಳಿಗೆ ಹೇಳದೇ ಅಲ್ಲಿಂದ ಹೊರಟು ತನ್ನ ಕರ್ತವ್ಯ ಪಾಲನೆ ಮಾಡಲು ಅಣಿಯಾಗುತ್ತಾನೆ. ಇದನ್ನು ಸಹಿಸದ ಪಾರಿಜಾತ ಸೂರ್ಯನ ಬಳಿ ಹೋಗಿ ತನ್ನೊಡನೆ eegalee ರಾಜ್ಯಕ್ಕೆ ಬರಬೇಕೆಂದು ಕೇಳಿಕೊಳ್ಳುತ್ತಾಳೆ. ಆದರೆ ತನಗೆ ಪಾರಿಜಾತಳ ಪ್ರೀತಿಗಿಂತ   ತನ್ನ ಕರ್ತವ್ಯ  ದೊಡ್ಡದು  ಎಂಬುದನ್ನು ಮತ್ತು ನಿನ್ನೊಡನೆ ಬರಲಾಗದು ಎಂದು ಹೇಳುತ್ತಾನೆ. ಈ ಮಾತನ್ನು  ಸಹಿಸಲಾಗದ ಪಾರಿಜಾತಳು ತನ್ನ ರಾಜ್ಯಕ್ಕೆ ವಾಪಾಸಾಗುತ್ತಾಳೆ.  ಸೂರ್ಯನ ವಿರಹವನ್ನು ತಾಳಲಾರಾದೆ ಬೆಂಕಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅವಳ ದೇಹದ  ಬೂದಿಯಿಂದ ಈ ಪಾರಿಜಾತ ಮರ ಹುಟ್ಟಿತು ಎಂದು ಈ ಕಥೆ ಯಿಂದ ಹೇಳಲಾಗುತ್ತದೆ. 
ಸೂರ್ಯನ ಮೇಲಿನ ಪ್ರೀತಿ, ವಿರಹ, ದುಃಖ, ಕೋಪ ವನ್ನು ಪಾರಿಜಾತ  ಈ ಪ್ರಪಂಚಕ್ಕೆ ಈ ರೀತಿ ತೋರ್ಪದಿಸಿದ್ದಾಳೆ ಎಂದು ಹೇಳಲಾಗುತ್ತದೆ. ಆದ್ಧರಿಂದ ಇದನ್ನು ಕವಿಗಳು ದುಃಖತಪ್ತ ಮರ tree of sadness ಎಂದು ಕರೆದಿದ್ದಾರೆ.



ಕಥೆ-2. ದೇವಾಸುರರ ಸಮುದ್ರ ಮಥನದ ಕಾಲದಲ್ಲಿ ಹುಟ್ಟಿಬಂದ ಪಾರಿಜಾತ ಮರವನ್ನು ನಾರದರು ಕೃಷ್ಣನ ಕೈಯಲ್ಲಿ ಕೊಡುತ್ತಾರೆ. ಕೃಷ್ಣನು ಅದನ್ನು ಸತ್ಯಭಾಮೆಯ ತೋಟದಲ್ಲಿ  ನೆಡುತ್ತಾನೆ. ಅದರ ಹೂವು ರುಕ್ಮಿಣಿಯ ಮನೆಯ ಅಂಗಳದಲ್ಲಿ ಬೀಳುವಂತೆ ನೆಟ್ಟಿರುತ್ತಾನೆ. ನಾರದರು ಒಮ್ಮೆ ರುಕ್ಮಿಣಿಯ ಮನೆಗೆ ಹೋದಾಗ ಆ ಹೂವನ್ನು ನೋಡಿ ಇದನ್ನು ನಾನು ನಿನ್ನ ಪ್ರೀತಿಪಾತ್ರರ ಮನೆಯಲ್ಲಿ ನೆಡಬೇಕು ಎಂದು ಹೇಳಿದ್ದೆ. ಎಂದು ಹೇಳಿ ರುಕ್ಮಿಣಿ ಮತ್ತು ಸತ್ಯಭಾಮೆಯ ನಡುವೆ ಜಗಳ ತಂದಿರಿಸುವ ಪ್ರಸಂಗ ತುಂಬಾ ಸ್ವಾರಸ್ಯಕರವಾಗಿದೆ.  

ಸಸ್ಯ ಶಾಸ್ತ್ರಜ್ಞರ ಪ್ರಕಾರ -ಇದು ಹೂವಲ್ಲ ಎಂಬ ವಾದವನ್ನು ಮಂಡಿಸುತ್ತಾರೆ. ಇದು nyctanthes arbor-tristis ಎಂಬ ಸಸ್ಯಗಳ ಗುಂಪಿಗೆ ಸೇರುತ್ತದೆ ಎಂದು ಹೇಳುತ್ತಾರೆ. ಈ ಮರ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಜಾಂಡೀಸ್, ಮಲಬಧ್ಧತೆಯ ತೊಂದರೆಗಳಿಗೆ ಈ ಮರದ ಎಳೆಗಳ ರಸವನ್ನು ಔಷಧಿಗಳಿಗೆ ಉಪಯೋಗಿಸುತ್ತಾರೆ. ತಲೆಹೊಟ್ಟು, ಮೂಲವ್ಯಾಧಿ, ಚರ್ಮರೋಗ, ಮತ್ತು ಹಲವು ರೀತಿಯ ಜ್ವರಗಳಿಗೆ ಮತ್ತು ಯಕೃತ್ ನ ರೋಗಕ್ಕೆ, ಜೀರ್ಣಾಂಗಗಳ ತೊಂದರೆಗಳಿಗೆ , ಕರುಳಿನ ಹುಳುಗಳ ನಿವಾರಣೆಗೆ ಪಾರಿಜಾತ ಮರದ ಹೂವು ಮತ್ತು ಎಲೆಗಳಿಂದ, ಬೀಜಗಳಿಂದ ಆಯುರ್ವೇದದಲ್ಲಿ ಔಷಧ ತಯಾರಿಸುತ್ತಾರೆ.
ವೇದಗಳ ಕಾಲದಲ್ಲಿ ಬಟ್ಟೆಗೆ ಹಾಕುವ ಬಣ್ಣವನ್ನು ಈ ಹೂವಿನಿಂದ ತಯಾರಿಸುತ್ತಿದ್ದರು ಎಂದು ಹೇಳಲಾಗುತ್ತದೆ.

ಈ ಪಾರಿಜಾತ ಹೂವು ಹಲವಾರು ಕವಿಗಳಿಗೆ ಕವಿತೆಗೆ ಸ್ಪೂರ್ತಿಯಾಗಿದೆ. ತನ್ನಲ್ಲಿ ಔಷಧೀಯ ಗುಣಗಳನ್ನು ಹೊಂದಿದೆ. ಕೃಷ್ಣನಿಗೆ ಪ್ರಿಯವಾದ ಹೂವು ಇದು. ಮಕ್ಕಳಿಗೂ  ಪ್ರೀತಿ. ಈ ಪಾರಿಜಾತ ಹೂವಿನ  ಮರ ಕಂಡರೆ ಸಾಕು ಕೆಳಗೆ ಬಿದ್ದಿರೋ ಹೂವುಗಳ ಹಿಡಿದು ಆಟ ಶುರು ಮಾಡಿಬಿಡುತ್ತಾರೆ. ಪಾರಿಜಾತದ ಹೂವುಗಳನ್ನು ಹಿಸುಕಿದಾಗ ಕೈ ಕಿತ್ತಳೆ ಬಣ್ಣ ಬರುತ್ತೆ ಆಗಂತೂ ಮಕ್ಕಳು ಇನ್ನು ಖುಷಿ ಪಡುತ್ತಾರೆ.

Wednesday 19 October 2016

ಬದುಕಿನ ಚಕ್ರದ ಸಾಧನೆ ಅಂದ್ರೆ ಏನು? what is the success of life?

ಹೌದಲ್ವ!! ಸಾಧನೆ ಅಂದ್ರೆ ಏನು? ಅನ್ನೋ ನಮ್ಮ ಪ್ರಶ್ನೆಗೆ ನಾವು ಕೊಡೂ ಉತ್ತರ - ಯಾರೂ ಮಾಡಲಾಗದ ಕೆಲಸವನ್ನ ತಾನು ಮಾಡಿ ಎಲ್ಲರಿಂದ ಹೊಗಳಿಕೆ ಗಳಿಸುವು. ರಾಷ್ಟ್ರ, ರಾಜ್ಯ, ದೇಶಮಟ್ಟದ, ಅತರ ರಾಷ್ಟ್ರೀಯ ಮಟ್ಟದ ಪ್ರಶಸ್ತಿ, ಪುರಸ್ಕಾರಗಳನ್ನ ಗಳಿಸುವು. ತಾನು ಹುಟ್ಟಿ ಬೆಳೆದ ಊರಿಗೆ, ಜಿಲ್ಲೆಗೆ , ರಾಜ್ಯಕ್ಕೆ,  ದೇಶಕ್ಕೆ ಒಳ್ಳೆಯ ಹೆಸರು ತಂದುಕೊಡುವುದು. ಜನ ಮನ್ನಣೆ ಗಳಿಸುವುದು. ಈ ಸಾಧನೆಗಳಿಗೆ ವಿಶೇಷ ಆಸಕ್ತಿ ಮತ್ತು ಬುಧ್ಧಿವಂತಿಕೆ ಇದ್ದವರು ಮಾತ್ರ ಇವುಗಳನ್ನು ಸಾಧಿಸಲು ಸಾದ್ಯ. ಇನ್ನು ಕೆಲವರು  ಚಿಕ್ಕವರಿದ್ದಾಗ ಡಾಕ್ಟರರನ್ನ, ಇಂಜಿನಿಯರ್, ಲಾಯರ್ ನನ್ನೊ, ನೋಡಿ ತಾನು ಆ ರೀತಿ ಉದ್ಯೋಗ ಪಡೆದು ಜೀವನದಲ್ಲಿ ಸಾರ್ಥಕತೆ ಪಡೆಯುವುದು.  ಇನ್ನು ಹೇಳುತ್ತಾ ಹೋದರೆ ಸಾಧನೆ ಅನ್ನೋ ಪದಕ್ಕೆ ದೊಡ್ಡ ಪುಸ್ತಕ ಬರೆಯುವಸ್ಟು ವಿಷಯಗಳು ಸಿಗುತ್ತವೆ.



ಆದರೆ ಸಾಮಾನ್ಯ ಮನುಷ್ಯನಿಗೆ ಸಾಧನೆ ಅಂದ್ರೆ ಏನು? ಸಾಮಾನ್ಯವಾಗಿ ಚಿಕ್ಕ ಪುಟ್ಟ ಕೆಲಸ ಅಥವಾ ಜವಾಬ್ದಾರಿಗಳನ್ನು ಮಾಡಿ ಅದೇ ನಮ್ಮ ಜೀವನದ  ಸಾಧನೆ ಅಂತ  ನಾವೆಲ್ಲರೂ ಖುಷಿಯಿಂದ ಹೇಳಿಕೊಳ್ಳುತ್ತಿರುತ್ತೇವೆ. ಇತ್ತೀಚೆಗಸ್ಟ ಈ ಸಾಧನೆ ಅನ್ನೋ ವಿಷಯವಾಗಿ ನಾ ಓದಿದ  what's up ಸಂದೇಶವೊಂದು  ನನಗೆ ತುಂಬಾ ಇಷ್ಟವಾಯಿತು. ಇಂಗ್ಲಿಷ್ನಲ್ಲಿದ್ದ ಕಾರಣ ಅದನ್ನು  ನಾನು ಕನ್ನಡದಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ. ಆ ಪ್ರಯತ್ನದಲ್ಲಿ ನನಗೆ ಸರಿಯೆನಿಸಿದ ಪದಗಳನ್ನು ಸೇರಿಸಿದ್ದೇನೆ. ಅದೇನಂದ್ರೆ,



ಸಾಧನೆ ಅಂದ್ರೆ ಏನು?

ನಮ್ಮ 4 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ತನ್ನ ಬಟ್ಟೆ ಮತ್ತು ಹಾಸಿಗೆ ಒದ್ದೆ ಮಾಡದೇ ಇರುವುದು.

ನಮ್ಮ 8 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ನಮ್ಮ ಮನೆಗೆ ಬರುವ ದಾರಿಯನ್ನು ನೆನಪಿಟ್ಟುಕೊಂಡು ಮನೆಗೆ ಬರುವುದು.

ನಮ್ಮ 12 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಗೆಳೆಯರನ್ನ ಸಂಪಾದಿಸಿಕೊಳ್ಳೋದು.

ನಮ್ಮ 18 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಡ್ರೈವಿಂಗ್ ಲೈಸನ್ಸ್ ಪಡೆಯೋದು.

ನಮ್ಮ 23 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಸ್ನಾತಕೋತ್ತರ ಪದವಿ ಪಡೆಯೋದು.

ನಮ್ಮ 25 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ದುಡಿಮೆ ಶುರು ಮಾಡುವುದು.

ನಮ್ಮ 30 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಮದುವೆಯಾಗಿ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳುವದು.

ನಮ್ಮ 35 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಹಣ ಸಂಪಾದಿಸುವುದು.

ನಮ್ಮ 45 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಜವಾಬ್ದಾರಿ ವ್ಯಕ್ತಿಯಾಗಿ ಮನೆತನ ನಿಭಾಯಿಸುವದು.

ನಮ್ಮ 50 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಮಕ್ಕಳಿಗೆ ಒಳ್ಳೆಯ ವಿದ್ಯಾಬ್ಯಾಸ ಮಾಡಿಸುವುದು.

ನಮ್ಮ 55 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ತಮ್ಮ ಕರ್ತವ್ಯಗಳನ್ನ ನಿಭಾಯಿಸಲು ಸಮರ್ಥರಾಗಿರುವುದು.

ನಮ್ಮ 60 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಡ್ರೈವಿಂಗ್ ಲೈಸೆನ್ಸ್ ಹೊಂದಲು ಯೋಗ್ಯರಾಗಿರುವುದು.

ನಮ್ಮ 65 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಯಾವುದೇ ಖಾಯಿಲೆಗಲಿಲ್ಲದೆಇರುವುದು.

ನಮ್ಮ 70 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ತನಗೆ ಮತ್ತು ಸುತ್ತಲಿನವರಿಗೆ  ಬೇಜಾರೆನಿಸದೆ ಬದುಕುವುದು.

ನಮ್ಮ 75 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಹಳೆ ಸ್ನೇಹಿತರನ್ನು ಮತ್ತೆ ಸೇರುವುದು.

ನಮ್ಮ 80 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ಮನೆ ದಾರಿ ಮರೆಯದಿರುವುದು.

ನಮ್ಮ 85 ನೇ ವಯಸ್ಸಿನಲ್ಲಿ ಸಾಧನೆ ಅಂದ್ರೆ,
ತನ್ನ ಬಟ್ಟೆ ಮತ್ತು ಹಾಸಿಗೆ ಒದ್ದೆ ಮಾಡಿಕೊಳ್ಳದಿರುವುದು.

ಈ ಮೆಸೇಜ್ ನಲ್ಲಿ ಬದುಕಿನ ಚಕ್ರದ ಅರಿವು ಇದೆ ಅಂತ ನಂಗೆ ಅನ್ನಿಸ್ತು. ಭೂಮಿ ಮೇಲಿನ ಪ್ರತಿ ಮನುಶ್ಯನ ಜೀವನದ ಸಾಧನೆಯ ಖುಷಿ ಇವುಗಳಲ್ಲಿದೆ. ಈ ಮೇಲಿನ ಎಲ್ಲ ವಿಚಾರಗಳು ನಮ್ಮೆಲ್ಲರ ಮನಸ್ಸಿನಲ್ಲಿ ಬಂದು ಹೋಗುತ್ತಿರುತ್ತವೆ. ನಾವು ಈ ವಯಸ್ಸಿನಲ್ಲಿ ಹೀಗೇ ಇರಬೇಕು ಅನ್ನೋ ಲೆಕ್ಕಹಾಕಿ ಯೋಚಿಸುತ್ತಿರುವಾಗ ಈ ಅಂಶಗಳು ನಮ್ಮ ಬದುಕಿನಲ್ಲಿ ಹೀಗೆ ನಡೀಬೇಕು ಅಂತ ಅಂದುಕೊಂಡಿದ್ದು ಇದೆ.

Monday 3 October 2016

ಗೂಳಿಗೆ ಕೆಂಪು ಬಣ್ಣ ಕಂಡ್ರೆ ಯಾಕೆ ಆಗೋಲ್ಲ?

ಇವಾಗ ದಸರಾ ರಜೆ. ಮಕ್ಕಳ ಶಾಲೆಗೆ ರಜೆ ಇರೋ ಕಾರಣ ಮನೇಲಿ ತುಂಬಾ ಗಲಾಟೆ ಜಾಸ್ತಿ ಆಗಿದೆ. ಇವರ ಗಲಾಟೆಲಿ ಮನಸ್ಸು ಪಿಚ್ಚ್ ಅಂತಾ ಇತ್ತು, ರಾತ್ರಿ ಊಟ ಆದಮೇಲೆ ಸ್ವಲ್ಪ ಮಕ್ಕಳನ್ನ ಆಚೆ ನಡೆದಾಡಿಸಿಕೊಂಡು ಬರೋಣ ಅಂತ ಎಲ್ಲ ರಾತ್ರಿ ವಾಕಿಂಗ್ ಹೊರಟ್ವಿ, ದಾರಿಲಿ ಮಕ್ಕಳ ಪ್ರಶ್ನಾವಳಿ ಶುರು ಆಯಿತು. ಮಕ್ಕಳೆಂದರೆ ಹಾಗೆ ಅಲ್ವೇ?. ತಮ್ಮ ಸುತ್ತಮುತ್ತ ಏನೇ ನಡೆದರೂ ಅದನ್ನ ತಿಳಿದುಕೊಳ್ಳೂವರೆಗೂ ಅಥವಾ ಅವರ ಮನಸ್ಸಿಗೆ ಸಮಾಧಾನ ಅಗೂವರೆಗೂ ನಾವು ಉತ್ತರ ಕೊಡುತ್ತಲೇ ಇರಬೇಕು. ಇವತ್ತು ಉತ್ತರ ಕೊಡದಿದ್ದರೂ ಮತ್ತೊಂದು ದಿನ ಆ ಪ್ರಶ್ನೆ ನಮ್ಮನ್ನ ಕೇಳೆಕೇಳ್ತಾರೆ.



ಸ್ವಲ್ಪ ದಿನದಿಂದಿನ ಕತೆ ಇದು.  ನಾವು ಊರಿಗೆ ಹೋದಾಗ ಒಂದು ಹಸು ದಾರೀಲಿ ಬರ್ತಾಯಿತ್ತು. ಆಗ ಅವರ ಅಜ್ಜಿ- ತಾತ, ಪ್ರಣವನಿಗೆ ಹೇಳಿದ್ರು, ಆ ಗೂಳಿ ಸರಿಯಿಲ್ಲ. ಕೆಂಪು ಬಟ್ಟೆ ಹಾಕ್ಕೊಂಡಿದಿಯ ಬಾರೋ ಈ ಕಡೆ. ಕೆಂಪು ಬಟ್ಟೆ ಕಂಡ್ರೆ ಅದು ಗುದ್ದೋಕೆ  ಬರುತ್ತೆ ಅಂತ.  ಅವತ್ತು ಅವನಲ್ಲಿ ಹುಟ್ಟಿದ "ಯಾಕೆ ಗೂಳಿಗಳಿಗೆ ಕೆಂಪು ಬಟ್ಟೆ ಕಂಡ್ರೆ ಆಗಲ್ಲ?" ಅನ್ನೋ ಪ್ರಶ್ನೆಯನ್ನ ಮತ್ತೆ ಮತ್ತೆ ಕೇಳ್ತಾನೆ ಇರ್ತಾನೆ. ಇದಕ್ಕೆ ಉತ್ತರ ನಮಗಾರಿಗೂ ಗೊತ್ತಿರ್ಲಿಲ್ಲ. ಬೇರೆಯವರನ್ನ ಕೇಳಿ ತಿಳ್ಕೊಳ್ಳೋ ತಾಳ್ಮೆನೂ ಇರದ ನಾವು ಏನೋ ಒಂದು ಕಾರಣ ಹೇಳಿ ತಪ್ಪಿಸ್ಕೋತ ಇದ್ವಿ.

ಮೊನ್ನೆ ವಾಕಿಂಗ್ ಹೊತ್ತಲ್ಲೂ ಮತ್ತೆ ಈ ಪ್ರಶ್ನೆನ ಕೇಳದ. ಅದಕ್ಕೆ ಅವನ ಅಪ್ಪನಿಗೆ ಈ  ಪ್ರಶ್ನೆ  ಕೇಳಿದರೆ ಉತ್ತರ ಸಿಗುತ್ತೆ ಅಂದೆ. ಆದ್ರೆ ಅವರಿಂದ ಸಿಕ್ಕ ಉತ್ತರ ಗೂಗಲ್ನಲ್ಲಿ  ಹುಡುಕಿ ಹೇಳು. ಈ ಸರಿನಾದ್ರೂ ಸರಿ ಉತ್ರ ಕೊಡ್ಬೇಕು ಅಂತ ನಿರ್ಧಾರ ಮಾಡಿ ಗೂಗಲ್ ಮಾಡಿದ್ಮೇಲೆ ನನಗೆ ಸಿಕ್ಕ ವಿವರ ಇಲ್ಲಿ ಬರೀತಾ ಇದ್ದೀನಿ.

ಗೂಳಿಗೂ ಮತ್ತು ಕೆಂಪು ಬಣ್ಣಕ್ಕೂ ಯಾಕೆ ಆಗಿಬರೋಲ್ಲ ಅನ್ನೋ ನನ್ನ ಮಗನ ಪ್ರಶ್ನೆಗೆ ಸಿಕ್ಕ ಇನ್ಫಾರ್ಮೇಷನ್ ಗಳು ಹೀಗಿದ್ವು.

ನಿಜವಾಗ್ಲೂ ಗೂಳಿಗೆ ಕೆಂಪು ಬಣ್ಣ ಕಂಡ್ರೆ ಆಗೋಲ್ವ? ಯಾಕೆ ಹೀಗೆ? ಬರೀ ಗೂಳಿಗೆ ಮಾತ್ರನಾ  ಅಥವಾ ಇತರೆ ಪ್ರಾಣಿಗಳಿಗೂ ಹೀಗೆ ಬೇರೆ ಬೇರೆ ಬಣ್ಣಗಳ ಬಗ್ಗೆ ಅಸಮಧಾನ ಆಗುತ್ತಾ?!

ಹೌದು, ಪ್ರಕೃತಿಯಲ್ಲಿ ಎಲ್ಲ ಪ್ರಾಣಿಗಳಿಗೂ ಒಂದೊಂದು ಕೊಡುಗೆ ಮತ್ತು ಕೊರತೆಗಳು ಇವೆ.  ಉದಾಹರಣೆಗೆ ನಾವು ಬೆಳಕಿನ ಪ್ರಭಾವ ಇಲ್ಲದೆ ಕತ್ತಲಲ್ಲಿ ಯಾವ ವಸ್ತುವನ್ನು ನೋಡಲಾಗುವುದಿಲ್ಲ. ಆದರೆ ಬೆಕ್ಕು, ಹುಲಿಯಂಥ ಪ್ರಾಣಿಗಳು ಕತ್ತಲಲ್ಲೂ ತನ್ನ ಬೇಟೆ ಹುಡುಕುವಸ್ಟ್ ಉತ್ತಮ ಕಣ್ಣುಗಳನ್ನು ಹೊಂದಿವೆ.

ಕೆಲವರ ಪ್ರಕಾರ ಗೂಳಿಯ ಕಣ್ಣಿಗೆ ಕೆಂಪುಬಣ್ಣದ ಕುರುಡುತನವಿದೆ (colorblind to red) ಎಂದು ಹೇಳುತ್ತಾರೆ. ಗೂಳಿಗೆ ತಮ್ಮ ಮುಂದಿರುವ ವಸ್ತುಗಳ ನಡುವೆ ಎಲ್ಲ ಬಣ್ಣದ ವಸ್ತುಗಳು ಕಂಡು ಈ ಕೆಂಪು ಬಣ್ಣದ ವಸ್ತು ಕಾಣದಿದ್ದಾಗ, ಅದು ಕಣ್ಣು ಮುಚ್ಚಿದ ಹಾಗು ಕೋರೈಸುವ ರೀತಿ ಅನುಭವ ಆಗಿ ಭಯಕ್ಕೋ ಅಥವಾ ಕೋಪಕ್ಕೋ ಆ ರೀತಿ ಕೆಂಪು ಬಣ್ಣ ದ ಮೇಲೆ ದಾಳಿ ಮಾಡುತ್ತವೆ ಎನ್ನಲಾಗುತ್ತದೆ.

ಸಾಮಾನ್ಯವಾಗಿ ಎಲ್ಲರ ನಂಬಿಕೆ ಏನು ಅಂದ್ರೆ ಗೂಳಿಗೆ ಕೆಂಪು ಬಣ್ಣ ಕಂಡ್ರೆ ಆಗೋಲ್ಲ ಅಂತ. ಇದಕ್ಕೆ 2007 ರಲ್ಲಿ, discovery channels ನ myth busters ತಂಡ ಗೂಳಿ ಮತ್ತು 3 ಬಣ್ಣಗಳ ಜೊತೆ ಒಂದು ಪ್ರಯೋಗ ನಡೆಸುತ್ತಾರೆ.

ಮೊದಲನೆಯದಾಗಿ, ಗೂಳಿಯ ಮುಂದೆ ಕೆಂಪು, ನೀಲಿ, ಮತ್ತು ಬಿಳಿಯ 3 ಬಣ್ಣದ ಬಾವುಟಗಳನ್ನ ಗೂಳಿಯ ಮುಂದೆ ತಂದಿಡುತ್ತಾರೆ. ಗೂಳಿಯು ಯಾವುದೇ ಬಣ್ಣದ ಭೇದವಿಲ್ಲದೆ ಆ ಬಾವುಟಗಳ ಮೇಲೇ ನುಗ್ಗುತ್ತದೆ.
ಎರೆಡನೆಯದಾಗಿ, ಮತ್ತೆ ಈ ಮೂರೂ ಬಣ್ಣದ (ಕೆಂಪು, ನೀಲಿ, ಬಿಳಿ ) ಬಟ್ಟೆ ತೊಟ್ಟಿರುವ ನಕಲಿ ವಸ್ತುಗಳನ್ನು ಗೂಳಿಯ ಮುಂದೆ ತರುತ್ತಾರೆ. ಆಗಲು ಗೂಳಿಯು ಯಾವುದೇ ಬಣ್ಣದ ಭೇದವಿಲ್ಲದೆ ಆ ವಸ್ತುಗಳನ್ನು ಮೇಲೆ ಹಾಯುತ್ತದೆ.

ಮೂರನೆಯದಾಗಿ, ಅವೇ ಮೂರೂ ಬಣ್ಣದ (ಕೆಂಪು, ನೀಲಿ, ಬಿಳಿ) ಬಟ್ಟೆಗಳನ್ನು ತೊಟ್ಟ ಮನುಶ್ಯರ ನ್ನು ಗೂಳಿಯ ಮುಂದೆ ನಿಲ್ಲಿಸುತ್ತಾರೆ. ಆದರೆ ಅದು ಕೆಂಪು ಬಣ್ಣದ ವ್ಯಕ್ತಿಯನ್ನು ಬಿಟ್ಟು, ಮೊದಲು ನೀಲಿ ಮತ್ತು ಬಿಳಿ ಬಣ್ಣದ ವ್ಯಕ್ತಿಗಳ ಮೇಲೆ ಮೊದಲು ಹಾಯ್ದು ನಂತರ ಕೆಂಪು ಬಣ್ಣದ ವ್ಯಕ್ತಿಯ ಮೇಲೆ ಹಾಯುತ್ತದೆ.

ಈ ಪ್ರಯೋಗದ ಮೇಲೆ ಅವರ ಹೇಳಿಕೆ- ಗೂಳಿಗೆ ಅಥವಾ ಕೆಲವು  ಪ್ರಾಣಿಗಳಿಗೆ ಕೆಂಪು ಸೇರಿಸಿ ಕೆಲವು ಬಣ್ಣಗಳ ಕುರುಡುತನ ಇರುತ್ತದೆ. ಆ ಬಣ್ಣದ ವಸ್ತು ಅಥವಾ ವ್ಯಕ್ತಿ ಆ ಪ್ರಾಣಿಗಳ ಮುಂದೆ  ಬಂದಾಗ ಕಣ್ಣು ಮುಚ್ಚಿದ , ಹಾಗೂ ಬೇರೆ ಬಣ್ಣಗಳ ವಸ್ತುಗಳ ಜೊತೆ ಆ ಬಣ್ಣವು ಕಾಣದಿದ್ದಾಗ ಅದು ಗೊಂದಲಕ್ಕೀಡಾಗಿ ಕೊಪಗೊಂಡು,  ಆ ಕಾಣದ ಬಣ್ಣದ ವಸ್ತುವಿನ ಮೇಲೆ ಹಾಯ್ದು ಕೋಪ ತೋರಿಸಿಕೊಳ್ಳುತ್ತವೆ. ಎಂದು ಹೇಳಲಾಗುತ್ತದೆ.


Saturday 24 September 2016

ಮಕ್ಕಳು - ಮಾನಸಿಕ ಒತ್ತಡಗಳು - ಕಾರಣಗಳು - ಸಲಹೆಗಳು


ಈಗಿನ ಓಟದ ಜಗತ್ತಿನಲ್ಲಿ, 'ಸ್ಪರ್ಧೆ'ಗೆ ಮೊದಲನೆಯ ಆಧ್ಯತೆ. ಒಬ್ಬರಿಗಿಂತ ಒಬ್ಬರು ಓದಿನಲ್ಲಿ, ದುಡ್ಡಿನಲ್ಲಿ, ಆಸ್ತಿಯಲ್ಲಿ, ಸಾಮಾಜಿಕ ಗೌರವ ಹೊಂದುವಲ್ಲಿ.. ಹೀಗೆ ಒಂದಲ್ಲ ಒಂದರಲ್ಲಿ ಅಕ್ಕಪಕ್ಕದವರೊಡನೆ ತಮ್ಮನ್ನು ಹೋಲಿಸಿಕೊಳ್ಳುತ್ತಾ.. ಅವರಿಗಿಂತ ನಾವು ಒಂದು ಕೈ ಮೇಲೇ ಇರಬೇಕು ಅನ್ನೋದನ್ನ ತಲೇಲಿ ಇರಿಸಿಕೊಂಡೇ ಜೀವನ ನಡೆಸುತ್ತಿರುತ್ತಾರೆ. ಜೀವನದಲ್ಲಿ ಖುಷಿಯಾಗಿರುವುದನ್ನೇ ಮರೆತಿದ್ದಾನೆ ಅನ್ಸುತ್ತೆ ಈ ಮನುಷ್ಯ. ಪ್ರಾಣಿಯಾಗಿದ್ದಾಗಲೇ ಆತನಿಗೆ ಹೆಚ್ಚು ಖುಷಿಯಿತ್ತೇನೋ ;) ಅನ್ನಿಸುತ್ತಿದೆ. ಮನುಶ್ಯತ್ವ ಗುಣದಿಂದಲೇ ಮಾನವನಾದ ಈ ಪ್ರಾಣಿ, ತನ್ನ ಸ್ಪರ್ಧಾ ಮನಸ್ಥಿತಿಯಿಂದ ಪ್ರಾಣಿಗಿಂತ ಕಡೆಯಾದ ನೀಚ ಪ್ರಾಣಿಯಾಗುತ್ತಿದ್ದಾನೆ. ಹಾಗೆ ಒತ್ತಡದ ಬದುಕನ್ನು ತನ್ನದಾಗಿಸಿಕೊಂಡಿದ್ದಾನೆ ಜೊತೆಗೆ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದಾನೆ. ಹಾಗೆಯೇ ಅದೇ ಬದುಕನ್ನು ತನ್ನ ಮಕ್ಕಳಿಗೆ ಬಳುವಳಿಯಾಗಿ ಕೊಡುತ್ತಿದ್ದಾನೇನೋ ಅನ್ನುವ ಅನುಮಾನ ಬರದೆ ಇರಲ್ಲ.  




ಮಗುವಿನ ಅಸಹಜ ವರ್ತನೆಗಳಿಗೆ ಹಲವು ಕಾರಣಗಳಿರಬಹುದು.  ಲಂಡನ್ ನ ಮಾನಸಿಕ ತಜ್ಞರ ತಂಡವೊಂದು, ಈ ಬಗ್ಗೆ ಒಂದು ಸಂಶೋದನೆ ನಡೆಸಿತು. ಈ ಭಾಗವಾಗಿ ಅದು ಅಸಹಜ ವರ್ತನೆಯ ಮಕ್ಕಳ ಜೊತೆ ಅವರ ಹೆತ್ತವರನ್ನೂ ಪರೀಕ್ಷೆಗೆ ಒಳಪಡಿಸಿತು. ಇದರಿಂದ ಅಂದು ಕುತೂಹಲಕಾರಿಯಾದ ಅಂಶ ಹೊರ ಬಂತು. 

ಯಾವ್ಯಾವ ಮಕ್ಕಳು ಅಸಹಜವಾಗಿ, ಹಿಂಸಾತ್ಮಕವಾಗಿ ವರ್ತನೆ ಮಾಡುತ್ತಾರೋ ಅಂತಹ ಮಕ್ಕಳ ಹೆತ್ತವರು ಮಾನಸಿಕ ಒತ್ತಡಕ್ಕೆ ಮತ್ತು ಖಿನ್ನತೆಗೆ ಒಳಗಾಗಿದ್ದವರು ಮತ್ತು ಅಸಹಜ, ಹಿಂಸಾತ್ಮಕ ಪ್ರಕೃತಿಯವರೇ ಆಗಿದ್ದರು ಅನ್ನುವದನ್ನ ಈ ತಂಡ ಸ್ಪಷ್ಟವಾಗಿ ಗುರ್ತಿಸಿತು. ತಂದೆ-ತಾಯಿಯರಲ್ಲಿ ಮಾನಸಿಕ ಒತ್ತಡಗಳು ಮತ್ತು ಖಿನ್ನತೆಗಳು ಇದ್ದಾಗ ಅವರ ಮಕ್ಕಳು ಬೇರೆ ಮಕ್ಕಳಿಗಿಂತ ಎರಡು ಪಟ್ಟು ಬೇಗನೆ ಮಾನಸಿಕ ತೊಂದರೆಗಳಿಗೆ ಒಳಗಾಗುತ್ತಾರೆ ಎಂದು ಈ ವರದಿ ಹೇಳುತ್ತೆ. 





ತಂದೆ-ತಾಯಂದಿರಲ್ಲಿ ಕಂಡುಬಂದ ಮಾನಸಿಕ ಸಮಸ್ಯೆಗಳು--
ಕೆಲವು ತಂದೆತಾಯಂದಿರು ಸಿಟ್ಟಾದಾಗ ಕಿರುಚುವುದು, ಇಬ್ಬಗೆಯ / ಗೊಂದಲದ ಮನಸ್ಥಿತಿ, ತುಮುಲಗಳು, ಮಾನಸಿಕ ಒತ್ತಡ, ಕೆಟ್ಟ ಶಬ್ಧಗಳನ್ನು ಬಯ್ಯುವಾಗ ಬಳಸುವುದು ಮತ್ತು ಆತ್ಮಹತ್ಯೆಯಂತಹ ಅಪರಾಧಗಳು ಇಂತಹ ಮಾನಸಿಕ ಸಮಸ್ಯೆಗಳನ್ನು ಹೊಂದಿದ್ದರು. 


ಈ ಎಲ್ಲ ಸಮಸ್ಯೆಗಳು ಅವರ ಮಕ್ಕಳುಗಳಲ್ಲಿ, ಬೇರೆ ಮಕ್ಕಳಿಗಿಂತ ಎರೆಡುಪಟ್ಟು ಹೆಚ್ಚಾಗಿ ಮಾನಸಿಕ ಸಮಸ್ಯೆಗಳು ಇವರ ಮಕ್ಕಳುಗಳಲ್ಲಿ ಕಂಡುಬಂದಿವೆ. ಮಾನಸಿಕವಾಗಿ ಆರೋಗ್ಯದಿಂದಿರುವ ಮಕ್ಕಳ ತಂದೆ-ತಾಯಿಯರು ಈ ಮೇಲೆ ಸೂಚಿಸಿದ ಯಾವುದೇ ರೀತಿಯ ಮಾನಸಿಕ ತೊಂದರೆಗಳು ಕಂಡುಬಂದಿಲ್ಲ.


ತಂದೆ-ತಾಯಿಯರ ಮಾನಸಿಕ ಖಿನ್ನತೆಯ ಪರಿಣಾಮವಾಗಿ ಮಕ್ಕಳ ವ್ಯಕ್ತಿತ್ವ--
ಯಾವ ಮಕ್ಕಳ ತಂದೆತಾಯಿಯರ ಇತಿಹಾಸದಲ್ಲಿ ಮಾನಸಿಕ ಖಿನ್ನತೆಗಳು ಇರುತ್ತವೂ ಅಂಥಹ ಮಕ್ಕಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮನೋಭಾವ ಮತ್ತು ತಮ್ಮನ್ನು ತಾವು ಹಿಂಸಿಸಿಕೊಳ್ಳುವ ಮನಸ್ಥಿತಿ  ಹೆಚ್ಚಾಗಿ ಕಂಡುಬಂದಿದೆ ಮತ್ತು ಸಮಾಜ ಘಾತುಕ ಕೆಲಸಗಳಲ್ಲಿ ಪಾಲ್ಗೊಳ್ಳುವವರು ಇವರೇ. ಉದಾಹರಣೆಗೆ ಕಳ್ಳತನ, ಕೊಲೆಗಾರ, ವ್ಯವಸ್ಥೆಯ ವಿರುಧ್ಧ ತಿರುಗಿಬೀಳುವ ಹೀಗೇ ಇನ್ನು ಹಲವು ವಿಕೃತ ಸಮಾಜ ವಿರೋಧಿ ಕೆಲಸಗಳಿಗೆ ಬೇಗ ಒಳಗಾಗುತ್ತಾರೆ. ಕೆಲವೊಮ್ಮೆ ಅವರ ಕೌಟುಂಬಿಕ ಕಲಹಗಳು, ಮಕ್ಕಳಿಗೆ ಕಿರಿಕಿರಿ ಎನಿಸುವ ಸಂಪ್ರದಾಯಗಳು, ಆರ್ಥಿಕ ಪರಿಸ್ಥಿತಿ ಇವೂ ಕೂಡ ಒಮ್ಮೊಮ್ಮೆ ಮಕ್ಕಳ ಮಾನಸಿಕ ಆರೋಗ್ಯ ಹಾಳಾಗಲು ಕಾರಣವಾಗಿರುತ್ತವೆ.

ಈ ಮಾನಸಿಕ ರೋಗಗಳಿಂದ ಮಕ್ಕಳನ್ನು ಹೇಗೆ ಕಾಪಾಡೋದು?
ಈ ರೀತಿಯ ಮಾನಸಿಕ ತೊಂದರೆಗೆ ಒಳಗಾದ ಮಕ್ಕಳ ಜೊತೆ ಕೂತು ಮಾತಾಡಿ. ಅವರ ಸಮಸ್ಯೆ ಏನೆಂದು ಗುರುತಿಸಿಕೊಳ್ಳಿ. ಕೆಲವೊಮ್ಮೆ ನಿಮ್ಮ ಬೆಚ್ಚಗಿನ ಪ್ರೀತಿಯ ಮಾತುಗಳು ಅವರಿಗೆ ಮಾನಸಿಕ ಗೊಂದಲಗಳಿಂದ ಆಚೆ ಬರಲು ಸಹಾಯಕವಾಗಬಹುದು. ಸಮಸ್ಯೆ ನಿಮ್ಮ ಕೈ ಮೀರಿ ಹೋಗಿದ್ದಲ್ಲಿ ಮಾನಸಿಕ ತಜ್ಞರೊಡನೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವುದು ಒಳ್ಳೆಯ ನಿರ್ಧಾರ.



ಮಕ್ಕಳನ್ನು ಮಾನಸಿಕ ಖಿನ್ನತೆಯಿಂದ ಹೊರತರಲು 8 ಸಲಹೆಗಳು--
  1. ಮಕ್ಕಳಲಾಗುವ ಬದಲಾವಣೆಗಳನ್ನು ಗಮನಿಸುತ್ತಿರಿ.
  2. ಮಕ್ಕಳ ನಡವಳಿಕೆಗಳನ್ನು ಎಲ್ಲ ದೃಷ್ಟಿಕೋನಗಳಿಂದ ಅಳೆದು ತೂಗಿ.
  3. ಹೊರಗಿನ ಪ್ರಪಂಚದಲ್ಲಿ ನಿಮ್ಮ ಮಕ್ಕಳ ನಡವಳಿಕೆಯ ಬಗ್ಗೆ ವಿಷಯ ಸಂಗ್ರಹಿಸಿ.
  4. ಮಕ್ಕಳೊಂದಿಗೆ ಗೆಳೆಯರಂತೆ ಇರಿ.
  5. ಮಕ್ಕಳು ನಿಮ್ಮೊಡನೆ ಮುಕ್ತವಾಗಿ ಮಾತಾಡಲು ಅವಕಾಶ ಕೊಡಿ. ಮಕ್ಕಳೊಡನೆ ನೀವು ಮಕ್ಕಳಾಗಿ.
  6. ಸಮಸ್ಯೆ ಗಂಭೀರ ವಾಗಿದ್ದರೆ ಮಾನಸಿಕ ತಜ್ಞರ ಜೊತೆ ಚರ್ಚಿಸಿ ಸಹಾಯ ಪಡೆಯಿರಿ.
  7. ಆತ್ಮಹತ್ಯೆಯ ವಿಶ್ಹಯವನ್ನು ಸಹ ನಿಮ್ಮ ಮಕ್ಕಳೊಡನೆ ಚರ್ಚಿಸಿ.
  8. ಮಕ್ಕಳ ನಡವಳಿಕೆಯ ಬಗ್ಗೆ ಒಂದು ಸೂಕ್ತ ನಿರ್ಧಾರ ತೆಗೆದುಕೊಳ್ಳಿ. ಮಕ್ಕಳ ನಿಲುವುಗಳನ್ನು ಗೌರವಿಸಿ. 


Thursday 8 September 2016

ರೈತ ಸ್ನೇಹಿ ಮತ್ತು ಬಾಂಧವ್ಯಗಳನ್ನ ಉಳಿಸಿಕೊಡುವ ಆಚರಣೆಯಾಗಿ ಗೌರಿ-ಗಣೇಶ ಹಬ್ಬ

ಗೌರಿ-ಗಣೇಶ ಹಬ್ಬ ಜನರಲ್ಲಿ ಸಂಬಂಧಗಳನ್ನ ಉಳಿಸಿಕೊಡುವ ಮತ್ತು ಗಟ್ಟಿಗೊಳಿಸುವ ಹಬ್ಬ ಎಂದೇ ಹೇಳಬಹುದು. ಏಕೆಂದರೆ ಈ ಹಬ್ಬವನ್ನು ಮಾಡುವ ಸಲುವಾಗಿ ಅಣ್ಣತಮ್ಮಂದಿರಿಗೆ ತನ್ನ ಅಕ್ಕತಂಗಿಯರ ನೆನಪು ಆಗುತ್ತದೆ. ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿದ ನಂತರ ಅಣ್ಣ ತಮ್ಮಂದಿರು ಅವರುಗಳ ಮನೆಗೆ ಹೋಗಿ ಬಾಗಿನ ಅಥವಾ ಕಾಯಿಕಣ ಕೊಡುವ ರೂಢಿ ಈ ಹಬ್ಬದಲ್ಲಿದೆ. ಈ ಹಬ್ಬ ಬಂದಾಗ ಅಕ್ಕ ತಂಗಿಯರು ತಮ್ಮ ಅಣ್ಣ ತಮ್ಮಂದಿರು ತವರಿನಿಂದ ಯಾರು ಬರಲಿಲ್ಲವೆಂದು ಮತ್ತು ಬಾಗಿನ ಕಾಯಿಕಣ ಕೊಡಲು ಅಣ್ಣ ತಮ್ಮಂದಿರು ಅಕ್ಕತಂಗಿಯರ ಮನೆಗೆ ಹೋಗುವ ಪ್ರಸಂಗಗಳು, ಚಿಕ್ಕ ಮಕ್ಕಳುಗಳು ತಮ್ಮ ಸೋದರಮಾವನ ಬರುವಿಕೆಗೆ ಕಾಯುವ ಪ್ರಸಂಗಗಳು, ನಮ್ಮ ಜಾನಪದ ಹಾಡುಗಳಲ್ಲಿ ವರ್ಣಿತವಾಗಿವೆ.

ನನ್ನ ತವರೂರಿನ ಕಡೆ ಗೌರೀ ಪೂಜೆಯ ನಂತ್ರ ಹುತ್ತಕ್ಕೆ ಪೂಜೆ ಮಾಡಿ,  ಹಾಲನ್ನು ತನೆ  ಎರೆದು ಅಲ್ಲಿಯೇ ಊಟ ಮಾಡಿ ಬರುವ ವಾಡಿಕೆ ಇದೆ. ಆಗ ನಮಗೆ ಈ ಸಾಲುಗಳನ್ನ ಹೇಳಿಕೊಡುತ್ತಿದ್ದರು, ಅದು ಯಾಕೆ? ಏನು? ಅಂತ ನಂಗು ಆಗ ಗೊತ್ತಿರ್ಲಿಲ್ಲ. ಅದನ್ನ ನೆನಪಿಸಿಕೊಂಡು ಇಲ್ಲಿ ಬರೆದಿದೀನಿ.

ತನ್ನಿರೆ ಹಾಲ ತನಿ ಎರೆಯೋಣ 
ತಾಯ ಹಾಲ ಋಣ ತೀರಿಪ ಇಂದೇ ಪುಣ್ಯ ದಿನ 
ತಣ್ಣಗಿರಲಿ ಬೆನ್ನು ಉದರ ಅಣ್ಣ ತಮ್ಮ0ದಿರ 
ಕಾಯ ನೀಡಿದ ತಾಯಿ ಕರುಳು ನೋಯದಿರಲೆಂದು
ತವರಿನ ಕೀರ್ತಿ ಘನತೆ ಬೆಳಗಲೆಂದೆಂದು ।। 
ಒಂದೆ ಬಸಿರು ಒಂದೆ ಉಸಿರು ಅಂಟಿಕೊಂಡಂಥ
ನನ್ನ ಅಣ್ಣನ ಬಾಳ ಬಳ್ಳಿ ಬಾಡದಿರಲೆಂದು 
ನಲಿವಿನ ತುಂಬು ಜೀವನ ಆಗಲೆಂದೆಂದು ।। 
ತಂದೆ ಯಾರೋ ತಾಯಿ ಯಾರೋ ಯಾವುದೂ ಅರಿಯೇ 
ದೇವರಂಥ ಅಣ್ಣನಿರಲು ಸಂತಸಕೆ ಕೊರೆಯೇ 
ಆತನ ಪ್ರೀತಿ ಆದರ ಎಂದಿಗೂ ಮರೆಯೇ ।।






ಬಾಗಿನದಲ್ಲಿ ಇರಿಸುವ ವಸ್ತುಗಳು.---
ಮೊರ, ಹರಿಶಿನ, ಕುಂಕುಮ. ಎಲೆ ಅಡಿಕೆ, ಜೋಡಿ ತೆಂಗಿನಕಾಯಿ, ಗಾಜಿನ ಬಳೆಗಳು, ಹೂವು ಹಣ್ಣುಗಳು, ತರಕಾರಿಗಳು  ಅಕ್ಕಿ, ಬೇಳೆ,  ಅಂಗುನೂಲು, ಅಕ್ಷತೆ,  ಬಟ್ಟೆ, ಸೀರೆ ಕುಪ್ಪಸ, ಕನ್ನಡಿ,  ಬಾಚಣಿಕೆ, ಕರ್ಜೀಕಾಯಿ, ಚಕ್ಕುಲಿ ಇನ್ನು ಮುಂತಾದುವು.

ಕಾಯಿಕಣದಲ್ಲಿ ಇರಿಸುವ ವಸ್ತುಗಳು.-------
ಬಟ್ಟೆ, ಹರಿಶಿನ, ಕುಂಕುಮ, ಅಕ್ಕಿ, ಬೇಳೆ, ಕಾಳು, ತೆಂಗಿನಕಾಯಿ, ಹೂ- ಹಣ್ಣು, ತರಕಾರಿಗಳು, ಕನ್ನಡಿ, ಬಾಚಣಿಕೆ, ಬಳೆಗಳು, ಉಂಡೆಗಳು, ಸಿಹಿ ಮತ್ತು ಖಾರದ ತಿನಿಸುಗಳು, ಆ ಸಮಯದಲ್ಲಿ ತಮ್ಮ ಹೊಲಗಳಲ್ಲಿ ಮತ್ತು ತೋಟಗಳಲ್ಲಿ ಬೆಳೆದಿರುವ ವಸ್ತುಗಳು  ಇತ್ಯಾದಿ.

ಗೌರಿ-ಗಣೇಶಹಬ್ಬದ ಪೌರಾಣಿಕ ಕಥೆ------
ಗೌರಿ-ಗಣೇಶ ಹಬ್ಬವೆಂದರೆ ವಿಷಯವಾಗಿ ಒಂದು  ಪೌರಾಣಿಕ ಕಥೆ ಇದೆ. ಗೌರಿ ಶಿವನ  ಹೆಂಡತಿ, ಪರ್ವತ ರಾಜನ ಮಗಳು ಭೂಮಿಯು ಆಕೆಯ ತವರು, ಕೈಲಾಸದಿಂದ ವರ್ಷಕ್ಕೊಮೆ ಗೌರಿ ತವರಿಗೆ ಬರುವ ದಿನವನ್ನ ಗೌರಿಹಬ್ಬ ಎಂತಲೂ ತನ್ನ ತಾಯಿಯನ್ನು ತವರಿನಿಂದ ಕೈಲಾಸಕ್ಕೆ ಹಿಂತಿರುಗಿ ಕರೆದುಕೊಂಡು ಹೋಗಲು ಮಾರನೇ ದಿನ ಗಣೇಶ ಬರುವ ದಿನವನ್ನು ಗಣೇಶ ಹಬ್ಬ ಎಂತಲೂ ಆಚರಿಸಲಾಗುತ್ತದೆ. ಈ ಎರೆಡು ಹಬ್ಬಗಳು ಜೊತೆಯಲ್ಲೇ ಬರುವುದರಿಂದ ಈ ಹಬ್ಬಗಳನ್ನು ಜೊತೆಯಾಗಿ ಗೌರಿ-ಗಣೀಶ ಹಬ್ಬ ಎಂದು ಕರೆಯುತ್ತಾರೆ.


ಕೃಷಿಗೂ ಈ ಹಬ್ಬಕ್ಕೂ ಇರುವ ನಂಟು ------
ನಮ್ಮದು ಕೃಷಿ ಪ್ರಧಾನ  ದೇಶ ಹಾಗಾಗಿ ಈ ಹಬ್ಬವನ್ನು ರೈತಾಪಿ ಜನರ ದೃಷ್ಟಿಯಿಂದ ನೋಡಿದಾಗ ಸಾಮಾನ್ಯವಾಗಿ ಈ ಹಬ್ಬ ಬರುವುದು ಬಿತ್ತನೆ ಮುಗಿದು ಪೈರು ಬಂದಿರುವ  ಕಾಲದಲ್ಲಿ.  ಈ ಸಮಯದಲ್ಲಿ ಪರಸ್ಪರ ಬಾಗಿಣ ಕಾಯಿಕಣ ಕೊಡುವ ರೂಪದಲ್ಲಿ ಸಂಬಂಧಿಕರ ಮನೆಗೆ ಹೋಗಿ ಬೆಳೆಗಳು ಹೇಗೆ ಬಂದಿವೆ ಎಂಬ ವಿಷಯಗಳ ಬಗ್ಗೆ ಮಾತಾಡಲು ಅವಕಾಶ ದೊರೆತಂತೆ ಆಗುತಿತ್ತು. ಹಿಂದಿನ ಕಾಲದಲ್ಲಿ ಆರ್ಥಿಕ ವಿನಿಮಯ ದುಡ್ಡಿನ ಮೂಲಕ ಆಗುತ್ತಿರಲಿಲ್ಲ ಪರಸ್ಪರ ವಸ್ತುಗಳ ವಿನಿಮಯ ಪದ್ಧತಿ ಇತ್ತು (ಕಡ ಕೊಟ್ಟು ಕಡ ತೆಗೆದುಕೊಳ್ಳುವುದು ) ತಾವು ಬೆಳೆದ ಬೆಳೆ ಚೆನ್ನಾಗಿ ಆದ್ರೆ ಯಾವ ಯಾವ ವಸ್ತುಗಳನ್ನು ಎಸ್ಟೆಸ್ಟು ಕಡ ಕೊಟ್ಟು ಕಡ ತೆಗೆದುಕೊಳ್ಳಬಹುದು ಎಂಬ ಮಾತುಕತೆಗಳು ಹಿಂದಿನ ಕಾಲದಲ್ಲಿ ನಡೆಯುತಿದ್ದವು ಎಂದೆನಿಸುತ್ತಿದೆ. ಆಗ ಅಕ್ಕತಂಗಿಯರು ತನ್ನ ತವರಿಂದ ಬಂದ ಬಾಗಿನ ಅಥವಾ ಕಾಯಿಕಣದಲ್ಲಿನ ವಸ್ತುಗಳನ್ನು ನೋಡಿ ತನ್ನ ತವರಿನ ಆರ್ಥಿಕತೆಯನ್ನು   ಅರ್ಥ ಮಾಡಿಕೊಳ್ಳುತಿದ್ದಳು ಎಂದು ಕೆಲವೊಂದು ಜಾನಪದ ಹಾಡುಗಳಲ್ಲಿ ನಾವು ಕೇಳಿದ್ದೇವೆ.

ಕುಟುಂಬ ಸಮಾನತೆ ಸಾರುವಲ್ಲಿ-- 
ಇನ್ನು ಕೆಲವು ಊರುಗಳಲ್ಲಿ ಮನೆಯಲ್ಲಿ ಗೌರಿಯನ್ನು ತಂದಿರಿಸಿ ಹೆಣ್ಣುಮಕ್ಕಳಿಗೆ ಬಾಗಿನ ಕೊಡಿಸಿದ ನಂತರ ನಾಗಪ್ಪನಿಗೆ ತನೆಯರೆಯುವುದು ರೂಢಿಯಲ್ಲಿದೆ. ತಮ್ಮ ತಮ್ಮ ತೋಟ, ಹೊಲ ಜಮೀನುಗಳಲ್ಲಿ  ಇರುವ ನಾಗಪ್ಪನ ಹುತ್ತ ಅಥವಾ ನಾಗಪ್ಪನ ಕಲ್ಲುಗಳು ಇರುವ ಜಾಗಕ್ಕೆ ತಮ್ಮ ಮನೆಯಲ್ಲಿ ಗೌರಿ ಹಬ್ಬದ ಅಡುಗೆಯನ್ನೆಲ್ಲ ತೆಗೆದುಕೊಂಡು ಹೋಗಿ ಅಲ್ಲಿ ಪೂಜೆ ಮಾಡಿ, ಎಡಿ ಮಾಡಿ, ಅಲ್ಲೇ ಊಟ ಮಾಡುವ ರೂಢಿ ಇದೆ. ಅಲ್ಲಿನ ಪೂಜೆ ಯಲ್ಲೂ ವಿಶೇಷತೆ ಇದೆ. ಅಲ್ಲಿ ಬೆರಣಿಯಿಂದ ಮಾಡಿದ ಗಣೇಶನನ್ನು ಇಡುತ್ತಾರೆ, ಹತ್ತಿಯನ್ನು ದುಂಡಗೆ ಮಾಡಿ ಮದ್ಯಕ್ಕೆ ಮಸಿ ಹಚ್ಚಿ ಮೂರೂ ಕಣ್ಣುಗಳನ್ನು ಹುತ್ತಕ್ಕೆ ಇಡುತ್ತಾರೆ, ನಾಗರ ಹಾವು ಸುಬ್ರಮಣ್ಯ, ಹತ್ತಿಯ ಮೂರೂ ಕಣ್ಣುಗಳು ಶಿವನ ಗುರುತು, ಬೆರಣಿಯ ಗಣೇಶ ಆ ಮೂವರನ್ನು ಪೂಜಿಸಿದಂತೆ ಆಗುತ್ತದೆ. ಮನೆಯಲ್ಲಿ ಗೌರಿ ಪೂಜೆ ಒಟ್ಟಿನಲ್ಲಿ ಶಿವನ ಕುಟುಂಬಕ್ಕೆ  ಆದರದ ಸತ್ಕಾರ ಈ ಹಬ್ಬದಲ್ಲಿ ಸಿಗುತ್ತದೆ.

ಪೈರಿನ ರಕ್ಷಣೆಯ ಪಾಠ ----
ಹುತ್ತಕ್ಕೆ ಹುರಿದ ಜೋಳದ ಕಾಳನ್ನು ಹಾಕುವ ರೂಢಿಯಿದೆ. ನೆನೆಸಿದ ಶೇಂಗ, ಕಡಲೆಕಾಳು, ಹೆಸರುಕಾಳು ಅಲ್ಲಿ ಚೆಲ್ಲಿ ಬರುತ್ತಾರೆ. ನಾವು ಚಿಕ್ಕವರಿದ್ದಾಗ ಇವನ್ನೆಲ್ಲ ತಿನ್ನೋದು ಬಿಟ್ಟು ಯಾಕೆ ಹೀಗೆ ಚೆಲ್ಲ್ತಾರೆ ಅಂತ ಗೊತ್ತಾಗ್ತಾ ಇರ್ಲಿಲ್ಲ. ಈಗ ಸ್ವಲ್ಪ ಆಲೋಚನೆ ಮಾಡಿದಾಗ ಅನ್ನಿಸಿದ್ದು, ಇದು ಒಳ್ಳೆಯ ಬೆಲೆಯ ಕಾಲವಾದ್ದರಿಂದ ಇಲಿಗಳು ಮತ್ತು ಪಕ್ಷಿಗಳು ತಮ್ಮ ಬೆಲೆಯನ್ನು ತಿಂದು ಹಾಳುಮಾಡಿಯಾವು ಎಂದು  ಮಳೆಗಾಲವಾದ್ದರಿಂದ ಇಲಿ ಮತ್ತು ಪಕ್ಷಿಗಳನ್ನು ತಿನ್ನುವ ಹಾವುಗಳಿಗೆ ಸುಲಭವಾಗಲಿ ಬೇಟೆ ಸಿಗಲಿ ಎಂಬ ಉದ್ದೇಶದಿಂದ ಈ ಆಚರಣೆ ಬೆಳಕಿಗೆ ಬಂದಿರಬಹುದು ಎನಿಸಿತು.

ಅವೇನೆ ಕಾರಣಗಳು ಇರಲಿ ಅಣ್ಣ-ತಂಗಿಯರು ತಾವು  ಸಾಯುವವರೆಗೂ  ಪರಸ್ಪರ ತಮ್ಮ ಕಷ್ಟ ಸುಖಗಳಲ್ಲಿ  ಒಬ್ಬರಿಗೊಬ್ಬರು ಆಗಿಬರುತ್ತಾರೆ. ಈಗಿನ ಓಟದ ಜೀವನದಲ್ಲಿ ಪ್ರತಿದಿನ ಭೇಟಿಮಾಡಲು ಆಗದಿದ್ದರು ಈ ಗೌರಿ-ಗಣೇಶ ಹಬ್ಬಗಳಲ್ಲಿ ಮಾತ್ರ ಅಣ್ಣ ತಮ್ಮಂದಿರು ತನ್ನ ಅಕ್ಕ ತಂಗಿಯರ ಮನೆಗೆ ಹೋಗಿ ಯೋಗಕ್ಷೇಮ ವಿಚಾರಿಸುತ್ತಾರೆ. ಇಲ್ಲಿ ಬಾಗಿನ ಮತ್ತು ಕಾಯಿಕಣ ಸಂಬಂಧವನ್ನು ಉಳಿಸಿಕೊಳ್ಳಲು ಅಥವಾ  ಗಟ್ಟಿಗೊಳಿಸಲು ಇರುವ ಒಂದು ಆಚರಣೆಯ ಕೊಂಡಿ.




ಇನ್ನು ಕೆಲವು ಕಡೆಗಳಲ್ಲಿ ಹಿಂದೂ, ಮುಸ್ಲಿಂ ,ಕ್ರಿಸ್ತ ,ಜೈನ, ಸಿಕ್ಖ್ ಎಲ್ಲರು ಈ ಗಣೇಶ ಹಬ್ಬದಲ್ಲಿ ತಮ್ಮಲ್ಲಿಯ ಭೇದವನ್ನು ಮರೆತು ಈ ಹಬ್ಬದ ಆಚರಣೆಯಲ್ಲಿ  ಭಾಗಿಯಾಗುತ್ತಾರೆ.


Monday 29 August 2016

ಇದು ಕಣ್ಣೆಂಬ ಕ್ಯಾಮೆರಾ ವಿಷಯ. ಯಾಕೆ ಹೀಗೆ ?

ನಿಮಗೆ ಎಂದಾದರೂ ಆಶ್ಚರ್ಯ  ಆಗಿದ್ಯ ಬೆಕ್ಕಿನ ಕಣ್ಣಿನ ಪಾಪೆ ಏಕೆ ಸೀಳು ರೀತಿಯಲ್ಲಿದೆ ಅಂತ. ಮತ್ತೆ ಕುರಿಯ ಕಣ್ಣಿನ ಪಾಪೆ ಯಾಕೆ  ಅಡ್ಡ ಮಲಗಿದಂತೆ ಇದೆ ಅಂತ. ಕಟಲ್ ಫಿಶ್ನ ಕಣ್ಣ ಪಾಪೆ ಯಾಕೆ W ಆಕಾರದಲ್ಲಿದೆ. ಮಾನವನ ಕಣ್ಣಿನ ಪಾಪೆ ಯಾಕೆ ದುಂಡಗೆ ಇದೆ ಅಂತ?

  ಅಮೆರಿಕಾದ Berkeley ಯ,  ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ Martin Banks ಮತ್ತು ಅವರ ಸಹಪಾಠಿಗಳು ಸುಮಾರು ಭೂಮಿಯ ಮೇಲಿನ  200 ಪ್ರಾಣಿಗಳ ಮೇಲೆ ತಮ್ಮ ರಿಸರ್ಚ್ ನಡೆಸಿ ಹಲವು ರೀತಿಯ ಕಣ್ಣಿನ ಪಾಪೆಯ ರಚನೆಯ ಚಲನ ವಲನ ಮತ್ತು ಅವುಗಳ ಕಾರ್ಯ ವೈಖರಿಯ ಬಗ್ಗೆ ವಿವರವಾಗಿ ಅದ್ಯಯನ ಮಾಡಿ ಹೇಳಿಕೆಯನ್ನು ನೀಡಿದ್ದಾರೆ.

ಬೆಕ್ಕಿನ ಕಣ್ಣಿನ ಪಾಪೆ :-


ಬೆಳಕಿನ ಆಧಾರದ ಮೇಲೆ ಬೆಕ್ಕಿನ ಕಣ್ಣಿನ ಮಸೂರವು ಸೀಳಿದ ರೀತಿಯಲ್ಲಿ ಬಾದಾಮಿರೀತಿ ಇರುತ್ತೆ. ಅಡ್ಡ ದುಂಡಗೆ ಹೀಗೆ ಬದಲಾಗುತ್ತಿರುತ್ತದೆ. ಮೇಲೆ ಕೆಳಗೆ ಅಗಲ ಹೀಗೆ ಪರದೆಯ ರೀತಿ ಅದು ಕಣ್ಣಿನ ಮಾಂಸ ಖಂಡಗಳಲ್ಲಿ ಚಿಕ್ಕದು ಮತ್ತು ದೊಡ್ಡದು ಹೀಗೆ ಬದಲಾಗುತ್ತಾ ಇರುತ್ತದೆ. ಒಟ್ಟಾಗಿ ಹೇಳಬೇಕೆಂದ್ರೆ ಬೆಕ್ಕಿನ ಕಣ್ಣಿನ ಮಸುರವು 135 ರೀತಿಯಲ್ಲಿ ಸರಿದಾಡುವ  ಸಾಮರ್ಥ್ಯ ಹೊಂದಿದೆ.  ಮಾನವನ ಕಣ್ಣಿನ ಮಸೂರ 15 ರೀತಿಯಲ್ಲಿ  ಮಾತ್ರ ತಿರುಗಾಡುವ ಸಾಮರ್ಥ್ಯ ಹೊಂದಿದೆ.

ಈ ಸೀಳಿದ ಆಕಾರದ ಕಣ್ಣಿನ ಪಾಪೆಯು ಬೆಳಕನ್ನು ಕಂಟ್ರೋಲ್ ಮಾಡುವ ಗುಣ ಹೊಂದಿದೆ. ಇದು ಬೆಕ್ಕು ರಾತ್ರಿ ಮತ್ತ್ತು ಹಗಲು ಎರೆಡು ಬೆಳಕಿನಲ್ಲಿ ಬೇಟೆಯಾಡಲು ಸಹಾಯಕವಾಗಿದೆ ಎಂದು ಲಂಡನ್ ನ  city ಯೂನಿವರ್ಸಿಟಿಯ  Ron Douglas ಎಂಬ ಜೀವಶಾಸ್ತ್ರಜ್ಞರು  ಹೇಳಿದ್ದಾರೆ.

ಮಾರ್ಟಿನ್ ಬ್ಯಾಂಕ್ಸ್ ರ ವರದಿ  ಪ್ರಕಾರ, ಸೀಳು ಆಕಾರದ ಪಾಪೆ ಹೊಂದಿರುವ ಪ್ರಾಣಿಗಳಾದ ಹಾವು ಮತ್ತು ಬೆಕ್ಕುಗಳು ರಾತ್ರಿ- ಹಗಲು ಎಂಬ ಭೇದವಿಲ್ಲದೆ  ಬೇಟೆ ಆಡಲು ಈ ಸೀಳು ಕಣ್ಣಿನ ಚಲನೆಯ ವೈಖರಿಯು ಒಂದು ಕಾರಣ  ಎಂದು ಹೇಳಿದ್ದಾರೆ. ಈ ಸೀಳು ಕಣ್ಣಿನ ಮಸೂರ ಅವುಗಳಿಗೆ ವರ ಅಂತಾನೆ ಹೇಳಬಹುದು. ಈ ರೀತಿಯ ರಚನೆ ಹೊಂದಿದ ಪ್ರಾಣಿಗಳು ಎಷ್ಟು  ದೂರದಲ್ಲಿ ತನ್ನ ಬೇಟೆ ಇದೆ ಮತ್ತು ಬೇಟೆ ತಲುಪಲು ಎಷ್ಟು  ಶಕ್ತಿ ಸಾಮರ್ಥ್ಯ ಬೇಕು ಎಂದು ಮೆದುಳಿಗೆ ಗುರಿ ನಿರ್ಧರಿಸಲು ಸಹಾಯಮಾಡುತ್ತವೆ ಎಂದು ಹೇಳುತ್ತಾರೆ.

ಕುರಿಗಳ ಕಣ್ಣಿನ ಅಡ್ಡಪಾಪೆ :-





ಕುರಿಗಳ ಕಣ್ಣಿನ ಪಾಪೆಯ ಸಾಮರ್ಥ್ಯಕ್ಕೂ ಮತ್ತು ಬೆಕ್ಕಿನ ಕಣ್ಣಿನ ಪಾಪೆಗೂ ಅಂಥಾ  ವ್ಯತ್ಯಾಸ ಕಂಡುಬರುವುದಿಲ್ಲ. ಆಕಾರದಲ್ಲಿ ಬದಲಾವಣೆಯಿದೆ. ಇದು ಸಾಮಾನ್ಯವಾಗಿ ಅಡ್ಡ ವಾಗಿ ಮಲಗಿದಂತೆ ಕಾಣುತ್ತದೆ. ನೆಲದ ಮೇಲೆ ನಡೆಯುವ ಸಸ್ಯಾಹಾರಿ ಪ್ರಾಣಿಗಳು ಸಾಮಾನ್ಯವಾಗಿ ಈ ರೀತಿಯ ಕಣ್ಣುಗಳನ್ನು ಹೊಂದಿವೆ. ಕಣ್ಣುಗಳು ಮುಖದ ಮುಂದಿನ ಭಾಗದಲ್ಲಿರದೆ ಅಕ್ಕ ಪಕ್ಕ ಇರುತ್ತವೆ. ಆದರು ಇವು ಸುತ್ತಮುತ್ತಲಿನ ವಸ್ತುಗಳನ್ನು ನೋಡಲು ಸಹಾಯಕವಾಗಿವೆ ಎಂದು Ron Douglas ಅಭಿಪ್ರಾಯ

ಪಟ್ಟಿದ್ದಾರೆ. ಕುರಿಗಳು ಯಾವಾಗಲು ನೆಲದ ಮೇಲಿರುವ ಹುಲ್ಲನ್ನು ಮೇಯಲು ತಲೆ ಭಾಗ ಯಾವಾಗಲು ಕೆಳಗೆ ಇರುತ್ತದೆ. ಆದರೆ ಕಣ್ಣುಗಳು ಮಾತ್ರ ತಿರುಗುತಾ ಸುತ್ತ ಮುತ್ತ ನಡೆಯುವುದನ್ನು ನೋಡುತ್ತಿರುತ್ತವೆ. ಈ ರೀತಿಯ ಕಣ್ಣುಗಳ ಉಪಯೋಗ ಏನೆಂದರೆ ಸೂರ್ಯನ ಅತಿ ಪ್ರಖರ ಕಿರಣಗಳಿಂದ ಕಣ್ಣಿನ ರಕ್ಷಣೆ ಯಾಗುತ್ತೆ. ಅಡ್ಡ ಕಣ್ಣಿನ ಪಾಪೆ ಹೊಂದಿರುವ ಪ್ರಮುಖ ಪ್ರಾಣಿಗಳು ಕುರಿ ಮೇಕೆ, ಕುದುರೆ.

ಕಟಲ್ ಮೀನಿನ w ಆಕಾರದ  ಕಣ್ಣಿನ ಪಾಪೆ:-



ಎಲ್ಲ ಆಕಾರದ ಕಣ್ಣಿನ ಪಾಪೆಗಿಂತ ಆಶ್ಚರ್ಯ ತರಿಸುವುದು ಈ ಕಟಲ್ ಮೀನಿನ ಪಾಪೆ. ಇದು  w ಆಕಾರದಲ್ಲಿದ್ದು ಮಾನವನ  ಕಣ್ಣಿಗಿಂತ ಎರಡರಸ್ಟು ನಿಖರವಾಗಿ ಮತ್ತು ಎರಡರಸ್ಟು ಫಾಸ್ಟ್ ಆಗಿ ಕೆಲಸ ನಿರ್ವಹಿಸುತ್ತದೆ. ಇದು ಕೂಡ ಅಡ್ಡ, ಉದ್ದ ಮತ್ತು ದುಂಡಗೆ, ಮೇಲೆ- ಕೆಳಗೆ,  ಚಿಕ್ಕದು- ದೊಡ್ಡದು ಹೀಗೆ ಚಲಿಸುವ ಗುಣ ಹೊಂದಿದೆ.

ಮಾನವನ ಕಣ್ಣಿನ ದುಂಡಗಿನಪಾಪೆ :- 

ಮನುಸ್ಯನಿಗೆ ಕಣ್ಣಿನ ಪಾಪೆ ದುಂಡಗೆ ಇದ್ದು  ಪ್ರಕೃತಿಯ ಚಿತ್ರಣವನ್ನು ಮೆದುಳಿಗೆ ರವಾನಿಸುವ ಕೆಲಸ ಮಾಡುತ್ತದೆ. ಅಲ್ಲದೆ ಅಳು- ನಗು, ಸುಖ- ದುಃಖ, ಇನ್ನು ಅನೇಕ ಭಾವನೆಗಳನ್ನು ಈ ಕಣ್ಣಿನ ಮೂಲಕವೇ ಮಾನವ ತೋರಿಸುತ್ತಾನೆ. ಸೂರ್ಯನ ಬೆಳಕಿನಲ್ಲಿ ಇದು ತುಂಬಾ ಚೆನ್ನಾಗಿ ಕೆಲಸ ನಿರ್ವಹಿಸುತ್ತದೆ. ರಾತ್ರಿ ಸಮಯದಲ್ಲಿ ಇದು ಕಡಿಮೆ. ಬೆಳಕಿನ ಕಿರಣ ವಸ್ತುವಿನ ಮೇಲೆ ಬಿದ್ದಾಗ ಮಾತ್ರ ಇದು ವಸ್ತುವಿನ ಬಗ್ಗೆ ನಿಖರ ಚಿತ್ರಣವನ್ನು  ಮೆದುಳಿಗೆ ಕಳುಹಿಸಲು ಸಾದ್ಯ.

ಸಾಮಾನ್ಯವಾಗಿ ಕಣ್ಣುಗಳು ಎರೆಡು ಇದ್ದರು ನೋಡುವ ನೋಟ ಒಂದೇ. ಎರೆಡು ಕಣ್ಣುಗಳು ಒಂದೇ ಚಿತ್ರ ಪಟವನ್ನು ಮೆದುಳಿಗೆ ಕಳಿಸುತ್ತವೆ. ಇದನ್ನು stereopsis ಎಂದು ಕರೆಯುತ್ತಾರೆ.ಒಂದು ಚಿಕ್ಕ ಪ್ರಯೋಗ ಮಾಡಿ ನೋಡಿ ಒಂದು ಕಣ್ಣು ಮುಚ್ಚಿಕೊಂಡು ಮೆಟ್ಟಿಲಿ ಇಳಿದು ಮತ್ತು ಎರೆಡು ಕಣ್ಣು ತೆರೆದು ಮೆಟ್ಟಿಲುಗಳನ್ನು ಇಳಿಯಲು ಪ್ರಯತ್ನಿಸಿ ನೋಡಿ ಯಾವುದು ನಿರಾಯಾಸವಾಗಿ ಮಾಡಬಹುದು. ನಮ್ಮ ಕಣ್ಣಿನ ನೋಟದ ದಿ ಬೆಸ್ಟ್ ಪಿಕ್ಚರ್ ಕಣ್ಣಿನ ಪಾಪೆಯ ಮೂಲಕ ನಮ್ಮ ಮೆದುಳಿಗೆ ರವಾನೆಯಾಗುತ್ತದೆ.

ಕಣ್ಣಿನ ಪಾಪೆಗಳು ದಿ ಬೆಸ್ಟ್ ಫೋಟೋಗ್ರಫೆರ್ ಅಂತ ಹೇಳಬಹುದು. ಏಕೆಂದರೆ ವಸ್ತುಗಳ ದೂರ ಹತ್ತಿರ ,ಮಂದ, ಪ್ರಖರ , ಬಣ್ಣದ ಚಿಕ್ಕ-ದೊಡ್ಡ ಹೀಗೆ ವಸ್ತುಗಳ ಎಲ್ಲ ಮಾಹಿತಿಯನ್ನು ಮೆದುಳಿಗೆ ಕಳಿಸುತ್ತದೆ. ಯಾವುದರ ಮೇಲೆ ಫೋಕಸ್ ಮಾಡಬೇಕು ಎಂಬ ಮೆದುಳಿನ ಆಜ್ಞೆಯನ್ನು ಪಾಲಿಸುತ್ತಾ ಮೆದುಳಿಗೆ ಬೇಕಾದ ಚಿತ್ರವನ್ನು ತೋರಿಸುತ್ತದೆ. ಸೂರ್ಯನ ಬೆಳಕಿನಲ್ಲಿ ಅದು ನಿಖರವಾಗಿ ಕೆಲಸ ಮಾಡುತ್ತದೆ. ರಾತ್ರಿಯಲ್ಲಿ ಹತ್ತಿರದ ವಸ್ತುಗಳ ನೋಟ ಮಾತ್ರ ನಿಖರವಾಗಿರುತ್ತವೆ.



Sunday 21 August 2016

ಚಿತ್ರದುರ್ಗದ R.ನುಲೇನೂರಿನಲ್ಲಿ ನೆಲೆಸಿರುವ, ಹಠಯೋಗಿ -ಕಾಯಕಯೋಗಿ - ವಚನಕಾರ ನುಲಿಯ ಚಂದಯ್ಯ

 ಶರಣರಲ್ಲಿ "ಕಾಯವೇ ಕೈಲಾಸ" ಅಂತ ಪ್ರತಿಪಾದಿಸಿ, ನಂಬಿ ಬದುಕಿದ ಜನರಿಗೆ ಎಷ್ಟು ಮಹತ್ವವಿದೆಯೋ, ಅಸ್ಟೇ ಮಹತ್ವ "ಕಾಯಕವೇ ಕೈಲಾಸ" ಅಂತ ನಂಬಿ ಬದುಕಿದವರಿಗಿದೆ. "ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರ ಲಿಂಗವಾಯಿತ್ತಾದರರೂ ಕಾಯಕದೊಳಗೆ ಅ೦ದು ನಂಬಿ ಬದುಕಿದ ಆಯ್ದಕ್ಕಿ ಮಾರಯ್ಯನವರದ್ದು ಒಂದು ಎತ್ತರವಾದರೆ,  "ಕಾಡಿನ ಸೋಪ್ಪಾಯಿತ್ತಾದಡೂ ಕಾಯಕದಿಂದ ಬಂದುದು ಲಿಂಗಾರ್ಪಿತ" ಎಂದು ಬಾಳಿ ಬದುಕಿ ದಾರಿ ತೋರಿದ ನುಲಿಯಚಂದಯ್ಯನವರದ್ದು ಇನ್ನೊಂದು ಎತ್ತರ. ಇವರ ಬಗ್ಗೆ ಒಂದು ಸಣ್ಣ ವಿವರ ಹೀಗಿದೆ.


ವಚನಕಾರ - ನುಲಿಯ ಚಂದಯ್ಯ
ಜನ್ಮಸ್ಥಳ- ಶಿವಣಗಿ ಬಿಜಾಪುರ ಜಿಲ್ಲೆ
ಕಾಲ- 1160
ಅಂಕಿತನಾಮ- ಚಂದೇಶ್ವರಲಿಂಗ
ಲಭ್ಯ ವಚನಗಳ ಸಂಖ್ಯೆ- 48
ಕಾಯಕ- ಹಗ್ಗ ಹೊಸೆದು ಮಾರುವುದು
ಸಮಾಧಿ ಇರುವ ಸ್ಥಳ- ಆರ್.ನುಲೇನೂರು, ಚಿತ್ರದುರ್ಗ ಜಿಲ್ಲೆ.
ಕೃತಿಯ ವೈಶಿಸ್ಟ್ಯ- ಕಾಯಕ ನಿಸ್ಟೆ ಮತ್ತು ಜಂಗಮ ದಾಸೋಹ, ಇವರ ವಚನಗಳಲ್ಲಿ ಗಮನಾರ್ಹವಾದವು.


ನುಲಿಯ ಚಂದಯ್ಯರ ಸಮಾಧಿ ಮೇಲೆ ಈಗ ಇಟ್ಟಿರುವ ಮೂರ್ತಿ. 

ನುಲಿಯ ಚಂದಯ್ಯ ಬಸವಣ್ಣನವರ ಸಮಾಕಾಲೀನರು ಮತ್ತು ಅವರ ಜೊತೆ ಕೈಜೋಡಿಸಿದ ಪ್ರಮುಖ ಶರಣರಲ್ಲಿ ಒಬ್ಬರು .
ನುಲಿಯ ಚಂದಯ್ಯನವರ, ಇಡೀ ವಚನಗಳನ್ನು ಓದಿದಾಗ  ಗುರು -ಲಿಂಗ-ಜಂಗಮ ಮತ್ತು ಕಾಯಕ - ದಾಸೋಹ ಎನ್ನುವ ಅಂಶಗಳ  ಬಗ್ಗೆ ಆಳವಾದ  ಒಳಹುಗಳು ತಿಳಿಯುತ್ತದೆ. ತಾನು ಕಾಯಕ ನಿರತನಾಗಿ ಪ್ರತಿನಿತ್ಯದ ಅನ್ನವನ್ನು ತಾನೇ ದುಡಿದು ತಿನ್ನಬೇಕು ಎನ್ನುವ ಕಾಯಕ ಸಿದ್ದಾಂತ ಅವರದಾಗಿತ್ತು. ಅದು ಆತನ ಇಷ್ಟದೈವ ಚಂದೇಶ್ವರ ಲಿಂಗಕ್ಕೆ ಒಪ್ಪುವುದು ಎಂದು ನಂಬಿದ್ದರು.


ಕಾಯಕ ಮತ್ತು ದಾಸೋಹದ ಮೂಲಕ ಸಮಾಜಕ್ಕೆ ಬೆಳಕು ನೀಡಿದವರಲ್ಲಿ ನುಲಿಯ ಚಂದಯ್ಯರೂ ಒಬ್ಬರು. ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಶಿವಣಗಿ. ಮುಂದೆ ಕಲ್ಯಾಣಕ್ಕೆ ಬಂದು, ಕಾಯಕ ದಾಸೋಹಗಳಲ್ಲಿ ತನ್ನನ್ನು  ತೊಡಗಿಸಿಕೊಂಡು ಇಷ್ಟಲಿಂಗದಲ್ಲಿ ಅತ್ಮೋನ್ನತಿ ಕಂಡುಕೊಂಡರು. ಮೆದೆ ಹುಲ್ಲಿನ ಹಗ್ಗ ಹೊಸೆಯುವ ಕಾಯಕ ಮಾಡಿ ಅದನ್ನ ಮಾರಿ ಬಂದ ಆದಾಯದಿಂದ ಗುರು ಲಿಂಗ ಜಂಗಮ ಸೇವೆಗೆ ಬಳಸುತ್ತಿದ್ದರು. ಚಂದೇಶ್ವರಲಿಂಗ  ಎಂಬ ಅಂಕಿತನಾಮದಲ್ಲಿ ಅವರು ರಚಿಸಿದ 48 ವಚನಗಳು ಲಭ್ಯವಾಗಿವೆ.

ಕಲ್ಯಾಣ ಕ್ರಾಂತಿಯ ನಂತರ ಚೆನ್ನಬಸವಣ್ಣರೊಡನೆ ನುಲಿಯ ಚಂದಯ್ಯ ಉಳಿವಿಗೆ ಬರುತ್ತಾರೆ. ಚೆನ್ನಬಸವಣ್ಣ ಶಿವೈಕ್ಯರಾದ ನಂತರ ಅನೇಕ ಶಿವಶರಣರು ವಿವಿಧೆಡೆಗೆ ಹಂಚಿಹೋಗುತ್ತಾರೆ. ಆಗ ಬಸವಣ್ಣನವರ ಸಹೋದರಿ ಅಕ್ಕ ನಾಗಮ್ಮರೊಂದಿಗೆ ಚಂದಯ್ಯನವರು ಕಾಯಕ ಧರ್ಮ ಪ್ರಚಾರ ಮಾಡುತ್ತಾ ಉಳವಿ, ಶಿವಮೊಗ್ಗ, ಎಣ್ಣೆಹೊಳೆ, ನಂದಿಗ್ರಾಮ, ಶಾಂತಿಸಾಗರ, ಬೆಂಕಿಕೆರೆ, ಇತರೆಡೆಗಳಲ್ಲಿ ಸಂಚರಿಸಿ ಹೊಳಲ್ಕೆರೆ ತಾಲ್ಲೂಕು ದುಮ್ಮಿ ಗ್ರಾಮಕ್ಕೆ ಬರುತ್ತಾರೆ. ಈ ಮದ್ಯದಲ್ಲಿ ಎತ್ತಿನ ಹೊಳೆತೀರದಲ್ಲಿ  ಅಕ್ಕ ನಾಗಮ್ಮ ಲಿಂಗೈಕ್ಯಳಾಗುತ್ತಾರೆ. ದುಮ್ಮಿ ಗ್ರಾಮದ  ದುಮ್ಮಣ್ಣ ನಾಯಕನ ಪತ್ನಿ ಪದ್ಮಾವತಿಯು ಚಂದಯ್ಯನವರ ವಿಚಾರಧಾರೆಯನ್ನು ಮೆಚ್ಚಿ ಲಿಂಗದೀಕ್ಷೆ ಪಡೆಯುತ್ತಾಳೆ. ಅರಮನೆಯಲ್ಲಿ ಆಶ್ರಯ ನೀಡುತ್ತಾಳೆ.  ಆದರೆ ನುಲಿಯ ಚಂದಯ್ಯ ಅರಮನೆ ವಾತಾವರಣ ತನ್ನ ಕಾಯಕ ಧರ್ಮಕ್ಕೆ ಒಗ್ಗದ ಕಾರಣ ಆ ಆಶ್ರಯವನ್ನು ನಿರಾಕರಿಸುತ್ತಾರೆ. ನಂತರ ಆಕೆ ತನ್ನ ತವರೂರು ಪದ್ಮಾವತಿ ಪಟ್ಟಣದ ಕೆರೆಯ ದಡದಲ್ಲಿ  (ಈಗಿನ ಆರ್. ನುಲೇನೂರು ಗ್ರಾಮ ) ಶಿಲಾ ಮಂಟಪ ನಿರ್ಮಿಸಿ ನಿತ್ಯ ಕಾಯಕ  ಮತ್ತು ದಾಸೋಹ ಮಾಡಲು ಕೇಳಿಕೊಳ್ಳುತ್ತಾಳೆ.  ಕೆರೆಯ ನೀರಿನ ಬಳಕೆಯ ವಿಷಯದಲ್ಲಿ ಕೆಲವರು ವಿರೋಧವನ್ನು ಮಾಡುತ್ತಾರೆ. ಆಗ ನುಲಿಯ ಚಂದಯ್ಯ ತನ್ನ ಊರುಗೋಲಿನಿಂದ ನೆಲವನ್ನು ಕುಕ್ಕುತ್ತಾರೆ. ಅಲ್ಲಿ ನೀರಿನ ಚಿಲುಮೆ ಏಳುತ್ತದೆ. ಅಲ್ಲಿ ಒಂದು ಬಾವಿಯನ್ನು ನಿರ್ಮಿಸಿ ಅದನ್ನು ತನ್ನ ಕಾಯಕಕ್ಕೆ ಬಳಸಿಕೊಳ್ಳುತ್ತಾರೆ. ಇದನ್ನು "ಚಂದಯ್ಯನ ಬಾವಿ" ಎಂದು ಕರೆಯುತ್ತಾರೆ. ಈ ಬಾವಿ ಈಗಲೂ ಆ ಗ್ರಾಮದಲ್ಲಿದೆ.

ನುಲೆನೂರಿನ ಕಲ್ಯಾಣಿ / ಹೊಂಡ
ನುಲಿಯ ಚಂದಯ್ಯ ತನ್ನ ಜೀವನದ ಕೊನೆಯ ದಿನಗಳವರೆಗೂ ಈ ಊರಲ್ಲೇ ನೆಲೆಸುತ್ತಾರೆ. ನುಲಿಯ ಚಂದಯ್ಯ ಬಾಳಿ ಬದುಕಿ ಲಿಂಗೈಕ್ಯರಾದ್ದರಿಂದ ಪದ್ಮಾವತಿ ಪಟ್ಟಣವಾಗಿದ್ದ ಊರು ಜನರ ಬಾಯಲ್ಲಿ "ನುಲಿಯಯ್ಯನೂರು" ಆಗಿ ಬಾಯಿಂದ ಬಾಯಿಗೆ ಬದಲಾಗುತ್ತಾ ಈಗ "ನುಲೇನೂರು" ಎಂದು ಕರೆಯಲಾಗುತ್ತಿದೆ.   ರಾಮಗಿರಿ ಹತ್ತಿರವಿರುವ ಕಾರಣ ಆರ್. ನುಲೇನೂರು ಎಂದು ಕರೆಯಲಾಗುತ್ತಿದೆ. (ಹೊಳೆಲ್ಕೆರೆ ತಾಲೂಕಿನಲ್ಲೇ ಟಿ. ನುಲೆನೂರು ಎಂಬ ಇನ್ನೊಂದು ಹಳ್ಳಿಇದೆ)  ಆರ್.ನುಲೇನೂರಿನಲ್ಲಿ ನುಲಿಯ ಚಂದಯ್ಯನವರ  ಸಮಾಧಿಯಿದೆ. ಈ ಸಮಾಧಿಗೆ ಒಂದು ಗುಡಿ ಕಟ್ಟಲಾಗಿದೆ.

ನುಲಿಯ ಚಂದಯ್ಯನ ಗುಡಿ / ಸಮಾಧಿ - ಆರ್ ನುಲೇನೂರು 
ಚಂದಯ್ಯನವರದ್ದು ಬಹುಮುಖ ವ್ಯಕ್ತಿತ್ವ. ಇವರ ನಡೆ ನುಡಿ ಕಾಯಕನಿಷ್ಟೆ ಪುರಾಣ ಕಥೆಗಳಲ್ಲಿ ವರ್ಣಿತವಾಗಿವೆ. ಹನ್ನೆರಡನೆಯ ಶತಮಾನದ ಶಿವಶರಣರಲ್ಲಿ ಇವರನ್ನು ಹಟಯೋಗಿ ಎಂದೂ ಕರೆಯುತ್ತಾರೆ. ಈ ಬಗ್ಗೆ ಒಂದು ಕತೆ ಪ್ರಚಲಿತದಲ್ಲಿದೆ. ಹುಲ್ಲನ್ನು ಕೊಯ್ದು, ಅದರಿಂದ ನಾರು ತೆಗೆದು,  ನಾರನ್ನು ನುಲಿದು,  ಹಗ್ಗಮಾಡಿ,  ಅದನ್ನು ಮಾರಿ ಬಂದ ಹಣದಲ್ಲಿ ಜೀವನ ನಡೆಸುತ್ತಿದ್ದ ಇವರು ಮೊದಲು ಜಂಗಮಕ್ಕೆ ಪ್ರಸಾದ ಅರ್ಪಿಸಿ ನಂತರವೇ ತಾನು ಪ್ರಸಾದ ಸ್ವೀಕರಿಸುತ್ತಿದ್ದರು. ಹೀಗೆಯೇ ಒಮ್ಮೆ ಹುಲ್ಲು ಕೊಯ್ಯುವಾಗ ಅವರ ಕೊರಳಲ್ಲಿದ್ದ ಲಿಂಗವು ಕಳಚಿ ಬೀಳುತ್ತದೆ. ತಾನು ಕಾಯಕ ಮಾಡುವಾಗ ತಾನಾಗಿ ಕಳಚಿಬಿದ್ದ ಲಿಂಗವನ್ನು  ಲೆಕ್ಕಿಸದೇ ತನ್ನ ಕಾಯಕದಲ್ಲಿ ಮಗ್ನನಾಗುತ್ತಾರೆ. ಆ ಲಿಂಗವನ್ನು ಎತ್ತಿಕೊಳ್ಳುವುದಿಲ್ಲ. ಕೊನೆಗೆ ಲಿಂಗವೇ ಅವರ ಬೆನ್ನು ಹತ್ತಿ ಹೋಯಿತು ಎಂಬಂಥಹ ಕಥೆ ಸ್ವಾರಸ್ಯಕರವಾಗಿದೆ.  ಕಾಯಕದಲ್ಲಿ ಕೈಲಾಸ ಕಂಡಂಥಹ ಶರಣ ಈ ನುಲಿಯ ಚಂದಯ್ಯ.

ನುಲಿಯ ಚಂದಯ್ಯರ ಸಮಾಧಿ ಮೇಲೆ ಈಗ ಇಟ್ಟಿರುವ ಮೂರ್ತಿ. 



ತನ್ನ ಇಷ್ಟಲಿಂಗದ ಕೈಯಲ್ಲೇ  ಹಗ್ಗ ಮಾರುವ ಕಾಯಕ ಮಾಡಿಸಿದವರೀತ ಎಂದು ಹೆಂಡದ ಮಾರಯ್ಯ ತನ್ನೊಂದು ವಚನದಲ್ಲಿ ಈತನ ಘನ ವ್ಯಕ್ತಿತ್ವವನ್ನು ನಾಟಕೀಯವಾಗಿ ನಿರೂಪಿಸಿದ್ದಾರೆ. ಈ  ಎಲ್ಲಾ ಕಾರಣಗಳಿಂದ ಈತನನ್ನು ಹಠಯೋಗಿ ಎಂದು ಕರೆಯಲ್ಪಟ್ಟಿದ್ದಾನೆ.



ನುಲಿಯ ಚಂದಯ್ಯನವರ ಕೆಲ ವಚನಗಳು!
ಕಂದಿಸಿ ಕುಂದಿಸಿ ಬಂಧಿಸಿ ಕಂಡವರ ಬೇಡಿತಂದು
ಜಂಗಮಕ್ಕೆ ಮಾಡಿದೆನೆಂಬ ದಂದುಗದೋಗರ ಲಿಂಗಕ್ಕೆ ನೈವೇದ್ಯ ಸಲ್ಲ.
ತನು ಕರಗಿ ಮನ ಬಳಲಿ ಬಂದ ಚರದ ಅನುವರಿತು
ಸಂದಿಲ್ಲದೆ ಸಂಶಯವಿಲ್ಲದೆ ಜಂಗಮಲಿಂಗಕ್ಕೆ
ದಾಸೋಹವ ಮಾಡುವುದೆ ಮಾಟ.
ಕಾಶಿಯಕಾಯಿ ಕಾಡಿನ ಸೊಪ್ಪಾಯಿತ್ತಾದಡೂ
ಕಾಯಕದಿಂದ ಬಂದುದು ಲಿಂಗಾರ್ಪಿತ.
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ನೈವೇದ್ಯ ಸಂದಿತ್ತು.
(ಸಮಗ್ರ ವಚನ ಸಂಪುಟ 7, ವಚನದ ಸಂಖ್ಯೆ 1291)

ಗುರು ಇಷ್ಟವ ಕೊಟ್ಟು ಕೂಲಿಗೆ ಕಟ್ಟಿದ ಲಿಂಗ
ವೃಷ್ಟವ ತೋರಿ ತನ್ನ ರಜತದ ಬೆಟ್ಟದ ಮೇಲಿರಿಸಿದ.
ಇಂತು ಗುರುಲಿಂಗಕ್ಕೆ ಮಾಡಿ
ಹಿಂದಣ ಮುಂದಣ ಸಂದೇಹಕ್ಕೀಡಾದೆ.
ಪ್ರಸಿದ್ಧವಪ್ಪ ಜಂಗಮಲಿಂಗಕ್ಕೆ ಸಂದೇಹವಿಲ್ಲದೆ
ಮನಸಂದು ಮಾಡಲಾಗಿ
ಚಂದೇಶ್ವರಲಿಂಗಕ್ಕೆ ಹಿಂದುಮುಂದೆಂಬುದಿಲ್ಲ.
(ಸಮಗ್ರ ವಚನ ಸಂಪುಟ 7, ವಚನದ ಸಂಖ್ಯೆ 1295)

ಶ್ರೀಗುರುವ ತಾನರಿದು ವರಗುರು ತಾನಾಗಬೇಕು.
ಲಿಂಗನೈಷಿ*ಕೆಯಾಗಿ ಪೂಜಿಸಿಕೊಳಬೇಕು.
ಜಂಗಮ ತಾ ತ್ರಿವಿಧವ ಮರೆದು
ಜಂಘ ನಾಸ್ತಿಯಾಗಿ ಜಂಗಮವಾಗಬೇಕು.
ಜಂಗಮಕ್ಕೆ ಮಾಡಿ ನೀಡಿ ಸಂದು ಸಂಶಯವನಳಿದು
ನಮ್ಮ ಚಂದೇಶ್ವರಲಿಂಗವನರಿಯಬೇಕು ಕಾಣಾ,
ಎಲೆ ಅಲ್ಲಮಪ್ರಭುವೆ.
(ಸಮಗ್ರ ವಚನ ಸಂಪುಟ 7, ವಚನದ ಸಂಖ್ಯೆ 1295)

ಇದಿರ ಭೂತಹಿತಕ್ಕಾಗಿ ಗುರುಭಕ್ತಿಯ ಮಾಡಲಿಲ್ಲ.
ಅರ್ತಿಗಾರಿಕೆಗಾಗಿ ಲಿಂಗವ ಬಿಟ್ಟು ಪೂಜಿಸಲಿಲ್ಲ.
ರಾಜ ಚೋರರ ಭಯಕ್ಕಂಜಿ ಜಂಗಮ ದಾಸೋಹವಮಾಡಲಿಲ್ಲ.
ಆವ ಕೃಪೆಯಾದಡೂ ಭಾವ ಶುದ್ಧವಾಗಿರಬೇಕು,
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವನರಿಯ ಬಲ್ಲಡೆ. 
(ಸಮಗ್ರ ವಚನ ಸಂಪುಟ 7, ವಚನದ ಸಂಖ್ಯೆ 1285)



ಆರ್ ನುಲೆನೂರಿನಲ್ಲಿರುವ ನುಲಿಯ ಚಂದಯ್ಯನ ಗುಡಿಯ ಪಕ್ಕದ ಮತ್ತು ಮುಂದಿನ ನೋಟ!  




ಇಲ್ಲಿ ಸಿಕ್ಕಿರುವ ಶಾಸನಗಳು ಮತ್ತು  ಮೂರ್ತಿಗಳು




ಗೂಗಲ್ ಮ್ಯಾಪ್ ನಲ್ಲಿ ದಾರಿ





Photo credits to : Sandesh TJ Tavane



Wednesday 10 August 2016

ಆಸ್ಟ್ರೇಲಿಯಾದಲ್ಲಿರುವ ಭಾರತೀಯ ವಲಸಿಗರೇ ಅತಿ ಹೆಚ್ಚು ವಿದ್ಯಾವಂತರು - Indian community the most educated in australia

ಆಸ್ಟ್ರೇಲಿಯಾ ಎಂಬುದು ಒಂದು  ವಲಸಿಗರ ದೇಶ ಅಲ್ಲಿಗೆ ಪ್ರಪಂಚದ ನಾನಾ ಕಡೆಗಳಿಂದ ಜನರು ಹೋಗಿ ನೆಲೆಸಿದ್ದಾರೆ. ಇಲ್ಲಿಗೆ ಹೋದವರ ಪಟ್ಟಿಯಲ್ಲಿ ಭಾರತೀಯರು ಇದ್ದಾರೆ. ಅಲ್ಲಿ ನಮ್ಮವರು ಮಾಡಿದ ಸಾಧನೆಗಳು ಆ ದೇಶಕ್ಕೆ ಸೀಮಿತವಾದರೂ ಅವರು ಭಾರತೀಯರು ಎಂಬುದು ನಮಗೆ ಹೆಮ್ಮೆಯ ವಿಷಯ. ಇತ್ತೀಚೆಗೆ ತಾನೇ ಪ್ರಪಂಚಕ್ಕೆ ತಿಳಿದ ಇನ್ನೊಂದು  ವಿಷಯ ನಮ್ಮ ಭಾರತೀಯರ ಹೆಮ್ಮೆ ಎಂದು ಎನ್ನಬಹುದು. ಅದು ಶಿಕ್ಷಣ ವಿಚಾರವಾಗಿ, ಅಲ್ಲಿ ಇರುವ ವಲಸಿಗರಲ್ಲಿ ಭಾರತದ ವಲಸಿಗರೆ ಅತಿ ಹೆಚ್ಚು ವಿದ್ಯಾವಂತರು ಎಂಬುದು.


ಆಸ್ಟ್ರೇಲಿಯಾದಲ್ಲಿರುವ ಭಾರತೀಯರು ಅತಿ ಹೆಚ್ಚು ವಿದ್ಯಾವಂತ ವಲಸಿಗರ ಗುಂಪು ಎಂದು ಧೃಡಪಡಿಸಲಾಗಿದೆ. the department of immigration and border protection's documents ನ ಆಧಾರದ ಮೇಲೆ ಈ ವಿಷಯವನ್ನು ಖಚಿತ ಪಡಿಸಿಕೊಳ್ಳಲಾಗಿದೆ. ನಿಜಾಂಶ ಏನೆಂದರೆ 54.6% ಆಸ್ಟ್ರೇಲಿಯಾದಲ್ಲಿರುವ  ಭಾರತದ ವಲಸಿಗರು (Indian migrants) ಪದವಿ ಮತ್ತು ಅದಕ್ಕೂ ಹೆಚ್ಚಿನ ವಿದ್ಯಾಭ್ಯಾಸವನ್ನು ಹೊಂದಿದವರಾಗಿದ್ದಾರೆ.

ಮೇಲ್ಬೌರ್ನ್ನ  ಉರ್ದು ನ್ಯೂಸ್ ಪೇಪರ್ "ಪೆಹಚಾನ್" (pehchan) ನಲ್ಲಿ ಈ ವರದಿ ಪ್ರಕಟಣೆ ಯಾಗಿದೆ. ಅದರ ಪ್ರಕಾರ, ಆಸ್ಟ್ರೇಲಿಯಾದಲ್ಲಿರುವ 20 ಕ್ಕಿಂತ ಹೆಚ್ಚು ವಲಸಿಗರ ಗುಂಪು ಇದೆ. ಅವುಗಳಲ್ಲಿ ಭಾರತೀಯ ಮೂಲದ 54.1%,  ಜನರು ವಿದ್ಯಾವಂತರು . ಅಮೇರಿಕಾದಿಂದ ಬಂದ ವಲಸಿಗರು ಶಿಕ್ಷಣದಲ್ಲಿ  52.1% ನಿಂದ ಎರೆಡನೆ ಸ್ಥಾನದಲ್ಲಿದ್ದಾರೆ.  ಈ ಅಂಕಿ ಅಂಶದ ಪ್ರಕಾರ 2011 ರ ಸರ್ವೇಗಿಂತ ಮೂರು ಪಟ್ಟು ಹೆಚ್ಚಿನ ಪ್ರಮಾಣ ಈಗಿನ  ಸರ್ವೇ ತಿಳಿಸುತ್ತದೆ. 2011 ರಲ್ಲಿ 17.2%,  ಈಗಿನ ಸರ್ವೇ 54.6%.

ಭಾರತದಿಂದ ಬಂದಂಥಹ ವಲಸಿಗರು ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ವಿದ್ಯಾಭ್ಯಾಸ ಹೊಂದಿದವರಾಗಿದ್ದಾರೆ ಎಂದು ಪೆಹೆಚಾನ್ (pehchan) ಪತ್ರಿಕೆಯ ಎಡಿಟರ್ ಉಮರ್ ಅಮಿನ್ (umar amin) ರವರು ಹೇಳಿಕೆ ನೀಡಿದ್ದಾರೆ. the department of immigration and border protection's documents ನ ಅಂಕಿ ಅಂಶಗಳ ಆಧಾರದ ಮೇಲೆ ಭಾರತೀಯ ವಲಸಿಗರ ವಿದ್ಯಾವಂತರ ಸಂಖ್ಯೆ 54.6%,ಎಂಬ ವರದಿಯನ್ನು ನೀಡಿದ್ದಾರೆ. ಅದೇನೆಂದರೆ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ವಲಸಿಗರು ಪದವಿ ಮತ್ತು ಅದಕ್ಕೂ ಹೆಚ್ಚಿನ ಪದವಿಗಳನ್ನು ಹೊಂದಿರುವವರಾಗಿದ್ದಾರೆ.

ಇನ್ನು ಹೆಚ್ಚಿನ ಅಂಶಗಳನ್ನು ಉಮರ್ ಅಮಿನ್ ರವರು ಎರೆಡು ರೀತಿಯ ಮುಖ್ಯ ಆಧಾರಗಳಮೇಲೆ ಪ್ರಯೋಗ ನಡೆಸಿದ್ದಾರೆ. ಅದೇನೆಂದರೆ, ಅವರ ಸಮೀಕ್ಷೆಯಪ್ರಕಾರ ಹಿಂದೂಗಳು 88.1% ಜನರು 12 +  ತರಗತಿಗಳನ್ನು ಪಡೆದವರಾಗಿದ್ದಾರೆ. ಸಿಕ್ಕಿಂ ಇಲ್ಲಿ ಎರೆಡನೆ ಸ್ಥಾನ ಪಡೆದಿದೆ. ಇವರ ಪದವಿಗಳ ಪ್ರಮಾಣ 85.1%, ಆಗಿದೆ ಅಲ್ಲದೆ ಇವರುಗಳು ತಮ್ಮವರೊಡನೆ  ಅವರ ಮಾತೃ ಭಾಷೆಯಲ್ಲಿ ಮಾತನಾಡುತ್ತಾರೆ. ಹಿಂದಿ ಮಾತನಾಡುವ ಗುಂಪಿನ ಜನರು 49.5% ಜನರು ಪದವಿ ಮತ್ತು ಅದಕ್ಕೂ ಹೆಚ್ಚಿನ ಶಿಕ್ಷಣ ಪಡೆದವರಾಗಿದ್ದಾರೆ. ಇವರು ಫಿಲಿಪಿನೋ  ( philipino )  ಭಾಷೆ ಮಾತನಾಡುವವರಿಗಿಂತ ಹೆಚ್ಚು ವಿದ್ಯಾವಂತರಾಗಿದ್ದಾರೆ. ಫಿಲಿಪಿನೋದವರ ಅಂಕಿ ಅಂಶ - 47.5%.

ಈ ಎಲ್ಲಾ ಅಂಕಿ ಅಂಶಗಳು ಹೇಳುವ ಪ್ರಕಾರ ಭಾರತದಿಂದ ಆಸ್ಟೇಲಿಯಾಗೆ ವಲಸೆ ಹೋಗಿರುವ  ಭಾರತೀಯರು ಶಿಕ್ಷಣದಲ್ಲಿ ಮೊದಲ ಸ್ಥಾನ ಪಡೆದಿರುವುದು. ಇದು ಹೆಮ್ಮೆಯ ವಿಚಾರ ಅಲ್ಲವೇ!!. 

Wednesday 3 August 2016

Fossils tree at Mysore zoo (wood like stone)

One of the wood look,like stone at the Mysore zoo. When we see in long distance it is a piece of wood, of a tree. But it is not a stem of a tree. it is a stone. In that stone we can see micro structure of wood. If anybody went there don't miss to see this miracle stone.





This is an exhibit of fossil tree trunk which is over 150 million years old. This has been brought from Yamanapalli village in Adilabad district of Andhra Pradesh from Kota rocks of Jurassic age .the tree trunk which is now seen here as a fossil has preserved the minute internal structure of the wood excellently. The age of the rocks, the evolution of plant life through the geologic ages and climatic conditions during the past history of the earth are all interpreted from a study of these fossil remains.

Geological survey of India
Karnataka south circle, 
Bangalore.


I clicked some pics of the rock they are here 












Monday 1 August 2016

ವಿಶಿಸ್ಟ ವ್ಯಕ್ತಿತ್ವದ ಅಕ್ಕಮಹಾದೇವಿ - the genuine mystic

ಹನ್ನೆರಡನೆಯ ಶತಮಾನದಲ್ಲಿ ಹೊಸ ಸಮಾಜವನ್ನು ಕಟ್ಟಲು ಚಿಂತಿಸಿದ ಮತ್ತು ಕ್ರಾಂತಿಕಾರಕ  ಶಿವಶರಣರು ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ನಡೆಯುತಿದ್ದ ಅನ್ಯಾಯ ಶೋಷಣೆಗಳನ್ನ ಕಣ್ಣಾರೆ ಕಂಡು ಅವುಗಳ ವಿರುದ್ದ ತಪ್ಪು-ಸರಿ ವಿಚಾರಗಳನ್ನು ಆಡುಭಾಷೆಯಲ್ಲಿ ತಮ್ಮ ವಚನಗಳ ಮೂಲಕ ಜನರಿಗೆ ಅರ್ಥವಾಗುವಂತೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದರು. ಹನ್ನೆರಡನೆಯ ಶತಮಾನದಲ್ಲಿ ಅಸ್ಪೃಶ್ಯತೆ ಮತ್ತು ಸ್ತ್ರೀ ತಾರತಮ್ಯ  ತಾಂಡವವಾಡುತಿತ್ತು. ಸ್ತ್ರೀಯರು ಮತ್ತು ಶೂದ್ರರು ವೇದ ಶಾಸ್ತ್ರಗಳನ್ನು ಓದಲು ಅನರ್ಹರು, ದೇವಸ್ಥಾನಗಳಿಗೆ ಇವರ ಪ್ರವೇಶವಿಲ್ಲ ಎನ್ನುವ ವೇದಶಾಸ್ತ್ರಗಳನ್ನ ಇವರು ವಿರೋಧಿಸಿದರು. ಮಹಿಳೆಯರು ಸಾಮಾಜಿಕ ಮತ್ತು ಧಾರ್ಮಿಕ ವಿಚಾರಗಳಲ್ಲಿ ಪುರುಷರಸ್ಟೇ ಸಮಾನರು ಎಂಬುದನ್ನು ತಿಳಿಸಿಕೊಟ್ಟರು.

ಅಕ್ಕಮಹಾದೇವಿಯವರ ಕಾಲ್ಪನಿಕ ಚಿತ್ರಪಟ 

ಇಂತಹ ಸಮಯದಲ್ಲಿ ಮಹಿಳೆಯರಿಗೆ ಸಿಕ್ಕ ಲಿಂಗದೀಕ್ಷೆಯಿಂದಾದಗಿ ಶಿವಶರಣೆಯರಾದರು.  ಅವರಿಗೆ ಸಿಕ್ಕ  ವಿದ್ಯಾಭ್ಯಾಸ ಸಮಾಜದಲ್ಲಿ ಸಮಾನತೆ ಮತ್ತು  ಅವರು ಚಿಂತನಶೀಲರಾಗಿ ತಮ್ಮಲ್ಲಿ ವಿಶಿಸ್ಟ ವ್ಯಕ್ತಿತ್ವ ರೂಪಿಸಿಕೊಳ್ಳಲು ಅನುವು ಮಾಡಿಕೊಟ್ಟಿತು. ಇಂತಹ ಶಿವಶರಣೆಯರಲ್ಲಿ  ಅಕ್ಕಮಹಾದೇವಿಯ ವ್ಯಕ್ತಿತ್ವ, ಯೋಚನಾಲಹರಿ, ಅವಳ ಬದುಕು ಮತ್ತು ಆಕೆಯ ಅನುಭವಗಳು ಮಹಿಳಾ ಪ್ರಾಧಾನ್ಯತೆಗೆ ಕನ್ನಡಿ ಹಿಡಿದಂತೆ ಭಾಸವಾಗುತ್ತದೆ.  

ಹೀಗೆ  ಸಾಮಾಜಿಕ ಬದಲಾವಣೆಗಳು ನಡೆಯುತಿದ್ದ ಸಮಯದಲ್ಲಿ ಶಿವಭಕ್ತರ ಮನೆಯಲ್ಲಿ ಮಗಳಾಗಿ ಹುಟ್ಟಿದ ಅಕ್ಕಮಹಾದೇವಿ ಗುರುವಾದ ಗುರುಲಿಂಗ ದೇವರಿಂದ ಲಿಂಗದೀಕ್ಷೆಯನ್ನು  ಪಡೆಯುತ್ತಾಳೆ. ಅಕ್ಕ ಕನ್ನಡ ಸಾಹಿತ್ಯ ಲೋಕದ ಮೊದಲ ಕವಯಿತ್ರಿ ಮತ್ತು ವಚನಗಾರ್ತಿ. ಇವಳ ವಚನಗಳ ಅಂಕಿತನಾಮ 'ಚೆನ್ನಮಲ್ಲಿಕಾರ್ಜುನ'. ಪುರುಷ ಪ್ರಧಾನ ಸಮಾಜವನ್ನು ಧಿಕ್ಕರಿಸಿ ನಿಂತು ಯಶಸ್ವಿಯಾದ ಸಾಧನೆ ಅಕ್ಕಮಹಾದೇವಿಯದ್ದು. ಹನ್ನೆರಡನೆಯ ಶತಮಾನದಲ್ಲಿ ಮಹಿಳೆಯರ ಸ್ಥಾನಮಾನ ಅಸ್ಟಕ್ಕಸ್ಟೇ ಇತ್ತು  ಇಂಥಹ  ಸಮಯದಲ್ಲಿ ಶ್ರೇಷ್ಠ ಅನುಭಾವಿಯಾಗಿ ಹೊಮ್ಮಿ ಹಾಗೂ ವಚನಕಾರ್ತಿಯಾಗಿ ಮೆರೆದು ಎಲ್ಲರ ಗೌರವಕ್ಕೆ ಪಾತ್ರಳಾದ ಅಕ್ಕಮಹಾದೇವಿ ಸಾಧಿಸಿದ ಆಧ್ಯಾತ್ಮಿಕ ಔನ್ನತ್ಯ ಮತ್ತು ಸಾಹಿತ್ಯ ಮಟ್ಟ ಶರಣೆಯರ ಗುಂಪಿನಲ್ಲಿ ಅತಿ ವಿರಳ ಎಂದೇ ಹೇಳಬಹುದು.     

ಹದಿನಾರರ ಹರೆಯದಲ್ಲಿ ತನ್ನ ಊರಿನ ರಾಜ ಕೌಶಿಕ ನೊಡನೆ ಮದುವೆಯಾಗಿ ನಾನಾ ರೀತಿಯ ಮಾನಸಿಕ ಯಾತನೆಗಳನ್ನು ಅನುಭವಿಸಿ, ವಿಘಟನೆಯನ್ನು ಹೊಂದಿ, ಭೋಗ-ಭಾಗ್ಯಗಳನ್ನೆಲ್ಲಾ ಧಿಕ್ಕರಿಸಿ, ವಿರಕ್ತ ದಿಗಂಬರೆಯಾಗಿ, ಆಗಿನ ಸಮಾಜದ ಕಟ್ಟು ಕಟ್ಟಳೆಗಳನ್ನು ವಿರೋಧಿಸಿ ನಿರಾಕಾರ ಮೂರ್ತಿ  ಚನ್ನಮಲ್ಲಿಕಾರ್ಜುನ   ನನ್ನ ಗಂಡ ಎಂದು ಹೇಳುತ್ತ ಹೊರಟ ಧೀಮಂತ ವೀರ ಮಹಿಳೆ ಈ ಅಕ್ಕಮಹಾದೇವಿ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಗೆ  ಇದ್ದ ಕೀಳು ಸ್ಥಾನಮಾನ, ಕಿರುಕುಳ, ಹಿಂಸೆ, ಕಟ್ಟುನಿಟ್ಟುಗಳ, ವಿರುಧ್ಧ ತಿರುಗಿಬಿದ್ದ ದಿಟ್ಟ ಮಹಿಳೆ ಇವಳು. ರಾಜಪ್ರಭುತ್ವವನ್ನು ಧಿಕ್ಕರಿಸಿದ ಮತ್ತು ಆಗಿನ ಸಮಾಜದಲ್ಲಿ  ವಿವಾಹಿಕ ಜೀವನವನ್ನು ಮುರಿದುಕೊಂಡ  ಹೆಣ್ಣು ಕೂಡ ಇವಳು ಮೊದಲಿನವಳೆಂದೇ ಹೇಳಬಹುದು. ಅಕ್ಕ ತನ್ನ  ವಚನಗಳಲ್ಲಿ ಸಮಾಜವನ್ನು ನೇರವಾಗಿ ವಿಮರ್ಶಿಸಿಲ್ಲ  ಬದಲಾಗಿ ಅವಳ ಸ್ವವಿಮರ್ಶೆಯಲ್ಲಿ  ಅಂದಿನ  ಸಮಾಜದಲ್ಲಿನ ಹೆಣ್ಣಿನ  ಚಿತ್ರಣವನ್ನು ನಾವು ಕಾಣಬಹುದಾಗಿದೆ.

ಕನ್ನಡ ಸಾಹಿತ್ಯಕ್ಕೆ ಮತ್ತು ವಚನ ಸಾಹಿತ್ಯಕ್ಕೆ ತನ್ನದೇ ಆದ ವಿಶಿಸ್ಟ ಕೊಡುಗೆಯನ್ನು ನೀಡಿರುವ ಅಕ್ಕನ ವಚನಗಳು ಕನ್ನಡ ಹೆಣ್ಣಿನ ಸಂವೇದನೆಯ ಅಭಿವ್ಯಕ್ತಿಯ ಮೊದಲ ಕುರುಹುಗಳಾಗಿ ಅಚ್ಚರಿಯನ್ನುಂಟುಮಾಡುತ್ತವೆ. ವಚನ ಸಾಹಿತ್ಯದ ಉಜ್ವಲ ನಕ್ಷತ್ರ ಮತ್ತು ಆದರ್ಶ ಮಹಿಳೆ ಈ ಅಕ್ಕಮಹಾದೇವಿ ಎಂದು ಹೇಳಬಹುದು.
ತೀ.ನಂ.ಶ್ರೀ. ಅವರು ಹೀಗೆ ಹೇಳಿದ್ದಾರೆ. "ಅಕ್ಕನ ವಚನಗಳ ಬಹುಭಾಗ ನಿಜವಾಗಿಯೂ ರಸಾರ್ಥವಾದದ್ದು ಉಪಮಾನಗಳಿಂದ ಚಿತ್ರಕಲ್ಪನೆಗಳಿಂದ ಮನೋಹರವಾಗಿರತಕ್ಕದ್ದು, ಅವಳದು ಕವಿಯ ಹೃದಯ, ಕವಿಯ ಕಣ್ಣು ಎಂಬುದನ್ನು ಸರತಕ್ಕದ್ದು" ಎಂದಿದ್ದಾರೆ.
ಡಾ. ರಂ.ಶ್ರೀ ಮುಗಳಿಯವರು ಅಕ್ಕನನ್ನು ಕುರಿತು ಹೀಗೆ ಹೇಳಿದ್ದಾರೆ. "ಮಹಾದೇವಿ ಅಕ್ಕನು ವ್ಯಕ್ತಿ ವಿಶಿಷ್ಟದಿಂದಲೂ, ವಚನ ಮಹಿಮೆಯಿಂದಲೂ ಮೇಲಾದ ಶಿವಶರಣೆ, ನಮಗೆ ತಿಳಿದ ಮಟ್ಟಿಗೆ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಅವಳೇ ಮೊದಲನೆಯ ಕವಯಿತ್ರಿ ಆಧ್ಯಾತ್ಮ ಮತ್ತು ಗದ್ಯ ಕವಿತ್ವ ಇವುಗಳ ಸಂಮಿಳನಕ್ಕಾದರೂ ಅಕ್ಕ ಮೊದಲಗಿತ್ತಿ."
ಎಲ್.ಬಸವರಾಜುರವರು "ಉಡುತಡಿಯಲ್ಲಿ ಉದ್ಭವಿಸಿ ಕಲ್ಯಾಣದಲ್ಲಿ ಕವಲೊಡೆದು ಕನ್ನಡ ನಾಡಿನ ಹೊಲ ಮೇದೆಯನ್ನೆಲ್ಲ ಕ್ಷಣಾರ್ಧದಲ್ಲಿ ಪಳಚ್ಚನೆ ಪ್ರಜ್ವಲಿಸುವಂತೆ ಮಾಡಿ ಶ್ರೀಶೈಲದ ಕದಳಿಯಲ್ಲಿ ಕಣ್ಮರೆಯಾದಳು ಅಕ್ಕಮಹಾದೇವಿ."ಎಂದಿದ್ದಾರೆ.

ಅಕ್ಕಮಹಾದೇವಿಯ ವಚನಗಳ ಒಳಗಿನ  ಅರ್ಥ ;-


೧.ಹರನೇ ನೀನೆನಗೆ ಗಂಡನಾಗಬೇಕೆಂದು
ಅನಂತಕಾಲ ತಪಸಿದ್ದೆ ನೋಡಾ
ಚಿಕ್ಕಂದಿನಿಂದಲೂ ಶರಣಸತಿ ಲಿಂಗಪತಿ ಭಾವನೆಯನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡ ಅಕ್ಕಮಹಾದೇವಿ ಶಿವಭಕ್ತ ಸಂಪನ್ನೆಯಾಗಿದ್ದಳು. ಇಸ್ಟದೈವ ಚೆನ್ನಮಲ್ಲಿಕಾರ್ಜುನನಿಗೆ ತನ್ನ ಬದುಕನ್ನು ಮುಡಿಪಾಗಿಟ್ಟಿದ್ದಳು.ತನ್ನ ತನು ಮನವನ್ನು ಆಕೆಯ ಮನದೈವ ಪತಿ ಚನ್ನಮಲ್ಲಿಕಾರ್ಜುನನನ್ನು ನೋಡುವ ಕಾತರದಿಂದ ಹಂಬಲಿಸುತ್ತ, ಹುಡುಕಾಡುತ್ತಾ ಅವನಲ್ಲಿ ಐಕ್ಯವಾಗುವ ಬಯಕೆ ತನ್ನ ಆತ್ಮ ಸಾಧನೆಯಲ್ಲಿ ಮುನ್ನಡೆದು ಅನುಭಾವಿಯಾಗಿ ಮೆರೆದಳು.

೨.ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ನಾನೊಲಿದೆ
ಎಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ ಚೆಲುವಂಗೆ ನಾನೊಲಿದೆ
ಎಲೆ ಅಪ್ಪಗಳಿರಾ ಮಲ್ಲಿಕಾರ್ಜುನನೆಂಬ ಗಂಡಂಗೆ 
ಮಿಗೆ ಮಿಗೆ ಒಲಿದೆ ಅಪ್ಪಗಳಿರಾ 
ಅಕ್ಕಮಹಾದೇವಿ ಪರವಸ್ತುವಿನಲ್ಲಿ ಇತ್ತ ಪ್ರೇಮ ಅಚಲವಾದದ್ದು,ಅಲೌಕಿಕ ವಾದದ್ದು. ಪ್ರೇಮ ಮತ್ತು ಭಕ್ತಿ -ಶ್ರದ್ಧೆ ಜೊತೆಗೆ ಪರಮಾತ್ಮನ ಸ್ವರೂಪ, ಮಹಿಮೆ, ಆತನ ಸಾಕ್ಷಾತ್ಕಾರಕ್ಕಾಗಿ ಹಂಬಲ, ವಿರಹ, ವ್ಯಾಕುಲತೆ,ಆತನ ನೆನಪು, ಜಾಗೃತ ಸ್ವಪ್ನಾವಸ್ಥೆಯಲ್ಲಿ ಪ್ರೇಮ ಪರಾಕಾಸ್ಟೆಯಿಂದ ಸತಿ ಪತಿ ಭಾವದಲ್ಲಿ ಬಾಳುತಿದ್ದ ಅಕ್ಕ ಪರಮಾತ್ಮನ ಸ್ವರೂಪವನ್ನು ಬಹಳ ಮಾರ್ಮಿಕವಾಗಿ ಹೀಗೆ ವರ್ಣಿಸಿದ್ದಾಳೆ. 

೩. ಬೆಟ್ಟದ ಮೇಲೊಂದು ಮನೆಯಮಾಡಿ ಮೃಗಗಳಿಗಂಜಿದೊಡೆನಯ್ಯ   ...........
ಈ ಜಗತ್ತಿನಲ್ಲಿ ಹುಟ್ಟಿದಮೇಲೆ ಇಲ್ಲಿ ಜೀವನ ನಡೆಸಬೇಕಾದ್ದು ಅನಿವಾರ್ಯ. ನಮಗೆ ಸಿಕ್ಕ ಈ  ಬದುಕಿನಲ್ಲಿ ಸ್ತುತಿ, ನಿಂದನೆಗಳು ಬಂದರೂ, ಎಂಥ ಕಷ್ಟ, ಕಾರ್ಪಣ್ಯ ಬಂದರೂ  ಸಮಾಧಾನದಿಂದ ಇರಬೇಕು, ಅವುಗಳನ್ನು ಧೈರ್ಯದಿಂದ ಸ್ವೀಕರಿಸಬೇಕು ಇವು ಅಕ್ಕನ ದಿಟ್ಟ ಮಾತುಗಳಿವು. 

೪.ಗುಣ ದೋಷ ಸಂಪಾದನೆಯ ಮಾದುವನ್ನಕ್ಕ 
ಕಾಮದ ಒಡಲು, ಕ್ರೋಧನ ಗೊತ್ತು, ಲೋಭದ ಇಕ್ಕೆ,
ಮೋಹದ ಮಂದಿರ, ಮದದಾವರಣ, ಮತ್ಸರದ ಹೊದಿಕೆ 
ಆ ಭಾವವರತಲ್ಲದೆ ಚೆನ್ನಮಲ್ಲಿಕಾರ್ಜುನನ ಅರಿವುದಕ್ಕೆ ಇಂಬಿಲ್ಲ ಕಾಣಿರಣ್ಣಾ, 
ಮನಸ್ಸಿನ ಅನಿಮಿತ್ತ ವೈರಿಗಳೆನಿಸಿದ ಕಾಮಾದಿ ಗುಣಗಳು ಜೀವನಕ್ಕೆ ದೋಷವನ್ನುಂಟು ಮಾಡುತ್ತವೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು ಕಾರಣವಿಲ್ಲದೆ ಮಾನವನನ್ನು ನಾಶಗೊಳಿಸುತ್ತವೆ. ಅವುಗಳನ್ನು ಸುಜ್ಞಾನದಿಂದ ಪಳಗಿಸಬೇಕು ಎಂದು ಅಕ್ಕ ನುಡಿದಿದ್ದಾಳೆ.

ವಚನ ಸಾಹಿತ್ಯದ ಆದರ್ಶ ಮಹಿಳೆಯಾಗಿ ಎದ್ದು ನಿಂತ ಅಕ್ಕಮಹಾದೇವಿಯ ವಚನಗಳನ್ನು ಇಡಿಯಾಗಿ ನೋಡಿದಾಗ ಅವುಗಳಲ್ಲಿ ಎದ್ದು ಕಾಣುವ ಅಂಶಗಳೆಂದರೆ ಅವಳ ವೈಯುಕ್ತಿಕ ಹೋರಾಟ, ಅವಳ ವಚನಗಳಲ್ಲಿ ಸಮಾಜವನ್ನು ಕುರಿತಂತೆ ವಿಮರ್ಶೆ, ಟೀಕೆಗಳು ಬಹು ಅಪರೂಪವಾಗಿ ಕಾಣಿಸಿಕೊಳ್ಳುತ್ತವೆ. ಸಾಮಾಜಿಕ ಬದುಕನ್ನು ಗಮನಿಸದಿದ್ದರು ಅವಳು ಅವುಗಳಿಗೆ ಪ್ರತಿಕ್ರಿಯಿಸಿದ ರೀತಿಯೇ ಭಿನ್ನವಾಗಿವೆ. ಸಮಾಜದ ವ್ಯವಸ್ಥೆಯನ್ನು ತಿರಸ್ಕರಿಸಿ, ಗಂಡ ಕೌಶಿಕ ರಾಜನನ್ನು ಬಿಟ್ಟು ತನ್ನ ಪತಿ ಚೆನ್ನಮಲ್ಲಿಕಾರ್ಜುನ ಎಂದು ಹುಡುಕಿಕೊಂಡು ಹೋದ ಅಕ್ಕಮಹಾದೇವಿ ತನ್ನ ವಚನಗಳಲ್ಲಿ "ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ " ಎಂದು ಸಾಂಸಾರಿಕ ಜೀವನದ ಬಗ್ಗೆ ತನ್ನ ಗೌರವವನ್ನು ತಿಳಿಸಿದ್ದಾಳೆ. ಆ ಕಾಲದಲ್ಲಿ ಆತ್ಮ ಸಾಧನೆಯು ಎಲ್ಲರಿಗೂ ತೆರೆದ ಬಾಗಿಲು ಹಾಗಾಗಿ ಸನ್ಯಾಸ ಸ್ವೀಕರಿಸಬೇಕೆಂದು ಯಾವ ವಚನಕಾರರು ಭೋದಿಸಿರಲಿಲ್ಲ. ಇಂತಹ ಸಂದರ್ಭಗಳಲ್ಲಿ ಅಕ್ಕಳ ವಿಶಿಸ್ಟ ವರ್ತನೆಯು ಅಂದಿನ ಸಮಾಜಕ್ಕೆ ಅರ್ಥವಾಗದೆ ಟೀಕೆಗೆ ಗುರಿಯಾಗಬೇಕಾಯಿತು.




   


  

      

Friday 22 July 2016

sink hole of Mount Gambier--south australia-- ಕನ್ನಡ

ಪ್ರಕೃತಿಯ ಎಸ್ಟೋ ವಿಸ್ಮಯಗಳು ನಮ್ಮನ್ನು ಪುಳಕಿತರನ್ನಾಗುವಂತೆ ಮಾಡುತ್ತವೆ. ಹಾಗೆ ನಾವು ಅದರ ಬಗ್ಗೆ ಹೆಚ್ಚು ಹೆಚ್ಚು ಯೋಚಿಸುವಂತೆ ಮಾಡುತ್ತವೆ.ನಾವು MountGambier  ನಲ್ಲಿರುವ sink hole ನೋಡಿದಾಗ ಆದ ಅನುಭವ. ಇದು ನೋಡಲೇಬೇಕಾದ ಪ್ರಕೃತಿಯ ಸ್ವಂತ ರಚನೆ. ಎಂದೇ ಹೇಳಬಹುದು.  ಭೂಮಿ ಒಮ್ಮೊಮ್ಮೆ ವಿಕೋಪಕ್ಕೆ ತಿರುಗಿ ಆದ ಜ್ವಾಲಾಮುಖಿಗಳು, ಭೂಕಂಪನಗಳು ಮನುಷ್ಯನಿಗೆ ಒಂದೊಂದು ರೀತಿಯ  ಪಾಠಗಳನ್ನು ಕಲಿಸುತಿರುತ್ತವೆ. ಹಾಗೇ sinkhole ಭೂಮಿಯ ಕುಸಿತದಿಂದ ಆದ ಭೂಮಿಯ ಚಿತ್ರಣ ಎಂದೆನ್ನಬಹುದು. ಭೂಮಿಯ ಒಳಗಿನ ಟೊಳ್ಳು ಭಾಗಕ್ಕೆ ಅದರ ಮೇಲಿನ ಪದರವು ಕುಸಿದು ಭೂಭಾಗ ರಚನೆಯಾಗಿದೆ.


ಇದು ಆಗಿರುವುದು limestone ನ ಮೇಲ್ಛಾವಣಿಯಾ ಕುಸಿತದಿಂದ ಆಗಿದೆ. ನಾವು ಅದರ ಒಳಗೆ ಹೋಗಲು ಮೆಟ್ಟಿಲುಗಳು ಮಾಡಲಾಗಿದೆ. ನಾವು ಆ ಮೆಟ್ಟಿಲುಗಳನ್ನು ಇಳಿಯುತ್ತಾ ಹೋದ್ರೆ ಆ sinkholeನ ಗೋಡೆಯ ಪದರ ಗಳಲ್ಲಿ  ನಮಗೆ ವಿಶೀಷತೆ ಎನಿಸುವುದು  ಭೂಮಿಯ ಒಳಪದರದ ರಚನೆಯನ್ನು ನಾವಿಲ್ಲಿ ಕಾಣಬಹುದಾಗಿದೆ. ಅಲ್ಲಲ್ಲಿ ಗಿಡ-ಗೆಂಟೆಗಳು ಬೆಳೆದಿವೆ. ಆ ಕಲ್ಲುಗಳ ಮೂಲಕ ಮತ್ತು ಗಿಡ-ಗೆಂಟೆಗಳ ಮೂಲಕ ನೀರು ಜಿನುಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ಇಲ್ಲಿ limestone ಗಳ ಮೂಲಕ ನೀರು ಜಿನುಗುವುದನ್ನು  ನಾವು ನೋಡಬಹುದಾಗಿದೆ. ತಳದಿಂದ  ಆಕಾಶವನ್ನು  ನೋಡಿದರೆ ಒಂದು ಗುಂಡಾದ ಗೆರೆ ಕೊರೆದ  ರೀತಿ ನೋಡಬಹುದು. ಆಕಾಶಕ್ಕೆ ಸೊನ್ನೆ ಬರೆದಂತೆ ಕಾಣುತ್ತದೆ.ಅಲ್ಲಿ ಒಂದು ಚಿಕ್ಕ ಉದ್ಯಾನ ವನ್ನು ಮಾಡಿದ್ದಾರೆ.

ಮಕ್ಕಳ ಜೊತೆ ಒಂದು ದಿನ ಕಾಲ ಕಳೆಯಲು ಒಳ್ಳೆ ಜಾಗ , ಅಲ್ಲಿ ಕಣ್ಣಾ ಮುಚ್ಚಾಲೆ ಆಟ ಆಡಬಹುದು ಮತ್ತು ಮಕ್ಕಳಿಗೆ  ಭೂಗೋಳದ ಬಗ್ಗೆ ಚಿಕ್ಕ ಪಾಠ ತಿಳಿಸಿಕೊಟ್ಟಂತೆ ಆಗುತ್ತದೆ.

ಅಲ್ಲಿ ನಾವು ತೆಗೆದ ಪೂರ್ತಿ sinkhole ನ  ಒಂದು ಫೋಟೋ-ಸ್ಪೇರ್ ಕೆಳಗಿನ ಲಿಂಕ್ ನಲ್ಲಿದೆ.
Photo-sphere of Sinkhole    https://photos.google.com